ರಾಜ್ಯ ಸರ್ಕಾರವು ಹಿರಿಯ ನಾಗರಿಕರು ಮತ್ತೆ ಬಡತನ ರೇಖೆಗಿಂತ ಕೆಳಗಿರುವಂತಹ ಕುಟುಂಬಗಳಿಗಾಗಿ ಯುಎಚ್ಐಡಿ ಸ್ಟಿಕ್ಕರ್ ಗಳನ್ನ ಮನೆಗಳ ಮುಂದೆ ಅಂಟಿಸುವ ಯೋಜನೆಯನ್ನ ಜಾರಿಗೆ ತಂದಿದೆ. ಇದು ಒಂದು ಉತ್ತಮ ಉದ್ದೇಶದಿಂದ ಆರಂಭವಾದ ಯೋಜನೆಯಾಗಿದ್ದರೂ, ಈ ಸ್ಟಿಕ್ಕರ್ ಬಗ್ಗೆ ಸಾರ್ವಜನಿಕರಲ್ಲಿ ಕೆಲವು ತಪ್ಪು ಕಲ್ಪನೆಗಳು ಹರಡಿಕೊಂಡಿವೆ. ಕೆಲವರು ಈ ಬಗ್ಗೆ ಸುಳ್ಳು ಸುದ್ದಿಯನ್ನು ಕೂಡ ಹರಡಿಸುತ್ತಿದ್ದಾರೆ.
ಹೆಚ್ಚಿನ ಜನರು ಯುಎಚ್ಐಡಿ ಸ್ಟಿಕ್ಕರ್ ಇದ್ದರೆ ಸರ್ಕಾರದ ಎಲ್ಲಾ ಉಚಿತ ಸೌಲಭ್ಯಗಳು ಸುಲಭವಾಗಿ ಸಿಗ್ತವೆ ಎಂದು ಭಾವಿಸಿದ್ದಾರೆ. ಆದರೆ ಇದು ಸತ್ಯವಲ್ಲ. ಅಧಿಕಾರಿಗಳು ಸ್ಪಷ್ಟಪಡಿಸಿರುವಂತೆ ಯುಎಚ್ಐಡಿ ಸ್ಟಿಕ್ಕರ್ ಕೇವಲ ಒಂದು ಗುರುತಿನ ಸಾಧನ. ಇದು ಕುಟುಂಬದ ಸಾಮಾಜಿಕ ಸ್ಥಾನಮಾನವನ್ನ ತುರ್ತು ಪರಿಸ್ಥಿತಿಗಳಲ್ಲಿ ಸುಲಭವಾಗಿ ಗುರುತಿಸಲು ಸಹಾಯ ಮಾಡುತ್ತದೆ. ಆದರೆ ಈ ಸ್ಟಿಕ್ಕರ್ ಇದ್ದರೂ ಕೂಡ ಕೆಲವೊಂದು ಪ್ರಮುಖ ಸೌಲಭ್ಯಗಳು ತಾನಾಗೇ ಸಿಗುವುದಿಲ್ಲ. ಅದಕ್ಕೆ ಕೆಲವೊಂದು ದಾಖಲೆಗಳು ಬೇಕಾಗಿರುತ್ತವೆ.
ಕೇವಲ ಸ್ಟಿಕ್ಕರ್ ಅಂಟಿಸಿದ್ದಕ್ಕೆ ಸರ್ಕಾರದಿಂದ ನೇರವಾಗಿ 1000 ಅಥವಾ ಯಾವುದೇ ಮಾಸಿಕ ಬತ್ತೆ ಬರುವುದಿಲ್ಲ. ನಗದು ಹಣ ಪಡೆಯುವ ಯೋಜನೆಗಳಿಗೆ ಅರ್ಜಿ ಯನ್ನ ಸಲ್ಲಿಸಿ ಅದಕ್ಕೆ ಬೇಕಾದ ಎಲ್ಲಾ ದಾಖಲೆಗಳನ್ನು ಒದಗಿಸುವುದು ಕಡ್ಡಾಯ. ಅದೇ ರೀತಿ ಯುಎಚ್ಐಡಿ ಸ್ಟಿಕ್ಕರ್ ಅಂಟಿಸಿದ್ರೆ ಅನ್ನಭಾಗ್ಯ ಯೋಜನೆಯ ಸೌಲಭ್ಯ ಸಿಗ್ತದೆ ಅಂತ ಹೇಳ್ತಾರೆ. ಆದರೆ ಸರ್ಕಾರದ ಅನ್ನವಾಗಿ ಅಥವಾ ಯಾವುದೇ ಉಚಿತ ಧಾನ್ಯ ಯೋಜನೆಗೆ ಲಾಭ ಪಡೆಯಲು ಬಿಪಿಎಲ್ ಕಾರ್ಡ್ ಕಡ್ಡಾಯವಾಗಿ ಬೇಕು. ಇದು ಕೇವಲ ಯುಎಚ್ಐಡಿ ಸ್ಟಿಕ್ಕರ್ ಇದ್ರೆ ಮಾತ್ರ ಸಿಗೋದು ಅಲ್ಲ.
ಮನೆಗೆ ಯುಎಚ್ಐಡಿ ಸ್ಟಿಕ್ಕರ್ ಇದ್ರೆ ಮಾತ್ರ ವಸತಿ ಮತ್ತು ಪಿಂಚಣಿ ಯೋಜನೆಗಳು ಸಿಗ್ತವೆ ಎಂದು ಇದ್ದಾರೆ. ಈ ಸೌಲಭ್ಯಗಳಿಗಾಗಿ ಕೂಡ ಅಷ್ಟೇ ಸಂಬಂಧಪಟ್ಟ ಇಲಾಖೆಗಳಿಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿದರೆ ಮಾತ್ರ ಈ ಯೋಜನೆಗಳ ಸೌಲಭ್ಯ ಸಿಗುತ್ತದೆ.