ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಕುರಿತಾದ ಗೊಂದಲದ ನಡುವೆ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅಚ್ಚರಿ ಭವಿಷ್ಯ ನುಡಿದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೊಟ್ಟರೆ ಮಾತ್ರ ಬೇರೆಯವರಿಗೆ ಅವಕಾಶ ಇದೆ ಎಂದು ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಹಾಲುಮತ ಸಮಾಜದಿಂದ ಅಧಿಕಾರ ಕಿತ್ತುಕೊಳ್ಳುವುದು ಕಷ್ಟ. ಅವರಾಗಿಯೇ ಬಿಟ್ಟರೆ ಮಾತ್ರ ಬೇರೆಯವರಿಗೆ ಅಧಿಕಾರ ಸಿಗುತ್ತದೆ. ಸಿದ್ದರಾಮಯ್ಯನವರು ಅಧಿಕಾರ ಬಿಟ್ಟು ಕೊಟ್ಟರೆ ಮಾತ್ರ ಡಿ.ಕೆ. ಶಿವಕುಮಾರ್ ಗೆ ಅಧಿಕಾರ ಸಿಗುತ್ತದೆ. ಇಲ್ಲದಿದ್ದರೆ ಇಲ್ಲ ಎಂದು ಹೇಳಿದ್ದಾರೆ.
ಜ್ಯೋತಿಷ್ಯ ಭವಿಷ್ಯದಲ್ಲಿ ಒಂದು ಸಂಕ್ರಾಂತಿ ಫಲ, ಮತ್ತೊಂದು ಯುಗಾದಿ ಫಲ ಇರುತ್ತದೆ. ಸಂಕ್ರಾಂತಿ ಫಲದಲ್ಲಿ ಸೂರ್ಯ ಉತ್ತರಾಯಣದ ಕಡೆಗೆ ಹೋಗುತ್ತಾನೆ. ಇದು ರಾಜರು, ಮಹಾರಾಜರು, ವ್ಯಾಪಾರಸ್ಥರು, ದುಡಿಮೆಗಾರರಿಗೆ ಬರುತ್ತದೆ. ಸಂಕ್ರಾಂತಿ ಕಳೆದ ಮೇಲೆ ಭವಿಷ್ಯ ಹೇಳಬಹುದು ಎಂದು ಹೇಳಿದ್ದಾರೆ.
WhatsApp Group
Join Now