ಮೇಷ :-
ಈ ದಿನ ಮೇಷರಾಶಿಯವರಿಗೆ ಸಾಮಾನ್ಯ ಪ್ರಭಾವವಿರುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಅಥವಾ ಹೊಸ ಯೋಜನೆಗಳನ್ನು ಪ್ರಾರಂಭಿಸಲು ಇಂದು ಉತ್ತಮ ದಿನ. ಆದರೂ, ಆತುರದ ನಿರ್ಧಾರದಿಂದಾಗಿ ನಿಮ್ಮ ಆಲೋಚನಾ ಪ್ರಕ್ರಿಯೆಯನ್ನು ಕ್ಷಿಷ್ಟವಾಗಿಸಲು ಪ್ರಯತ್ನಿಸಬೇಡಿ.
ಕಚೇರಿಯಲ್ಲಿ ನೀವು ಕಷ್ಟಕರ ಸ್ಪರ್ಧೆಯನ್ನು ಎದುರಿಸಬೇಕಾದೀತು. ಆದರೂ ನೀವು ಎಂದಿನಂತೆಯೇ ಸಾಮಾನ್ಯವಾಗಿರುತ್ತೀರಿ ಮತ್ತು ಉತ್ತಮ ಪ್ರತಿಫಲ ನೀಡಲು ಪ್ರಯತ್ನಿಸುತ್ತೀರಿ. ಮಹಿಳೆಯರು ತಮ್ಮ ದುರಾಕ್ರಮಣ ಪ್ರವೃತ್ತಿ ಮತ್ತು ನಾಲಗೆಯ ಮೇಲೆ ಹತೋಟಿಯಿರಿಸಬೇಕು. ಪ್ರಯಾಣ ಮತ್ತು ಪ್ರವಾಸ ತೆರಳುವ ಸಾಧ್ಯತೆಯಿರಬಹುದು.
ವೃಷಭ :-
ವೃಷಭ ರಾಶಿಯವರಿಗೆ ಇಂದು ಗ್ರಹಗತಿಗಳು ಅನುಕೂಲಕರವಾಗಿರುವಂತೆ ಕಂಡುಬರುವುದಿಲ್ಲ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ನಿರ್ಧಾರ ಕೈಗೊಳ್ಳುವಿಕೆಯು ಇದಕ್ಕೆ ಹೊಂದಾಣಿಕೆಯಾಗುವುದಿಲ್ಲ ಮತ್ತು ಪರಿಣಾಮವಾಗಿ ನೀವು ಪ್ರಯೋಜನಕಾರಿ ಅವಕಾಶಗಳನ್ನು ವ್ಯರ್ಥಮಾಡುತ್ತೀರಿ. ಹೊಸ ಅಥವಾ ಪ್ರಮುಖ ಯೋಜನೆಗಳನ್ನು ಅಥವಾ ಕಾರ್ಯಗಳನ್ನು ಕೈಗೊಳ್ಳುವುದನ್ನು ತಪ್ಪಿಸಿ. ನಿಮ್ಮ ಸಹೋದ್ಯೋಗಿಗಳೊಂದಿಗಿನ ಚರ್ಚೆಯ ವೇಳೆ ನೀವು ಸಮಾಧಾನವನ್ನು ಹೊಂದಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಒಡಹುಟ್ಟಿದವರೊಂದಿಗಿನ ಸಂಬಂಧಗಳು ಸಾಮಾನ್ಯವಾಗಿರುತ್ತದೆ.
ಮಿಥುನ :-
ಸಾಮಾಜಿಕವಾಗಿ ಮತ್ತು ಪ್ರೀತಿಪಾತ್ರರೊಂದಿಗೆ ಹಾಗೂ ಸ್ನೇಹಿತರೊಂದಿಗೆ ಸಡಗರದಿಂದಿರಲು ಉತ್ತಮ ದಿನ ಎಂಬುದಾಗಿ ಗಣೇಶ ಹೇಳುತ್ತಾರೆ. ಆದ್ದರಿಂದ ನಿಮ್ಮ ಆತ್ಮೀಯ ಸ್ನೇಹಿತರನ್ನು ಔತಣಕ್ಕೆ ಆಹ್ವಾನಿಸಿ ಇಲ್ಲವಾದಲ್ಲಿ ಅವರೊಂದಿಗೆ ತಿರುಗಾಟಕ್ಕೆ ತೆರಳಿ. ಹಣಕಾಸು ಕ್ಷೇತ್ರಕ್ಕೆ ಸಂಬಂಧಿಸಿ, ನೀವು ಸಾಕಷ್ಟು ಲಾಭ ಗಳಿಸಲಿದ್ದೀರಿ. ಆದರೆ, ದುಂದುವೆಚ್ಚಕ್ಕೆ ಆಹ್ವಾನಿಸಬೇಡಿ. ನಿಮ್ಮ ವೆಚ್ಚವನ್ನು ಮಿತದಲ್ಲಿರಿಸಿ ಮತ್ತು ವಿವೇಚನೆಯಿಂದ ಖರ್ಚು ಮಾಡಿ. ಋಣಾತ್ಮಕತೆಯನ್ನು ಕೂಡಲೇ ತೊಡೆದು ಹಾಕಬೇಕು ಇಲ್ಲವಾದಲ್ಲಿ ಅದು ನಿಮ್ಮ ದಿನವನ್ನು ಹಾಳುಮಾಡಬಹುದು ಎಂಬುದಾಗಿ ಗಣೇಶ ಸಲಹೆ ನೀಡುತ್ತಾರೆ. ನಿಮ್ಮ ಸ್ನೇಹಿತರು ಮತ್ತು ಪ್ರೀತಿಪಾತ್ರರಿಂದ ಉಡುಗೊರೆಗಳನ್ನು ನಿರೀಕ್ಷಿಸಿ.
ಕರ್ಕಾಟಕ :-
ಈ ದಿನ ನಿಮ್ಮ ಮನಸ್ಸನ್ನು ಗ್ರಹಗತಿಗಳು ಆತಂಕ ಮತ್ತು ಅವಿಶ್ರಾಂತದಲ್ಲಿರಿಸುತ್ತವೆ ಎಂಬುದಾಗಿ ಗಣೇಶ ಹೇಳುತ್ತಾರೆ. ಕರ್ಕಾಟಕ ರಾಶಿಯವರಾದ ನೀವು ಸಮಾಧಾನದಿಂದಿರಬೇಕು ಇಲ್ಲವಾದಲ್ಲಿ ಮಾನಸಿಕ ಅಸ್ಥಿರತೆಯು ನಿಮ್ಮ ನಿರ್ಧಾರ ಕೈಗೊಳ್ಳುವ ಕಾರ್ಯವನ್ನು ಇನ್ನಷ್ಟು ಜಟಿಲಗೊಳಿಸುತ್ತದೆ. ಮತ್ತು ಇದು ಅಸಮಾಧಾನಕ್ಕೆ ಕಾರಣವಾಗಬಹುದು. ಹುತ್ತವನ್ನು ಬೆಟ್ಟ ಮಾಡುವುದರಿಂದ ಏನೂ ಪ್ರಯೋಜನವಿಲ್ಲ.ವಾಸ್ತವವಾಗಿ, ಚರ್ಚೆ ಅಥವಾ ವಾಗ್ವಾದಗಳಿಂದ ದೂರವಿರಿ ಇವು ನಂತರ ಕ್ಷೋಭೆಗೊಂಡು ಪರಿಸ್ಥಿತಿಯನ್ನು ಇನ್ನಷ್ಟು ಕಠಿಣವಾಗಿಸುತ್ತದೆ. ಸಾಮಾನ್ಯವಾಗಿರುವಂತೆ ಮತ್ತು ಬಂಡಾಯಕಾರರಾಗಬೇಡಿ. ಹಣಕಾಸು ನಷ್ಟ ಉಂಟಾಗಬಹುದು ಮತ್ತು ಅನಾರೋಗ್ಯ ಉಂಟಾಗಬಹುದು ಆದ್ದರಿಂದ ನಿಮ್ಮ ಆಹಾರ ಕ್ರಮ ಮತ್ತು ಕಿಸೆಯ ಬಗ್ಗೆ ಎಚ್ಚರದಿಂದಿರಿ.
ಸಿಂಹ :-
ಸಿಂಹ ರಾಶಿಯವರಿಗೆ ಸರಾಸರಿ ದಿನವು ಕಾದಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಸಂದರ್ಭಗಳು ಇಂದು ಅನುಕೂಲಕರ ಸ್ಥಿತಿಯಲ್ಲಿರುತ್ತದೆ ಆದರೆ, ನೀವು ಅನ್ಯಮನಸ್ಕರಾಗಿದ್ದಲ್ಲಿ ಅಥವಾ ತಪ್ಪುದಾರಿ ಹಿಡಿದಲ್ಲಿ ಇವುಗಳ ಉತ್ತಮ ಪ್ರಯೋಜನವನ್ನು ಪಡೆಯಲು ವಿಫಲರಾಗುವಿರಿ. ಯಾವುದೇ ವಿಚಾರದಲ್ಲಿ ಆಗಿರಲಿ.ಮನಸ್ಸು ಕೇಂದ್ರೀಕೃತವಾಗಿರಲಿ. ಹೊಸ ಯೋಜನೆ ಅಥವಾ ಕಾರ್ಯಗಳನ್ನು ಮುಂದೂಡಿ. ಈ ದಿನವು ಶ್ರೇಯಸ್ಕರವಲ್ಲ. ಸ್ನೇಹಿತರು ಉತ್ತಮ ಸಾಂಗತ್ಯವನ್ನು ನೀಡುತ್ತಾರೆ. ಮತ್ತು ಅದರಲ್ಲಿ ಕೆಲವರು ಸಹಕಾರಿ ಮನೋಭಾವವನ್ನು ಹೊಂದಿರುತ್ತಾರೆ. ಇಂದು ನೀವು ಪ್ರವಾಸ ತೆರಳಬಹುದು. ವ್ಯವಹಾರವು ಉತ್ತಮವಾಗಿರುತ್ತದೆ. ಹಣಕಾಸು ಲಾಭ ಉಂಟಾಗಲಿದೆ.
ಕನ್ಯಾ :-
ಈ ದಿನವು ಕನ್ಯಾ ರಾಶಿಯವರಿಗೆ ಫಲದಾಯಕ ದಿನವಾಗಲಿದೆ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ನೀವು ಯಾವುದೇ ಹೊಸ ಯೋಜನೆಗಳನ್ನು ಪ್ರಾರಂಭಿಸಲು ಆಲೋಚಿಸಿದ್ದಲ್ಲಿ ಇಂದು ಅದಕ್ಕೆ ಕೂಡಲೇ ತಯಾರಾಗಿ. ಈ ದಿನ ನಿಮ್ಮ ವೃತ್ತಿ ಜೀವನ ಅನುಕೂಲಕರವಾಗಿರುತ್ತದೆ ಮತ್ತು ಮುಂದಿನ ಅಭಿವೃದ್ಧಿಯ ಗುರಿಯನ್ನು ಹೊಂದಬಹುದು. ಮತ್ತು ಈ ಸಂದರ್ಭಗಳಲ್ಲಿ ನೀವು ಕಚೇರಿಯಲ್ಲಿ ಬಡ್ತಿ ಮತ್ತು ಉತ್ತೇಜನವನ್ನು ನಿರೀಕ್ಷಿಸಬಹುದು. ವೈಯಕ್ತಿಕ ನೆಲೆಯಲ್ಲಿಯೂ ಪ್ರಯಾಣವು ವೆಲ್ವೆಟ್‌ನಂತೆ ಮೃದುವಾಗಿರುತ್ತದೆ. ಸರಕಾರಿ ಸಂಬಂಧಿ ಲಾಭಗಳು ಉಂಟಾಗಬಹುದು ಎಂಬುದನ್ನು ಗ್ರಹಗತಿಗಳು ಸೂಚಿಸುತ್ತವೆ. ಇನ್ನೂ ಹೆಚ್ಚಾಗಿ, ಸರಕಾರಿ ಕಾರ್ಯಗಳಿಗಾಗಿ ನೀವು ಅತ್ತಿಂದಿತ್ತ ಅಲೆದಾಡಬೇಕಾಗಿಲ್ಲ. ಎಲ್ಲವೂ ಸುಲಭವಾಗಿಯೇ ಸಾಗುತ್ತದೆ.
ತುಲಾ :-
ಬೌದ್ಧಿಕ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಕೊಳ್ಳುವ ಪ್ರಬಲ ಆಕಾಂಕ್ಷೆಯು ಸಾಹಿತ್ಯ, ಕಲೆ ಮುಂತಾದ ಕಲಾತ್ಮಕ ವಿಚಾರಗಳತ್ತೆ ನಿಮ್ಮ ಗಮನ ಸೆಳೆಯುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಹೊಸ ಕಾರ್ಯಗಳನ್ನು ಪ್ರಾರಂಭಿಸಲು , ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಇಂದು ಉತ್ತಮ ದಿನ. ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ನೀವು ಸಮೃದ್ಧವಾಗಿರುತ್ತೀರಿ ಮತ್ತು ಉತ್ಸಾಹ ಮತ್ತು ಸಹೋದ್ಯೋಗಿಗಳ ಹಾಗೂ ಮೇಲಾಧಿಕಾರಿಗಳ ಸಹಕಾರದೊಂದಿಗೆ ಇನ್ನೂ ಉತ್ತಮ ನಿರ್ವಹಣೆಗೆ ನಿಮಗೆ ಪ್ರಚೋದನೆ ಸಿಗಲಿದೆ. ಉದ್ಯಮಿಗಳಿಗೆ ಈ ದಿನವು ಲಾಭದಾಯಕವಾಗಲಿದೆ. ಆದರೂ, ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು.ಆರೋಗ್ಯಕರ ಆಹಾರ ಸೇವಿಸಿ. ನಿಮ್ಮ ಸುತ್ತಲಿರುವ ಜನರೊಂದಿಗೆ ಅನಗತ್ಯ ಚರ್ಚೆ ಅಥವಾ ವಾಗ್ವಾದಗಳಲ್ಲಿ ತೊಡಗುವುದನ್ನು ತಪ್ಪಿಸಿ. ಯಾತ್ರಾಸ್ಥಳಕ್ಕೆ ತೆರಳುವಿರಿ.
ವೃಶ್ಚಿಕ :-
ಈ ದಿನದಲ್ಲಿ ಅನುಗ್ರಹವನ್ನು ನಿರೀಕ್ಷಿಸಬೇಡಿ ಎಂಬುದಾಗಿ ಗಣೇಶ ಎಚ್ಚರಿಕೆ ನೀಡುತ್ತಾರೆ. ಪ್ರತೀ ಹಂತದಲ್ಲೂ ನೀವು ಎಚ್ಚರಿಕೆಯಿಂದಿರಬೇಕಾಗುತ್ತದೆ. ಯಾವುದೇ ಹೊಸ ಯೋಜನೆಗಳನ್ನು ಪ್ರಾರಂಭಿಸಬೇಡಿ. ನೀವು ಉತ್ತಮ ಸಮಯವನ್ನು ಹಾಳುಮಾಡುವ ಸಾಧ್ಯತೆಯಿದೆ. ನಿಮ್ಮ ಖರ್ಚಿಗೆ ಮಿತಿಯಿರಲಿ. ಬೀರ್ ಬಜೆಟ್‌ನಲ್ಲಿ ಚಾಂಪೇನ್‌ನ ರುಚಿ ನೋಡುವುದರಿಂದ ನಿಮ್ಮ ಕಿಸೆ ಬೇಗನೇ ಖಾಲಿಯಾಗಬಹುದು. ಅನೈತಿಕ ಅಥವಾ ಕಾನೂನುಬಾಹಿರ ಚಟುವಟಿಕೆಗಳಿಂದ ದೂರವಿರಿ ಇಲ್ಲವಾದಲ್ಲಿ ಇವು ನಿಮ್ಮನ್ನು ನ್ಯಾಯಾಲಯದ ಮೆಟ್ಟಿಲು ಹತ್ತಿಸಬಹುದು. ಅಪರಿಚಿತರೊಂದಿಗೆ ಸಂವಾದ ಅಥವಾ ಹೊಸ ಸಂಬಂಧಗಳ ಅಭಿವೃದ್ಧಿ ಉತ್ತಮ ಆಲೋಚನೆಯಲ್ಲ. ನೀವು ಮಾಡಲೇಬೇಕಾಗಿದ್ದಲ್ಲಿ, ನಿಲ್ಲಿ, ಆಲೋಚಿಸಿ ಮತ್ತು ಜನರ ಸ್ನೇಹ ಬೆಳೆಸಿ. ಎಲ್ಲವೂ ಸುಸೂತ್ರವಾಗಿ ಸಾಗಲು,ಯೋಗ ಮತ್ತು ಧ್ಯಾನ ಮಾಡಿ. ಇದು ನಿಮ್ಮನ್ನು ಸಮಾಧಾನದಲ್ಲಿರಿಸುತ್ತದೆ.
ಧನು :-
ನೀವು ನಿಮ್ಮ ದಿನವನ್ನು ಸಂತೋಷದಿಂದ ಕಳೆಯುವಿರಿ ಎಂಬುದಾಗಿ ಗಣೇಶ ಹೇಳುತ್ತಾರೆ. ಸಾಕಷ್ಟು ಮನರಂಜನೆ ಮತ್ತು ಸಂತಸವು ಬರಲಿದೆ. ಸಾಮಾಜಿಕ ಸಮಾರಂಭಗಳಲ್ಲಿ ಮತ್ತು ಸಭೆಗಳಲ್ಲಿ ನೀವು ವಿವಿಧ ಸಂಸ್ಕೃತಿಗೆ ಸೇರಿದ ಜನರನ್ನು ಭೇಟಿ ಮಾಡಬಹುದು. ಸ್ನೇಹಿತರು ಮತ್ತು ಪ್ರೀತಿಪಾತ್ರರೊಂದಿಗೆ ವಿಹಾರ ತೆರಳುವ ಯೋಜನೆ ಉತ್ತಮ ಆಲೋಚನೆ. ಗ್ರಹಗತಿಗಳು ಇಂದು ನಿಮ್ಮ ಸೃಜನಶೀಲತೆಯನ್ನು ಎತ್ತಿ ಹಿಡಿಯಲಿವೆ ಮತ್ತು ಉನ್ನತ ಸ್ಥಾನದಲ್ಲಿರಿಸಲಿವೆ.ಆದ್ದರಿಂದ ಮುಂದಕ್ಕೆ ಸಾಗಿ ಮತ್ತು ಕಲಾರೂಪವನ್ನು ಸೃಷ್ಟಿಸಲು ನಿಮ್ಮ ಕಲ್ಪನೆಯನ್ನು ಉಪಯೋಗಿಸಿ. ಧನು ರಾಶಿಯವರಿಗೆ ಉದ್ಯಮ ಪಾಲುದಾರರು ಪ್ರಯೋಜನ ತರಲಿದ್ದಾರೆ. ನೀವು ಗೌರವ ಸಂಪಾದಿಸುವಿರಿ.
ಮಕರ :-
ಚಿತ್ರವು ಸಾವಿರ ಪದಗಳಿಗೆ ಸಮಾನ. ಈ ದಿನವು ಚಿತ್ರದಂತೆ ಪರಿಪೂರ್ಣವಾಗಿರುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಉದ್ಯಮಿಗಳು, ವೃತ್ತಿಪರರು, ಗೃಹಿಣಿಯರು, ವಿದ್ಯಾರ್ಥಿಗಳು ಎಲ್ಲರೂ ಜೀವನವು ಕೆಲವೊಮ್ಮೆ ಎಷ್ಟೊಂದು ಸುಂದರ ಎಂಬುದನ್ನು ಕಂಡುಕೊಳ್ಳಲಿದ್ದಾರೆ. ಹಣಕಾಸು ವಿಚಾರ, ವೃತ್ತಿ ಜೀವನ ಯಾವುದೇ ಇರಬಹುದು ನಿಮ್ಮ ಹಡಗು ಮಂದಗತಿಯಲ್ಲಿ ಸಾಗುತ್ತದೆ ಮತ್ತು ಸರಕಾರಿ ಮತ್ತು ಅಧಿಕಾರಿಗಳಿಂದ ಬರುವಂತಹ ಸುಂಟರಗಾಳಿಯಂತಹ ವಿರೋಧಗಳನ್ನು ಪ್ರಬಲವಾಗಿ ಎದುರಿಸುತ್ತದೆ. ಆದರೆ, ಆತಂಕಗೊಳ್ಳಬೇಡಿ, ಪ್ರತಿಸ್ಪರ್ಧಿಗಳು ಸೋಲೊಪ್ಪಿಕೊಳ್ಳುತ್ತಾರೆ. ಆರೋಗ್ಯವೂ ನಿಮಗೆ ತೊಂದರೆ ನೀಡುವುದಿಲ್ಲ.
ಕುಂಭ :-
ಗ್ರಹಗತಿಗಳು ನಿಮಗೆ ತೊಂದರೆಯನ್ನುಂಟುಮಾಡಬಹುದು ಎಂಬುದಾಗಿ ಗಣೇಶ ಎಚ್ಚರಿಕೆ ನೀಡುತ್ತಾರೆ. ಹೊಸ ಯೋಜನೆಗಳ ಪ್ರಾರಂಭ ಮತ್ತು ಪ್ರಯಾಣವನ್ನು ತಪ್ಪಿಸಿ ಇಂದು ನೀವು ದಿನಪೂರ್ತಿ ತಳಮಳ ಹಾಗೂ ಆತಂಕದಿಂದ ಕೂಡಿರುತ್ತೀರಿ. ಮಹಿಳೆಯರು ತಮ್ಮ ದುರಾಕ್ರಮಣ ಪ್ರವೃತ್ತಿಯನ್ನು ನಿಯಂತ್ರಣದಲ್ಲಿರಿಸಬೇಕು ಮತ್ತು ಎಲ್ಲಾ ಸಮಯದಲ್ಲೂ ಸಮಾಧಾನದಿಂದಿರಬೇಕು. ನಿಮ್ಮನ್ನು ಪ್ರಚೋದಿಸುವವರ ಮೂಲಕ ಕಾಣುವುದು ಉತ್ತಮ ಹಾದಿ. ಈ ದಿನದ ಉತ್ತಮ ವಿಚಾರವೆಂದರೆ, ಈ ದಿನವು ಉತ್ತಮ ಕಲಾಕಾರ್ಯದೊಂದಿಗೆ ನಿಮ್ಮ ಸೃಜನಾತ್ಮಕ ಒಲವನ್ನು ಮೇಲೆ ಬರಲು ಅನುವುಮಾಡಿಕೊಡುತ್ತದೆ. ಇಂದು ನೀವು ಬೌದ್ಧಿಕ ಚರ್ಚೆ ಅಥವಾ ಚಟುವಟಿಕೆಯಲ್ಲಿ ಭಾಗವಹಿಸಲಿದ್ದೀರಿ. ಇಂದು ನಿಮ್ಮ ಐಕ್ಯೂ ಮಟ್ಟವು ವರ್ಧಿಸುವ ಅನುಭವವಾಗಲಿದೆ. ಅನಿರೀಕ್ಷಿತ ವೆಚ್ಚ ಉಂಟಾಗಲಿದೆ.
ಮೀನ :-
ಪರೀಕ್ಷಾತ್ಮಕ ದಿನವು ನಿಮಗಾಗಿ ಕಾದಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಭಾಗಶಃ ಎಲ್ಲಾ ಕ್ಷೇತ್ರಗಳ್ಲಲೂ ನೀವು ಎದುರಿಸುವ ಸಮಸ್ಯೆಗಳು ನಿಷ್ಕರುಣೆಯಿಂದ ಕೂಡಿರುತ್ತದೆ. ಪರಿಣಾಮವಾಗಿ ನಿಮ್ಮ ಸ್ಥೈರ್ಯವು ದಿನಪೂರ್ತಿ ಕಡಿಮೆಯಾಗಿರುತ್ತದೆ. ನಿಮ್ಮ ಆರೋಗ್ಯ ಮತ್ತು ಐಶ್ವರ್ಯದ ಮೇಲೆ ತೊಂದರೆ ಉಂಟಾಗಬಹುದು ಆದ್ದರಿಂದ ಈ ದಿನ ಪೂರ್ತಿ ಶಾಂತರೀತಿಯಿಂದಿರಲು ಪ್ರಯತ್ನಿಸಿ. ಮಹಿಳೆಯರೊಂದಿಗೆ ವ್ಯವಹರಿಸುವಾಗ ನಿಮ್ಮ ಮಾತಿನ ಬಗ್ಗೆ ಗಮನಹರಿಸುವ ಅಗತ್ಯವಿದೆ. ಅವರೊಂದಿಗೆ ವ್ಯಂಗ್ಯಾತ್ಮಕ ಮತ್ತು ತೀಕ್ಷ್ಣತೆಯಿಂದಿರುವುದರಿಂದ ನಿಮಗೆ ತೊಂದರೆಯುಂಟಾಗಬಹುದು. ಇಂದು ಆಸ್ತಿ ಮತ್ತು ವಾಹನ ಸಂಬಂಧ ವಿಚಾರಗಳಲ್ಲಿ ವ್ಯವಹರಿಸುವಾಗ ಎಚ್ಚರದಿಂದಿರಿ.
Horoscope Today : 31 ಜನವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
WhatsApp Group
Join Now