ಸಿನಿಮಾ ಸ್ಟೈಲ್ನಲ್ಲಿ ಪತ್ನಿಯನ್ನು ಕೊಂದ ಗಂಡ; ಆತನಿಂದಲೇ ಆಸ್ಪತ್ರೆಗೆ ಸಾಗಿಸುವ ನಾಟಕ! ಆದರೆ ಕಟ್ಟಿದ ಕಥೆ ಕೇಳಿದ್ರೆ ಶಾಕ್!

Spread the love

ಪತ್ನಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಗಂಡನೇ ಕೊಲೆ ಮಾಡಿ ಕೊನೆಗೆ ನಾಟಕವಾಡಿದ್ದಾನೆ. ತಾನೇ ಆಯಂಬುಲೆನ್ಸ್ ಕರೆಸಿ ಆಸ್ಪತ್ರೆಗೆ ಶಿಫ್ಟ್ ಮಾಡಿ ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ದು, ಆದರೆ ಕೊನೆಗೂ ಲಾಕ್ ಆಗಿದ್ದಾನೆ.ಬೆಂಗಳೂರಿನ ಬಾಗಲೂರು ಸಮೀಪ ಮಿಟ್ಟಗಾನಹಳ್ಳಿಯಲ್ಲಿ ನಿನ್ನೆ ಸಂಜೆ ನಡೆದ ಆಘಾತಕಾರಿ ಘಟನೆ ಇದು . ಪತಿ ತನ್ನ ಪತ್ನಿಯನ್ನು ಕೊಂದು ಅಪಘಾತದ ರೀತಿ ಬಿಂಬಿಸಲು ಪ್ರಯತ್ನಿಸಿದ್ದಾನೆ.

ಆದರೆ ಪೊಲೀಸರು ತ್ವರಿತವಾಗಿ ಕೃತ್ಯ ಬಯಲು ಮಾಡಿ ಆರೋಪಿ ಪತಿಯನ್ನು ಬಂಧಿಸಿದ್ದಾರೆ.

ಆರೋಪಿ ಆನಂದ್ (64) ಎಂಬಾತ ಪತ್ನಿ ಗಾಯತ್ರಿ (50)ಯನ್ನು ಕೊಂದಿದ್ದಾನೆ. ಗಾಯತ್ರಿ ದೈಹಿಕ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು.ಆದರೆ ನಿನ್ನೆ ಸಂಜೆ ಆಕೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ,ಕೊನೆಗೆ ಅಪಘಾತ ಎಂದು ಬಿಂಬಿಸಲು ತಾನೇ ಆಂಬುಲೆನ್ಸ್ ಕರೆಸಿ ಆಸ್ಪತ್ರೆಗೆ ಶಿಪ್ಟ್ ಮಾಡುವ ನಾಟಕವಾಡಿದ್ದಾನೆ.

ಕೊಲೆ ಮಾಡಿ ಅಪಘಾತ ಎಂದು ನಾಟಕವಾಡಿದ್ದ ಗಂಡ!

ಈದಂಪತಿ ಯಲಹಂಕದ ಬೊಮ್ಮಸಂದ್ರ ಸಮೀಪ ವಾಸವಾಗಿದ್ದರು. ಸಂಜೆ ಸೈಟ್ ನೋಡಲು ಹೋಗುವ ನೆಪದಲ್ಲಿ ಆನಂದ್ ಪತ್ನಿಯನ್ನು ಮಿಟ್ಟಗಾನಹಳ್ಳಿ ಬಳಿ ಕರೆದೊಯ್ದಿದ್ದನು. ಅಲ್ಲಿ ಗಾಯತ್ರಿ ಅವರ ತಲೆಗೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ಕೊಲೆ ಬಳಿಕ ಅಪಘಾತದ ರೀತಿ ಬಿಂಬಿಸಲು ಸಿನಿಮೀಯ ಶೈಲಿಯಲ್ಲಿ ನಾಟಕವಾಡಿದ್ದಾನೆ. ಅಂಬುಲೆನ್ಸ್ ಕರೆಸಿ ಗಾಯತ್ರಿ ಅವರನ್ನು ಆಸ್ಪತ್ರೆಗೆ ಕಳುಹಿಸಿದ್ದಾನೆ. ಬುಲೆಟ್ ಬೈಕ್ ಡಿಕ್ಕಿ ಹೊಡೆದು ಅಪಘಾತವಾಗಿದೆ ಎಂದು ನಂಬಿಸಲು ಪ್ರಯತ್ನಿಸಿದ್ದಾನೆ.

ಪೊಲೀಸರ ತನಿಖೆಯಿಂದ ಗಂಡನ ಕುಕೃತ್ಯ ಬಯಲು

ಆದರೆ ಚಿಕ್ಕಜಾಲ ಟ್ರಾಫಿಕ್ ಸಬ್ ಇನ್‌ಸ್ಪೆಕ್ಟರ್ ಒಬ್ಬರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಕೊಲೆಯಾಗಿರುವುದು ಬಯಲಾಗಿದೆ. ತಲೆಗೆ ಗಾಯದ ರೀತಿಆಗಿದ್ದು, ಅದು ಅಪಘಾತದಂತೆ ಕಾಣದೇ ಇದ್ದುದು ಅನುಮಾನ ಮೂಡಿಸಿತು. ಬಾಗಲೂರು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದರು. ಆರೋಪಿ ಆನಂದ್ ಪರಾರಿಯಾಗಲು ಪ್ರಯತ್ನಿಸಿದ್ದ. ಆದರೆ ಪೊಲೀಸರು ತ್ವರಿತವಾಗಿ ಬಂಧಿಸಿದ್ದಾರೆ.

ತನಿಖೆಯಲ್ಲಿ ಕೊಲೆಯ ಆಘಾತಕಾರಿ ಸತ್ಯ ಬಯಲು

ತನಿಖೆಯಲ್ಲಿ ಆಘಾತಕಾರಿ ಸತ್ಯ ಬಯಲಾಗಿದೆ. ದಂಪತಿಗಳ ನಡುವೆ ಸಣ್ಣಪುಟ್ಟ ವಿಚಾರಕ್ಕೆ ಜಗಳಗಳು ಆಗಾಗ ನಡೆಯುತ್ತಿದ್ದವು. ಆನಂದ್ ತನ್ನ ಪತ್ನಿ ತನ್ನನ್ನು ವಿಷ ಹಾಕಿ ಕೊಲ್ಲಲು ಪ್ರಯತ್ನಿಸುತ್ತಾಳೆ ಎಂದು ಊಹಿಸಿಕೊಂಡಿದ್ದನು. ಪತ್ನಿ ಊಟದಲ್ಲಿ ವಿಷ ಹಾಕಿ ಸಾಯಿಸುತ್ತಾಳೆ ಎಂದು ಭಯಪಟ್ಟಿದ್ದನಂತೆ. ಈ ಊಹೆಯಿಂದಲೇ ಪತ್ನಿಯನ್ನು ಮೊದಲೇ ಕೊಂದುಬಿಡಲು ನಿರ್ಧರಿಸಿದ್ದನು ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.

ಹೀಗಾಗಿಆನಂದ್ಪತ್ನಿಯನ್ನುಕೊಲೆ ಮಾಡಿ ಅಪಘಾತದ ರೀತಿ ಬಿಂಬಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ. ಅಂಬುಲೆನ್ಸ್ ಕರೆಸಿ ಆಸ್ಪತ್ರೆಗೆ ದಾಖಲಿಸಿ ನಾಟಕವಾಡಿದ್ದ. ಆದರೆ ಪೊಲೀಸರ ತೀಕ್ಷ್ಣ ತನಿಖೆಯಿಂದ ಕೃತ್ಯ ಬಯಲಾಗಿದೆ. ಬಾಗಲೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಮುಂದುವರಿದ ತನಿಖೆ ನಡೆಯುತ್ತಿದೆ.

ದಂಪತಿಗಳ ನಡುವಿನ ಸಮಸ್ಯೆ ಕೊಲೆಯಲ್ಲಿ ಅಂತ್ಯ

ಈ ಘಟನೆಯು ಸಮಾಜದಲ್ಲಿ ಆಘಾತವನ್ನು ಉಂಟುಮಾಡಿದೆ. ಕುಟುಂಬದಲ್ಲಿ ಸಣ್ಣ ಜಗಳಗಳು ದೊಡ್ಡ ದುರಂತಕ್ಕೆ ಕಾರಣವಾಗಬಾರದು ಎಂಬ ಎಚ್ಚರಿಕೆಯನ್ನು ನೀಡಿದೆ. ಪತ್ನಿ ಗಾಯತ್ರಿ ದೈಹಿಕ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ದಂಪತಿಗಳ ನಡುವಿನ ಸಮಸ್ಯೆಗಳು ಈ ದುರಂತಕ್ಕೆ ಕಾರಣವಾಗಿವೆ. ಪೊಲೀಸರು ಆರೋಪಿ ಆನಂದನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಹೆಚ್ಚಿನ ವಿವರಗಳು ಬಯಲಾಗಲಿವೆ.

WhatsApp Group Join Now

Spread the love

Leave a Reply