ಮೇಷ :-
ಇಂದು ನಿಮ್ಮ ಗ್ರಹಗತಿಗಳು ಮಿನುಗುತ್ತಿರುತ್ತವೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಮನಸ್ಥಿತಿಯು ಉಲ್ಲಾಸದಿಂದಿರುತ್ತದೆ ಮತ್ತು ಇಂದು ನೀವು ನಿಮ್ಮ ಆಪ್ತರೊಂದಿಗೆ ಸಾಮಾಜಿಕ ಸಮಾರಂಭಗಳಲ್ಲಿ ಪಾಲ್ಗೊಳ್ಳುವಿರಿ. ಧನಲಾಭದ ಯೋಗವೂ ಇದೆ. ನೀವು ಹೊಸ ಯೋಜನೆಗಳನ್ನು ಪ್ರಾರಂಭಿಸಲಿರುವುದರಿಂದ ಅತೀ ಸಂಭ್ರಮ ಮತ್ತು ಉತ್ಸಾಹದಿಂದಿರುತ್ತೀರಿ.
ಏನೇ ಆದರೂ, ಅತೀ ಉತ್ಸಾಹದಿಂದಾಗಿ ನೀವು ಕೈಗೊಳ್ಳುವ ನಿಮ್ಮ ಅನುಕೂಲಕ್ಕೆ ತಕ್ಕಂತೆ ಸಾಗುವುದಿಲ್ಲ. ಆದ್ದರಿಂದ ಎಚ್ಚರಿಕೆಯಿಂದಿರಿ. ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯದಿಂದಿರಲು ನೀವು ಕೈಗೊಳ್ಳುವ ಕ್ರಮಗಳು ನಿಮ್ಮ ದಿನವನ್ನು ಇನ್ನಷ್ಟು ಶಾಂತಿಯಿಂದಿರಿಸಬಹುದು.
ವೃಷಭ :-
ಇಂದು ಆತಂಕ ನಿಮ್ಮ ಸುತ್ತಲೂ ತುಂಬಿರುತ್ತದೆ ಮತ್ತು ಇದು ಮಾನಸಿಕ ಸ್ಥಿರತೆಗೆ ಕೆಡುಕನ್ನುಂಟುಮಾಡಬಹುದು ಎಂಬುದಾಗಿ ಗಣೇಶ ಹೇಳುತ್ತಾರೆ. ಕುಟುಂಬ ಸದಸ್ಯರೊಂದಿಗಿನ ಸಂಘರ್ಷವು ಮನೆಯಲ್ಲಿನ ಆರೋಗ್ಯಕರ ವಾತಾವರಣವನ್ನು ಕದಡಬಹುದು. ಇದೇ ಸಮಯಕ್ಕೆ, ನಿಮ್ಮ ಕಠಿಣ ಪರಿಶ್ರಮವು ಫಲಭರಿತ ಫಲಿತಾಂಶವನ್ನು ನೀಡುವುದಿಲ್ಲ ಇದು ನಿಮ್ಮ ಹಣಕಾಸು ಬಿಕ್ಕಟ್ಟನ್ನು ಇನ್ನಷ್ಟು ವರ್ಧಿಸಬಹುದು. ದಿನದಲ್ಲಿ ಇನ್ನಷ್ಟು ಅಡೆತಡೆಗಳನ್ನು ತಪ್ಪಿಸಲು, ವಿವೇಚನೆಯಿಂದ ಯೋಚಿಸಿ ಕಾರ್ಯನಿರ್ವಹಿಸುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ.
ಮಿಥುನ :-
ಉದ್ಯಮಿಗಳಿಗೆ ಇಂದು ಲಾಭದಾಯಕ ದಿನ ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ. ಉತ್ತಮ ವ್ಯವಹಾರ ಮತ್ತು ಆದಾಯದ ಜೊತೆಗೆ, ನಿಮ್ಮ ಸ್ನೇಹಿತರಿಂದ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಯಿದೆ. ವೃತ್ತಿಕ್ಷೇತ್ರದಲ್ಲಿ, ನಿಮ್ಮ ಮೇಲಾಧಿಕಾರಿಗಳು ಅರ್ಹ ಎಂದು ಪರಿಗಣಿಸಿ ಬಡ್ತಿ ನೀಡುವಲ್ಲಿ ನೀವು ನಂತರದ ಅದೃಷ್ಟ ವ್ಯಕ್ತಿಯಾಗಿರಬಹುದು. ವಿವಾಹಕ್ಕಾಗಿ ಸಿದ್ಧತೆ ನಡೆಸುತ್ತಿರುವ ಅವಿವಾಹಿತರಿಗೆ ಕಂಕಣ ಬಲ ಕೂಡಿ ಬರುವ ಯೋಗವಿದೆ. ನಿಮ್ಮ ಪತಿ ಮತ್ತು ಮಕ್ಕಳು ನಿಮಗೆ ಶುಭಸುದ್ದಿ ನೀಡುವ ಸಾಧ್ಯತೆಯಿದೆ..
ಕರ್ಕಾಟಕ :-
ಫಲಭರಿತ ದಿನವು ಕರ್ಕಾಟಕ ರಾಶಿಯವರಿಗೆ ಕಾದಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ವೃತ್ತಿನಿರತರು ಮತ್ತು ಉದ್ಯಮಿಗಳು ಕ್ರಮವಾಗಿ ಬಡ್ತಿ ಹಾಗೂ ಉತ್ತಮ ವ್ಯವಹಾರವನ್ನು ಪಡೆಯುವ ಸಾಧ್ಯತೆಯಿದೆ. ಮನೆಯ ಸೌಂದರ್ಯ ಹೆಚ್ಚಿಸುವ ಕಾರ್ಯದಲ್ಲಿ ನೀವು ಕ್ರಿಯಾಶೀಲರಾಗಿರಬಹುದು ಮತ್ತು ಇದು ನಿಮ್ಮ ಮನೆಯಲ್ಲಿನ ಸಾಮರಸ್ಯದ ವಾತಾವರಣವನ್ನು ಇನ್ನಷ್ಟು ಹೆಚ್ಚಿಸುತ್ತದೆ. ನಿಮ್ಮ ತಾಯಿಯಿಂದ ಸಹಾಯ ಸಿಗುವ ಕಾರಣ ನೀವು ಹೆಚ್ಚು ಉತ್ಸಾಹ ಮತ್ತು ಲವಲವಿಕೆಯಿಂದ ಕೂಡಿರುವಿರಿ. ಇಂದು ಧನಲಾಭದ ಯೋಗವಿದೆ..
ಸಿಂಹ :-
ಆಲಸ್ಯ ಮತ್ತು ನಿರುತ್ಸಾಹವು ಇಂದು ನಿಮ್ಮನ್ನು ಅಧೀನರಾಗಿಸಬಹುದು. ಮುಂಗೋಪಿ ಸಿಂಹರಾಶಿಯವರಾದ ನೀವು ಇಂದು ದಿನಪೂರ್ತಿ ಸಿಡುಕಿನಿಂದ ಕೂಡಿರುವುದರಿಂದ ನಿಮ್ಮ ಸಿಟ್ಟಿನ ಮೇಲೆ ನಿಯಂತ್ರಣವಿರಿಸಿ. ಬಹುಶಃ ಚಿಂತೆ ಮತ್ತು ತೊಂದರೆಯನ್ನುಂಟುಮಾಡುವ ಪರಿಸ್ಥಿತಿಗಳಿಂದ ದೂರವಿರಿ ಎಂಬುದಾಗಿ ಗಣೇಶ ನಿಮಗೆ ಇದಕ್ಕಾಗಿಯೇ ಸಲಹೆ ನೀಡಬಹುದು. ಯಶಸ್ಸನ್ನು ಸಾಧಿಸಲು ನೀವು ಸಾಕಷ್ಟು ಶ್ರಮಪಡಬೇಕಾಗುತ್ತದೆ. ಮಿತಿಮೀರಿದ ಆಹಾರಸೇವನೆಯನ್ನು ತಪ್ಪಿಸಿ. ಇದು ಉದರ ಸಂಬಂಧಿ ತೊಂದರೆಯನ್ನು ಉಂಟುಮಾಡಬಹುದು. ಸಂಕ್ಷಿಪ್ತವಾಗಿ, ಮುನ್ನೆಚ್ಚರಿಕೆ ವಹಿಸಿ.
ಕನ್ಯಾ :-
ಅಹಿತಕರ ದಿನವು ನಿಮಗಾಗಿ ಕಾದಿದೆ ಎಂಬುದಾಗಿ ನಿಮ್ಮ ಗ್ರಹಗತಿಗಳು ಸೂಚಿಸುತ್ತವೆ ಆದ್ದರಿಂದ, ಶಾಂತಿ ಮತ್ತು ಸಮಾಧಾನ ನಿಮ್ಮ ಚಿಂತೆಯನ್ನು ಪರಿಹರಿಸುತ್ತದೆ. ನಿಮ್ಮ ಸಿಡಿಮಿಡಿಯು ನಿಮ್ಮ ಆರೋಗ್ಯ ಮತ್ತು ವಿಶೇಷವಾಗಿ ಆಹಾರ ವಿಧಾನದಲ್ಲಿ ತೊಂದರೆಯನ್ನುಂಟುಮಾಡುತ್ತದೆ. ಆದ್ದರಿಂದ ಎಚ್ಚರಿಕೆಯಿಂದಿರುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ಜಾಗರೂಕರಾಗಿರಿ, ಅನೈತಿಕ ಮತ್ತು ನ್ಯಾಯಸಮ್ಮತವಲ್ಲದ ಚಟುವಟಿಕೆಗಳಿಂದ ನೀವು ಕಷ್ಟಕರ ಪರಿಸ್ಥಿತಿಯಲ್ಲಿ ಬೀಳಬಹುದು. ಹೆಚ್ಚು ಖರ್ಚುವೆಚ್ಚಗಳಾಗುವ ಸಾಧ್ಯತೆಯಿರುವುದರಿಂದ ನಿಮ್ಮ ಹಣದ ಲೆಕ್ಕಾಚಾರದ ಮೇಲೆ ಗಮನವಿರಲಿ.
ತುಲಾ :-
ತುಲಾ ರಾಶಿಯವರಿಗೆ ಮತ್ತೊಂದು ಒಳ್ಳೆಯ ದಿನ ಕಾದಿದೆ. ಸಾಮಾಜಿಕ ಸಮಾರಂಭಗಳತ್ತ ಗಮನಹರಿಸುವುದರಿಂದ ನಿಮ್ಮ ಮನಸ್ಥಿತಿಯು ಉತ್ಸಾಹ ಮತ್ತು ಉಲ್ಲಾಸದಿಂದಿರುತ್ತದೆ. ನಿಮ್ಮ ಕುಟುಂಬದೊಂದಿಗೆ ಸಾಮಾಜಿಕ ಸಮಾರಂಭಗಳಲ್ಲಿ ಭಾಗವಹಿಸುವಿರಿ ಮತ್ತು ತಿರುಗಾಟಕ್ಕೆ ತೆರಳುವಿರಿ. ಗೌರವ ಮತ್ತು ಕೀರ್ತಿ ಸಿಗಲಿದೆ. ಉದ್ಯಮಿಗಳು ತಮ್ಮ ವ್ಯವಹಾರದಲ್ಲಿ ವೃದ್ಧಿಯನ್ನು ಕಾಣಬಹುದು. ಕೇಕ್ ಮೇಲಿನ ಚೆರ್ರಿಯಂತೆ. ಅನಿರೀಕ್ಷಿತ ಧನಲಾಭದಿಂದ ನೀವು ಶ್ರೀಮಂತರಾಗಬಹುದು.ನಿಜಕ್ಕೂ ವಿಶೇಷ ದಿನವಾಗಿದೆ.
ವೃಶ್ಚಿಕ :-
ವೃಶ್ಚಿಕ ರಾಶಿಯವರಿಗೆ ಹಿತಕರ ಮತ್ತು ಹರ್ಷದಾಯಕ ದಿನವು ಕಾದಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಇಂದು ಧನಾತ್ಮಕವಾಗಿರುತ ಜೊತೆಗೆ, ಇಂದು ನೀವು ಉತ್ಸಾಹದಿಂದಿರುತ್ತೀರಿ ಮತ್ತು ನಿಮ್ಮ ಕುಟುಂಬ ಸದಸ್ಯರೊಂದಿಗೆ ಉತ್ತಮ ರೀತಿಯಲ್ಲಿ ಕಳೆಯುತ್ತೀರಿ. ನಿಮ್ಮ ತಾಯಿಯ ಕಡೆಯಿಂದ ಬರುವ ಶುಭ ಸುದ್ದಿಯು ನಿಮ್ಮ ಸಂತೋಷವನ್ನು ಇನ್ನಷ್ಟು ಹೆಚ್ಚಿಸಬಹುದು. ಸಹಕಾರಿ ಮತ್ತು ಬೆಂಬಲ ತೋರುವ ಸಹೋದ್ಯೋಗಿಗಳು ನಿಮ್ಮ ವೃತ್ತಿಯಲ್ಲಿನ ವಾತಾವರಣವನ್ನು ನೆಮ್ಮದಿಯಲ್ಲಿರಿಸಬಹುದು. ಅಪೂರ್ಣಗೊಂಡಿರುವ ಕಾರ್ಯಗಳು ಇಂದು ಪೂರ್ಣಗೊಳ್ಳುತ್ತವೆ. ಅಲ್ಲದೆ, ಧನಲಾಭದ ಯೋಗವೂ ಇದೆ..
ಧನು :-
ಇದು ನಿಮ್ಮ ಜೀವನದಲ್ಲಿನ ಇನ್ನೊಂದು ದಿನ ಅಷ್ಟೇ ಎಂಬುದಾಗಿ ಗಣೇಶ ಹೇಳುತ್ತಾರೆ. ಅಜೀರ್ಣ ತೊಂದರೆಯು ನಿಮಗೆ ಬಾಧಿಸುವ ಸಾಧ್ಯತೆಯಿರುವುದರಿಂದ ಔಷಧವನ್ನು ಕೈಯಲ್ಲೇ ಇರಿಸಿಕೊಳ್ಳಿ. ನಿಮ್ಮ ಕಾರ್ಯವು ನಿರೀಕ್ಷಿತ ಫಲಿತಾಂಶವನ್ನು ನೀಡದೇ ಇರುವುದರಿಂದ ನೀವು ನಿರಾಶೆಗೊಳ್ಳಬಹುದು. ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ನಿಮ್ಮ ಮಕ್ಕಳ ಚಿಂತೆಯು ನಿಮ್ಮನ್ನು ದಿನವಿಡೀ ಕಾಡಬಹುದು. ಆತಂಕ ಮತ್ತು ನಿರಾಶೆಯಿಂದ ನಿಮ್ಮ ಮನಸ್ಸನ್ನು ಬೇರೆಡೆ ಕೊಂಡೊಯ್ಯಲು ಸಾಹಿತ್ಯ ಮತ್ತು ಇತರ ಸೃಜನಶೀಲ ಚಟುವಟಿಕೆಗಳಲ್ಲಿ ನಿಮ್ಮ ಆಸಕ್ತಿಯನ್ನು ನೀವು ವೃದ್ಧಿಗೊಳಿಸಬಹುದು. ಸದ್ಯದ ಮಟ್ಟಿಗೆ ನಿಮ್ಮ ಪ್ರಯಾಣದ ಯೋಜನೆಗಳನ್ನು ಮುಂದೂಡುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ.
ಮಕರ :-
ಈ ದಿನವು ನಿಮಗೆ ವಿರೋಧಿಗಳನ್ನು ಆಹ್ವಾನಿಸಬಹುದು ಎಂಬುದಾಗಿ ಗಣೇಶ ಹೇಳುತ್ತಾರೆ. ಸಾಕಷ್ಟು ನಿದ್ರೆಯ ಕೊರತೆಯು ನಿಮ್ಮನ್ನು ಆಲಸ್ಯ ಮತ್ತು ನಿತ್ರಾಣರನ್ನಾಗಿಸಬಹುದು. ಕುಟುಂಬ ಸದಸ್ಯರೊಂದಿಗಿನ ಅರ್ಥರಹಿತ ವಾಗ್ವಾದಗಳು ಸಂಘರ್ಷ ಮತ್ತು ನೋವಿಗೆ ಕಾರಣವಾಗುವುದರಿಂದ ಮತ್ತು ಇದು ನಿಮ್ಮನ್ನು ದಿನಪೂರ್ತಿ ಸಿಡುಕಿನಿಂದಿರಿಸುವ ಸಾಧ್ಯತೆಯಿರುವುದರಿಂದ ಅವುಗಳಿಂದ ದೂರವಿರಿ. ಸೂಕ್ಷ್ಮ ಮನಸ್ಸಿನ ಮಕರ ರಾಶಿಯವರೆ ಜಾಗರೂಕರಾಗಿರಿ. ಅಪಮಾನ ಉಂಟಾಗಬಹುದು ಅಥವಾ ನಿಮ್ಮ ಘನತೆಗೆ ಕುತ್ತು ಬರಬಹುದು.
ಕುಂಭ :-
ಉಲ್ಲಾಸ ಮತ್ತು ನಿಶ್ಚಿಂತೆಯ ದಿನ ನಿಮ್ಮದಾಗಲಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಚಿಂತೆಯ ಕಾರ್ಮೋಡವನ್ನು ನೀವು ತೊರೆದಿರುವುದರಿಂದ ಇಂದು ನೀವು ಸಂತೋಷ ಹಾಗೂ ಚೈತನ್ಯದಿಂದ ಕೂಡಿರುತ್ತೀರಿ. ಸದೃಢ ಆರೋಗ್ಯ ಮತ್ತು ಸಂತೋಷ ನಿಮ್ಮಕಡೆಗಿರುತ್ತದೆ ಮತ್ತು ಒಡಹುಟ್ಟಿದವರ ಜೊತೆ ಹೊಂದಾಣಿಕೆಯಿಂದಿರುತ್ತೀರಿ ಹಾಗೂ ಮನೆಯಲ್ಲಿ ಸಾಮರಸ್ಯದ ವಾತಾವರಣವಿರುತ್ತದೆ. ಈ ದಿನವನ್ನು ಇನ್ನಷ್ಟು ಖುಷಿಯಾಗಿಸಲು ಸಣ್ಣ ಪ್ರವಾಸವನ್ನು ಆಯೋಜಿಸುವುದು ಉತ್ತಮ ಆಲೋಚನೆ.ಇದು ನಿಮ್ಮ ದಿನ.
ಮೀನ :-
ಇಂದು ಸಾಮಾನ್ಯ ದಿನವಾಗಿದೆ ಆದರೆ, ಜಾಗರೂಕರಾಗಿರುವುದರಿಂದ ಈ ದಿನವನ್ನು ಇನ್ನಷ್ಟು ಉತ್ತಮವಾಗಿಸಬಹುದು ಎಂಬುದಾಗಿ ಗಣೇಶ ಹೇಳುತ್ತಾರೆ. ಯಾವುದೇ ಚಿಂತೆಯಲ್ಲಿ ನಿಮ್ಮನ್ನೇ ನೀವು ಮುಳುಗಿಸುವ ಬದಲು ನಿಮಗಿಷ್ಟವಾದ ಯಾವುದೇ ಕಾರ್ಯದಲ್ಲಿ ತೊಡಗಿಕೊಳ್ಳಿ. ಕೋಪ ಮತ್ತು ಕಟು ಮಾತುಗಳಿಂದ ನಿಮ್ಮ ಸಿಡುಕನ್ನು ಇನ್ನಷ್ಟು ಹೊರಹಾರಬಹುದು. ನಿಮ್ಮ ಆರೋಗ್ಯದಲ್ಲಿ ತೊಂದರೆ ಉಂಟಾಗುವ ಸಂಭವವಿರುವುದರಿಂದ ಆಹಾರ ಕ್ರಮಗಳ ಬಗ್ಗೆ ಗಮನಹರಿಸಿ..
Horoscope Today : 26 ಜನವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
WhatsApp Group
Join Now