ಡಿಕೆಶಿ ಕನಸಿನ ‘ಸಿಎಂ’ ಪಟ್ಟದ ಬಗ್ಗೆ ಕೋಡಿಶ್ರೀ ಭವಿಷ್ಯ: ಅಡ್ಡಗೋಡೆ ಮೇಲಿನ ದೀಪದ ಹಿಂದೆ ಅಡಗಿದೆಯೇ ಗಾದಿ ಸೀಕ್ರೆಟ್.?

Spread the love

ಸಾಮಾನ್ಯವಾಗಿ ಮಕರ ಸಂಕ್ರಾಂತಿಯ ಪರ್ವಕಾಲದಂದು ವರ್ಷದ ಮೊದಲ ಭವಿಷ್ಯ ನುಡಿಯುವ ಕೋಡಿಮಠದ ಶ್ರೀಗಳು ಈ ಬಾರಿ ( 2026 ) ಭವಿಷ್ಯವನ್ನು ನುಡಿಯಲಿಲ್ಲವೇ? ಶ್ರೀಗಳು ಸಂಕ್ರಾಂತಿಯ ಭವಿಷ್ಯ, ಹಬ್ಬ ಮುಗಿದು ಹತ್ತು ದಿನಗಳಾಗುತ್ತಾ ಬಂದರೂ ಇನ್ನೂ ಎಲ್ಲೂ ವರದಿಯಾಗಿಲ್ಲ.

ಸಂಕ್ರಾಂತಿಗೆ ಭವಿಷ್ಯ ನುಡಿಯುವುದಾಗಿ ಶ್ರೀಗಳು ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಸಂಕ್ರಾಂತಿಗೆ ಭವಿಷ್ಯ ನುಡಿಯುವುದಾಗಿ ದೇವದುರ್ಗ ಕಾಗಿನೆಲೆ ಕನಕಪೀಠದಲ್ಲಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ (ಜನವರಿ 13) ಕೋಡಿಶ್ರೀಗಳು ಹೇಳಿದ್ದರು. ಸೂರ್ಯನನ್ನು ನೋಡಿ ಭವಿಷ್ಯ ಹೇಳುವುದು ಮಕರ ಸಂಕ್ರಾಂತಿಯ ವೇಳೆ, ಚಂದ್ರನನ್ನು ಇಟ್ಟುಕೊಂಡು ಮುಂದಿನ ಆಗುಹೋಗು ಬಗ್ಗೆ ಹೇಳುವುದು ಯುಗಾದಿಯ ವೇಳೆ ಎಂದು ಶ್ರೀಗಳು ಹೇಳಿದ್ದರು. ಜೊತೆಗೆ, ಡಿಕೆ ಶಿವಕುಮಾರ್ ಬಗ್ಗೆ ಅಂದರೆ ಅವರು ಮುಂದಿನ ಸಿಎಂ ಭವಿಷ್ಯದ ಬಗ್ಗೆ ಸೂಚ್ಯವಾಗಿ ಭವಿಷ್ಯವನ್ನು ಹೇಳಿದ್ದರು.

ಆದರೆ, ಜನರಿಗೆ ಭಾರೀ ಕುತೂಹಲವಿರುವ ಕೋಡಿ ಶ್ರೀಗಳ ಭವಿಷ್ಯ ಸಂಕ್ರಾಂತಿಯ ಆಸುಪಾಸಿನಲ್ಲಿ ಎಲ್ಲೂ ವರದಿಯಾಗಿಲ್ಲ. ಆದರೆ, ಸಂಕ್ರಾಂತಿ ಹಬ್ಬಕ್ಕೂ ಮುನ್ನ ಸೂಕ್ಷ್ಮವಾಗಿ ಮುಂದಿನ ಆಗುಹೋಗುಗಳ ಬಗ್ಗೆ ಶ್ರೀಗಳು ಭವಿಷ್ಯ ನುಡಿದು, 2025ರಲ್ಲಿ ಏನೇನು ತೊಂದರೆಗಳು ಎದುರಾಗಿದ್ದವೋ, ಅದಕ್ಕಿಂತ ಹೆಚ್ಚು 2026ರಲ್ಲಿ ಕಷ್ಟಕಾರ್ಪಣ್ಯಗಳು ಇರಲಿದೆ ಎಂದು ಹೇಳಿದ್ದರು.

ಡಿಕೆ ಶಿವಕುಮಾರ್ ಬಗ್ಗೆ ಮಾತನಾಡಿದ್ದ ಕೋಡಿಶ್ರೀಗಳು, ” ಅವರೊಬ್ಬರು ಪಕ್ಷನಿಷ್ಠ, ಕಾರ್ಯಕರ್ತ, ಹೋರಾಟಗಾರ, ಅತ್ಯುತ್ತಮ ಸಂಘಟನಾಕಾರ. ಆದರೆ, ಸಿದ್ದರಾಮಯ್ಯನವರು ಬಿಟ್ಟು ಕೊಟ್ಟರೆ ಮಾತ್ರ ಅವರು ಮುಖ್ಯಮಂತ್ರಿಯಾಗಲು ಸಾಧ್ಯ. ಡಿಕೆಶಿ ತಮ್ಮ ಪಕ್ಷಕ್ಕಾಗಿ ದುಡಿದಿರುವಂತಹ ಮನುಷ್ಯ, ಇದರಲ್ಲಿ ಎರಡು ಮಾತಿಲ್ಲ. ಆದರೆ, ಇಲ್ಲಿ ಸಂಘಟನೆಯ ಪ್ರಶ್ನೆ ಬರಲ್ಲ. ಅವರು (ಸಿದ್ದರಾಮಯ್ಯ) ಬಿಟ್ಟು ಕೊಟ್ಟರೆ, ಇವರು ಸಿಎಂ ಆಗುತ್ತಾರೆ. ಅದನ್ನು ಯುಗಾದಿಯ ವೇಳೆ ಹೇಳುತ್ತೇನೆ” ಎಂದು ಕೋಡಿಶ್ರೀಗಳು ಹೇಳಿದ್ದಾರೆ.

ಇದಲ್ಲದೇ, ಮುಖ್ಯಮಂತ್ರಿ ಬದಲಾವಣೆಯ ವಿಚಾರದಲ್ಲಿ ರಾಜ್ಯದ ಖಜಾನೆಯ ಲೆಕ್ಕಾಚಾರ ಮಾಡಿದ ನಂತರ, ಸಿದ್ದರಾಮಯ್ಯನವರ ನಿರ್ಧಾರ ಹೊರಬೀಳಲಿದೆ. ಖಜಾನೆ ಎನ್ನುವುದನ್ನು ರಾಜ್ಯ ಬಜೆಟ್’ ಅನ್ನು ಉಲ್ಲೇಖಿಸಿ ಶ್ರೀಗಳು ಹೇಳಿದ್ದರು. ಅಂದರೆ, ಈ ಬಾರಿಯೂ ಬಜೆಟ್ ಮಂಡನೆ ಮಾಡುವುದು ಸಿದ್ದರಾಮಯ್ಯನವರೇ ಎಂದು ಕೋಡಿಶ್ರೀಗಳು ಪರೋಕ್ಷವಾಗಿ ಹೇಳಿದ್ದರು.

ಹಾಸನ ಜಿಲ್ಲೆ ಅರಸೀಕೆರೆ ಹಾರನಹಳ್ಳಿ ಕೋಡಿಮಠ ಸಂಸ್ಥಾನದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಭವಿಷ್ಯ ನುಡಿದು, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಏನಿದ್ದರೂ, ಯುಗಾದಿಯ ನಂತರ, ಅದಕ್ಕಿಂತ ಮುನ್ನ, ಏನೇನೂ ಆಗುವುದಿಲ್ಲ ಎಂದು ಹೇಳಿದ್ದರು.

ಸಿದ್ದರಾಮಯ್ಯನವರನ್ನು ಬಲವಂತದಿಂದ ಕೆಳಗಿಳಿಸುವುದು ಸಾಧ್ಯವೇ ಇಲ್ಲ ಎಂದು ಒತ್ತಿಒತ್ತಿ ಹೇಳಿರುವ ಕೋಡಿಶ್ರೀಗಳು, ಅವರಾಗಿಯೇ ಪದತ್ಯಾಗ ಮಾಡಿದರೆ ಮಾತ್ರ ಮುಖ್ಯಮಂತ್ರಿ ಬದಲಾವಣೆ ಸಾಧ್ಯ, ಇಲ್ಲದಿದ್ದರೆ ಇಲ್ಲ. ಅದೇನಿದ್ದರೂ, ಹಿಂದೂಗಳ ಹೊಸ ವರ್ಷದ ದಿನದ (ಯುಗಾದಿ) ನಂತರ ಮಾತ್ರ ಸಾಧ್ಯ ಎಂದು ಕೋಡಿಶ್ರೀಗಳು ಹೇಳಿದ್ದರು.

ಜಾಗತಿಕವಾಗಿಯೂ ಶ್ರೀಗಳು ಭವಿಷ್ಯವನ್ನು ಸಂಕ್ರಾಂತಿಗೆ ಮುನ್ನ ಹೇಳಿದ್ದರು. ಜಾಗತಿಕ ಉದ್ವಿಗ್ನತೆ ಬೆಂಕಿಯಿಂದ ಬಾಣಲೆಗೆ ಬೀಳಲಿದೆ ಎಂದು ಕೋಡಿಶ್ರೀಗಳು ಹೇಳಿದ್ದರು. ಆ ಮೂಲಕ, ದೇಶದೇಶಗಳ ನಡುವೆ ಯುದ್ದದ ಕಾರ್ಮೋಡ ಹೆಚ್ಚಾಗಲಿದೆ ಎಂದು ಹೇಳಿದ್ದರು. ಅದರಂತೆಯೇ, ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರ‍ಂಪ್ ಅವರು ತೆಗೆದುಕೊಳ್ಳುತ್ತಿರುವ ನಿಲುವು, ಜಾಗತಿಕ ಅಶಾಂತಿಯನ್ನು ಹೆಚ್ಚಿಸುತ್ತಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

WhatsApp Group Join Now

Spread the love

Leave a Reply