ಕಾರ್ಮಿಕರಿಗೆ ಸಿಹಿಸುದ್ಧಿ.! ಉಚಿತ ಟೂಲ್ ಕಿಟ್ ಪಡೆಯಲು ಕಾರ್ಮಿಕರಿಂದ ಅರ್ಜಿ ಆಹ್ವಾನ.! Labour Card Free Tool Kit Scheme

Labour Card Free Tool Kit Scheme : ನಮಸ್ಕಾರ ಸ್ನೇಹಿತರೇ, 2024-25 ನೇ ಸಾಲಿಗೆ ವೃತ್ತಿಪರ ಕುಶಲ ಕಾರ್ಮಿಕರಿಂದ ಅಂದ್ರೆ ಗಾರೆ ಕೆಲಸ, ಪೇಂಟಿಂಗ್ ಕೆಲಸ, ಮರಗೆಲಸ, ಹೊಲಿಗೆ ಕೆಲಸ, ದೋಬಿ ಕೆಲಸ, ಆಚಾರಿ ಕೆಲಸ, ಪ್ಲಂಬಿಂಗ್ ಕೆಲಸ, ಎಲೆಕ್ಟ್ರಿಕಲ್ ಕೆಲಸ, ಕ್ಷೌರಿಕ ಕೆಲಸಗಳಂತಹ ಇತ್ಯಾದಿ ವೃತ್ತಿಪರ ಕೆಲಸಗಳನ್ನು ಮಾಡುತ್ತಿರುವಂತಹ ಈ ನಾಲ್ಕು ಜಿಲ್ಲೆಯ ವೃತ್ತಿಪರ ಕಾರ್ಮಿಕರಿಗೆ ವೃತ್ತಿಪರ ಉಪಕರಣಗಳನ್ನ ಪಡೆದುಕೊಳ್ಳುವುದಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಉಚಿತ ಟೂಲ್ ಕಿಟ್ ಪಡೆಯಲು ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸುವುದಕ್ಕೆ ಬೇಕಾಗಿರುವ ಅಗತ್ಯ ದಾಖಲೆಗಳೇನು.? ಎಲ್ಲಿ ಅರ್ಜಿ ಸಲ್ಲಿಸಬೇಕು.? ಏನೆಲ್ಲಾ ಅರ್ಹತೆಗಳಿರಬೇಕು.? ಹಾಗೆಯೇ ಅರ್ಜಿ ಸಲ್ಲಿಸುವುದಕ್ಕೆ ಕೊನೆಯ ದಿನಾಂಕ ಯಾವುದು.? ಮತ್ತು ಯಾವ ಜಿಲ್ಲೆಗಳಿಂದ ಈ ವೃತ್ತಿಪರ ಉಪಕರಣಗಳನ್ನ ಪಡೆದುಕೊಳ್ಳುವುದಕ್ಕೆ ಅರ್ಜಿಯನ್ನು ಆಹ್ವಾನ ಮಾಡಿದ್ದಾರೆ.? ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.

WhatsApp Group Join Now

ಇದನ್ನೂ ಕೂಡ ಓದಿ : KSRTC Recruitment 2024 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆಯಲ್ಲಿ 3000ಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ.! 10ನೇ ತರಗತಿ ಪಾಸಾಗಿದ್ದರೂ ಸಾಕಂತೆ.!

ಬೇಕಾಗುವ ದಾಖಲೆಗಳೇನು.?

  • ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ಜಾತಿ ಪ್ರಮಾಣ ಪತ್ರ
  • ಗ್ರಾಮ ಪಂಚಾಯತಿಯ ದೃಢೀಕರಿಸಿದ ಪತ್ರ
  • ಮತದಾರರ ಗುರುತಿನ ಚೀಟಿ
  • ವಿಕಲಚೇತನರ ಪ್ರಮಾಣ ಪತ್ರ (ಅನ್ವಯವಾದಲ್ಲಿ)
  • ಪಾಸ್ ಪೋರ್ಟ್ ಸೈಜ್ ಫೋಟೋ
  • ಮರಗೆಲಸ / ದೋಬಿ / ಇತ್ಯಾದಿ ಕಸುಬಿನ ಕುಶಲಕರ್ಮಿಯಾಗಿದ್ದಲ್ಲಿ ಆಯಾ ಗ್ರಾಮ ಪಂಚಾಯತಿ / ಕಾರ್ಮಿಕ ಇಲಾಖೆಯಿಂದ ಕಸುಬು ನಡೆಸುತ್ತಿರುವ ಬಗ್ಗೆ ದೃಢೀಕರಣ ಪತ್ರ
  • ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ನಂಬರ್

ಏನೆಲ್ಲಾ ಅರ್ಹತೆಗಳಿರಬೇಕು.?

  • ಈ ಯೋಜನೆಯಡಿ ಸೌಲಭ್ಯವು ಗ್ರಾಮೀಣ ಪ್ರದೇಶದವರಿಗೆ ಮಾತ್ರ ಅನ್ವಯಿಸಲಾಗುತ್ತದೆ.
  • ಈಗಾಗಲೇ ಇಲಾಖೆಯ ವತಿಯಿಂದ ಸೌಲಭ್ಯ ಪಡೆದ ಫಲಾನುಭವಿಗಳು ಇದಕ್ಕೆ ಅರ್ಜಿ ಸಲ್ಲಿಕೆ ಅರ್ಹರಿರುವುದಿಲ್ಲ.
  • ಆನ್‌ಲೈನ್ ಅರ್ಜಿಯೊಂದಿಗೆ ದಾಖಲಾತಿಗಳನ್ನು ಆಯಾ ತಾಲೂಕಿನ ವಿಸ್ತರಣಾಧಿಕಾರಿಗಳ ಕಚೇರಿಗೆ ಕಡ್ಡಾಯವಾಗಿ ಸಲ್ಲಿಸಬೇಕಾಗಿರುತ್ತದೆ.

ಇದನ್ನೂ ಕೂಡ ಓದಿ : SBI Recruitment 2024 : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನಲ್ಲಿ 10ನೇ ತರಗತಿ ಪಾಸ್ ಆದವರಿಗೆ ಉದ್ಯೋಗವಕಾಶ.! ಈಗಲೇ ಅರ್ಜಿ ಸಲ್ಲಿಸಿ.

WhatsApp Group Join Now

ಯಾವ ಜಿಲ್ಲೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.?

ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ತುಮಕೂರು, ಉಡುಪಿ ಜಿಲ್ಲೆಗಳಿಂದ ಈ ಅರ್ಜಿಯನ್ನು ಆಹ್ವಾನ ಮಾಡಿದ್ದಾರೆ. ಯಾರೆಲ್ಲಾ ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ತುಮಕೂರು, ಉಡುಪಿ ಜಿಲ್ಲೆಗಳಲ್ಲಿ ಮೇಲೆ ತಿಳಿಸಲಾದ ವೃತ್ತಿಪರ ಕೆಲಸಗಳನ್ನು ಮಾಡುತ್ತಿರುವ ಕಾರ್ಮಿಕರು ಈ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸುವ ವೆಬ್ ಸೈಟ್ ಡೈರೆಕ್ಟ್ ಲಿಂಕ್ : 2024-25ನೇ ಸಾಲಿನಲ್ಲಿ ಗ್ರಾಮೀಣ ಕುಶಲಕರ್ಮಿಗಳಿಗೆ ಉಚಿತ ವೃತ್ತಿಪರ ಉಪಕರಣಗಳನ್ನು ಪಡೆಯಲು ಅರ್ಜಿ

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

WhatsApp Group Join Now

Leave a Reply