ದೇಹ ದಣಿಗಾದ ಸಾಮಾನ್ಯ ನೀರಿಗಿಂತ ನಿಂಬೆ ಜ್ಯೂಸನ್ನು ದೇಹ ಬಯಸುತ್ತೆ. ಇದು ಮತ್ತೆ ನಮ್ಮನ್ನು ರಿಫ್ರೆಶ್ ಮಾಡುತ್ತೆ ಎನ್ನುವ ವಿಚಾರ ಎಲ್ಲರಿಗೂ ಗೊತ್ತು. ಅನೇಕರು ಪ್ರತಿ ದಿನ ಬೆಳಿಗ್ಗೆ ಬಿಸಿ ನೀರಿಗೆ ಲಿಂಬೆ ರಸ (Lemon juice) ಸೇರಿಸಿ ಕುಡಿತಾರೆ. ಈ ಲಿಂಬೆ ನೀರು ಆರೋಗ್ಯಕ್ಕೆ ಅಮೃತ.
ಆದ್ರೆ ಅದ್ರ ಬಗ್ಗೆ ತಿಳಿದುಕೊಳ್ಳುವ ಅನೇಕ ವಿಷ್ಯವಿದೆ. ಎಲ್ಲವನ್ನೂ ಕಣ್ಣುಮುಚ್ಚಿ ನಂಬುವ ಮೊದಲು ಲಿಂಬೆನೀರಿನ ಬಗ್ಗೆ ಒಂದಿಷ್ಟು ಜ್ಞಾನ ನಿಮಗಿರಲಿ.
ಪ್ರತಿ ದಿನ ನಿಂಬೆ ನೀರು ಕುಡಿಯೋದ್ರಿಂದ ಏನಾಗುತ್ತೆ? :
1. ದೇಹವನ್ನು ಹೈಡ್ರೀಕರಿಸುತ್ತದೆ : ಪದೇ ಪದೇ ಬರೀ ನೀರು ಕುಡಿಯೋಕೆ ಮನಸ್ಸಾಗೋದಿಲ್ಲ. ಅದೇ ಲಿಂಬೆ ರಸ ಬೆರೆಸಿದ ನೀರು ಬಾಯಿಗೆ ರುಚಿ ನೀಡುತ್ತದೆ. ಪದೇ ಪದೇ ನೀವು ಲಿಂಬೆ ನೀರು ಕುಡಿತಾ ಇದ್ರೆ ದೇಹ ಡಿಹೈಡ್ರೇಟ್ ಆಗೋದಿಲ್ಲ. ಸಿಟ್ರಿಸ್ ಪರಿಮಳ ನಮ್ಮನ್ನು ಆಕರ್ಷಿಸೋದ್ರಿಂದ ನೀರು ಸೇವನೆ ಪ್ರಮಾಣ ಹೆಚ್ಚಾಗುತ್ತದೆ. ಇದು ದೇಹಕ್ಕೆ ಅತ್ಯಗತ್ಯ.
2. ವಿಟಮಿನ್ ಸಿ ಹೆಚ್ಚಳ : ಲಿಂಬೆ ಹಣ್ಣುಗಳು ವಿಟಮಿನ್ ಸಿ ಯಿಂದ ಸಮೃದ್ಧವಾಗಿವೆ. ಇದು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಚರ್ಮದ ಆರೋಗ್ಯಕ್ಕೆ ಒಳ್ಳೆಯದು. ಒಂದು ಗ್ಲಾಸ್ ಲಿಂಬೆ ನೀರು ದೈನಂದಿನ ಅಗತ್ಯವನ್ನು ಪೂರೈಸುವುದಿಲ್ಲವಾದರೂ, ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ. ಬೆಳಿಗ್ಗೆ ನೀವು ದೇಹಕ್ಕೆ ನೀಡುವ ಪೋಷಕಾಂಶದ ಡೋಸ್ ಅಂತ ನೀವು ಹೇಳ್ಬಹುದು.
3. ಹೊಟ್ಟೆಯ ಎಸಿಡ್ ಹೆಚ್ಚಿಸುತ್ತದೆ : ಕೆಲವರ ಹೊಟ್ಟೆಯಲ್ಲಿ ಎಸಿಡ್ ಕಡಿಮೆ ಇರುತ್ತದೆ. ಇದು ಜೀರ್ಣಕ್ರಿಯೆಗೆ ತೊಂದರೆಯನ್ನುಂಟು ಮಾಡುತ್ತದೆ. ಲಿಂಬೆ ನೀರು ನಿಮ್ಮ ಹೊಟ್ಟೆಯಲ್ಲಿ ನೈಸರ್ಗಿಕ ಆಮ್ಲತೆಯನ್ನು ಹೆಚ್ಚಿಸುತ್ತದೆ. ಉತ್ತಮ ಜೀರ್ಣಕ್ರಿಯೆ ಸಹಾಯ ಮಾಡುತ್ತದೆ. ಆದ್ರೆ ಲಿಂಬೆ ನೀರೇ ಇದಕ್ಕೆ ಪೂರ್ಣ ಪರಿಹಾರವಲ್ಲ. ನೀವು ಸಮಸ್ಯೆ ಅರಿತು ಚಿಕಿತ್ಸೆ ಪಡೆಯಬೇಕು.
4. ಲಿಂಬೆ ನೀರನ್ನು ಬಿಸಿ ಮಾಡಬೇಡಿ : ಬಿಸಿಯಾದ ಲಿಂಬೆ ನೀರು ಆರೋಗ್ಯಕ್ಕೆ ಒಳ್ಳೆಯದು ಅಂತ ಕೆಲವರು ಭಾವಿಸಿದ್ದಾರೆ. ವೈದ್ಯರ ಪ್ರಕಾರ ಇದು ತಪ್ಪು. ಲಿಂಬೆ ನೀರನ್ನು ಬಿಸಿ ಮಾಡಿದಾಗ ವಿಟಮಿನ್ ಸಿಗೆ ಹಾನಿಯಾಗುತ್ತದೆ. ನೀವು ಬೆಚ್ಚಗಿರುವ ನೀರನ್ನು ಬಳಸಬಹುದು.
5. ಆಮ್ಲೀಯತೆ ಹಲ್ಲಿಗೆ ಹಾನಿ ಮಾಡಬಹುದು : ಆಮ್ಲವು ಹಲ್ಲಿನ ಕವಚಕ್ಕೆ ಹಾನಿ ಮಾಡುತ್ತದೆ. ಕಾಲಾನಂತರದಲ್ಲಿ ದಂತಕವಚ ಸವೆಯಬಹುದು. ಆದ್ರೆ ಲಿಂಬೆ ನೀರು ಹಾನಿಕಾರಕ ಎಂದಲ್ಲ. ನೀವು ಸ್ಟ್ರಾದಲ್ಲಿ ಇದನ್ನು ಕುಡಿಯಬಹುದು. ಕುಡಿದ ನಂತ್ರ ಸ್ವಚ್ಛ ನೀರಿನಿಂದ ಬಾಯಿ ಕ್ಲೀನ್ ಮಾಡ್ಬೇಕು.
6. ಲಿಂಬೆ ನೀರು ಡಿಟಾಕ್ಸ್ ಮಾಡೋದಿಲ್ಲ : ಲಿಂಬೆ ನೀರು, ದೇಹದಲ್ಲಿರುವ ವಿಷವನ್ನು ಹೊರ ಹಾಕುತ್ತದೆ ಎನ್ನುವ ನಂಬಿಕೆ ಇದೆ. ತಜ್ಞರ ಪ್ರಕಾರ ಇದು ತಪ್ಪು. ನಮ್ಮ ದೇಹದಲ್ಲಿರುವ ಲಿವರ್ ಹಾಗೂ ಕಿಡ್ನಿ ಸ್ವಚ್ಛತೆ ಕೆಲ್ಸವನ್ನು ಮಾಡ್ತಿದೆ. ಲಿಂಬೆ ನೀರು, ದೇಹಕ್ಕೆ ಹೆಚ್ಚಿನ ನೀರನ್ನು ಒದಗಿಸುತ್ತದೆ. ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಆದ್ರೆ ವಿಷವನ್ನು ಹೊರ ಹಾಕುವುದಿಲ್ಲ.
7. ಇದೊಂದು ಸಕಾರಾತ್ಮಕ ಆಚರಣೆ : ಲಿಂಬೆ ನೀರನ್ನು ಸಕಾರಾತ್ಮಕ ಆಚರಣೆ ಎಂದು ಪರಿಗಣಿಸುತ್ತಾರೆ. ಒಂದು ಲೋಟ ಲಿಂಬೆ ನೀರಿನಿಂದ ದಿನವನ್ನು ಪ್ರಾರಂಭಿಸಿದ್ರೆ ಅದು ದೇಹವನ್ನು ಎಚ್ಚರಗೊಳಿಸುತ್ತದೆ. ಕೆಲಸ ಮಾಡಲು ಇದನ್ನು ಸೂಚಿಸುತ್ತದೆ.
Lemon Water Benefits : ಒಳ್ಳೇದು ಅಂತ ದಿನಾ ಲಿಂಬೆ ನೀರು ಕುಡಿದ್ರೆ ಏನಾಗುತ್ತೆ ಗೊತ್ತಾ.?
WhatsApp Group
Join Now