Labour Card Scholarship : ಕಾರ್ಮಿಕರ ಮಕ್ಕಳಿಗೆ ಸಿಹಿಸುದ್ದಿ – ರಾಜ್ಯ ಸರ್ಕಾರದಿಂದ ಶೈಕ್ಷಣಿಕ ಧನಸಹಾಯಕ್ಕೆ ಅರ್ಜಿ ಆಹ್ವಾನ.!

Spread the love

Labour Card Scholarship : ನಮಸ್ಕಾರ ಸ್ನೇಹಿತರೇ, ರಾಜ್ಯ ಸರ್ಕಾರವು ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸಿಹಿಸುದ್ದಿ ನೀಡಿದ್ದು, 2024-25 ನೇ ಸಾಲಿನ ಅರ್ಹ ನೋಂದಾಯಿತ ಕಟ್ಟಡ & ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸದ ಶೈಕ್ಷಣಿಕ ಧನಸಹಾಯಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30.11.2024 ಆಗಿರುತ್ತದೆ.

WhatsApp Group Join Now

ಇದನ್ನೂ ಕೂಡ ಓದಿ : Post Office FD : ಸ್ಥಿರ ಠೇವಣಿದಾರರಿಗೆ ಭರ್ಜರಿ ಸಿಹಿ ಸುದ್ದಿ, ಪೋಸ್ಟ್ ಆಫೀಸ್ನಲ್ಲಿ ಅದ್ಭುತ ಸ್ಕೀಮ್

2024-25 ನೇ ಸಾಲಿಗೆ ಸಂಬಂಧಿಸಿದಂತೆ ಈಗಾಗಲೇ ಸರ್ಕಾರದ ವಿವಿಧ ಇಲಾಖೆಗಳಲ್ಲಿ ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದ(SSP) ಮೂಲಕ ಅರ್ಜಿ ಸಲ್ಲಿಸಿರುವ ಫಲಾನುಭವಿಗಳು ಪುನಃ ಅರ್ಜಿ ಸಲ್ಲಿಸುವ ಅವಶ್ಯಕತೆಯಿರುವುದಿಲ್ಲ. ಅರ್ಹ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳು ಶೈಕ್ಷಣಿಕ ಧನಸಹಾಯವನ್ನು ಎಸ್‌ ಎಸ್‌ ಪಿ ತಂತ್ರಾಂಶದ ಮೂಲಕ ಪಡೆಯಲು ಕಾರ್ಮಿಕ ಇಲಾಖೆ, ಕರ್ನಾಟಕ ಸರ್ಕಾರ Labour Department, Government of Karnataka ವೆಬ್ ಸೈಟ್ ಉಪಯೋಗಿಸಿಕೊಂಡು ಮಂಡಳಿಯ ತಂತ್ರಾಂಶದಲ್ಲಿ ತಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಿ, ಆಧಾ‌ರ್ ಕಾರ್ಡ್ ಲಿಂಕ್(ಸೀಡ್) ಮಾಡಬೇಕು.

WhatsApp Group Join Now

ಇದನ್ನೂ ಕೂಡ ಓದಿ : Pension Scheme : ವಿಧವಾ ಪಿಂಚಣಿ’ ಯೋಜನೆಗೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ.! ಹೇಗೆ ಅರ್ಜಿ ಸಲ್ಲಿಸುವುದು.?

ಎಸ್ಎಸ್ ಪಿ ತಂತ್ರಾಂಶದ ಮೂಲಕ ಶೈಕ್ಷಣಿಕ ಧನಸಹಾಯ ಪಡೆಯಲು ಇದು ಅತ್ಯವಶ್ಯಕವಾಗಿರುವುದರಿಂದ ಈಗಾಗಲೇ ಆಧಾರ್ ಸಂಖ್ಯೆಯನ್ನು ಲಿಂಕ್(ಸೀಡ್) ಮಾಡದೇ ಇರುವ ಎಲ್ಲಾ ಕಾರ್ಮಿಕರು ಕೂಡಲೇ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಯೊಂದಿಗೆ ನೋಂದಣಿ ಮಾಡಿ ಎನ್ ಪಿಸಿಐ ಮ್ಯಾಪಿಂಗ್ ಮಾಡಿಸಬೇಕಿರುತ್ತದೆ. ಮಂಡಳಿಯು 2024-25ನೇ ಸಾಲಿನ ಶೈಕ್ಷಣಿಕ ಸಹಾಯಧನಕ್ಕೆ ಮೀಸಲಿಟ್ಟಿರುವ ಅಯವ್ಯಯಕ್ಕೆ ಅನುಗುಣವಾಗಿ ಮ೦ಡಳಿಯ ನಿರ್ಣಯದಂತೆ ಶೈಕ್ಷಣಿಕ ಧನಸಹಾಯ ಕೋರಿ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳಿಗೆ ಧನಸಹಾಯ ವಿತರಿಸಲಾಗುವುದೆಂದು ಈ ಮೂಲಕ ತಿಳಿಸಿದೆ.

WhatsApp Group Join Now

Spread the love

Leave a Reply