ಕೊಟ್ಟಾಯಂ : ತಾಯಿಯೊಬ್ಬಳು ತನ್ನ ಎರಡು ಮಕ್ಕಳನ್ನು ನದಿಗೆ ದೂಡಿ, ಆ ಬಳಿಕ ತಾನೂ ಹಾರಿ ಪ್ರಾಣ ಕಳೆದುಕೊಂಡಿರುವ ಘಟನೆ ಕೇರಳದ ಕೊಟ್ಟಾಯಂನಲ್ಲಿ ಮಂಗಳವಾರ(ಏ.15) ರಂದು ನಡೆದಿರುವುದು ವರದಿಯಾಗಿದೆ.
ಕೊಟ್ಟಾಯಂನ ಎಟ್ಟುಮನೂರಿನ ನೀರಿಕ್ಕಾಡ್‌ನ ತೊಣ್ಣಮ್ಮವುಂಗಲ್ ಮೂಲದವರಾದ ವಕೀಲೆ ಜಿಸ್ಕೋಲ್ (35) ತಮ್ಮ ಪುತ್ರಿಯರಾದ ಪೊನ್ನು (2) ಮತ್ತು ನೇಹಾ (5) ಅವರೊಂದಿಗೆ ನದಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ.
ಮಂಗಳವಾರ ಮಧ್ಯಾಹ್ನ ನದಿಯಲ್ಲಿ ಮಕ್ಕಳು ತೇಲುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಕೂಡಲೇ ರಕ್ಷಣೆಗೆ ಧಾವಿಸಿದ್ದಾರೆ. ಮಕ್ಕಳನ್ನು ಎತ್ತಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಕೆಲ ಸಮಯದ ನಂತ್ರ ಅಲ್ಲೇ ಮುಂದೆ ಜಿಸ್ಕೋಲ್ ಅವರ ದೇಹ ಕೂಡ ಪತ್ತೆಯಾಗಿದೆ. ಮೂವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಮೂವರು ಚಿಕಿತ್ಸೆ ಫಲಿಸದೆ ಮೃ*ತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ಘಟನೆ ನಡೆದ ಕೆಲ ದೂರದಲ್ಲಿ ಜಿಸ್ಕೋಲ್ ಅವರ ಸ್ಕೂಟಿ ಪತ್ತೆಯಾಗಿದೆ. ಮೂವರ ಶ*ವಗಳನ್ನು ಖಾಸಗಿ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ಘಟನೆ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಯಾವ ಕಾರಣಕ್ಕೆ ಈ ಘಟನೆ ನಡೆದಿದೆ ಎನ್ನುವುದರ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಜಿಸ್ಕೋಲ್ ಪಾಲಾ ಮತ್ತು ಕೇರಳ ಹೈಕೋರ್ಟ್‌ನಲ್ಲಿ ವಕೀಲೆಯಾಗಿ ಸೇವೆ ಸಲ್ಲಿಸುತ್ತಿದ್ದರು. ಅವರು ಪತಿ ಜಿಮ್ಮಿಯನ್ನು ಅಗಲಿದ್ದಾರೆ. ಈ ಹಿಂದೆ ಮುತ್ತೋಲಿ ಪಂಚಾಯತ್ ಉಪಾಧ್ಯಕ್ಷೆ ಜಿಸ್ಕೋಲ್ ಆಗಿ ಕಾರ್ಯ ನಿರ್ವಹಿಸಿದ್ದರು ಎಂದು ವರದಿ ತಿಳಿಸಿದೆ.

ಇಬ್ಬರು ಮಕ್ಕಳನ್ನು ನದಿಗೆ ದೂಡಿ, ತಾನೂ ಪ್ರಾಣ ಕಳೆದುಕೊಂಡ ವಕೀಲೆ
WhatsApp Group
Join Now