ತಂದೆ ಅಥವಾ ತಾತನ ಹೆಸರಲ್ಲಿ ಪಹಣಿ ಇದ್ದವರಿಗೆ ಹೊಸ ರೂಲ್ಸ್ – ರೈತರಿಗೆ ಸಿಹಿಸುದ್ಧಿ.!

Spread the love

ಮನೆಗೆ ಆಧಾರವಾಗಿರುವಂತಹ ಜಮೀನನ್ನ ತಂದೆ, ತಾತ ಅಥವಾ ಮುತ್ತಾತನ ಹೆಸರಿನಲ್ಲಿಯೇ ನಿಮ್ಮ ಜಮೀನು ಉಳಿದಿದ್ರೆ ಆ ಜಮೀನಿನ ಮಾಲೀಕತ್ವವನ್ನ ಪ್ರಸ್ತುತ ತಲೆಮಾರಿಗೆ ವರ್ಗಾವಣೆ ಮಾಡುವುದು ರೈತರಿಗೆ ಬಹಳಷ್ಟು ದೊಡ್ಡ ಸಮಸ್ಯೆಯಾಗಿತ್ತು. ಇದೀಗ ತಂದೆ, ತಾತ, ಮುತ್ತಾತನ ಹೆಸರಿನಲ್ಲಿರುವಂತ ಜಮೀನಿನ ವರ್ಗಾವಣೆ ಕುರಿತು ರೈತರಿಗೊಂದು ಸಿಹಿ ಸುದ್ದಿಯನ್ನ ಸರಕಾರ ನೀಡಿದೆ. ಇನ್ಮುಂದೆ ನೀವು ಸುಲಭವಾಗಿ ಜಮೀನನ್ನ ವರ್ಗಾವಣೆ ಮಾಡಿಕೊಳ್ಳಬಹುದು.

WhatsApp Group Join Now

ಜಮೀನಿನ ಪಹಣಿ ತಂದೆ, ತಾತ, ಮುತ್ತಾತನ ಹೆಸರಲ್ಲಿ ಇದ್ದರೆ ನಿಮ್ಮ ಹೆಸರಿಗೆ ಮಾಡಿಕೊಳ್ಳುವ ವಿಧಾನವನ್ನ ಇದೀಗ ಸುಲಭ ಮಾಡಲಾಗಿದೆ. ರೈತರ ಜಮೀನಿನ ಪಹಣಿಯು ತಂದೆ ಹೆಸರಲ್ಲಿ ಅಥವಾ ತಾತನ ಹೆಸರಿನಲ್ಲಿ ಅಥವಾ ಮುತ್ತಾತನ ಹೆಸರಲ್ಲಿ ಇದ್ದು, ಅವರು ಮರಣ ಹೊಂದಿದ್ರೆ ಅಂತಹವರ ಹೆಸರಿನಲ್ಲಿ ಇರುವ ಜಮೀನನ್ನ ಸುಲಭವಾಗಿ ಇದೀಗ ವರ್ಗಾವಣೆ ಮಾಡಿಕೊಳ್ಳಬಹುದು. ಒಂದು ವೇಳೆ ನೀವು ಜಮೀನನ್ನ ವರ್ಗಾವಣೆ ಮಾಡಿಕೊಳ್ಳದಿದ್ದರೆ ಬ್ಯಾಂಕುಗಳಲ್ಲಿ ಸಾಲ ಪಡೆಯಲು ಅಥವಾ ಬೆಳೆ ವಿಮೆಗೆ ಅರ್ಜಿಯನ್ನ ಸಲ್ಲಿಸಲು ಅಥವಾ ಸರ್ಕಾರದ ಸಹಾಯವನ್ನು ಪಡೆಯಲು ಬಹಳಷ್ಟು ಕಷ್ಟವಾಗುತ್ತಿತ್ತು. ಇದೀಗ ಈ ಸಮಸ್ಯೆಯನ್ನ ಪರಿಹರಿಸಲು ರಾಜ್ಯ ಸರ್ಕಾರವು ಪೌತಿ ಖಾತೆ ಆಂದೋಲನ ಎನ್ನುವ ಯೋಜನೆಯನ್ನ ಜಾರಿ ಮಾಡಿದೆ.

ಪೌತಿ ಖಾತೆ ಎಂದರೆ ವಂಶ ಪಾರಂಪರ್ಯವಾಗಿ ಬಂದಿರುವಂತ ಆಸ್ತಿಯನ್ನ ಕಾನೂನುಬದ್ದ ವಾರಸುದಾರರ ಹೆಸರಿಗೆ ವರ್ಗಾಯಿಸುವುದು. ಈ ಪ್ರಕ್ರಿಯೆಯನ್ನ ಇದೀಗ ಹೊಸ ಯೋಜನೆಯಡಿ ಸರಳೀಕೃತ ಮಾಡಿ ಈ ಹಿಂದೆ ಈ ಕೆಲಸಕ್ಕಾಗಿ ರೈತರು ಕಚೇರಿಗಳಿಗೆ ಅಲಿಯಬೇಕಿತ್ತು. ಆದರೆ ಈಗ ಈ ಪ್ರಕ್ರಿಯೆಯನ್ನ ಸುಲಭ ಮಾಡಿರುವಂತಹದ್ದು. ಕೆಲವೊಂದು ದಾಖಲೆಗಳನ್ನ ಇಟ್ಟುಕೊಂಡು ಅಂದ್ರೆ ಸತ್ತವರ ಮರಣ ಪ್ರಮಾಣಪತ್ರ ಆಗಿರಬಹುದು. ಕುಟುಂಬದ ವಂಶವೃಕ್ಷ ಪ್ರಮಾಣಪತ್ರ ಇನ್ನು ಒಂದು ವೇಳೆ ವಂಶವೃಕ್ಷ ಪ್ರಮಾಣಪತ್ರ ಇಲ್ಲದಿದ್ದರೆ ಕುಟುಂಬದ ಮಾಹಿತಿಯನ್ನ ನೋಟರಿ ಮಾಡಿ ಅಟಲ್ ಜಿ ಜನಸ್ನೇಹಿ ಕೇಂದ್ರ ಅಥವಾ ನಾಡಕಚೇರಿ ಅಥವಾ ನೆಮ್ಮದಿ ಕೇಂದ್ರಗಳಲ್ಲಿ ಅರ್ಜಿಯನ್ನ ಸಲ್ಲಿಸಬಹುದು.

WhatsApp Group Join Now

ಇನ್ನು ಅರ್ಜಿದಾರರ ಬಳಿ ಯಾವುದೇ ದಾಖಲೆ ಇಲ್ಲದಿದ್ದರೆ, ಆಧಾರ್ ಕಾರ್ಡ್ ಹಾಗು ರೇಷನ್ ಕಾರ್ಡ್ ನ್ನ ಬಳಸಿಕೊಂಡು ಗ್ರಾಮ ಲೆಕ್ಕಾಧಿಕಾರಿಗಳು ಹಾಗು ರಾಜಸ್ವ ನಿರೀಕ್ಷಕರು ಅವರ ಸ್ಥಳವನ್ನ ಪರಿಶೀಲನೆ ನಡೆಸಿದ ನಂತರ ನಿಮ್ಮ ದಾಖಲೆಗಳನ್ನ ನೀವು ಸಿದ್ಧಪಡಿಸಬೇಕು. ಖಾತೆ ವರ್ಗಾವಣೆಗೆ ಶುಲ್ಕದಲ್ಲಿ ಕೂಡ ರಾಜ್ಯ ಸರ್ಕಾರ ಇದೀಗ ರಿಯಾಯಿತಿಯನ್ನ ನೀಡಿದೆ. ಈ ಪ್ರಕ್ರಿಯೆ ಆರಂಭವಾದ ನಂತರ ಹಕ್ಕು ಬದಲಾವಣೆಯ ಕುರಿತು ಯಾರಾದರೂ ಆಕ್ಷೇಪಣೆ ಸಲ್ಲಿಸಲು ಇದ್ರೆ 30 ದಿನಗಳ ಕಾಲಾವಕಾಶ ನೀಡಲಾಗುತ್ತದೆ.

ಆಕ್ಷೇಪಣಾ ಪತ್ರ ಸಲಿಕೆಯಾದರೆ ಗ್ರೇಡ್ ಒಂದು ಮತ್ತೆ ಗ್ರೇಡ್ ಎರಡರ ಮೂಲಕ ತಹಸೀಲ್ದಾರರು ಒಂದು ತಿಂಗಳ ಒಳಗಡೆ ಕ್ಯಾಂಪ್ ಮಾಡಿ ಆ ಸಮಸ್ಯೆಯನ್ನ ಇತ್ಯರ್ಥ ಪಡಿಸಬೇಕು ಎಂದು ಈ ನಿಯಮವನ್ನ ಇದೀಗ ಜಾರಿ ಮಾಡಲಾಗಿದೆ. ಈ ಹೊಸ ಯೋಜನೆಯು ರೈತರ ಪಾಲಿಗೆ ಒಂದು ದೊಡ್ಡ ವರದಾನವಾಗಿದ್ದು, ಆಸ್ತಿ ವರ್ಗಾವಣೆಯನ್ನ ಇನ್ನು ಮುಂದೆ ಬಹಳಷ್ಟು ಸುಲಭವಾಗಿ ಆಗಲಿದೆ. ಈ ಬಗ್ಗೆ ಏನೇ ಸಂಶಯಗಳಿದ್ದರೆ ನೀವು ನಿಮ್ಮ ಹತ್ತಿರದ ಗ್ರಾಮ ಲೆಕ್ಕಾಧಿಕಾರಿಯನ್ನ ಸಂಪರ್ಕ ಮಾಡಬಹುದು.

WhatsApp Group Join Now

Spread the love

Leave a Reply