LG Scholarship Program : ಈ ವಿದ್ಯಾರ್ಥಿವೇತನಕ್ಕೆ ನೀವು ಕೂಡ ಅರ್ಜಿ ಸಲ್ಲಿಸಿ – ಹಣಕಾಸು ನೆರವು ಪಡೆಯಿರಿ

Spread the love

LG Scholarship Program : ನಮಸ್ಕಾರ ಸ್ನೇಹಿತರೇ, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಕಾಯುತ್ತಿರುವವರಿಗೆ ಸಿಹಿಸುದ್ಧಿ. ಎಲ್ ಜಿ ಸ್ಕಾಲರ್ಷಿಪ್ ಪ್ರೋಗ್ರಾಮ್ (LG Scholarship Program) ವಿದ್ಯಾರ್ಥಿ ವೇತನಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು.? ಬೇಕಾಗುವ ದಾಖಲೆಗಳೇನು.? ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.

WhatsApp Group Join Now

ಇದನ್ನೂ ಕೂಡ ಓದಿ : Raitha Siri Yojane : ರೈತ ಸಿರಿ ಯೋಜನೆಗೆ ಅರ್ಜಿ ಆಹ್ವಾನ.! ಈ ಯೋಜನೆಯಿಂದ ರೈತರಿಗೆ ಸಿಗುತ್ತೆ ₹10,000/- ರೂಪಾಯಿ ಹಣ – ಹೇಗೆ ಪಡೆಯುವುದು.?

LG ಇಲೆಕ್ಟ್ರಾನಿಕ್ಸ್‌ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿ Life’s Good Scholarship ಅನ್ನು ನೀಡುತ್ತಿದೆ. ಆರ್ಥಿಕವಾಗಿ ಹಿಂದುಳಿದ ವರ್ಗಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಣಕಾಸು ನೆರವು ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಯಾವುದೇ ಪದವಿ ಅಥವಾ ಸ್ನಾತಕೋತ್ತರ ಪದವಿ ಕೊರ್ಸನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು Life’s Good Scholarship ವಿದ್ಯಾರ್ಥಿವೇತನಕ್ಕೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ.

WhatsApp Group Join Now

ಪದವಿ ಹಾಗು ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಲೈಫ್ ಗುಡ್ ವಿದ್ಯಾರ್ಥಿವೇತನಕ್ಕೆ (Life’s Good Scholarship) ಅರ್ಜಿಯನ್ನ ಸಲ್ಲಿಸಿ ಪ್ರಯೋಜನವನ್ನ ಪಡೆದುಕೊಳ್ಳಿ. ಈ ವಿದ್ಯಾರ್ಥಿವೇತನ ಪಡೆಯಲು ವಿದ್ಯಾರ್ಥಿಗಳಿಗೆ ಇರಬೇಕಾದ ಅರ್ಹತೆ, ಪ್ರಯೋಜನಗಳು ಹಾಗೂ ಬೇಕಾಗುವ ಅಗತ್ಯ ದಾಖಲೆಗಳೇನು.? ಎನ್ನುವ ಬಗ್ಗೆ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

ಇದನ್ನೂ ಕೂಡ ಓದಿ : SBI Recruitment 2024 : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನಲ್ಲಿ 10ನೇ ತರಗತಿ ಪಾಸ್ ಆದವರಿಗೆ ಉದ್ಯೋಗವಕಾಶ.! ಈಗಲೇ ಅರ್ಜಿ ಸಲ್ಲಿಸಿ.

WhatsApp Group Join Now

ಪ್ರಯೋಜನಗಳು :-

UG ವಿದ್ಯಾರ್ಥಿಗಳಿಗೆ 50% Tuition Fee ಅಥವಾ 1 ಲಕ್ಷ ರೂ. (ಯಾವುದು ಕಡಿಮೆಯೋ ಅದು) PG ವಿದ್ಯಾರ್ಥಿಗಳಿಗೆ 50% Tuition Fee ಅಥವಾ 2 ಲಕ್ಷ ರೂ. (ಯಾವುದು ಕಡಿಮೆಯೋ ಅದು)

ಏನೆಲ್ಲಾ ಅರ್ಹತೆಗಳಿರಬೇಕು.?

  • ವಿದ್ಯಾರ್ಥಿಗಳು ಭಾರತದಾದ್ಯಂತ ಆಯ್ದ ಕಾಲೇಜುಗಳು/ಸಂಸ್ಥೆಗಳಿಂದ ಪದವಿ ಅಥವಾ ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು ವ್ಯಾಸಂಗ ಮಾಡುತ್ತಿರಬೇಕು.
    . ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳು 12ನೇ ತರಗತಿಯ ಪರೀಕ್ಷೆಗಳಲ್ಲಿ ಕನಿಷ್ಠ 60% ಅಂಕಗಳನ್ನು ಗಳಿಸಿರಬೇಕು, ಆದರೆ 2ನೇ, 3ನೇ ಮತ್ತು 4ನೇ ವರ್ಷದ ವಿದ್ಯಾರ್ಥಿಗಳು ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 60% ಅಂಕಗಳನ್ನು ಗಳಿಸಿರಬೇಕು.
  • ಅರ್ಹ ಪ್ರತಿಭಾವಂತ ವಿದ್ಯಾರ್ಥಿ / ವಿದ್ಯಾರ್ಥಿನಿಯರ ವಾರ್ಷಿಕ ಕುಟುಂಬ ಆದಾಯ 8 ಲಕ್ಷಕ್ಕಿಂತ ಕಡಿಮೆ ಇರುವ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು.
  • Buddy4Study ಮತ್ತು LG ಎಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಉದ್ಯೋಗಿಗಳ ಮಕ್ಕಳು ಲೈಫ್ ಗುಡ್ ವಿದ್ಯಾರ್ಥಿವೇತನಕ್ಕೆ (Life’s Good Scholarship) ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.

ಇದನ್ನೂ ಕೂಡ ಓದಿ : KSRTC Recruitment 2024 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆಯಲ್ಲಿ 3000ಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ.! 10ನೇ ತರಗತಿ ಪಾಸಾಗಿದ್ದರೂ ಸಾಕಂತೆ.!

ಬೇಕಾಗುವ ದಾಖಲೆಗಳೇನು.?

  • 12ನೇ ತರಗತಿಯ ಅಂಕಪಟ್ಟಿ ಮತ್ತು ಹಿಂದಿನ ವರ್ಷ/ಸೆಮಿಸ್ಟ‌ರ್ ಅಂಕಪಟ್ಟಿ (2ನೇ/3ನೇ/4ನೇ ವರ್ಷದ ವಿದ್ಯಾರ್ಥಿಗಳಿಗೆ)
  • ಸರ್ಕಾರ ನೀಡಿದ ವಿಳಾಸ ಪುರಾವೆ (ಆಧಾರ್ ಕಾರ್ಡ್)
  • ಕುಟುಂಬದ ಆದಾಯದ ಪುರಾವೆ
  • ಆದಾಯ ತೆರಿಗೆ ರಿಟರ್ನ್ (ITR)
  • ಸಂಬಳ ಚೀಟಿ
  • ಫಾರ್ಮ್ 16 (ಸಂಬಳ ಪಡೆದಿದ್ದರೆ)
  • ಬಿಪಿಎಲ್ ಪಡಿತರ ಚೀಟಿ
  • ತಹಸೀಲ್ದಾರ್/ಬಿಡಿಪಿ (ಗ್ರಾಮೀಣ ಪ್ರದೇಶಗಳಿಗೆ) ಸಹಿ ಮಾಡಿದ ಆದಾಯ ಪುರಾವೆ ಪ್ರಮಾಣಪತ್ರ
  • ಗ್ರಾಮ ಪಂಚಾಯತಿಯಿಂದ ಪತ್ರ/ ಪ್ರಮಾಣಪತ್ರ (ಸಹಿ ಮತ್ತು ಮುದ್ರೆ ಹಾಕಲಾಗಿದೆ)
  • ಪ್ರವೇಶದ ಪುರಾವೆ (ಕಾಲೇಜು/ಶಾಲಾ ಗುರುತಿನ ಚೀಟಿ, ಶೈಕ್ಷಣಿಕ ಶುಲ್ಕದ ರಸೀದಿ) ಮತ್ತು ಶುಲ್ಕ ರಚನೆ
  • ಸಂಸ್ಥೆಯಿಂದ ಬೋನಾಫೈಡ್‌ ಪ್ರಮಾಣಪತ್ರ
  • ಫಲಾನುಭವಿಗಳ ಬ್ಯಾಂಕ್ ಪಾಸ್ ಬುಕ್ ಪ್ರತಿ
  • ವಿದ್ಯಾರ್ಥಿಯ ಭಾವಚಿತ್ರ

ಲೈಫ್ ಗುಡ್ ವಿದ್ಯಾರ್ಥಿವೇತನಕ್ಕೆ (Life’s Good Scholarship) ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ :- Apply Online (ಇಲ್ಲಿ ಕ್ಲಿಕ್ ಮಾಡಿ)

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.


Spread the love

Leave a Reply