ರಾಜ್ಯದ ಸರ್ಕಾರೀ ನೌಕರರಿಗೆ ನವೆಂಬರ್ 1 ರಿಂದ ಹೊಸ ರೂಲ್ಸ್ | ಹೊಸ ಆದೇಶ

Spread the love

ರಾಜ್ಯ ಸರ್ಕಾರ ಈಗ ಸರ್ಕಾರಿ ನೌಕರಿಯಲ್ಲಿರುವ ಪುರುಷ ಮತ್ತು ಮಹಿಳಾ ನೌಕರರಿಗೆ ಹೊಸ ನಿಯಮವನ್ನ ರಾಜ್ಯದಂತ ಜಾರಿಗೆ ತಂದಿದೆ. ಯಾವುದೇ ಸರ್ಕಾರಿ ನೌಕರಿಯ ಪ್ರಮೋಷನ್ಗೆ ಸಂಬಂಧಪಟ್ಟಂತೆ ಕರ್ನಾಟಕ ರಾಜ್ಯ ಸರ್ಕಾರ ಈಗ ರಾಜ್ಯಾಧ್ಯಂತ ಹೊಸ ನಿಯಮವನ್ನ ಜಾರಿಗೆ ತಂದಿದೆ. ಇನ್ನು ಮುಂದೆ ಸರ್ಕಾರಿ ನೌಕರರು ಪ್ರಮೋಷನ್ ಬೇಕಾದರೆ ಕಡ್ಡಾಯವಾಗಿ ಈ ಕೆಲಸವನ್ನ ಮಾಡಬೇಕು ಎಂದು ರಾಜ್ಯ ಸರ್ಕಾರ ಆದೇಶವನ್ನು ಹೊರಡಿಸಿದೆ.

ರಾಜ್ಯ ಸರ್ಕಾರ ಈಗ ಸರ್ಕಾರಿ ನೌಕರರ ಆಡಳಿತಾತ್ಮಕ ಕೌಶಲ್ಯ ಮತ್ತು ಭರ್ತಿ ಪ್ರಕ್ರಿಯೆಯಲ್ಲಿ ದಕ್ಷತೆಯನ್ನ ಜಾರಿಗೆ ತರಲು ಹೊಸ ನಿಯಮವನ್ನ ಜಾರಿಗೆ ತಂದಿದೆ. ಕರ್ನಾಟಕ ರಾಜ್ಯ ಸರ್ಕಾರದ ಹೊಸ ನಿಯಮದ ಪ್ರಕಾರ ಇನ್ನು ಮುಂದೆ ಎಲ್ಲಾ ಸರ್ಕಾರಿ ನೌಕರರು ಪ್ರತಿವರ್ಷ ಆನ್ಲೈನ್ ತರಬೇತಿ ಕೋರ್ಸುಗಳನ್ನು ಕಡ್ಡಾಯವಾಗಿ ಪಾಸ್ ಮಾಡಬೇಕು. ಅಷ್ಟೇ ಮಾತ್ರವಲ್ಲದೆ ಪ್ರಮೋಷನ್ ಪಡೆದುಕೊಳ್ಳುವ ಒಂದು ವರ್ಷ ಮುಂಚಿತವಾಗಿ 15 ದಿನಗಳ ಆಫ್ ಲೈನ್ ತರಬೇತಿಯನ್ನು ಕೂಡ ಕಡ್ಡಾಯವಾಗಿ ಪೂರ್ಣಗೊಳಿಸಬೇಕು.

ರಾಜ್ಯ ಸರ್ಕಾರಿ ನೌಕರರು ಇನ್ನು ಮುಂದೆ ತರಬೇತಿ ಪಡೆದುಕೊಳ್ಳಲು ಆನ್ಲೈನ್ ಮತ್ತು ಆಫ್ಲೈನ್ ಮೂಲಕ ತರಬೇತಿಯನ್ನು ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಒಬ್ಬ ಸರ್ಕಾರಿ ನೌಕರ ಯಾವ ನೌಕರಿಗೆ ಪ್ರಮೋಷನ್ ಪಡೆದುಕೊಳ್ಳುತ್ತಾನೋ, ಆ ನೌಕರಿಗೆ ಸಂಬಂಧಪಟ್ಟಂತೆ ಆತ ತರಬೇತಿಯನ್ನ ಪೂರ್ಣಗೊಳಿಸಿರಬೇಕು.

ಪ್ರಮೋಷನ್ ಪಡೆದುಕೊಳ್ಳುವ ನೌಕರಿಗೆ ತರಬೇತಿ ಪೂರ್ಣಗೊಂಡರೆ ಮಾತ್ರ ಆತ ಪ್ರಮೋಷನ್ ಪಡೆದುಕೊಳ್ಳಬಹುದು. ಅಷ್ಟೇ ಮಾತ್ರವಲ್ಲದೆ ಪ್ರತಿವರ್ಷ ತರಬೇತಿಯನ್ನು ಪಡೆದುಕೊಳ್ಳುವ ನೌಕರ ಕನಿಷ್ಠ ಮಾರ್ಕ್ ಪಡೆದುಕೊಳ್ಳುವುದು ಅತಿ ಕಡ್ಡಾಯವಾಗಿದೆ. ಆನ್ಲೈನ್ ಕಲಿಕಾ ವೇದಿಕೆಯಲ್ಲಿ ಹೇಳಿರುವಂತೆ ತರಬೇತಿ ಕೋರ್ಸುಗಳನ್ನ ಕಡ್ಡಾಯವಾಗಿ ಪೂರ್ಣಗೊಳಿಸಬೇಕು. ಅದೇ ರೀತಿಯಲ್ಲಿ ಸರ್ಕಾರಿ ನೌಕರ ತನ್ನ ಮುಂದಿನ ಪ್ರಮೋಷನ್ಗೆ ಮೂರು ವರ್ಷ ಅವಧಿ ಇದ್ದರೂ ಕೂಡ, ಪ್ರತಿವರ್ಷ ತಮ್ಮ ಕಲಿಕೆಯ ಪ್ರಗತಿಯನ್ನ ಕಡ್ಡಾಯವಾಗಿ ತೋರಿಸಬೇಕು.

ಇನ್ನು ಆಫ್ ಲೈನ್ ಕೋರ್ಸ್ಗಳ ಜೊತೆಗೆ ಭರ್ತಿ ಪಡೆದುಕೊಳ್ಳುವ ಹಿಂದಿನ ವರ್ಷದಲ್ಲಿ ನೌಕರರು 15 ದಿನಗಳ ಕಡ್ಡಾಯ ಆಫ್ ಲೈನ್ ತರಬೇತಿಯನ್ನ ಪಡೆದುಕೊಂಡಿರಬೇಕು. ರಾಜ್ಯ ಸರ್ಕಾರದ ಈ ನಿಯಮ ಗ್ರೂಪ್ ಎ ಮತ್ತು ಗ್ರೂಪ್ ಬಿ ಶ್ರೇಣಿಯ ಅಧಿಕಾರಿಗಳಿಗೆ ಅನ್ವಯವಾಗುತ್ತದೆ.

WhatsApp Group Join Now

Spread the love

Leave a Reply