Horoscope Today : 30 ಜನವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

Spread the love

ಮೇಷ :-

ಮೇಷ ರಾಶಿಯವರಿಗೆ ಇಂದು ಹಿತಕರ ದಿನವಾಗಲಿದೆ ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ. ವೃತ್ತಿ ಅಥವಾ ವಿರಾಮ ಪ್ರವಾಸವನ್ನು ನೀವು ಕೈಗೊಳ್ಳುವ ಸಾಧ್ಯತೆಯಿರುವುದರಿಂದ ಅದಕ್ಕೆ ಸಿದ್ಧರಾಗಿರಿ. ನಿಮಗೆ ಅನಿರೀಕ್ಷಿತ ತಿಳುವಳಿಕೆ ಮತ್ತು ಪರಿಜ್ಞಾನ ಉಂಟಾಗಬಹುದು ಮತ್ತು ಇದು ನಿಮ್ಮ ಫಲಪ್ರದ ಭವಿಷ್ಯವನ್ನು ಸಾಬೀತುಮಾಡುತ್ತದೆ.

ನಿಮ್ಮ ಡೈರಿಯಲ್ಲಿ ಏನೋ ಬರೆಯಬೇಕು ಎಂದೆನಿಸಿದಲ್ಲಿ ಅದನ್ನು ಮುಂದುವರಿಸಿ. ಇಂದು ನೀವು ಮುಕ್ತವಾಗಿ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಶಕ್ತರಾಗಿರುವುದರಿಂದ ಬರಹದಲ್ಲಿ ತೊಡಗಿಕೊಳ್ಳಲು ಅರ್ಹವಾಗಿದೆ. ಏನೇ ಆದರೂ, ನಿಮ್ಮ ಆಲೋಚನಾ ಪ್ರಕ್ರಿಯೆಯಲ್ಲಿ ಅನಿರೀಕ್ಷಿತ ಬದಲಾವಣೆ ಉಂಟಾಗಬಹುದು ಇದು ನಿಮ್ಮ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯನ್ನು ಇನ್ನಷ್ಟು ವಿಳಂಬಗೊಳಿಸಬಹುದು. ಇದೇ ಸಮಯಕ್ಕೆ, ಯಾವುದೇ ವ್ಯಕ್ತಿಯ ಜತೆಯಲ್ಲಿ ವಿಶೇಷವಾಗಿ ಮಹಿಳೆಯರ ಜೊತೆ ವಾಗ್ವಾದಕ್ಕೆ ಇಳಿಯಬೇಡಿ. ಉಲ್ಲಾಸದಿಂದಿರಿ ಮತ್ತು ಆನಂದಿಸಿ.

ವೃಷಭ :-

ಶಾಂತಿ ಹಾಗೂ ಸಮಾಧಾನದಿಂದಿರಿ ಎಂಬುದಾಗಿ ಗಣೇಶ ಸಲಹೆ ನೀಡುತ್ತಾರೆ. ನಿಮ್ಮ ಚಂಚಲ ಮನಸ್ಸು ಇಂದು ಗೊಂದಲವನ್ನು ಸೃಷ್ಟಿಸಲಿದೆ ಪರಿಣಾಮವಾಗಿ ಕಾಲಹರಣವಾಗಲಿದೆ. ಕ್ರಿಯೆ ಮತ್ತು ಆಲೋಚನೆಗಳಲ್ಲಿ ಶ್ರಮಕ್ಕಾಗಿ ಹೋರಾಟ, ಸಂಧಾನ ಹೊಂದಾಣಿಕೆ ಮಂತ್ರವನ್ನು ಅನುಸರಿಸುವುದರಿಂದ ನಿಮ್ಮ ದಿನವನ್ನು ಇನ್ನಷ್ಟು ಸುಲಭವಾಗಿಸುತ್ತದೆ. ವಿಶೇಷವಾಗಿ ಕಲಾವಿದರಿಗೆ ಮತ್ತು ಬರಹಗಾರರಿಗೆ ನಿಮ್ಮ ಎಲ್ಲಾ ಸೃಜನಶೀಲ ಆಸಕ್ತಿಗಳಿಗೆ ಸಾಕಷ್ಟು ಅವಕಾಶಗಳು ದೊರೆಯುವುದರಿಂದ ನಿಮ್ಮ ಕ್ರಿಯಾತ್ಮಕ ಶಕ್ತಿಯನ್ನು ಹರಿಯಬಿಡಿ. ಏನೇ ಆದರೂ, ನಿಮ್ಮ ಪ್ರಯಾಣದ ಯೋಜನೆಗಳನ್ನು ಮುಂದೂಡಿ ಮತ್ತು ಯಾವುದೇ ಹೊಸ ಯೋಜನೆಗಳ ಪ್ರಾರಂಭವನ್ನು ತಪ್ಪಿಸಿ. ಉತ್ತಮ ಅದೃಷ್ಟ ನಿಮ್ಮದಾಗಲಿ.

ಮಿಥುನ :-

ಈ ದಿನ ಎಲ್ಲಾ ವಿಚಾರಗಳು ಅದ್ಭುತ ಹಾಗೂ ಸುಂದರವಾಗಿರುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಇಂದು ನೀವು ಸ್ವಾದಿಷ್ಟ ಭೋಜನವನ್ನು ಸವಿಯಲಿದ್ದೀರಿ. ಇದೇ ಸಮಯಕ್ಕೆ ಸೊಗಸಾದ ವಸ್ತುಗಳು, ಆಭರಣಗಳು ಮತ್ತು ಉಡುಪಗಳ ಖರೀದಿಯನ್ನು ನೀವು ಆನಂದಿಸುವಿರಿ. ಆದರೂ, ನಿಮ್ಮ ಕಿಸೆಯತ್ತ ಗಮನಹರಿಸಿ. ನೀವು ನಿಮ್ಮ ಬಜೆಟ್‌ಗಿಂತ ಹೆಚ್ಚೇ ಖರ್ಚು ಮಾಡುವ ಸಾಧ್ಯತೆಯಿದೆ. ನಿಮ್ಮ ಕುಟುಂಬ, ಸ್ನೇಹಿತರ, ಉಲ್ಲಾಸಕರ ದೃಷ್ಟಿಕೋನ ಇವೆಲ್ಲವೂ ಒಟ್ಟಾಗಿ ಅದ್ಭುತ ವಾತಾವರಣವನ್ನೇ ಸೃಷ್ಟಿಮಾಡುತ್ತದೆ ಮತ್ತು ನಿಮ್ಮ ದಿನವನ್ನು ಇನ್ನಷ್ಟು ಹರ್ಷಗೊಳಿಸುತ್ತದೆ. ಆಕಸ್ಮಿಕ ಉಡುಗೊರೆಗಳು ಮತ್ತು ಸಮಾರಂಭಗಳು ನಿಮ್ಮ ದಿನವನ್ನು ಉತ್ಕೃಷ್ಟ ಮತ್ತು ಶಾಂತಿಯುತವಾಗಿಸುತ್ತದೆ.

ಕರ್ಕಾಟಕ :-

ಗೊಂದಲ ಮತ್ತು ಸಂದಿಗ್ಧತೆಯು ಇಂದು ನಿಮ್ಮ ಮನಸ್ಸಿನಲ್ಲಿ ಕಣ್ಣಾಮುಚ್ಚಾಲೆ ಆಟವಾಡಲಿದೆ. ಆದ್ದರಿಂದ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವುದನ್ನು ತಪ್ಪಿಸಿ ಮತ್ತು ಅವುಗಳನ್ನು ಇನ್ನೊಂದು ದಿನಕ್ಕೆ ಮುಂದೂಡಿ. ನಿಮ್ಮ ನಾಲಗೆಯ ಬಗ್ಗೆ ನಿಯಂತ್ರಣವಿರಿಸಿ ಇಲ್ಲವಾದಲ್ಲಿ ಕುಟುಂಬ ಸದಸ್ಯರೊಂದಿಗೆ ಸಂಘರ್ಷ ಉಂಟಾಗಬಹುದು ಮತ್ತು ಇದು ನಿಮ್ಮನ್ನು ಅಸಮಾಧಾನಗೊಳಿಸಬಹುದು. ವಾಗ್ವಾದಗಳು ಇತರ ಯಾವುದೇ ವಿಚಾರಗಳು ಸ್ಪಷ್ಟಗೊಳ್ಳಲೇಬೇಕು ಮತ್ತು ಹೆಚ್ಚು ಭಿನ್ನಾಭಿಪ್ರಾಯಗಳನ್ನು ತಪ್ಪಿಸಲು ಮುಕ್ತ ಮನಸ್ಸಿನಿಂದ ಮಾತುಕತೆ ನಡೆಸಿ.ಇಂದು ಅನಿರೀಕ್ಷಿತ ಖರ್ಚು ಉಂಟಾಗುವ ಕಾರಣ ಕೈಯಲ್ಲಿ ಹೆಚ್ಚು ಹಣವಿರಲಿ. ಇಂದು ನೀವು ತೊಂದರೆ ಮತ್ತು ಅಪಾಯಗಳನ್ನು ಎದುರಿಸಬೇಕಾಗಿರುವುದರಿಂದ ನಿಮ್ಮ ಆರೋಗ್ಯ, ಸಂಪತ್ತು ಮತ್ತು ಗೌರವದ ಬಗ್ಗೆ ಎಚ್ಚರದಿಂದಿರಿ.

ಸಿಂಹ :-

ಅಸಾಧಾರಣ ಸಿಂಹರಾಶಿಯವರಿದೆ ಇಂದು ಅದೃಷ್ಟ ಹಾಗೂ ಶುಭಪ್ರದ ದಿನವಾಗಲಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಸ್ನೇಹಿತರು ವಿಶೇಷವಾಗಿ ಮಹಿಳಾ ಸ್ನೇಹಿತರು ಖುಷಿಯಿಂದ ಸಹಾಯ ಮಾಡಲಿದ್ದಾರೆ.ಬಿಡುವಿಲ್ಲದ ತುಂಬಾ ದಿನ ಅಥವಾ ವಾರಗಳ ನಂತರ, ವಿಶ್ರಮಿಸಲು ಅವರೊಂದಿಗೆ ಅಥವಾ ಪ್ರೀತಿಪಾತ್ರರೊಂದಿಗೆ ಸುಂದರ ಪ್ರದೇಶಗಳಿಗೆ ಪ್ರವಾಸ ತೆರಳುವುದು ಉತ್ತಮ ಆಲೋಚನೆ. ಲಕ್ಷ್ಮೀದೇವಿಯು ಖಂಡಿತವಾಗಿಯೂ ನಿಮ್ಮನ್ನು ಇಂದು ಹರಸುತ್ತಾಳೆ. ಆದ್ದರಿಂದ ಐಶ್ವರ್ಯ ಪ್ರಾಬಲ್ಯವನ್ನು ಆನಂದಿಸಿ. ಏನೇ ಆದರೂ, ಸಮಯ ಮತ್ತು ಹರಿವು ಯಾರಿಗೂ ಕಾಯುವುದಿಲ್ಲ. ಆದ್ದರಿಂದ ಅಮೂಲ್ಯ ಸಮಯಗಳನ್ನು ಹಾಳುಮಾಡಬೇಡಿ. ನಿಮಗೆ ವ್ಯವಹಾರದಲ್ಲಿ ಮತ್ತು ಹಣಕಾಸು ಲಾಭಉಂಟಾಗಲಿದೆ. ಇದಕ್ಕಿಂತ ಹೆಚ್ಚು ಇನ್ನೇನು ಬೇಕು?ಸಿಕ್ಕ ಅವಕಾಶವನ್ನು ಬಳಸಿಕೊಳ್ಳಿ.

ಕನ್ಯಾ :-

ಅದ್ಭುತ ದಿನವನ್ನು ಹೊಂದಿ. ವೃತ್ತಿಯಲ್ಲಾಗಿರಬಹುದು ಅಥವಾ ವ್ಯವಹಾರದಲ್ಲಿರಬಹುದು. ಅದೃಷ್ಟ ಕನ್ಯಾರಾಶಿಯವರಿಗೆ ಎಲ್ಲಾ ಹಾದಿಯಲ್ಲೂ, ಯಾವುದೇ ಕೆಲಸದಲ್ಲೂ ಯಶಸ್ಸಿನ ಮಳೆಗೆರೆಯಲಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಹೊಸ ಯೋಜನೆಗಳನ್ನು ಪ್ರಾರಂಭಿಸಲು ಇದೊಂದು ಪರಿಪೂರ್ಣ ದಿನ. ಮತ್ತು ವೇತನ ಹೆಚ್ಚಳ ಮತ್ತು ಬಡ್ತಿಯ ಮೂಲಕ ವೃತ್ತಿಯಲ್ಲಿ ಯಶಸ್ಸು ಲಭಿಸಲಿದೆ. ಒಟ್ಟಾರೆಯಾಗಿ ಎಲ್ಲಾ ವಿಚಾರಗಳಲ್ಲೂ ಗ್ರಹಗತಿಗಳು ಉತ್ತಮವಾಗಿವೆ. ವೈಯಕ್ತಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಿಮ್ಮ ತಂದೆಯಿಂದ ಪ್ರಯೋಜನ ಸಿಗಲಿದೆ. ಈ ದಿನ ಮನೆಯಲ್ಲಿ ಸಾಮರಸ್ಯದ ವಾತಾವರಣವಿರುತ್ತದೆ.

ತುಲಾ :-

ವ್ಯವಹಾರದಲ್ಲಿ ಉತ್ತಮ ಪ್ರತಿಫಲ ಬರುವ ಸಾಧ್ಯತೆಯಿರುವುದರಿಂದ ಒಟ್ಟಾರೆಯಾಗಿ ಇಂದು ಉತ್ತಮ ದಿನವಾಗಿರುವ ನಿರೀಕ್ಷೆಯಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಆದರೂ, ಕಾರ್ಯಕ್ಷೇತ್ರದಲ್ಲಿ ನಿಮ್ಮ ಸಹೋದ್ಯೋಗಿಗಳಿಂದ ಯಾವುದೇ ಬೆಂಬಲವನ್ನು ನಿರೀಕ್ಷಿಸಬೇಡಿ. ಧಾರ್ಮಿಕ ಅಥವಾ ದೈವಿಕ ಸಂಬಂಧಿ ಪ್ರಯಾಣ ತೆರಳಲಿದ್ದೀರಿ. ಈ ದಿನದ ಕೆಲವು ಹೊತ್ತಲ್ಲಿ ನೀವು ನಿರುತ್ಸಾಹ ಹಾಗೂ ಆಯಾಸದಿಂದಿರುವಂತೆ ಅನಿಸಬಹುದು.ಸೃಜನಶೀಲ ಚಟುವಟಿಕೆಗಳು ಮತ್ತು ಬೌದ್ಧಿಕ ಚರ್ಚೆಗಳು ನಿಮ್ಮ ಚೈತನ್ಯವನ್ನು ವೃದ್ಧಿಸಲಿವೆ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಮತ್ತು ವೈದ್ಯರ ಭೇಟಿಯನ್ನು ತಪ್ಪಿಸಬೇಡಿ. ವಿದೇಶದಿಂದ ಬರಲಿರುವ ಕೆಲವು ಶುಭಸುದ್ದಿಗಳು ನಿಮ್ಮ ದಿನವನ್ನು ಇನ್ನಷ್ಟು ಸಂತಸಗೊಳಿಸಲಿವೆ. ಅದ್ಭುತ ದಿನವನ್ನು ಹೊಂದಿ.

ವೃಶ್ಚಿಕ :-

ಇಂದು ಎಚ್ಚರಿಕೆಯಿಂದಿರುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ವಿರೋಧಿಗಳನ್ನು ತಪ್ಪಿಸಲು ಉತ್ತಮ ಮತ್ತು ಶಾಂತಿಯುತ ದಿನವನ್ನು ಪ್ರಾರಂಭಿಸಿ. ಹೊಸ ಯೋಜನೆಗಳನ್ನು ಪ್ರಾರಂಭಿಸುವ ಯೋಜನೆಯಿದೆಯೇ?ಗ್ರಹಗತಿಗಳು ಅನುಕೂಲಕರ ಸ್ಥಿತಿಯಲ್ಲಿ ಇಲ್ಲದ ಕಾರಣ ಅದನ್ನು ಕೆಲವು ದಿನಗಳ ಕಾಲ ಮುಂದೂಡಿ. ನಿಮ್ಮ ಸಿಟ್ಟಿನ ಬಗ್ಗೆ ನಿಯಂತ್ರಣವನ್ನು ಹೊಂದಿ. ದುಂದುವೆಚ್ಚವು ಹಣಕಾಸು ಬಿಕ್ಕಟ್ಟನ್ನು ಉಂಟುಮಾಡಬಹುದು. ಆದ್ದರಿಂದ ನಿಮ್ಮ ಹೂಡಿಕೆ ಮತ್ತು ವೆಚ್ಚದಲ್ಲಿ ಹತೋಟಿಯಿರಲಿ. ಒಟ್ಟಾರೆಯಾಗಿ, ವೃಶ್ಚಿಕರಾಶಿಯವರಿಗೆ ಇಂದು ಸಾಮಾನ್ಯ ದಿನವಾಗಿದೆ. ಸರಕಾರಿ ಸಂಬಂಧಿತ ಅನ್ಯಾಯಗಳಿಂದ ದೂರವಿರಿ.

ಧನು :-

ನಿಮ್ಮ ಅದೃಷ್ಟದ ಗ್ರಹಗತಿಯು ಇಂದು ಅದ್ಭುತ ದಿನವನ್ನು ಪ್ರಕಾಶಿಸುತ್ತದೆ. ಈ ಮೂಲಕ ಪ್ರತೀ ವಿಚಾರಗಳಲ್ಲೂ ಹರ್ಷವನ್ನು ನೀಡುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮಲ್ಲಿನ ಹೆಚ್ಚಿನವರಿಗೆ ಮನರಂಜನೆಯು ಜೀವನದ ನಿರ್ಣಾಯಕ ಮತ್ತು ಕೇಂದ್ರಬಿಂದುವಾಗಿದೆ. ಆದ್ದರಿಂದ ನೀವು ಅದರಲ್ಲಿ ತೊಡಗಲು ಇಂದು ಯೋಜನೆ ರೂಪಿಸುತ್ತೀರಿ. ಬಹುಸಂಸ್ಕೃತಿ ಸಂವಾದಗಳು ನಿಮ್ಮನ್ನು ಸಂತೋಷದಲ್ಲಿರಿಸುತ್ತದೆ. ವೃತ್ತಿಕ್ಷೇತ್ರಕ್ಕೆ ಸಂಬಂಧಿಸಿದಂತೆ ಪಾಲುದಾರಿಕೆ ಮತ್ತು ಗುಂಪುಕಾರ್ಯವು ಉತ್ತಮ ಫಲಿತಾಂಶವನ್ನು ನೀಡುತ್ತದೆ. ಇಷ್ಟು ಸಾಕಾಗದಿದ್ದಲ್ಲಿ, ನಿಮ್ಮ ಸ್ನೇಹಿತರ ಭೇಟಿ ಮತ್ತು ಅವರೊಂದಿಗಿನ ತಿರುಗಾಟದ ವೇಳೆ ಉತ್ಸಾಹ ಮತ್ತು ಚೈತನ್ಯ ವರ್ಧನೆಯನ್ನು ನಿರೀಕ್ಷಿಸಬಹುದು. ಬರವಣಿಗೆಯಲ್ಲಿ ತೊಡಗಿಕೊಳ್ಳಿ ಇಂದು ನೀವು ಉತ್ತಮ ಸೃಜಶೀಲತೆಯನ್ನು ಹೊಂದಿರುವಿರಿ. ಅಪರೂಪದ ಕ್ಷಣಗಳನ್ನು ಆನಂದಿಸಿ. ಎಲ್ಲಾ ಯಶಸ್ಸಿನಲ್ಲಿ ಹಾಯಾಗಿರಿ.

ಮಕರ :-

ವ್ಯವಹಾರಕ್ಕೆ ಸಂಬಂಧಿಸಿ ಇಂದು ಲಾಭದಾಯಕ ದಿನ ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ. ಸಂಪೂರ್ಣ ಸಿದ್ಧತೆಯಲ್ಲಿರುವ ಮತ್ತು ಮೊಳಕೆಯಲ್ಲಿರುವ ವಾಣಿಜ್ಯೋದ್ಯಮಿಗಳಿಗೂ ಇಂದು ಉತ್ತಮ ದಿನ. ವೃತ್ತಿಕ್ಷೇತ್ರದಲ್ಲಿ ಎಲ್ಲವೂ ಯೋಜನೆಯಂತೆಯೇ ಸಾಗಿದ ಕಾರಣ, ಸಹೋದ್ಯೋಗಿಗಳ ಬೆಂಬಲ ಮತ್ತು ವೈಯಕ್ತಿಕ ಸಂಬಂಧಗಳು ವೃದ್ಧಿಸುವ ಕಾರಣ ಮಕರ ರಾಶಿಯವರಾದ ನೀವು ಇಂದು ಖುಷಿಭರಿತ ವ್ಯಕ್ತಿಯಾಗಿರುತ್ತೀರಿ. ಹಣಕಾಸು ವಹಿವಾಟುಗಳು ಸರಾಗವಾಗಿಯೇ ಸಾಗಲಿವೆ. ಆದರೂ, ಪ್ರಾರಂಭದಲ್ಲಿ ನೀವು ತಾತ್ಕಾಲಿಕ ತೊಂದರೆಯನ್ನು ಎದುರಿಸಬೇಕಾದೀತು. ಆದರೆ, ನಿಮ್ಮಲ್ಲಿರುವ ವಿವೇಚನಾಶಕ್ತಿಯಿಂದಾಗಿ ನೀವು ಸದ್ಯದಲ್ಲಿಯೇ ಸುರಕ್ಷಿತ ಸ್ಥಿತಿಗೆ ಮರಳುವಿರಿ. ಸದೃಢ ಆರೋಗ್ಯ ಮತ್ತು ಶಾಂತಿಯುತ ಮನೆಯ ವಾತಾವರಣವು ನಿಮ್ಮ ದಿನವನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ.

ಕುಂಭ :-

ನಿಮ್ಮ ಸೃಜನಶೀಲತೆ ಮತ್ತು ಕ್ರಿಯಾತ್ಮಕತೆಯು ಎಲ್ಲೆಡೆ ಹರಡಲು ಸಿದ್ಧವಾಗಿರುವುದರಿಂದ ಮತ್ತು ಮಾನಸಿಕವಾಗಿ ಚಾತುರ್ಯದಿಂದ ಕೂಡಿರುವುದರಿಂದ ಈ ದಿನವು ನಿಮಗೆ ಉತ್ತಮ ದಿನವಾಗಲಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಬೌದ್ಧಿಕ ಸಂವಾದಗಳು ಇಂದು ನಿಮ್ಮನ್ನು ಕ್ರಿಯಾಶೀಲರನ್ನಾಗಿಸುತ್ತದೆ. ನಿಮ್ಮ ಆಲೋಚನೆಗಳನ್ನು ಬರಹ ರೂಪದಲ್ಲಿ ವ್ಯಕ್ತಪಡಿಸುವಿಕೆ ಮತ್ತು ಸೃಜನಶೀಲ ಒಲವಿನಲ್ಲಿ ತೊಡಗಿಕೊಳ್ಳುವಿಕೆಯು ನಿಮ್ಮನ್ನು ದೈನಂದಿನ ಸಾಮಾನ್ಯ ಕಾರ್ಯಜೀವನದಿಂದ ವಿಮುಕ್ತಿಗೊಳಿಸುತ್ತದೆ. ಅನಿರೀಕ್ಷಿತ ವೆಚ್ಚದ ಸಂಭಾವ್ಯತೆಯಿರುವುದಿರಿಂದ ಕಿಸೆಯಲ್ಲಿ ಹಣವಿರಲಿ. ಅಜೀರ್ಣ ಮತ್ತು ವಾಯುಬಾಧೆಯಿಂದ ದಿನವಿಡೀ ನಿಮ್ಮ ಉದರವನ್ನು ಕಾಡಲಿದೆ. ಔಷಧಿ ಸೇವನೆಯಿಂದ ಅಗತ್ಯ ನೆಮ್ಮದಿಯನ್ನು ಪಡೆಯಬಹುದು. ಎಚ್ಚರಿಕೆಯಿಂದಿರಿ.

ಮೀನ :-

ಎಂದಿಗಿಂತ ನೀವು ನಿರಾಸಕ್ತಿ ಹಾಗೂ ಕಡಿಮೆ ಉತ್ಸಾಹವನ್ನು ಹೊಂದಿರುತ್ತೀರಿ. ನಿಮ್ಮ ಮಾನಸಿಕ ಹಾಗೂ ದೈಹಿಕ ಸ್ಥಿತಿಯು ಉತ್ತಮವಾಗಿರುವುದಿಲ್ಲ ಆದ್ದರಿಂದ ನೀವು ಚೈತನ್ಯ ಮತ್ತು ಉತ್ಸಾಹದ ಕೊರತೆಯನ್ನು ಎದುರಿಸುತ್ತೀರಿ. ಕೆಲವು ಅಹಿತಕ ಘಟನೆಗಳು ನಿಮ್ಮನ್ನು ನಿರಾಶೆಗೊಳಿಸಲಿವೆ. ಶಾಂತರಾಗಿರಿ. ನಿಮ್ಮ ಕುಟುಂಬ ಸದಸ್ಯರೊಂದಿಗಿನ ವಾಗ್ವಾದಗಳು ಅಥವಾ ಶೀತಲ ಸಮರಗಳು ಉತ್ತಮ ಆಲೋಚನೆಯಲ್ಲ. ನೀವು ನಷ್ಟದಲ್ಲಿ ಬೀಳುವ ಸಾಧ್ಯತೆಯಿರುವುದರಿಂದ ನಿಮ್ಮ ಖಾತೆ ಮತ್ತು ವೃತ್ತಿಯಲ್ಲಿನ ನಡತೆಯ ಬಗ್ಗೆ ಎಚ್ಚರದಿಂದಿರಿ. ಇಲ್ಲವಾದಲ್ಲಿ ಇದು ನಿಮ್ಮ ಚಿಂತೆಗೆ ಕಾರಣವಾಗಬಹುದು. ಈ ಬೇಸರದ ದಿನವನ್ನು ಉತ್ತಮ ದಿನವನ್ನಾಗಿಸಬೇಕೇ? ಸಂಗೀತ ಕೇಳಿ ಗೆಲುವಿನಿಂದಿರಿ.

WhatsApp Group Join Now

Spread the love

Leave a Reply