ಅಧಿಕಾರ ಬದಲಾವಣೆ ವಿಚಾರದಲ್ಲಿ ನಡೆಯುತ್ತಿದ್ದ ವಾಕ್ಸಮರ ಈಗ ರಾಜಕೀಯ ನಾಯಕರ ದಾಟಿ ಹೋಗಿದೆ. ಕುರ್ಚಿ ಕದನ ಈಗ ಸಮುದಾಯಗಳ ಕದನವಾಗಿದ್ದು, ಸ್ವಾಮೀಜಿಗಳ ಮಾತಿನ ಯುದ್ಧ ಕಿಚ್ಚು ಹೆಚ್ಚಿಸಿದೆ. ಇದರ ಮಧ್ಯೆ ಸ್ವಾಮೀಜಿಗಳ ಹೇಳಿಕೆಗೆ ಎಚ್.ಡಿ ಕುಮಾರಸ್ವಾಮಿ (HD Kumararaswamy)ಕಿಡಿ ಕಾರಿದ್ದಾರೆ.
ರಾಜ್ಯ ಕಾಂಗ್ರೆಸ್ನ (Congress) ಪಟ್ಟದ ಫೈಟ್ಗೆ ಈಗ ಕೆಲ ಸ್ವಾಮೀಜಿಗಳು ಮತ್ತಷ್ಟು ಕಿಚ್ಚು ಹಚ್ಚಿದ್ದಾರೆ..
ಸಿಎಂ ಪಟ್ಟದ ಮೇಲೆ ಕಣ್ಣಿಟ್ಟಿರುವ ಡಿಸಿಎಂ ಡಿಕೆಶಿ ಪರವಾಗಿ ಒಕ್ಕಲಿಗ ಮಠಾಧೀಶರು ಎಂಟ್ರಿ ಕೊಟ್ಟಿದ್ರೆ.. ಸಿಎಂ ಸಿದ್ದರಾಮಯ್ಯ ಪರ ಕುರುಬ ಸಮುದಾಯದ ಸ್ವಾಮೀಜಿಗಳು, ಅಹಿಂದ ಸಂಘಟನೆಗಳು ಬ್ಯಾಟ್ ಮಾಡ್ತಿವೆ. ಉಭಯ ನಾಯಕರ ಪರವಾಗಿ ರಾಜಕಾರಣಿಗಳಿಗಿಂದ ಸ್ವಾಮೀಜಿಗಳೇ ವಾಕ್ಸಮರ ನಡೆಸ್ತಿರೋದು ಕುತೂಹಲ ಮೂಡಿಸಿದೆ. ‘ನಾನು ಎರಡು ಬಾರಿ ಸಿಎಂ ಆದೆ. ಅಧಿಕಾರ ಹೋದಾಗ ನಾನು ಮಠಾಧೀಶರ ನೆರವು ಕೇಳಿಲ್ಲ’ ಎಂದು ಕೇಂದ್ರದ ಉಕ್ಕು ಸಚಿವ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
‘ನಾನು ಎರಡು ಬಾರಿ ಸಿಎಂ ಆದೆ. ಅಧಿಕಾರ ಹೋದಾಗ ನಾನು ಮಠಾಧೀಶರ ನೆರವು ಕೇಳಿಲ್ಲ. ಒಕ್ಕಲಿಗ ಸಮಾಜ, ಇನ್ನೊಂದು ಸಮಾಜದ ಬಗ್ಗೆ ಹೇಳಲ್ಲ. ನಾನು ಹೇಳೋದು ಸಮಾಜದಲ್ಲಿ ಈ ರೀತಿ ಜಾತಿ ವಿಚಾರ ಹೇಳಿಕೊಂಡು, ಧಾರ್ಮಿಕ ಕ್ಷೇತ್ರಗಳನ್ನು ದುರುಪಯೋಗ ಮಾಡಿಕೊಳ್ಳುವುದು ಯಾವುದೇ ರಾಜಕಾರಣಿಗಳಿಗೆ ಶೋಭೆ ತರಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.
‘ಸ್ವಾಮೀಜಿಗಳು ಸೇರಿ ಎಲ್ಲರಿಗೂ ಹೇಳುತ್ತೇನೆ. ಇಲ್ಲಿ ಪ್ರಶ್ನೆ ರಾಜ್ಯ ನೆಮ್ಮದಿಯಿಂದ ಇರಬೇಕು. ಜಾತಿ ರಾಜಕಾರಣ ಮಾಡಲ್ಲ ಮಾಡಲ್ಲ ಅಂತ ಹೇಳಿ, ಈಗ ಬೃಹದಾಕಾರದ ಜಾತಿ ರಾಜಕಾರಣ ಮಾಡಲಾಗುತ್ತಿದೆ. ಇದರಿಂದ ನಷ್ಟ ಅವ್ರಿಗೆ ಅಲ್ಲ. ರಾಜ್ಯಕ್ಕೆ ನಷ್ಟ ಆಗುತ್ತದೆ. ರಾಜ್ಯದಲ್ಲಿ ಸಮಾಜಗಳ ನಡುವೆ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ. ಇದರ ಅವಶ್ಯಕತೆ ಇಲ್ಲ. ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಅಲ್ಲ. ಕರ್ನಾಟಕದ ಜನತೆಗೆ ಮುಜುಗರ’ ಎಂದಿದ್ದಾರೆ.
‘ಡ್ರಾಮಾ ಎಂಜಾಯ್ ಮಾಡಿ’
ಬ್ರೇಕ್ ಫಾಸ್ಟ್ ಬಳಿಕ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವೆ ಒಗ್ಗಟ್ಟು ಪ್ರದರ್ಶನ ಕಂಡುಬಂದಿದೆ. ಈ ಬಗ್ಗೆ ಮಾತನಾಡಿರುವ ಕೇಂದ್ರ ಸಚಿವ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ, ಈ ಬೆಳವಣಿಗೆಗಳನ್ನು ‘ಡ್ರಾಮಾ’ ಎಂದು ಕರೆದಿದ್ದಾರೆ.
‘ರಾಜ್ಯ ಕಾಂಗ್ರೆಸ್‌ನಲ್ಲಿ ರಾಜಕೀಯ ಡ್ರಾಮಾ ನಡೆಯುತ್ತಿದ್ದು, ಇದು ಎಲ್ಲಿಯವರೆಗೆ ನಡೆಯುತ್ತದೆ ಎಂಬುದನ್ನು ಕಾದುನೋಡೋಣ. ಅಧಿಕಾರಕ್ಕಾಗಿ ಸಿಎಂ-ಡಿಸಿಎಂ ಕಚ್ಚಾಡುತ್ತಿರುವುದು, ರಾಜ್ಯದ ಜನತೆಗೆ ಮನರಂಜನೆ ನೀಡುತ್ತಿದೆ’ ಎಂದು ಎಚ್‌ಡಿ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
‘ಸಿಎಂ-ಡಿಸಿಎಂ ಕುರ್ಚಿ ಕಿತ್ತಾಟದಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ. ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಮರೆತಿದ್ದು, ಕಳೆದ ಎರಡುವರೆ ವರ್ಷಗಳಿಂದ ಕೇವಲ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕು ಒದ್ದಾಡುತ್ತಿದೆ. ಇಂತಹ ದುರ್ಬಲ ಮತ್ತು ಅಧಿಕಾರ ದಾಹದ ಸರ್ಕಾರವನ್ನು ಕರ್ನಾಟಕದ ಜನತೆ ಹಿಂದೆಂದೂ ನೋಡಿರಲಿಲ್ಲ’ ಎಂದು ಎಚ್ಡಿಕೆ ಕುಟುಕಿದ್ದಾರೆ.
ಅಧಿಕಾರ ಹೋದಾಗ ನಾನು ಮಠಾಧೀಶರ ನೆರವು ಕೇಳಿಲ್ಲ..’ ಸ್ವಾಮೀಜಿಗಳಿಗೆ ಕುಟುಕಿದ ಕುಮಾರಸ್ವಾಮಿ
WhatsApp Group
Join Now