ಜಮಖಂಡಿ ತಾಲೂಕಿನ ತೊದಲಬಾಗಿ ಎಂಬ ಗ್ರಾಮದಲ್ಲಿ ಒಂದು ಅಮಾನವೀಯ ಘಟನೆ ನಡೆದಿದೆ. ಗಂಡನೊಬ್ಬ ತನ್ನ ಹೆಂಡತಿಯ ತಲೆ ಬೋಳಿಸಿ, ವಿಕೃತಿ ಮೆರೆದಿದ್ದಾನೆ. ಹೆಂಡತಿಯ ಶೀಲ, ನಡತೆ ಮೇಲೆ ಸಂಶಯಗೊಂಡ ಪತಿ, ತಾನೇ ತನ್ನ ಕೈಯಾರೆ ತನ್ನ ಪತ್ನಿಯ ತಲೆ ಬೋಳಿಸಿದ್ದಾನೆ.
ಪತಿ, ಪತ್ನಿ ನಡುವಿನ ಜಗಳಕ್ಕೆ ತಾರಕಕ್ಕೇರಿದ್ದು, ಆಕೆಯ ನಡತೆ ಮೇಲೆ ಸಂಶಯಗೊಂಡ ಗಂಡ, ಇಂತಹ ಅಮಾನವೀಯ ಕೃತ್ಯ ಎಸಗಿದ್ದಾನೆ. ಜೊತೆಗೆ ಕೊಲೆ ಮಾಡಲು ಕೂಡ ಯತ್ನಿಸಿದ್ದಾನಂತೆ. ಸದ್ಯ ಪೊಲೀಸರು ಆ ಗಂಡನನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.
ಹೆಂಡತಿಯ ತಲೆ ಬೋಳಿಸಿ ಗಂಡನಿಂದ ವಿಕೃತಿ
ಬಾಗಲಕೋಟೆ ಜಿಲ್ಲೆಯಲ್ಲೊಂದು ಅಮಾನವೀಯ ಘಟನೆ ನಡೆದಿದೆ. ತನ್ನ ಪತ್ನಿಯ ನಡೆತ ಬಗ್ಗೆ ಸಂಶಯಗೊಂಡ ಪತಿಯೊಬ್ಬ, ಆಕೆಯ ತಲೆಯ ಕೂದಲು ಕತ್ತರಿಸಿ, ವಿಕೃತಿ ಮೆರೆದಿದ್ದಾನೆ. ಎಲೆಕ್ಟ್ರಿಕ್ ಟ್ರಿಮ್ಮರ್‌ನಿಂದ ಆಕೆಯ ತಲೆ ಬೋಳಿಸಿ, ಹಲ್ಲೆ ಮಾಡಿ, ಕೊಲೆ ಯತ್ನ ಕೂಡ ಮಾಡಿದ್ದಾನೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಪತ್ನಿ ನಡತೆ ಮೇಲೆ ಸಂಶಯ, ನಿತ್ಯ ಕಿರುಕುಳ
ಜಮಖಂಡಿ ತಾಲೂಕಿನ ತೊದಲಬಾಗಿ ಎಂಬ ಗ್ರಾಮದಲ್ಲಿ ಇಥದ್ದೊಂದು ಅಮಾನವೀಯ ಘಟನೆ ನಡೆದಿದೆ. 31 ವರ್ಷದ ಉಮೇಶ್ ಎಂಬಾತ, 26 ವರ್ಷದ ತನ್ನ ಪತ್ನಿಯ ತಲೆ ಬೋಳಿಸಿ, ಹಲ್ಲೆ ನಡೆಸಿದ್ದಾನಂತೆ. ಪತ್ನಿಯ ನಡತೆ ಬಗ್ಗೆ ಸಂಶಯ ವ್ಯಕ್ತಪಡಿಸಿ ಪತಿ ಉಮೇಶ್ ಆಗಾಗ ಕಿರುಕುಳ ನೀಡುತ್ತಿದ್ದ ಎಂಬ ಆರೋಪವೂ ಇದೆ.
ಮಾವನ ಮನೆಯವ್ರು ಬುದ್ಧಿ ಹೇಳಿದ್ರೂ ಕೇಳದ ಅಳಿಯ
ಗಂಡ, ಹೆಂಡತಿ ಮಧ್ಯೆ ಪ್ರತಿನಿತ್ಯ ಜಗಳ ನಡೆಯುತ್ತಿದ್ದು, ಇದು ಆಕೆಯ ತವರು ಮನೆಯವರಿಗೂ ತಿಳಿದಿತ್ತು. ತವರು ಮನೆಯವರು ಅಳಿಯನಿಗೆ ಹಲವು ಬಾರಿ ಬುದ್ಧಿವಾದವನ್ನೂ ಹೇಳಿದ್ದರಂತೆ. ಆದ್ರೂ ಪತಿ ಉಮೇಶ್ ಪತ್ನಿಗೆ ಕಿರುಕುಳ ನೀಡೋದು ಬಿಟ್ಟಿರಲಿಲ್ಲ.
ಬುತ್ತಿ ಕೊಡಲು ತಡವಾಗಿದ್ದಕ್ಕೆ ಅನುಮಾನ
ಕಳೆದ ತಿಂಗಳು ಜನವರಿ 31ರಂದು ರಾತ್ರಿ 11 ಗಂಟೆ ಸುಮಾರಿಗೆ ಈ ಕೃತ್ಯ ನಡೆದಿದ್ದು, ಇದೀಗ ತಡವಾಗಿ ಬೆಳಕಿಗೆ ಬಂದಿದೆ. ರಾತ್ರಿ ಮನೆಗೆ ಬುತ್ತಿ ತೆಗೆದುಕೊಂಡು ಹೋಗಲು ಬಂದಿದ್ದ ಕಬ್ಬಿನ ಗ್ಯಾಂಗ್ ಮನ್ ಮೇಲೆ ಪತಿ ಉಮೇಶ್ ಅನುಮಾನ ಪಟ್ಟಿದ್ದಾನೆ. ಬಾಗಿಲು ಹಾಕಿಕೊಂಡು ಬುತ್ತಿ ಕೊಡಲು ತಡ ಯಾಕೆ ಆಯ್ತು ಎಂದು ಹೆಂಡತಿ ಜೊತೆ ಗಲಾಟೆ ಮಾಡಿದ್ದಾನಂತೆ.
ಆರೋಪಿಯನ್ನು ಬಂಧಿಸಿದ ಪೊಲೀಸರು
ಈ ವೇಳೆ ಪತ್ನಿ ಜೊತೆ ಉಮೇಶ್ ಗಲಾಟೆ ಮಾಡಿದ್ದಾನೆ. ಬಳಿಕ ಜಗಳ ವಿಕೋಪಕ್ಕೆ ಹೋಗಿ ಹೆಂಡತಿಯ ತಲೆ ಬೋಳಿಸಿದ್ದಾನೆ. ಮನೆಯಲ್ಲೇ ಇರುವ ಎಲೆಕ್ಟ್ರಿಕ್ ಟ್ರಿಮ್ಮರ್‌ನಿಂದ ಹೆಂಡತಿಯ ತಲೆ ಬೋಳಿಸಿ ವಿಕೃತಿ ಮೆರೆದಿದ್ದಾನೆ. ಅಲ್ಲದೇ ಹಲ್ಲೆ ನಡೆಸಿ, ಜೀವ ಬೆದರಿಕೆ ಕೂಡ ಹಾಕಿದ್ದಾನಂತೆ. ಸದ್ಯ ಈ ಬಗ್ಗೆ ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಉಮೇಶ್‌ನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ಹೆಂಡತಿಯ ತಲೆ ಬೋಳಿಸಿದ ಗಂಡ.! ಶೀಲ ಶಂಕಿಸಿ ಪತ್ನಿಯ ತಲೆ ಬೋಳಿಸಿದ ಪತಿ ಬಂಧನ
WhatsApp Group
Join Now