ಕರ್ನಾಟಕದಲ್ಲಿ ಸಿಎಂ ಕುರ್ಚಿಗಾಗಿ ಅಂತರಿಕ ಕಿತ್ತಾಟ ಶುರುವಾಗಿದೆ. ಸಿಎಂ ಸಿದ್ದರಾಮಯ್ಯ (Siddaramaiah) ಮತ್ತು ಡಿಸಿಎಂ ಡಿಕೆ ಶಿವಕುಮಾರ್(DK Shivakumar) ಬಹಿರಂಗ ನಡೆ ಮತ್ತು ಹೇಳಿಕೆಗಳು ನಿಗೂಢವಾಗಿಯೇ ಇವೆ. ಕರ್ನಾಟಕದ ಕಾಂಗ್ರೆಸ್ ನ ಅಂತರಿಕ ಗೊಂದಲವನ್ನು ಡಿಸೆಂಬರ್ 1 ರೊಳಗಾಗಿ ಕಾಂಗ್ರೆಸ್ ಹೈಕಮ್ಯಾಂಡ್ ಬಗೆಹರಿಸುವ ನಿರೀಕ್ಷೆ ಇದೆ.
ಈಗಾಗಲೇ ಡಿಕೆಶಿ ಬಣ ದೆಹಲಿ ಟೂರ್ ಮಾಡಿ, ಅಧಿಕರಾ ಹಂಚಿಕೆ ಬಗ್ಗೆ ಒತ್ತಡ ಹಾಕಿದ್ದಾರೆ. ಆದರೆ ಇದೀಗ ಸಿಎಂ ಸಿದ್ದರಾಮಯ್ಯ ಕೂಡಾ ಅಖಾಡಕ್ಕೆ ಇಳಿದಿದ್ದಾರೆ ಎನ್ನಲಾಗಿದೆ.
ಡಿಸೆಂಬರ್ 1 ರಂದು ಪಾರ್ಲಿಮೆಂಟ್‌ನ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದೆ. ಅದಕ್ಕೂ ಮುನ್ನ ಕರ್ನಾಟಕದ ಕಾಂಗ್ರೆಸ್ ನ ಅಂತರಿಕ ಗೊಂದಲ ಬಗೆಹರಿಸಿ ಕಾಂಗ್ರೆಸ್ ಹೈಕಮ್ಯಾಂಡ್ ನಾಯಕರು ಸಂಪೂರ್ಣವಾಗಿ ಪಾರ್ಲಿಮೆಂಟ್ ಅಧಿವೇಶನದಲ್ಲಿ ಕೇಂದ್ರ ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ ಮಾಡಲು ನಿರ್ಧರಿಸಿದ್ದಾರೆ ಎಂದು ಕಾಂಗ್ರೆಸ್ ನ ದೆಹಲಿ ಮೂಲಗಳು ಹೇಳಿವೆ. ಡಿಸೆಂಬರ್ 1 ರೊಳಗೆ ಕಾಂಗ್ರೆಸ್ ಹೈಕಮ್ಯಾಂಡ್ , ಸಿಎಂ ಸ್ಥಾನದ ಬಗ್ಗೆ ಮಹತ್ವದ ನಿರ್ಣಾಯಕ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ.
ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮತ್ತು ಹಿರಿಯ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ತಮ್ಮ ಪ್ರತಿಸ್ಪರ್ಧಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಚಾನ್ಸ್ ನೀಡಿದರೆ, ಸಿದ್ದರಾಮಯ್ಯ ಅವರ ಬೆಂಬಲಿಗರು ಇದರ ವಿರುದ್ದ ಹೋಗುವ ಸಾಧ್ಯತೆ ಇದೆ. ಪಕ್ಷವು ಇನ್ನೂ ಹೊಸ ಮುಖ್ಯಮಂತ್ರಿಯನ್ನು ಒತ್ತಾಯಿಸಿದರೆ, ಅವರಿಗೆ ಪರ್ಯಾಯಗಳ ಪಟ್ಟಿಯನ್ನು ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಗೃಹ ಸಚಿವ ಜಿ ಪರಮೇಶ್ವರ, ಸಿದ್ದರಾಮಯ್ಯ ಬೆಂಬಲಿಗ ಮತ್ತು ಪ್ರಭಾವಿ ದಲಿತ ನಾಯಕ, ಅವರು ನಾನು ಯಾವಾಗಲೂ ಮುಖ್ಯಮಂತ್ರಿಯಾಗುವ ಸ್ಪರ್ಧೆಯಲ್ಲಿದ್ದೇನೆ ಎಂದಿದ್ದರು.
ಕರ್ನಾಟಕದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಇಬ್ಬರನ್ನೂ ದೆಹಲಿಗೆ ಕರೆಸಿ ಮಾತುಕತೆ ನಡೆಸುವ ಸಾಧ್ಯತೆಯೂ ಇದೆ. ನವಂಬರ್ 28 ಅಥವಾ 29 ರಂದು ಸಿಎಂ, ಡಿಸಿಎಂ ರನ್ನು ದೆಹಲಿಗೆ ಹೈಕಮ್ಯಾಂಡ್ ನಾಯಕರು ಕರೆಸಿಕೊಳ್ಳುವ ಸಾಧ್ಯತೆ ಇದೆ.
ಸಿಎಂ ಮತ್ತು ಡಿಸಿಎಂ ಬಣದ ನಾಯಕರು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ದೆಹಲಿಯವರೆಗೂ ತಂಡ ಕಟ್ಟಿಕೊಂಡು ಹೋಗಿದ್ದಾರೆ.
ಸಂಸತ್‌ನ ಚಳಿಗಾಲದ ಅಧಿವೇಶನಕ್ಕೂ ಮುನ್ನ ಕರ್ನಾಟಕದ ಸಿಎಂ ಸ್ಥಾನದ ಬಗ್ಗೆ ಸ್ಪಷ್ಟ ತೀರ್ಮಾನವನ್ನು ಕಾಂಗ್ರೆಸ್ ಹೈಕಮ್ಯಾಂಡ್ ತೆಗೆದುಕೊಂಡು ಸಿಎಂ, ಡಿಸಿಎಂ ಇಬ್ಬರಿಗೂ ತಿಳಿಸಲಿದೆ. ಈ ಮೂಲಕ ಕರ್ನಾಟಕದ ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಅಸ್ಥಿರತೆ ಉಂಟಾಗದಂತೆ ನೋಡಿಕೊಳ್ಳುವ ಪ್ಲ್ಯಾನ್ ಅನ್ನು ಕಾಂಗ್ರೆಸ್ ಹೈಕಮ್ಯಾಂಡ್ ರೂಪಿಸುತ್ತಿದೆ.
ಸಿಎಂ ರೇಸ್ ನಲ್ಲಿ ಡಿ.ಕೆ.ಶಿವಕುಮಾರ್ ಹೊರತುಪಡಿಸಿ ಸದ್ಯ ಮೂರನೇ ನಾಯಕರ ಹೆಸರು ಇಲ್ಲ ಎಂದು ಕೂಡ ಹೈಕಮ್ಯಾಂಡ್ ನಾಯಕರು ಹೇಳುತ್ತಿದ್ದಾರೆ. ಹೀಗಾಗಿ ಡಿಕೆಶಿಗೆ ಸಿಎಂ ಸ್ಥಾನವನ್ನು ಈಗ ನೀಡಬೇಕೇ ಇಲ್ಲವೇ ಎಂಬ ಬಗ್ಗೆ ಹೈಕಮ್ಯಾಂಡ್ ತೀರ್ಮಾನ ಕೈಗೊಳ್ಳಬೇಕು.
ಕರ್ನಾಟಕ ಸಿಎಂ ಕುರ್ಚಿ ಕದನ – ಸಿದ್ದರಾಮಯ್ಯ ಪ್ಲ್ಯಾನ್ ಏನು ಗೊತ್ತಾ.?
WhatsApp Group
Join Now