ಕಿರಿಯ ವಯಸ್ಸಿನಲ್ಲಿಯೇ ಸಾವಿರಾರು ವಿದ್ಯಾರ್ಥಿಗಳ ಮನದಲ್ಲಿ ಮನೆ ಮಾಡಿದ್ದ ಉಪನ್ಯಾಸಕಿ ಅಕ್ಕಮಹಾದೇವಿ ಕೊನೆಯುಸಿರೆಳೆದಿದ್ದಾರೆ.
ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಶ್ರೀಶಶಿಧರಸ್ವಾಮಿ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ ಆಂಗ್ಲ ಮಾಧ್ಯಮದ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅಕ್ಕಮಹಾದೇವಿ ರವರು 4 ದಿನದ ಹಿಂದೆ ಪತಿ ಜತೆ ಕಾರಿನಲ್ಲಿ ಸಿಂಧನೂರು ತಾಲೂಕಿನ ತುರವಿಹಾಳ ಬಳಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿ ಇಬ್ಬರೂ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.
ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಉಪನ್ಯಾಸಕಿ ಮೃತಪಟ್ಟಿದ್ದಾರೆ. ಅಪಘಾತಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭ ಸಾವಿರಾರು ವಿದ್ಯಾರ್ಥಿಗಳು ತಮ್ಮ ಗುರುಗಳು ಬೇಗ ಗುಣಮುಖರಾಗಿ ಬರಲಿ ಎಂದು ಪ್ರಾರ್ಥನೆ ಕೂಡ ಮಾಡುತ್ತಿದ್ದರು ಆದರೆ ಮಕ್ಕಳ ಪ್ರಾರ್ಥನೆ ಫಲಿಸಲಿಲ್ಲ. ಅಕ್ಕಮಹಾದೇವಿ ಅವರು ಮೂಲತ ಹಾವೇರಿ ಜಿಲ್ಲೆ ಸವಣೂರು ತಾಲೂಕಿನಲ್ಲಿ ಜನಿಸಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಅದೇ ಗ್ರಾಮದಲ್ಲಿ ಮುಗಿಸಿದರು.
ಮುಂದಿನ ವಿದ್ಯಾಭ್ಯಾಸವನ್ನು ಧಾರವಾಡದ ಯುಡಿ ಯುನಿವರ್ಸಿಟಿಯಲ್ಲಿ ಓದಿ ಬೆಂಗಳೂರಿನ ಶ್ರೀವಿಶ್ವೇಶ್ವರಯ್ಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ. ನಂತರದಲ್ಲಿ ತಾವರಗೇರಾ ಶ್ರೀಶಶಿಧರ ಸ್ವಾಮಿ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕಿಯಾಗಿ ಆಯ್ಕೆಯಾಗಿ ಸೇವೆ ಸಲ್ಲಿಸುತ್ತ ಅಪಾರ ವಿದ್ಯಾರ್ಥಿಗಳ ಮನದಲ್ಲಿ ಮನೆ ಮಾಡಿದ್ದರು. ಅವರು ಒರ್ವ ಪುತ್ರ, ಒರ್ವ ಪುತ್ರಿಯನ್ನು ಅಗಲಿದ್ದು, ಕನಕಗಿರಿ ತಾಲೂಕಿನ ಸುಳೇಕಲ್ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಿತು.
ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಉಪನ್ಯಾಸಕಿ ಮೃತ್ಯು.. ಕಂಬನಿ ಮಿಡಿದ ವಿದ್ಯಾರ್ಥಿಗಳು
WhatsApp Group
Join Now