ಕಲಬೆರೆಕೆ ನಂದಿನಿ ತುಪ್ಪ ಜಾಲ – ಗಂಡ ಹೆಂಡತಿಯೇ ಕಿಂಗ್‌ ಪಿನ್! ದಂಪತಿ ಅರೆಸ್ಟ್ – Nandini Ghee

Spread the love

ನಂದಿನಿ ತುಪ್ಪ (Nandini Ghee) ಕಲಬೆರಕೆ ಮಾಡಿ ಮಾರಾಟ ಮಾಡುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಬೇಧಿಸಿದ್ದು ಈ ಪ್ರಕರಣದ ಕಿಂಗ್‌ ಪಿನ್‌ ಗಳಾಗಿದ್‌ ದಂಪತಿಯನ್ನು ಅರೆಸ್ಟ್‌ ಮಾಡಲಾಗಿದೆ.

ಶಿವಕುಮಾರ್ ಹಾಗೂ ರಮ್ಯಾ ಬಂಧಿತ ಆರೋಪಿಗಳಾಗಿದ್ದು, ಈ ದಂಪತಿಗಳನ್ನು ಸಿಸಿಬಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ. ನಕಲಿ ನಂದಿನಿ ತುಪ್ಪ ತಯಾರಿ ಘಟಕದ ಮೇಲೆ ಸಿಸಿಬಿ ಪೊಲೀಸರ ದಾಳಿ ನಡೆದಿದ್ದ ವೇಳೆ ಕಲಬೆರೆಕೆ ಮಾರಾಟ ಜಾಲ ಬೆಳಕಿಗೆ ಬಂದಿತ್ತು.

ತಮಿಳುನಾಡಿನಲ್ಲಿ ನಕಲಿ ತುಪ್ಪ ತಯಾರಿಕೆ ಘಟಕ ಹೊಂದಿದ್ದ ದಂಪತಿ , ದೊಡ್ಡ ದೊಡ್ಡ ತುಪ್ಪ ತಯಾರಿಸುವ ದೊಡ್ಡ ಮಷಿನರಿಗಳನ್ನು ಇಟ್ಟುಕೊಂಡು ಹೈಟೆಕ್ ತಂತ್ರಜ್ಞಾನ ಬಳಸಿಕೊಂಡು ತುಪ್ಪ ತಯಾರಿಕೆಯ ದಂಧೆ ನಡೆಸುತ್ತಿದ್ದರು. ಅತ್ಯಾಧುನಿಕ ಯಂತ್ರಗಳನ್ನು ಬಳಸಿಕೊಂಡು ನಂದಿನಿ ಪ್ರಾಡಕ್ಟ್ ಗಳನ್ನ ತಯಾರಿಸುತ್ತಿದ್ದ ದಂಪತಿ ಅದನ್ನು ಹಲವು ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದ್ದರು.

ತುಪ್ಪ ತಯಾರಿಗೆ ಬಳಸುತ್ತಿದ್ದ ಮೆಷಿನರಿ ಜಪ್ತಿ ಮಾಡಿದ ಸಿಸಿಬಿ ಪೊಲೀಸರು ,ನಕಲಿ ನಂದಿನಿ ತುಪ್ಪ ತಯಾರಿಕೆಯ ಕಿಂಗ್ ಪಿನ್ ಗಳಾಗಿರುವ ದಂಪತಿಗಳಾದ ಶಿವಕುಮಾರ್ ಹಾಗೂ ರಮ್ಯಾರನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ಈ ಹಿಂದೆ ನಾಲ್ವರನ್ನ ಬಂಧಿಸಿದ ಸಿಸಿಬಿ ಪೊಲೀಸರು ಡಿಸ್ಟ್ರಿಬ್ಯೂಟರ್ ಮಹೇಂದ್ರ, ಆತನ ಮಗ ದೀಪಕ್, ಮುನಿರಾಜು ಎಂಬುವರರನ್ನು ಜೈಲಿಗೆ ಕಳಿಸಿದ್ದರು. ದಂಪತಿ ತಯಾರಿಸುತ್ತಿದ್ದ ನಕಲಿ ಪ್ರಾಡಕ್ಟ್ ಗಳನ್ನ ನಂದಿನಿ ಬೂತ್ ಗಳಿಗೆ ಡಿಸ್ಟ್ರಿಬ್ಯೂಟ್ ಮಾಡ್ತಿದ್ದ ಮಹೇಂದ್ರ ಆಂಡ್ ಗ್ಯಾಂಗ್ ಅದನ್ನು ವ್ಯಾಪಕವಾಗಿ ಮಾರುಕಟ್ಟೆಗೆ ಹರಿಬಿಡುತ್ತಿತ್ತು.

ತನಿಖೆ ಮುಂದುವರಿಸಿದ ಸಿಸಿಬಿ ಪೊಲೀಸರು ಈ ಜಾಲದ ಹಿಂದೆ ಬೇರೆ ಯಾರು ಯಾರಿದ್ದಾರೆ ಎಂಬ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.

WhatsApp Group Join Now

Spread the love

Leave a Reply