Karnataka Rain Alert : ನಮಸ್ಕಾರ ಸ್ನೇಹಿತರೇ, ವಾಯುಭಾರ ಕುಸಿತದ ಪರಿಣಾಮ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಎರಡು ವಾರದಿಂದ ನಿರಂತರವಾಗಿ ಮಳೆಯಾಗುತ್ತಿದೆ. ಬೆಂಗಳೂರು ನಗರದಲ್ಲಿ ಸುರಿದ ಮಳೆ ಅವಾಂತರವನ್ನೇ ಸೃಷ್ಟಿ ಮಾಡಿದೆ. ಉದ್ಯಾನ ನಗರಿ ಬೆಂಗಳೂರಿನಲ್ಲಿ ಮೂರು ದಿನಗಳಿಂದ ಮಳೆ ಬಿಡುವು ಕೊಟ್ಟಿದೆ.
ಮಳೆ ಕಡಿಮೆಯಾದರೆ ಸಾಕು ಎಂದು ಜನರು ಸಹ ಪ್ರಾರ್ಥಿಸುತ್ತಿದ್ದಾರೆ. ಮುಂದಿನ ವಾರ ಜನರು ದೀಪಾವಳಿ ಹಬ್ಬವನ್ನು ಆಚರಣೆ ಮಾಡಲು ತಯಾರಿ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿಯೇ ಮತ್ತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ ನೀಡಲಾಗಿದೆ.
ಇದನ್ನೂ ಕೂಡ ಓದಿ : Atal Pension Yojana : ಈ ಯೋಜನೆಯಡಿ ಪ್ರತಿ ತಿಂಗಳಿಗೆ ₹5,000/- ಪಿಂಚಣಿ ಪಡೆಯಲು ಅರ್ಜಿ ಆಹ್ವಾನ.! ಬೇಕಾಗುವ ದಾಖಲೆಗಳೇನು.?
ಭಾರತೀಯ ಹವಾಮಾನ ಇಲಾಖೆ ಮುಂದಿನ ವಾರದ ರಾಜ್ಯದ ಹವಾಮಾನ ಮುನ್ಸೂಚನೆಯ ಮಾಹಿತಿ ನೀಡಿದೆ. ಕಳೆದ ಎರಡು ವಾರದಂತೆ ರಾಜ್ಯದದಲ್ಲಿ ಮಳೆ ಅಬ್ಬರಿಸದಿದ್ದರೂ ಸಹ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಬೆಂಗಳೂರು ನಗರದಲ್ಲಿ ಶನಿವಾರ ಹವಾಮಾನ ಮತ್ತೆ ಬದಲಾಗಿದೆ. ಬೆಳಗ್ಗೆಯಿಂದಲೂ ಮೋಡ ಕವಿದ ವಾತಾವರಣವಿದ್ದು, ಯಾವಾಗ ಮಳೆ ಸುರಿಯಲಿದೆಯೋ? ಎಂದು ಜನರು ಆಕಾಶ ನೋಡವಂತೆ ಆಗಿದೆ.
ಹವಾಮಾನ ಮುನ್ಸೂಚನೆ ಏನು?; ಭಾರತೀಯ ಹವಾಮಾನ ಇಲಾಖೆಯ ಬುಲೆಟಿನ್ ಪ್ರಕಾರ ಮುಂದಿನ 2 ದಿನಗಳ ಕಾಲ ರಾಜ್ಯದ ಹವಾಮಾನದಲ್ಲಿ ಯಾವುದೇ ಮಹತ್ವದ ಬದಲಾವಣೆ ಇರುವುದಿಲ್ಲ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಭಾಗಶಃ ಮೋಡ ಕವಿದ ಆಕಾಶ ಇರಲಿದೆ. ಒಣ ಹವಾಮಾನದ ಸಾಧ್ಯತೆ ಇದೆ, ಕೆಲವು ಪ್ರದೇಶಗಳಲ್ಲಿ ಮುಂಜಾನೆಯ ಸಮಯದಲ್ಲಿ ಭಾರೀ ಮಂಜು ಕಂಡುಬರುವ ಸಾಧ್ಯತೆ ಇರುತ್ತದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29 ಮತ್ತು 19 ಡಿಗ್ರಿ ಸೆಲ್ಸಿಯಸ್ ಆಗಿರಬಹುದು ಎಂದು ಅಂದಾಜಿಸಲಾಗಿದೆ.
ಇದನ್ನೂ ಕೂಡ ಓದಿ : Post Office Franchise : ಪೋಸ್ಟ್ ಆಫೀಸ್’ ಮೂಲಕ ಈ ‘ಬ್ಯುಸಿನೆಸ್’ ಮಾಡಿ, ತಿಂಗಳಿಗೆ 80,000 ರೂ. ಗಳಿಸಿ.!
ಕೊಡಗಿನಲ್ಲಿ ಬಿಟ್ಟುಬಿಡದೆ ಸುರಿಯುತ್ತಿರುವ ಮಳೆ: ಇದುವರೆಗೆ ಸುರಿದ ಮಳೆ ಎಷ್ಟು?
ಮುಂದಿನ 2 ದಿನಗಳ ಕಾಲ ಕರ್ನಾಟಕ ರಾಜ್ಯದಲ್ಲಿ ಮುಖ್ಯವಾಗಿ ಶುಷ್ಕ ಹವಾಮಾನದ ಸಾಧ್ಯತೆ ಇದೆ. ಮುಂದಿನ 2 ದಿನ ಕರ್ನಾಟಕದ ಒಳನಾಡಿನ ಮೇಲೆ ಬೆಳಗಿನ ಜಾವದಲ್ಲಿ ಗಾಢವಾದ ಮಂಜು ಬೀಳುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನಲ್ಲಿ ಮತ್ತು ಕರಾವಳಿಯಲ್ಲಿ ಮತ್ತು ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಒಣ ಹವಾಮಾನದ ಸಾಧ್ಯತೆ ಇದೆ.
ಅಕ್ಟೋಬರ್ 27ರಂದು ದಕ್ಷಿಣ ಕನ್ನಡ, ಕೊಡಗು, ಮೈಸೂರು ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನಲ್ಲಿ ಮತ್ತು ಕರಾವಳಿಯಲ್ಲಿ ಮತ್ತು ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯಲಿದೆ.
ಇದನ್ನೂ ಕೂಡ ಓದಿ : Agriculture Loan : ಕೃಷಿ ಕೆಲಸಕ್ಕಾಗಿ ಬಡ್ಡಿ ರಹಿತ ಸಾಲ…! ರೈತರು ಕೂಡಲೇ ಅರ್ಜಿ ಸಲ್ಲಿಸಿ – ಹೇಗೆ ಸಾಲ ಪಡೆಯುವುದು.?
ಅಕ್ಟೋಬರ್ 28ರಂದು ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನದ ಚಿಕ್ಕಮಗಳೂರು, ಹಾಸನ, ಮೈಸೂರು ಮತ್ತು ಕೊಡಗು ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಮತ್ತು ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ.
ಅಕ್ಟೋಬರ್ 29ರಂದು ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಮತ್ತು ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಮಳೆ ಇರುವುದಿಲ್ಲ.
ಇದನ್ನೂ ಕೂಡ ಓದಿ : Ration Card Updates : ನಿಮ್ಮ ಬಳಿ ಇವುಗಳಿದ್ರೆ ಕೂಡಲೇ ‘ಬಿಪಿಎಲ್ ರೇಷನ್ ಕಾರ್ಡ್’ ಹಿಂದಿರುಗಿಸಿ : ಇಲ್ಲದಿದ್ರೆ ದಂಡ ಫಿಕ್ಸ್.! ಸಂಪೂರ್ಣ ಮಾಹಿತಿ
ಅಕ್ಟೋಬರ್ 30ರಂದು ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಕರ್ನಾಟಕದ ಚಿಕ್ಕಮಗಳೂರು, ಹಾಸನ, ಮೈಸೂರು, ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ.
ಅಕ್ಟೋಬರ್ 31ರಂದು ಕರಾವಳಿಯ ಭಾಗದಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಂಭವವಿದೆ. ಉತ್ತರ ಒಳನಾಡಿನದ ಬೆಳಗಾವಿ, ಧಾರವಾಡ, ಬೀದರ್, ಕಲಬುರ್ಗಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಒಣಹವೆ.
ಇದನ್ನೂ ಕೂಡ ಓದಿ : ಸ್ವಂತ ಮನೆ ಇಲ್ಲದವರಿಗೆ ಸಿಗಲಿದೆ ₹2.5 ಲಕ್ಷ ಸಹಾಯಧನ.! ಈ ಲಿಂಕ್ ಮೂಲಕ ಅರ್ಜಿ ಸಲ್ಲಿಸಿ – PM Awas Yojana
ನವೆಂಬರ್ 1ರಂದು ಕರಾವಳಿಯ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳ ಮೇಲೆ ಹಲವು ಸ್ಥಳಗಳಲ್ಲಿ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಈಗಾಗಲೇ ಸುರಿದ ಮಳೆಯಿಂದಾಗಿ ಕರ್ನಾಟಕದ ಎಲ್ಲಾ ಜಲಾಶಯಗಳು ಭರ್ತಿಯಾಗಿವೆ. ರಾಜ್ಯದಲ್ಲಿ ಮುಂಗಾರು ಮಳೆ ಉತ್ತಮವಾಗಿ ಸುರಿದಿದೆ.
- ಸ್ವಂತ ಕೃಷಿಭೂಮಿ ಇದ್ದವರಿಗೆ ದೀಪಾವಳಿ ಘೋಷಣೆ | ಹೊಸ 2 ಸೇವೆ – ಸಂಪೂರ್ಣ ಮಾಹಿತಿ ಇಲ್ಲಿದೆ
- ಈ 5 ದಾಖಲೆ ಸಾಬೀತು ಮಾಡಿದರೆ ಮಾತ್ರ BPL ಕಾರ್ಡ್ | ಹೊಸ ಆದೇಶ – BPL Ration Card
- ದಸರಾ ರಜೆ ಬೆನ್ನಲ್ಲೆ ಎಸ್ಎಸ್ಎಲ್ಸಿ (SSLC) ಪರೀಕ್ಷೆಗೆ ರಾಜ್ಯದ್ಯಂತ ಹೊಸ ರೂಲ್ಸ್ – SSLC Exam 2026
- ಸರ್ಕಾರಿ ನೌಕರರ ನಿವೃತ್ತಿ ವಯಸ್ಸು ಏರಿಕೆ ಕುರಿತು ಹೊಸ ಆದೇಶ ಪ್ರಕಟ | Retirement Age
- ಈ 3 ಬ್ಯಾಂಕ್ ನಲ್ಲಿ 2 ಲಕ್ಷದವರೆಗೆ ಹಣ ಇದ್ದವರಿಗೆ ಹೊಸ ರೂಲ್ಸ್ | Bank Account Rules
- ದಸರಾ ರಜೆ ಮುಂದೂಡಿದ ಬೆನ್ನಲ್ಲೇ ಮಕ್ಕಳಿಗೆ ಹೊಸ ರೂಲ್ಸ್ | Dasara Holiday
- Gold Rate : ಅಲ್ಪ ಇಳಿಕೆ ಕಂಡಿದ ಚಿನ್ನದ ಬೆಲೆ.? ಎಷ್ಟಾಗಿದೆ ಗೊತ್ತಾ ಇವತ್ತಿನ ಚಿನ್ನದ ಬೆಲೆ.?
- ರಾಜ್ಯದಲ್ಲಿ ಸಿಎಂ ‘ಕುರ್ಚಿಗಾಗಿ’ ಹೊಡೆದಾಟ : ಸಿದ್ದರಾಮಯ್ಯ ‘CM’ ಸ್ಥಾನದ ಕುರಿತು ಬ್ರಹ್ಮಾಂಡ ಗುರೂಜಿ ಸ್ಫೋಟಕ ಭವಿಷ್ಯ!
- ಬೆಳೆಹಾನಿ ಪರಿಹಾರಕ್ಕಾಗಿ ಕಾಯುತ್ತಿದ್ದವರಿಗೆ ದೊಡ್ಡ ಗುಡ್ ನ್ಯೂಸ್ – Crop Insurance & Loan Waiver
- ರಾಜ್ಯದ ಎಲ್ಲಾ ಮಹಿಳೆಯರಿಗೆ ಹೊಸ ರೂಲ್ಸ್ | ಗೃಹಲಕ್ಷ್ಮೀ ಹಣಕ್ಕೆ ಹೊಸ ಆದೇಶ | Gruhalakshmi Scheme Rules
- Kantara : ‘ದೈವದ ಹೆಸರಲ್ಲಿ ಮಾಡಿದ ದುಡ್ಡನ್ನು ಆಸ್ಪತ್ರೆಗೆ ಸುರಿಸುತ್ತೇನೆ..’ ಕಾಂತಾರ ತಂಡಕ್ಕೆ ಎಚ್ಚರಿಕೆ ನೀಡಿದ ಪಿಲ್ಚಂಡಿ ದೈವ!
- ಬಿಪಿಎಲ್ ಕಾರ್ಡ್ ದಾರರಿಗೆ ಗುಡ್ನ್ಯೂಸ್! 5 ಕೆಜಿ ಅಕ್ಕಿ ಜತೆ ಇಂದಿರಾ ಆಹಾರ ಕಿಟ್ ನೀಡಲು ಸಚಿವ ಸಂಪುಟ ನಿರ್ಣಯ ; ಕಿಟ್ನಲ್ಲಿ ಏನೆಲ್ಲಾ ಇರುತ್ತೆ?
- Gold Rate Today : ಭಾರೀ ಏರಿಕೆಯತ್ತ ಸಾಗುತ್ತಿದೆಯಾ ಚಿನ್ನ.? ಎಷ್ಟಾಗಿದೆ ಗೊತ್ತಾ ಇಂದಿನ ಚಿನ್ನದ ಬೆಲೆ.?
- JIO ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ : 449 ರೂ.ನಲ್ಲಿ ಮೂರು ನಂಬರ್ ಬಳಕೆಗೆ ಅವಕಾಶ! ಏನಿದು ಪ್ಲ್ಯಾನ್?
- ರಕ್ಷಿತಾ ಹೇಳಿದ್ದ ಡೈಲಾಗ್ ವೈರಲ್..! ಬಿಗ್ ಬಾಸ್ ಶೋ ಬಂದ್ : ರಾತ್ರೋರಾತ್ರಿ ಮನೆಯಿಂದ ಎಲ್ಲಾ ಸ್ಪರ್ಧಿಗಳು ಹೊರಕ್ಕೆ
- ಕೊನೆಗೂ ಬಿಗ್ ಬಾಸ್ ವೀಕ್ಷಕರಿಗೆ ಸಿಹಿಸುದ್ದಿ ಕೊಟ್ಟ ಸರ್ಕಾರ, ಬಿಗ್ ಬಾಸ್ ಪುನಾರಂಭಕ್ಕೆ ಡಿಸಿಎಂ ಡಿಕೆಶಿ ಗ್ರೀನ್ ಸಿಗ್ನಲ್!
- ತುಂಡುಡುಗೆ ಧರಿಸಿದ್ದಕ್ಕೆ ಅಕ್ಕನನ್ನೇ ಬ್ಯಾಟ್ ನಿಂದ ಹೊಡೆದು ಕ್ರೂರವಾಗಿ ಹತ್ಯೆಗೈದ ತಮ್ಮ.!
- ಮನೆಯಲ್ಲಿ ಬಾಯ್ಲರ್ ಸ್ಫೋಟ – 11ರ ಬಾಲಕಿ ಸಾವು, ಮೂವರಿಗೆ ಗಂಭೀರ – Girl dies in boiler explosion
- Gold Rate Today : ಚಿನ್ನದ ಬೆಲೆಯಲ್ಲಿ ಎಷ್ಟು ಏರಿಳಿತ ಕಂಡಿದೆ ಗೊತ್ತಾ.? ಇಂದಿನ ಚಿನ್ನದ ಬೆಲೆ ಎಷ್ಟಾಗಿದೆ?
- LPG : ಗ್ರಾಹಕರಿಗೆ ಭರ್ಜರಿ ಸುದ್ದಿ, ದೀಪಾವಳಿ ಹಬ್ಬಕ್ಕೆ ಅಡುಗೆ ಅನಿಲ ದರ ಇಳಿಕೆ ಸಾಧ್ಯತೆ
- ದಸರಾ ರಜೆಯಲ್ಲಿ ಹೊಸ ಬದಲಾವಣೆ | ಮಕ್ಕಳಿಗೆ ಗುಡ್ ನ್ಯೂಸ್| Dasara Holiday
- ಗಂಡನ ಆಸ್ತಿಗೆ ಕೇಳುವ ಹೆಂಡತಿಯರಿಗೆ ಹೇಗಿದೆ ನಿಯಮ | ಗಂಡನ ಆಸ್ತಿಯಲ್ಲಿ ಪತ್ನಿಗೆ ಪಾಲು ಇದೆಯಾ.? property Rules
- ದಸರಾ ರಜೆ ಇನ್ನಷ್ಟು ದಿನ ವಿಸ್ತರಣೆ.! ಮಕ್ಕಳಿಗೆ ಸಿಹಿಸುದ್ದಿ ಇದೆಯಾ.? Dasara Holidays
- ದೇಶದ ಎಲ್ಲರಿಗೂ ಗುಡ್ ನ್ಯೂಸ್ ಕೊಟ್ಟು ಪ್ರಧಾನಿ ನರೇಂದ್ರ ಮೋದಿ | ಕೂಡಲೇ ಈ ಕೆಲಸ ಮಾಡಿ
- ಡ್ರೈವಿಂಗ್ ಲೈಸನ್ಸ್ ಇದ್ದವರಿಗೆ ಇಂದಿನಿಂದಲೇ ಹೊಸ ರೂಲ್ಸ್ | ಮತ್ತೊಂದು ಆದೇಶ – mParivahan
- ಪೊಲೀಸರ ಈ ಅಧಿಕಾರವನ್ನು ಕಿತ್ತುಕೊಂಡ ಕೋರ್ಟ್ | ಹೊಸ ಆದೇಶ | Property Rules
- 60 ವರ್ಷದವರಿಗೆ ಸಿಹಿಸುದ್ದಿ ಕೊಟ್ಟ ಈ 3 ಬ್ಯಾಂಕುಗಳು | Senior Citizens FD Interest Rate Hike
- ಸಮೀಕ್ಷೆಗೆ ವಿರೋಧ ಮಾಡಿದ್ರೆ ಅದು ಸಂವಿಧಾನಕ್ಕೆ ವಿರೋಧ : ಸಚಿವ ಕೃಷ್ಣಬೈರೇಗೌಡ – ಆರ್ ಅಶೋಕ್ ಗೆ ತಿರುಗೇಟು
- BSNL eSIM : ಸಿಮ್ ಕಾರ್ಡ್ ಇಲ್ಲದೆ ಕಾಲ್-ಇಂಟರ್ನೆಟ್ ಆನಂದಿಸಿ : ಬಿಎಸ್ಎನ್ಎಲ್ ನಿಂದ ಬಂಪರ್.!
- ಕೇಸರಿ ಪಾಳಯಕ್ಕೆ ಯತ್ನಾಳ್ ಶಾಕ್! “ಭಗವಾ ಝಂಡಾ” ಪಕ್ಷದ ಮೂಲಕ ಬುಲ್ಡೋಜರ್ ಸರ್ಕಾರ ರಚನೆ ಖಚಿತ; ಸಿದ್ದು, ಸವದಿ ಟಿವಿಯಲ್ಲಿ ನೋಡ್ತಾರೆ! – ಯತ್ನಾಳ್
- ಬಿಎಸ್ಎನ್ಎಲ್ (BSNL) ಪೂರ್ತಿ 1 ತಿಂಗಳಿಗೆ ಅನ್ಲಿಮಿಟೆಡ್ ಕರೆ ಮತ್ತು ದಿನಕ್ಕೆ 2GB ಡೇಟಾದ ಪ್ಲಾನ್ ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಲಭ್ಯ!