Tata Curvv : ಟಾಟಾ ಕರ್ವ್ ಕಾರು ಖರೀದಿಸಬೇಕೆ.? ಯಾವ ವೇರಿಯೆಂಟ್‌ಗೆ ಎಷ್ಟು ತಿಂಗಳು ಕಾಯಬೇಕು.? ಸಂಪೂರ್ಣ ಮಾಹಿತಿ

Tata Curvv : ನಮಸ್ಕಾರ ಸ್ನೇಹಿತರೇ, ಭಾರತದಲ್ಲಿ ಹೊಸ ಕರ್ವ್ ಎಸ್‌ಯುವಿ ಕೂಪೆಯೊಂದಿಗೆ ಹೊಸ ವಿಭಾಗಕ್ಕೆ ತನ್ನ ಮೊದಲ ಅದ್ಬುತ ಕಾರನ್ನು ಪರಿಚಯಿಸಿದ ಟಾಟಾ ಮೋಟಾರ್ಸ್, ಉತ್ತಮ ಬೇಡಿಕೆಯೊಂದಿಗೆ ಮುನ್ನುಗ್ಗುತ್ತಿದೆ. ಈ ಎಸ್‌ಯುವಿಯನ್ನು ಕಂಪನಿಯು ಮೊದಲು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಪರಿಚಯಿಸಿತ್ತು.

ನಂತರ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಮಾರುಕಟ್ಟೆಗೆ ಪರಿಚಯಿಸಲಾಯಿತು. ಇದೀಗ ಈ ಕಾರಿಗೆ ಬುಕಿಂಗ್‌ಗಳು ಹೆಚ್ಚಾಗಿದ್ದು, ಬುಕ್‌ ಮಾಡಿದವರಿಗೆ ಬೇಗನೆ ಸಿಗುತ್ತಿಲ್ಲ. ಪ್ರಸ್ತುತ ಪವರ್ ಟ್ರೇನ್ ಅವಲಂಬಿಸಿ ಮೂರು ತಿಂಗಳಿಗಿಂತ ಹೆಚ್ಚು ಕಾಯುವ ಅವಧಿಯನ್ನು ಹೊಂದಿದೆ ಎಂದು ಪ್ರಮುಖ ಆಟೋಮೋಟಿವ್ ಸುದ್ದಿಸಂಸ್ಥೆ ‘ಆಟೋಕಾರ್’ ವರದಿ ಮಾಡಿದೆ.

ಇದನ್ನೂ ಕೂಡ ಓದಿ : Post Office Franchise : ಪೋಸ್ಟ್ ಆಫೀಸ್’ ಮೂಲಕ ಈ ‘ಬ್ಯುಸಿನೆಸ್’ ಮಾಡಿ, ತಿಂಗಳಿಗೆ 80,000 ರೂ. ಗಳಿಸಿ.!

ಟಾಟಾ ಕರ್ವ್ (Tata Curvv) ಡೀಸೆಲ್ :-

ಟಾಟಾ ಕರ್ವ್ (Tata Curvv) ಡೀಸೆಲ್ ಆವೃತ್ತಿಯು ಸ್ಮಾರ್ಟ್, ಪ್ಯೂರ್, ಕ್ರಿಯೇಟಿವ್ ಮತ್ತು ಎಕ್ಸ್ಪ್ಟೆಡ್ ಎಂಬ ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ಕರ್ವ್ ಡೀಸೆಲ್ ಆಟೋಮ್ಯಾಟಿಕ್ ವೇರಿಯೆಂಟ್‌ಗೆ ಸುಮಾರು ಎರಡು ತಿಂಗಳು ಕಾಯಬೇಕಿದೆ. ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿರುವ ಕರ್ವ್ ಡೀಸೆಲ್ ವೇರಿಯೆಂಟ್‌ಗಳು ಒಂದು ತಿಂಗಳ ಕಾಯುವ ಅವಧಿ ಇದೆ. ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿರುವ ಎಂಟ್ರಿ ಲೆವೆಲ್ ಕರ್ವ್ ಸ್ಮಾರ್ಟ್ ಡೀಸೆಲ್ ವೇರಿಯೆಂಟ್ ಎರಡು ತಿಂಗಳಿಗಿಂತ ಸ್ವಲ್ಪ ಹೆಚ್ಚು ಕಾಯುವ ಅವಧಿಯನ್ನು ಹೊಂದಿದೆ.

ಟಾಟಾ ಕರ್ವ್ (Tata Curvv) ಪೆಟ್ರೋಲ್ :-

ಎಂಟ್ರಿ ಲೆವೆಲ್ ಕರ್ವ್, 1.2 ಲೀಟರ್ ಟರ್ಬೊ ಎಂಜಿನ್ ಹೊಂದಿದ್ದು, ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿರುವ ಕರ್ವ್ 1.2 ಪೆಟ್ರೋಲ್ ಸ್ಮಾರ್ಟ್ ವೇರಿಯೆಂಟ್ ಮೂರು ತಿಂಗಳಿಗಿಂತ ಹೆಚ್ಚು ಕಾಯುವಿಕೆಯನ್ನು ಹೊಂದಿದೆ. ಆಟೋಮ್ಯಾಟಿಕ್ ವೇರಿಯೆಂಟ್ ಸುಮಾರು ಮೂರು ತಿಂಗಳ ಕಾಯುವ ಅವಧಿಯನ್ನು ಹೊಂದಿದೆ. ಕರ್ವ್ 1.2 ಪೆಟ್ರೋಲ್-ಎಂಟಿಯ ಪ್ಯೂರ್, ಕ್ರಿಯೇಟಿವ್ ಮತ್ತು ಅಕಾಂಪ್ಲಿಷ್ಡ್ ವೇರಿಯೆಂಟಗಳು ಸುಮಾರು ಎರಡು ತಿಂಗಳು ಕಾಯಬೇಕಿದೆ.

ಹೆಚ್ಚು ಪವರ್‌ಫುಲ್ 125 ಬಿಹೆಚ್ ಪವರ್ ಹೊರಹಾಕುವ ಟಾಟಾ ಕರ್ವ್ (Tata Curvv) 1.2-ಟಿಜಿಡಿಐ ಎಂಜಿನ್ ಕ್ರಿಯೇಟಿವ್ ಮತ್ತು ಎಕ್ಸ್‌ಪರ್ಟ್ ಟ್ರಿಮ್‌ಗಳಲ್ಲಿ ಮಾತ್ರ ಲಭ್ಯವಿದೆ. ಇವುಗಳ ಮ್ಯಾನುವಲ್ ಗೇರ್ ಬಾಕ್ಸ್ ಮಾದರಿಗಳನ್ನು ಎರಡು ತಿಂಗಳೊಳಗೆ ತಲುಪಿಸಬಹುದು, ಆದರೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ವೇರಿಯೆಂಟ್‌ಗಳು ಮೂರು ತಿಂಗಳ ಕಾಯುವಿಕೆಯನ್ನು ಹೊಂದಿವೆ.

ಇದನ್ನೂ ಕೂಡ ಓದಿ : Agriculture Loan : ಕೃಷಿ ಕೆಲಸಕ್ಕಾಗಿ ಬಡ್ಡಿ ರಹಿತ ಸಾಲ…! ರೈತರು ಕೂಡಲೇ ಅರ್ಜಿ ಸಲ್ಲಿಸಿ – ಹೇಗೆ ಸಾಲ ಪಡೆಯುವುದು.?

ಟಾಟಾ ಕರ್ವ್ (Tata Curvv) ಎಲೆಕ್ಟ್ರಿಕ್ :-

ಅಕ್ಟೋಬರ್ ತಿಂಗಳ ಅಂಕಿಅಂಶಗಳ ಪ್ರಕಾರ, ಟಾಟಾ ಮೋಟಾರ್ಸ್ (Tata Motors) 8,218 ಯುನಿಟ್ ಕಾರುಗಳನ್ನು ಈವರೆಗೆ ಶೋರೂಂಗಳಿಗೆ ರವಾನಿಸಿದೆ. ನವೆಂಬರ್ 2024 ರಲ್ಲಿ ಟಾಟಾ ಕರ್ವ್ ಇವಿ ಬುಕ್ ಮಾಡುವವರು ಸುಮಾರು ನಾಲ್ಕು ವಾರಗಳವರೆಗೆ ಕಾಯಬೇಕಾಗುತ್ತದೆ. ಹೌದು ಕರ್ವ್ ಎಲೆಕ್ಟ್ರಿಕ್ ಆವೃತ್ತಿಯ ಎಲ್ಲಾ ವೇರಿಯೆಂಟ್‌ಗಳಲ್ಲಿ ಯಾವುದನ್ನು ಬುಕ್ ಮಾಡಿದ್ರೂ ನಾಲ್ಕು ವಾರಗಳವರೆಗೆ ಕಾಯುವ ಅವಧಿಯನ್ನು ಹೊಂದಿವೆ ಎಂದು ಡೀಲರ್ ಮೂಲಗಳು ತಿಳಿಸಿವೆ.

ಟಾಟಾ ಕರ್ವ್ ಇವಿ (Tata Curvv Ev) 40.5 ಕಿಲೋವ್ಯಾಟ್ ಹಾಗೂ 55 ಕಿಲೋವ್ಯಾಟ್ ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುತ್ತದೆ. ಅಕಾಂಪ್ಲಿಷ್ಡ್, ಅಕಾಂಪ್ಲಿಷ್ಡ್ + ಎಸ್, ಎಂಪವರ್ಡ್ + ಮತ್ತು ಎಂಪವರ್ಡ್ + ಎ ವೇರಿಯೆಂಟ್‌ಗಳು 55 ಕಿಲೋವ್ಯಾಟ್ ಬ್ಯಾಟರಿಯೊಂದಿಗೆ ಬರುತ್ತವೆ. ಕ್ರಿಯೇಟಿವ್, ಅಕಾಂಪ್ಲಿಷ್ಡ್ ಮತ್ತು ಅಕಾಂಪ್ಲಿಷ್ಡ್ + ವೇರಿಯೆಂಟ್‌ಗಳು 40.5 ಕಿಲೋವ್ಯಾಟ್ ಬ್ಯಾಟರಿಯೊಂದಿಗೆ ಬರುತ್ತವೆ.

ಇದನ್ನೂ ಕೂಡ ಓದಿ : Shrama Shakti Yojane : ಈ ಯೋಜನೆಯಲ್ಲಿ ಪ್ರತಿಯೊಬ್ಬ ಮಹಿಳೆಗೆ ಸಿಗಲಿದೆ ₹50,000/- ರೂಪಾಯಿ.! ಬೇಕಾಗುವ ದಾಖಲೆಗಳೇನು.?

ಕಂಪನಿಯು ಬೇಡಿಕೆಗೆ ತಕ್ಕಂತೆ ಕಾರುಗಳನ್ನು ಪೂರೈಸುತ್ತಿದ್ದರೂ ಬುಕಿಂಗ್‌ಗಳ ಹೆಚ್ಚಳದಿಂದ ಈ ಪರಿಸ್ಥಿತಿಯಿದೆ. ಕಾರು ಬಿಡುಗಡೆ ಆದಾಗಿನಿಂದಲೂ ಉತ್ತಮ ಬೇಡಿಕೆಯೊಂದಿಗೆ ಮುನ್ನುಗ್ಗುತ್ತಿದೆ. ಮತ್ತೊಂದು ವಿಶೇಷತೆ ಎಂದರೆ ಕಾರನ್ನು ಪೆಟ್ರೋಲ್ ಮಾತ್ರವಲ್ಲದೇ ಡೀಸೆಲ್ ಹಾಗೂ ಎಲೆಕ್ಟ್ರಿಕ್ ಆವೃತ್ತಿಗಳಲ್ಲಿ ಪರಿಚಯಿಸಿರುವುದು ಎಲ್ಲಾ ಗ್ರಾಹಕರಿಗೆ ವಿವಿಧ ಆಯ್ಕೆಗಳನ್ನು ನೀಡಿದಂತಾಗಿದೆ.

Leave a Reply