Horoscope Today : 25 ಫೆಬ್ರವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

Spread the love

ಮೇಷ :-

ನಿಮ್ಮ ಬಗ್ಗೆಯೇ ಹೆಚ್ಚು ಕಾಳಜಿವಹಿಸುವ ಬದಲು ಇತರರ ಬಗ್ಗೆ ಆಲೋಚಿಸುವಂತೆ ಗಣೇಶ ನಿಮಗೆ ಒತ್ತಾಯಿಸುತ್ತಾರೆ. ನಿಮ್ಮ ಗೃಹಸಂಬಂಧಿ ಕರ್ತವ್ಯಗಳನ್ನು ಪೂರ್ತಿಮಾಡುವಾಗ ಜಾಣ್ಮೆಯಿಂದಿರಿ ಮತ್ತು ರಚನಾತ್ಮಕವಾಗಿರಿ. ಇತರರೊಂದಿಗೆ ಸಭ್ಯತೆಯಿಂದ ವರ್ತಿಸಿ. ಭಿನ್ನಾಭಿಪ್ರಾಯ ಮತ್ತು ವಿವಾದಗಳಿಗೆ ಮಹತ್ವ ನೀಡಬೇಡಿ.

ಸಮಯಕ್ಕೆ ಸರಿಯಾದ ಆಹಾರ ಸೇವನೆಯು ಕಷ್ಟಕರವಾಗಬಹುದು. ನಿಮ್ಮ ಖರ್ಚುವೆಚ್ಚಗಳು ನಿಮ್ಮ ಬಜೆಟ್‌ನ ಮಿತಿಯೊಳಗೆ ಇರುವಂತೆ ನೋಡಿಕೊಳ್ಳಿ. ಅನಗತ್ಯ ಖರ್ಚುಗಳನ್ನು ತಪ್ಪಿಸಿ. ಹಣಕಾಸಿನ ಎಲ್ಲಾ ವ್ಯವಹಾರಗಳಲ್ಲೂ ಕಣ್ಣಿಟ್ಟಿರಿ.

ವೃಷಭ :-

ವಿಸ್ತೃತ ಯೋಜನೆಗಳನ್ನು ರೂಪಿಸಲು ಹಣಕಾಸು ಜವಾಬ್ಧಾರಿ ಮತ್ತು ಹೊಣೆಯಲ್ಲಿ ನೀವು ನಿಮ್ಮನ್ನು ತೊಡಗಿಸಿಕೊಳ್ಳುದನ್ನು ಮತ್ತು ಇದರ ಕುರಿತಾಗಿಯೇ ಕಾರ್ಯ ನಿಶ್ಚಿತಗೊಳಿಸುವುದನ್ನು ಗಣೇಶ ಕಾಣುತ್ತಾರೆ. ಹಣಕಾಸು ಲಾಭ ಉಂಟಾಗಲಿದೆ. ನೀವು ಪೂರ್ಣ ಉತ್ಸಾಹ ಹಾಗೂ ಲವಲವಿಕೆಯಿಂದಿರುತ್ತೀರಿ. ಶಾಂತ ಹಾಗೂ ಸಮಾಧಾನದಿಂದಿರುವುದರಿಂದ ನೀವು ದಿನದ ಸವಾಲುಗಳನ್ನು ಸುಲಭವಾಗಿ ಎದುರಿಸಬಹುದು. ಆಡಂಬರದ ವಸ್ತುಗಳು, ಸುಗಂಧದ್ರವ್ಯಗಳು, ಪ್ರಸಾದನಗಳು ಮತ್ತು ಇತರ ಮನರಂಜನಾ ಹಾಗೂ ವಿನೋದಕ್ಕಾಗಿ ಖರ್ಚುಮಾಡಲಿದ್ದೀರಿ. ಕುಟುಂಬದ ಸ್ನೇಹಕೂಟವು ನಿಮ್ಮ ಹರ್ಷ ಮತ್ತು ನೆಮ್ಮದಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಮಿಥುನ :-

ನಿಮ್ಮ ಮಾತುಗಳು ಹಾಗೂ ಕ್ರಿಯೆಗಳು ಭಿನ್ನಾಭಿಪ್ರಾಯಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಅತ್ಯಂತ ಜಾಗ್ರತೆಯಿಂದಿರಿ ಎಂಬುದಾಗಿ ಗಣೇಶ ಒತ್ತಾಯಿಸುತ್ತಾರೆ. ನಿಮ್ಮ ಉದ್ವೇಗ ಮತ್ತು ಕೋಪೋದ್ರೇಕವನ್ನು ನಿಯಂತ್ರಣದಲ್ಲಿರಿಸಿ. ಆರೋಗ್ಯ ಸಮಸ್ಯೆಗಳು ತಲೆದೋರುವ ಸಂಭವವಿದೆ. ವಿಶೇಷವಾಗಿ ಕಣ್ಣಿನ ತೊಂದರೆ ಉಂಟಾಗಬಹುದು. ಅನಿರೀಕ್ಷಿತ ಘಟನೆಗಳಿಗೆ ಸಿದ್ಧರಾಗಿರಿ. ಕುಟುಂಬ ಸದಸ್ಯರೊಂದಿಗಿನ ನಿಮ್ಮ ಅವಧಿಯು ಕೆಟ್ಟದಾಗಿರಬಹುದು.ಖರ್ಚು ಆದಾಯಕ್ಕಿಂತ ಹೆಚ್ಚಾಗಲಿದೆ. ಪ್ರಾರ್ಥನೆ ಮತ್ತು ಧ್ಯಾನದಿಂದ ಪ್ರಯೋಜನ ಸಿಗಲಿದೆ.

ಕರ್ಕಾಟಕ :-

ಅನುಕೂಲಕರ, ಫಲದಾಯಕ ದಿನವು ನಿಮಗಾಗಿ ಕಾದಿದೆ. ವೃತ್ತಿನಿರತರಿಗೆ ಮತ್ತು ಉದ್ಯಮಿಗಳಿಗೆ ಲಾಭ ಮತ್ತು ಪ್ರಯೋಜನ ಉಂಟಾಗುವ ಭರವಸೆಯಿದೆ. ನೀವು ಆನಂದಭರಿತ ಕ್ಷಣಗಳನ್ನು ನಿಮ್ಮ ಸ್ನೇಹಿತರು ಹಾಗೂ ಜೊತೆಗಾರರೊಂದಿಗೆ ಹಂಚುಕೊಳ್ಳುವಿರಿ. ನೀವು ಅವಿವಾಹಿತರಾಗಿದ್ದಲ್ಲಿ, ವಿವಾಹ ಯೋಗವಿದೆ. ಆದಾಯ ಮೂಲಗಳು ಹೆಚ್ಚಳಗೊಳ್ಳಬಹುದು. ಅನಿರೀಕ್ಷಿತ ಫಲಪ್ರಾಪ್ತಿಯ ಯೋಗವನ್ನು ನಿರಾಕರಿಸುವಂತಿಲ್ಲ. ಹಣಕಾಸು ಯೋಜನೆಗಳು ಮತ್ತು ಸಿದ್ಧತೆಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತದೆ. ತಿರುಗಾಟಕ್ಕೆ ಅಥವಾ ವಿನೋದ ಕೂಟಕ್ಕೆ ತೆರಳುವ ಸಾಧ್ಯತೆಯಿದೆ.

ಸಿಂಹ :-

ನಿಮ್ಮ ವೃತ್ತಿ ಪ್ರಭಾವ ಮತ್ತು ಸ್ಥಿತಿಯಲ್ಲಿ ಅಭಿವೃದ್ಧಿ ಉಂಟಾಗಲಿದೆ ಎಂಬುದಾಗಿ ಗಣೇಶ ಭರವಸೆ ನೀಡುತ್ತಾರೆ. ನಿಮ್ಮ ಸಾಮರ್ಥ್ಯ ಮತ್ತು ವ್ಯವಹಾರ ಕೌಶಲ್ಯವು ಶ್ಲಾಘನೆಗೊಳಪಡುತ್ತದೆ ಮತ್ತು ಪುರಸ್ಕರಿಸಲ್ಪಡುತ್ತದೆ. ಅತ್ಯುನ್ನತ ಆತ್ಮವಿಶ್ವಾಸದೊಂದಿಗೆ ನೀವು ವ್ಯವಹಾರಗಳನ್ನು ನಿರ್ವಹಿಸುತ್ತೀರಿ ಮತ್ತು ನಿಭಾಯಿಸುತ್ತೀರಿ. ನಿಮ್ಮ ತಂದೆಯು ವಿಶೇಷವಾಗಿ ಆರೋಗ್ಯದಿಂದಿರುತ್ತಾರೆ. ಅನುಕೂಲತೆಗಳು ಮತ್ತು ಪ್ರಯೋಜನಗಳು ಉಂಟಾಗಲಿವೆ. ಸ್ಥಿರ ಹಾಗೂ ಚರ ಆಸ್ತಿಗಳಿಗೆ ಸಂಬಂಧಿಸಿದ ವಿವಾದಗಳನ್ನು ಕೈಗೆತ್ತಿಕೊಳ್ಳಲು ಇದು ಸೂಕ್ತ ಸಮಯ.

ಕನ್ಯಾ :-

ಅಸಮಧಾನ ಮತ್ತು ನಿರಾಶೆಗಳಿಗೆ ಇಂದು ಸಿದ್ಧರಾಗಿರಿ ಎಂಬುದಾಗಿ ಗಣೇಶ ಹೇಳುತ್ತಾರೆ. ಚಿಂತೆ ಹಾಗೂ ಉದ್ವೇಗದಿಂದ ನಿಮ್ಮ ಮನಸ್ಸನ್ನು ಕಾಡಬಹುದು. ಕೆಲಸಕ್ಕೆ ಸಂಬಂಧಪಟ್ಟಂತೆ ನೀವು ನಿರಾಸಕ್ತಿ, ದಣಿವು ಮತ್ತು ಆಲಸ್ಯ ಭಾವನೆಯನ್ನು ಹೊಂದಬಹುದು.ತೀವ್ರ ಸ್ಪರ್ಧೆ ಮತ್ತು ಪ್ರತಿದ್ವಂದ್ವಗಳು ಉಂಟಾಗಲಿವೆ. ನಿಮ್ಮ ರಕ್ಷಣೆಯನ್ನು ಮಾಡಿಕೊಳ್ಳಿ.

ತುಲಾ :-

ನಿಮ್ಮ ಇಂದಿನ ಎಲ್ಲಾ ಮಾತುಕತೆಯನ್ನು ಸರಿಯಾಗಿ ಪರಿಶೀಲಿಸುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ನೀವು ಮಾತುಕತೆ ನಡೆಸುವ ಜನರು ಅಧಿಕಾರದಿಂದ ಕೂಡಿರಬಹುದು ಅಥವಾ ಅವರ ವರ್ತನೆಯನ್ನು ನಿಮಗೆ ಸಹಿಸಿಕೊಳ್ಳಲು ಸಾಧ್ಯವಾಗದೇ ಇರಬಹುದು. ಇದು ನಿಮ್ಮ ಸಿಡುಕಿಗೆ ಕಾರಣವಾಗಬಹುದು. ನಿಮ್ಮ ಕ್ಷಣಿಕ ಸಿಟ್ಟನ್ನು ನಿಯಂತ್ರಿಸಿ. ಕ್ರಾಂತಿಕಾರಿ ಆಲೋಚನೆಗಳಿಂದ ದೂರವಿರಿ. ಹಲವಾರು ತಪ್ಪುಗಳ ಪರಾಮರ್ಷೆಯಿಂದ ಹೆಚ್ಚು ಪ್ರೌಢ ಹಾಗೂ ಪ್ರಜ್ಞಾವಂತರಾಗುವಿರಿ. ನೀವು ಹೊಸ ವ್ಯಕ್ತಿಗಳನ್ನು ಭೇಟಿ ಮಾಡಲಿದ್ದು, ಮೊದಲ ನೋಟದಲ್ಲೇ ನೀವು ಅವರಿಗೆ ಆಕರ್ಷಿತರಾಗಬಹುದು. ಎಚ್ಚರದಿಂದಿರಿ. ಯಾರನ್ನೂ ಅವರ ಹೊರನೋಟದಿಂದ ಅಳೆಯಬೇಡಿ. ಹೊಸ ಸಂಬಂಧಗಳು ವಿಶ್ವಾಸಾರ್ಹವಲ್ಲ. ನಿಮ್ಮ ನೈತಿಕತೆ ಮತ್ತು ಮೌಲ್ಯಗಳಿಗೆ ವಿರುದ್ಧವಾದ ಕಾರ್ಯವನ್ನು ಮಾಡುವಂತೆ ಅವರು ನಿಮ್ಮನ್ನು ಪ್ರಚೋದಿಸಬಹುದು.ನಿಮ್ಮ ಧಾರ್ಮಿಕತೆಯಲ್ಲಿ ನೆಮ್ಮದಿಯನ್ನು ಕಂಡುಕೊಳ್ಳಿ ಮತ್ತು ಹಣ ಉಳಿತಾಯ ಮಾಡಿ.

ವೃಶ್ಚಿಕ :-

ಇಂದಿನ ದಿನವು ಸ್ವಲ್ಪ ಮಟ್ಟಿಗೆ ಎಂದಿನಂತಿರುವುದಿಲ್ಲ ಎಂಬುದಾಗಿ ಗಣೇಶ ಹೇಳುತ್ತಾರೆ. ಗೊಂದಲದ ರೀತಿಯ ಘಟನೆಗಳಲ್ಲೂ ನಿಮಗೆ ನಿಮ್ಮಲ್ಲಿ ಸ್ವಲ್ಪ ಸಮಯ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ವಿನೋದ ಕೂಟ, ಪ್ರವಾಸ ಮತ್ತು ಅದ್ಧೂರಿ ಭೋಜನದೊಂದಿಗೆ ನಿಮ್ಮ ಸ್ನೇಹಿತರ ಸಂಗಡ ನೀವು ಅತ್ಯಂತ ಖುಷಿಯಿಂದಿರುವಿರಿ. ನಿಮಗಿಷ್ಟವಾದ ಉಡುಪು ಧರಿಸುವುದರಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುತ್ತೀರಿ. ಆಳವಾದ ಶ್ಲಾಘನೆಯು ಕೇವಲ ವೃತ್ತದಲ್ಲಿನ ಮೂಲೆಯಂತಿರುತ್ತದೆ. ಕಾರು ಪ್ರಯಾಣವು ನಿಮ್ಮ ಖುಷಿ ಮತ್ತು ಸಂತೋಷವನ್ನು ಇನ್ನಷ್ಟು ಹೆಚ್ಚಿಸುತ್ತದೆ. ವಿದೇಶಿಯರೊಂದಿಗಿನ ಹರ್ಷಭರಿತ ಭೇಟಿ, ಸಂಬಂಧಿಗಳೊಂದಿಗಿನ ಸ್ನೇಹಕೂಟ ಮುಂತಾದವುಗಳ ನಿಶ್ಚಿತ ಸಂಭವವಿದೆ.

ಧನು :-

ಖುಷಿ ಖುಷಿಯ ದಿನವು ನಿಮಗಾಗಿ ಕಾದಿದೆ. ನಿಮ್ಮ ಮತ್ತು ಇತರರ ಬಗ್ಗೆ ಸಂತೋಷದಿಂದಿರುತ್ತೀರಿ ಮತ್ತು ಎಲ್ಲಾ ಒಳ್ಳೆಯ ವಾತಾವರಣದಲ್ಲಿ ಹಾಯಾಗಿರುತ್ತೀರಿ ಎಂಬುದಾಗಿ ಗಣೇಶ ಶಕುನ ಹೇಳುತ್ತಾರೆ. ಎಲ್ಲಾ ಕುಟುಂಬ ವಿಚಾರಗಳಿಗೆ ಇದೊಂದು ಉತ್ತಮ ದಿನವಾಗಿದೆ. ಮನೆಯ ವಾತಾವರಣವು ಸಂತಸದಿಂದ ಕೂಡಿರುತ್ತದೆ ಮತ್ತು ಇದು ನಿಮಗೆ ಆನಂದವನ್ನು ನೀಡುತ್ತದೆ. ಆರೋಗ್ಯದಿಂದಿರುತ್ತೀರಿ ಮತ್ತು ಸಾಕಷ್ಟು ಚೈತನ್ಯದಿಂದ ಕೂಡಿರುತ್ತೀರಿ. ಸಕಾರಾತ್ಮಕ ಧೋರಣೆಯನ್ನು ನಿಮ್ಮ ಕೆಲಸ ಮತ್ತು ಕ್ರೀಡೆಯಲ್ಲಿ ಬಳಸಿಕೊಳ್ಳುತ್ತೀರಿ.. ಕಚೇರಿಯಲ್ಲಿ ಪ್ರಶಂಸೆಯನ್ನು ನಿರೀಕ್ಷಿಸಿರುವುದರಿಂದ ಕಾರ್ಯ ಸಂಬಂಧಿ ವಿಚಾರಗಳಿಗೆ ಅನುಕೂಲಕರ ದಿನವಾಗಿದೆ ಮತ್ತು ಸಹೋದ್ಯೋಗಿಗಳಿಂದ ಉತ್ತಮ ಸಹಕಾರವನ್ನು ಪಡೆಯುತ್ತೀರಿ. ಧನಲಾಭದ ಯೋಗವಿದೆ.

ಮಕರ :-

ನಿಮ್ಮ ಗ್ರಹಗತಿ ಇನ್ನೂ ನೆಟ್ಟಗಾಗಿಲ್ಲ ಎಂಬುದಾಗಿ ಶ್ರೀಗಣೇಶ ಹೇಳುತ್ತಾರೆ. ನೀವು ಅನ್ಯಮನಸ್ಕರಾಗಿರುತ್ತೀರಿ. ಇದಕ್ಕೆ ಹಲವಾರು ಕಾರಣಗಳಿರಬಹುದು. ನಿಮ್ಮ ಈ ಗೊಂದಲಕ್ಕೆ ಕಾರಣವೇನೆಂದು ನಿಮಗೇ ತಿಳಿದಿರುವ ಸಾಧ್ಯತೆಯಿಲ್ಲ. ಮಾನಸಿಕವಾಗಿ ನೀವು ಅಸ್ಥಿರತೆಯಿಂದ ಕೂಡಿರುತ್ತೀರಿ. ಇದು ನಿಮ್ಮ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತದೆ. ಮನೆಯಲ್ಲಿ ಅಥವಾ ಕಚೇರಿಯಲ್ಲಿನ ಕೆಲವು ಸಂಘರ್ಷಗಳ ಬಗ್ಗೆ ನೀವು ಚಿಂತಾಗ್ರಸ್ಥರಾಗಬಹುದು.ನಿಮ್ಮ ಶತ್ರುಗಳೊಂದಿಗೆ ಅಥವಾ ವಿರೋಧಿಗಳೊಂದಿಗೆ ವಾದಕ್ಕಿಳಿಯಬೇಡಿ. ಅವರು ನಿಮ್ಮನ್ನು ರೇಗಿಸಲು ಪ್ರಯತ್ನಿಸಬಹುದು ಆದರೆ ಶಾಂತವಾಗಿರಿ. ಕಚೇರಿಯ ಮೇಲಾಧಿಕಾರಿಗಳು ಯಾವುದೇ ಒಂದು ವಿಚಾರದ ಕುರಿತಾಗಿ ನಿಮ್ಮ ಮೇಲೆ ಅಸಮಧಾನ ಹೊಂದಬಹುದು ಮತ್ತು ಇದು ಮುಂದಕ್ಕೆ ನಿಮಗೆ ಅತ್ಯಂತ ಕಿರಿಕಿರಿಯನ್ನುಂಟುಮಾಡಬಹುದು. ಪ್ರೀತಿಪಾತ್ರರ ಸಾಂಗತ್ಯದಲ್ಲಿ ನೆಮ್ಮದಿಯನ್ನು ಕಂಡುಕೊಳ್ಳಿ.

ಕುಂಭ :-

ಇಂದು ನೀವು ಅತ್ಯಂತ ಭಾವಪರವಶರಾಗುತ್ತೀರಿ ಮತ್ತು ದುರ್ಬಲರಾಗಿರುತ್ತೀರಿ. ಮಾನಸಿಕ ಸ್ಥಿರತೆ ಹಾಗೂ ಶಾಂತಿಯ ಕೊರತೆಯು ನಿಮ್ಮನ್ನು ತೊಂದರೆಗೀಡುಮಾಡುತ್ತದೆ ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಪ್ರಯತ್ನಗಳಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. ಎಲ್ಲಾ ಯೋಜಿತ ಕಾರ್ಯಗಳು ಸೂಕ್ತ ಸಮಯದಲ್ಲಿಯೇ ಪೂರ್ಣಗೊಳ್ಳಲಿದೆ ಇದರ ಫಲವಾಗಿ, ವರಿಷ್ಠರ ನಡುವೆ ನೀವು ಗೌರವ ಪಡೆದುಕೊಳ್ಳುವ ಮೂಲಕ ಪ್ರಯೋಜನ ಪಡೆಯುವಿರಿ. ಹೆಂಗಸರು ತಮ್ಮನ್ನು ತಾನು ಆರೈಕೆ ಮಾಡಿಕೊಳ್ಳಲು ‘ಸ್ಪಾ’ಗೆ ಹೋಗಬಹುದು ಅಥವಾ ಪ್ರಸಾದನ ಖರೀದಿಸಲು ಮಾಲ್‌ಗಳಿಗೆ ಹೋಗಬಹುದು. ಆದರೆ ಅವರ ಖರ್ಚಿನ ಬಗ್ಗೆ ಗಮನ ಇಡುವುದು ಅಗತ್ಯ.ಎಲ್ಲೆಲ್ಲಿ ಪ್ರೌಢತೆ ಬೇಕೋ ಅಲ್ಲಿ ಬಾಲಿಶ ವರ್ತನೆ ಬೇಡ. ಭೂ, ಆಸ್ತಿ ಅಥವಾ ವಾಹನಕ್ಕೆ ಸಂಬಂಧಿಸಿದ ಕಾನೂನು ಪತ್ರಗಳೊಂದಿಗಿನ ವ್ಯವಹಾರದಲ್ಲಿ ಎಚ್ಚರಿಕೆ ವಹಿಸಿ.

ಮೀನ :-

ಇಂದು ದೈವಾನುಗ್ರಹವು ನಿಮ್ಮತ್ತ ನಗು ಬೀರುತ್ತಿದೆ ಎಂಬುದಾಗಿ ಗಣೇಶ ಭರವಸೆ ನೀಡುತ್ತಾರೆ. ಸಂತಸ, ಯಶಸ್ಸು, ಆರೋಗ್ಯ, ಸಂಪತ್ತು ಮತ್ತು ಹೇರಳ ಸೃಜನಶೀಲತೆ ಮತ್ತು ಧನಾತ್ಮಕತೆಯನ್ನು ಎದುರುನೋಡಬಹುದು. ದಾಂಪತ್ಯ ಜೀವನವು ಸಾಮರಸ್ಯ ಮತ್ತು ಸಂತಸದಿಂದ ಕೂಡಿರುತ್ತದೆ.ಸ್ನೇಹಿತರೊಂದಿಗೆ ಸಣ್ಣ ಸಂತೋಷಕರ ಪ್ರವಾಸ ಹಾಗೂ ಖುಷಿ ತುಂಬಿದ ವಿಹಾರಕ್ಕೆ ತೆರಳುವ ಸಾಧ್ಯತೆಯಿದೆ. ನಿಮ್ಮ ಘನತೆ ಮತ್ತು ಜನಪ್ರಿಯತೆಯು ಹೆಚ್ಚುವ ಭರವಸೆಯಿದೆ. ನಿಮ್ಮ ಸ್ಪರ್ಧಿಗಳು ಮತ್ತು ವೈರಿಗಳು ನಿಮ್ಮಿಂದ ದೂರ ಉಳಿಯಬಹುದು. ಯಶಸ್ಸು ಖಚಿತವಾಗಿದೆ.

WhatsApp Group Join Now

Spread the love

Leave a Reply