ಮೇಷ :-
ಇಂದು ನಿಮ್ಮ ದಿನ ಸಾಮಾನ್ಯವಾಗಿರುತ್ತದೆ ಎಂಬುದಾಗಿ ಶ್ರೀಗಣೇಶ ಶಕುನ ಹೇಳುತ್ತಾರೆ. ವಿಶೇಷವಾಗಿ ಏನೂ ಇರುವುದಿಲ್ಲ. ಸಂಕ್ಷಿಪ್ತವಾಗಿ ಹೇಳುವುದಾದರೆ ಮಾಮೂಲಿ ದಿನಚರಿ. ಆರೋಗ್ಯ ಎಂದಿನಂತಿದ್ದು ಏರುಪೇರು ಉಂಟಾಗುವುದಿಲ್ಲ. ಆದರೆ, ಅತ್ಯಂತ ಉತ್ಸಾಹದಿಂದಲೂ ಇರುವುದಿಲ್ಲ.
ಏರುತ್ತಿರುವ ವೆಚ್ಚಗಳು ನಿಮ್ಮನ್ನು ಅಕಸ್ಮತ್ತಾಗಿ ಪೀಡಿಸುತ್ತದೆ ಹಾಗೂ ನಿಮ್ಮನ್ನು ಬೆಚ್ಚಿ ಬೀಳಿಸುತ್ತದೆ ಅಥವಾ ದಿಗ್ಭ್ರಮೆಗೊಳಿಸುತ್ತದೆ. ಅದರ ಚಲನವಲನಗಳ ಮೇಲೆ ಗಮನವಿಟ್ಟಿರಿ ಆದರೆ ಅದು ಒಂದು ಅಂಕೆ ಮೀರಿ ನಿಮಗೆ ತೊಂದರೆ ಕೊಡದಂತೆ ನೋಡಿಕೊಳ್ಳಿ. ಹಣಕಾಸು ಪರಿಸ್ಥಿತಿಯಲ್ಲಿ ಇನ್ನೂ ಕುಸಿತ ಉಂಟಾಗುವುದಿಲ್ಲ. ಋಣಾತ್ಮಕ ಚಿಂತನೆಗಳಿಂದ ದೂರವಿರಿ. ಮತ್ತು ವಾರದ ಕೊನೆಯ ರಾತ್ರಿಯಾಗಿದ್ದರೂ, ಮನೆಯಲ್ಲೇ ಅಡುಗೆ ತಯಾರಿಸಲು ನಿರ್ಧರಿಸಿ.ಸಂಗಾತಿಯೊಂದಿಗಿನ ಸಂಭಾಷಣೆಯ ವೇಳೆ ವಾಗ್ವಾದವನ್ನು ಆದಷ್ಟು ತಪ್ಪಿಸಿ ಮತ್ತು ಮನಸ್ಸಿಗೆ ನೋವಾಗುವಂತಹ ವಿಚಾರವನ್ನು ಹೇಳುವ ವೇಳೆ ನಿಮ್ಮ ಉದ್ವೇಗವನ್ನು ನಿಯಂತ್ರಿಸಿಕೊಳ್ಳಿ. ಮಹಿಳಾ ಸಹ ಉದ್ಯೋಗಿಗಳಿಂದ ನಿಮಗೆ ಲಾಭ ಉಂಟಾಗುವ ಸಂಭವವಿದೆ.
ವೃಷಭ :-
ಇಂದು ನೀವು ಆರೋಗ್ಯಕರವಾಗಿರುವಿರಿ. ಇದು ಮುಂಜಾನೆಯ ಯೋಗ ತರಗತಿಯಿಂದಲೂ ಆಗಿರಬಹುದು ಅಥವಾ ಡಿಟಾಕ್ಸ್ ಡಯಟ್ನಿಂದಲೂ ಆಗಿರಬಹುದು. ಕಾರಣ ಏನೇ ಇರಲಿ ಫಲವನ್ನು ಆನಂದಿಸಿ. ನೀವು ತುಂಬಾ ಹಗುರ ಹಾಗೂ ಖುಷಿ ಅನುಭವಿಸುತ್ತೀರಿ. ಈ ಉತ್ಸಾಹವು ನಿಯೋಜಿತ ಕಾರ್ಯವನ್ನು ಪೂರ್ಣಗೊಳಿಸಲು ನಿಮಗೆ ಅನುವು ಮಾಡಿಕೊಡುತ್ತದೆ. ಮತ್ತು ನಿಮ್ಮ ಮನಸ್ಸು ಸ್ಥಿರವಾಗಿರುವುದರಿಂದ ನಿಮಗೆ ಎಂತಹ ಸಮಸ್ಯೆಗೂ ಯತೋಚಿತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಆತ್ಮವಿಶ್ವಾಸದೊಂದಿಗೆ ನೀವು ಯಾವತ್ತೂ ಲವಲವಿಕೆಯಿಂದಿರಿ, ಇದು ಹಣಕಾಸು ವಿಚಾರಗಳಲ್ಲಿ ನಿಮಗೆ ವಿವೇಚನೆಯುಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ ಮತ್ತು ಇವುಗಳು ಯಶಸ್ವಿಯಾಗಿರುತ್ತದೆ. ಮನೆ ಮತ್ತು ಕಚೇರಿಯಲ್ಲಿನ ಚರ್ಚೆಗಳು ತೃಪ್ತಿಕರವಾಗಿರುತ್ತದೆ.
ಮಿಥುನ :-
ಈ ದಿನವು ನಿಮ್ಮ ಮನಸ್ಸು ಮತ್ತು ದೇಹ ಎರಡನ್ನೂ ಕ್ಷೀಣವಾಗಿಸುತ್ತದೆ. ನೀವು ಕಿರಿಕಿರಿ ಮತ್ತು ಸತ್ವವಿಲ್ಲದ ಭಾವನೆಯನ್ನು ಹೊಂದುತ್ತೀರಿ. ನಿಮ್ಮ ಆರೋಗ್ಯದಲ್ಲಿ ವಿಶೇಷವಾಗಿ ಕಣ್ಣಿನಲ್ಲಿ ತೊಂದರೆ ಉಂಟಾಗಬಹುದು. ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗಿನ ಸಂಬಂಧಗಳು ಹಿತಕರವಲ್ಲದ ತಿರುವುಗಳನ್ನು ಪಡೆಯಬಹುದು. ನೀವು ಏನೇ ಮಾಡುವುದಿದ್ದರೂ, ಅಥವಾ ಹೇಳುವುದಿದ್ದರೂ ಜಾಗರೂಕರಾಗಿರಿ. ಮನಸ್ತಾಪಗಳು ಉಂಟಾಗುವ ಸಾಧ್ಯತೆಯು ದಟ್ಟವಾಗಿದೆ. ಅನಿರೀಕ್ಷಿತ ಘಟನೆಗಳಿಗೆ ಸಿದ್ಧರಾಗಿರಿ. ವೆಚ್ಚವು ನಿಮ್ಮ ಆದಾಯವನ್ನು ಮೀರುವ ನಿರೀಕ್ಷೆಯಿದೆ. ಚಿಂತೆಗಳು ನಿಮ್ಮನ್ನು ಪ್ರಕ್ಷುಬ್ಧ ಹಾಗೂ ತಲ್ಲಣಗೊಳಿಸುತ್ತದೆ. ದುಂದುವೆಚ್ಚವನ್ನು ತಪ್ಪಿಸಲು ಸಾಧ್ಯವಾಗಬಹುದು. ಜಗಳ ಅಥವಾ ವ್ಯಾಜ್ಯಗಳಲ್ಲಿ ಸಿಲುಕಬೇಡಿ. ಪ್ರಾರ್ಥನೆ ಮತ್ತು ಧ್ಯಾನವು ನಿಮಗೆ ಖಂಡಿತವಾಗಿಯೂ ಸಹಾಯ ಮಾಡಲಿದೆ.
ಕರ್ಕಾಟಕ :-
ಇಂದು ನಿಮಗೆ ಖುಷಿ ತುಂಬಿದ ದಿನವಾಗಿರುತ್ತದೆ ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ. ವ್ಯಾಪಾರ ಮತ್ತು ಉದ್ಯಮ ವ್ಯವಹಾರಗಳಲ್ಲಿ ನೀವು ಯಶಸ್ಸು ಮತ್ತು ವಸ್ತು ಪ್ರಯೋಜನಗಳನ್ನು ಪಡೆಯುವಿರಿ. ನಿಮ್ಮ ಆದಾಯ ಮೂಲದಲ್ಲಿ ಹೆಚ್ಚಳ ಉಂಟಾಗಲಿದೆ. ಮತ್ತು ಇದನ್ನು ನೀವು ಆನಂದಿಸಲು ಬಯಸಬಹುದು. ಈ ಹರ್ಷಾಚರಣೆಯು ಕುಟುಂಬ ಅಥವಾ ಸ್ನೇಹಿತರೊಂದಿಗೆ ಸಣ್ಣ ಪ್ರವಾಸವೂ ಆಗಿರಬಹುದು ಅಥವಾ ವ್ಯವಹಾರ ಮತ್ತು ನಲಿವು ಮಿಶ್ರಣದ ಸಂತೋಷಕೂಟವೂ ಆಗಿರಬಹುದು.ನಿಮ್ಮ ಮಗ ಅಥವಾ ನಿಮ್ಮಕ್ಕಿಂತ ಕಿರಿಯವರೊಂದಿಗೆ ಈಜು ಮುಂತಾದವುಗಳ ಮೂಲಕ ಮನಸ್ಸನ್ನು ಉಲ್ಲಾಸಗೊಳ್ಳಲು ಇದೊಂದು ಉತ್ತಮ ದಿನ. ಧ್ಯಾನಕ್ಕಾಗಿ ನದಿತೀರ ಅಥವಾ ಸಮುದ್ರತೀರಕ್ಕೆ ತೆರಳಲು ನೀವು ಉದ್ದೇಶಿಸಬಹುದು. ಬಂಡವಾಳ ವೃದ್ಧಿಗೊಳಿಸಲು, ಸ್ನೇಹಿತರ ಭೇಟಿಗೆ ಮತ್ತು ಆರೋಗ್ಯ ಜೀವನಕ್ರಮ ಪ್ರಾರಂಭಕ್ಕೆ ಇದು ಉತ್ತಮ ಸಮಯ.
ಸಿಂಹ :-
ನೀವು ಶ್ರೇಷ್ಠ ವ್ಯಕ್ತಿ! ಇದನ್ನು ನೀವು ನಿಜವಾಗಿಯೂ ನಂಬುತ್ತೀರಿ ಮತ್ತು ಜನರೊಂದಿಗಿನ ಎಲ್ಲಾ ವ್ಯವಹಾರಗಳಲ್ಲಿ ತೋರಿಸಿಕೊಳ್ಳುತ್ತೀರಿ. ಏನೇ ಆದರೂ, ವಿಶ್ವಾಸದ ಕೊರತೆಯನ್ನು ನಿಮ್ಮ ಸಿಂಹವು ಯಾವತ್ತೂ ಹೊಂದಿರುವುದಿಲ್ಲ ಆದರೆ, ಇಂದು ನೀವು ಸಂಪೂರ್ಣ ಆತ್ಮವಿಶ್ವಾಸದಿಂದಿರುತ್ತೀರಿ ಮತ್ತು ನಿಮ್ಮ ಮನೋಬಲದಿಂದ ಈ ಮನಸ್ಥಿತಿಯು ಇನ್ನೂ ಹೆಚ್ಚಳಗೊಳ್ಳುವುದು. ಈ ಎರಡರ ಅದ್ಭುತ ಸಂಯೋಜನೆಯು ಕಲೆ, ಕ್ರೀಡೆ. ವ್ಯವಹಾರ ಮುಂತಾದ ಯಾವುದೇ ಕ್ಷೇತ್ರದಲ್ಲೂ ನಿಮ್ಮನ್ನು ಉತ್ಕೃಷ್ಟಗೊಳಿಸುವಲ್ಲಿ ಸಹಕಾರಿಯಾಗಲಿದೆ. ಬಡ್ತಿ, ತಂದೆಯಿಂದ ಲಾಭ, ಪದೋನ್ನತಿ, ಗೌರವ ವೃದ್ಧಿ ಇವೆಲ್ಲವೂ ಸಿಗಲಿದೆ. ಆನಂದಿಸಿ!. ಯಾವುದೇ ಕಾನೂನು ಸಂಬಂಧಿ ಅಥವಾ ಅಧಿಕಾರಿ ಸಂಬಂಧಿ ಕಾರ್ಯಗಳ ಪೂರ್ಣಗೊಳಿಸುವಿಕೆಗೆ ಇದು ಉತ್ತಮ ದಿನ.
ಕನ್ಯಾ :-
ಅದೃಷ್ಟದಾಯಕ ದಿನವು ನಿಮಗೆ ಕಾದಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನೀವು ಧಾರ್ಮಿಕ ಕ್ಷೇತ್ರಗಳಿಗೆ ಅಥವಾ ಯಾತ್ರಾಸ್ಥಳಗಳಿಗೆ ತೆರಳಬೇಕೆಂಬ ನಿಮ್ಮ ಬಹುಕಾಲದ ಇಚ್ಛೆಯನ್ನು ಪೂರ್ಣಗೊಳಿಸಲು ಇದು ಸಕಾಲವಾಗಿದೆ. ಸಂಬಂಧಿಕರ ಮನೆಗೆ ಭೇಟಿ ನೀಡಲು ನೀವು ಯೋಜನೆ ರೂಪಿಸಬಹುದು ಮತ್ತು ಇದೊಂದು ಅತ್ಯಂತ ಸಂತಸದ ಅನುಭವವಾಗಲಿದೆ. ಗೆಳತಿಯಿಂದ ಅಥವಾ ಸಂಬಂಧಿಕರಿಂದ ಹೇರಳ ಲಾಭ ಉಂಟಾಗಲಿದೆ. ಅವರೊಂದಿಗೆ ಬೆರೆಯಿರಿ. ಜೊತೆಗೆ, ಇತ್ತೀಚೆಗೆ ನಿಮ್ಮೊಂದಿಗೆ ಸಂಪರ್ಕದಲ್ಲಿರವರನ್ನೂ ಕಡೆಗಣಿಸಬೇಡಿ. ಅವರನ್ನು ಸಂಪರ್ಕಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿ. ವಿದೇಶಕ್ಕೆ ತೆರಳಲು ಬಯಸಿದ್ದರೆ ಇದು ಸೂಕ್ತ ಸಮಯವಾಗಿದೆ. ವಿದೇಶದಲ್ಲಿ ನೆಲೆಸಿರುವ ನಿಮ್ಮ ಆಪ್ತರಿಂದ ಸಂತೋಷದ ವಿಚಾರವೊಂದು ಸದ್ಯದಲ್ಲಿಯೇ ಕೇಳಲಿದ್ದೀರಿ. ನಿಮ್ಮ ಒಡಹುಟ್ಟಿದವರು ತೊಂದರೆಗಳಿಂದ ಹೊರಬರಲು ನಿಮಗೆ ಸಹಾಯಮಾಡಬಹುದು. ಹಣಕಾಸಿನ ವಿಚಾರದಲ್ಲಿ ಎಲ್ಲವೂ ಅನುಕೂಲಕರವಾಗಿಯೇ ಇರಲಿದೆ.
ತುಲಾ :-
ಹೊಸ ಯೋಜನೆ ಮತ್ತು ಕಾರ್ಯಗಳಿಗೆ ಈ ದಿನವು ಅನುಕೂಲಕರ ದಿನ ಎಂಬುದಾಗಿ ಸಾಬೀತಾಗಲಿದೆ ಎಂದು ಗಣೇಶ ಸ್ಪಷ್ಟಪಡಿಸುತ್ತಾರೆ. ಸುಲಲಿತ ವರ್ತನೆಗಳು ನಿಮ್ಮ ಅದೃಷ್ಟವನ್ನು ಇಮ್ಮಡಿಗೊಳಿಸುತ್ತದೆ.ಕಚೇರಿಯಲ್ಲಿ ಅಸಮಾಧಾನ ಉಂಟುಮಾಡುವಂತಹ ಯಾವುದೇ ಸಂಗತಿಗಳನ್ನು ಆಹ್ವಾನಿಸಬೇಡಿ. ನಿಮ್ಮ ಪ್ರತಿಸ್ಪರ್ಧಿಗಳ ಮೇಲೆ ಕಣ್ಣಿಟ್ಟಿರಿ. ಆರೋಗ್ಯದ ಬಗ್ಗೆ ನಿರ್ಲ್ಯಕ್ಷ ಬೇಡ. ಅತೀಂದ್ರಿಯ ಮತ್ತು ನಿಸರ್ಗಾತೀತ ವಿಚಾರಗಳ ಬಗ್ಗೆ ನೀವು ಆಕರ್ಷಿಸಲ್ಪಡುವ ಸಾಧ್ಯತೆಯಿದೆ. ಧ್ಯಾನವು ನಿಮ್ಮ ಮನಸ್ಸಿಗೆ ತೃಪ್ತಿ ನೀಡಲಿದೆ ಮತ್ತು ಇದರಿಂದ ನಿಮಗೆ ಎಂದೆಂದಿಗೂ ಪ್ರಯೋಜನ ಉಂಟಾಗುವ ಭರವಸೆಯಿದೆ. ಮಹಿಳೆಯರಿಂದ ವಿಶೇಷವಾಗಿ ನಿಮ್ಮ ಪತ್ನಿಯಿಂದ ದೂರವಿರಿ. ಸುಧೀರ್ಘ ಚಿಂತನೆ ಮತ್ತು ಅಂತರಂಗ ಶೋಧನೆಯು ಶಾಂತಿ ಮತ್ತು ನೆಮ್ಮದಿಯನ್ನು ತರಲಿದೆ.
ವೃಶ್ಚಿಕ :-
ಹೊಣೆಗಾರಿಕೆಯ ಗಂಟುಮೂಟೆಯನ್ನು ಮನೆಯಲ್ಲಿ ಅಥವಾ ಕಪಾಟಿನೊಳಗೆ ಇಟ್ಟುಬಿಡಿ ಎಂಬುದಾಗಿ ಗಣೇಶ ಹೇಳುತ್ತಾರೆ. ಇಂದು ಸಾಕಷ್ಟು ಹರ್ಷ ಮತ್ತು ಸಡಗರದಿಂದ ತುಂಬಿರುತ್ತೀರಿ. ಹೊರಗಡೆ ಹೋಗಿ, ಸ್ನೇಹಿತರನ್ನು ಭೇಟಿಯಾಗಿ ಮತ್ತು ಮನರಂಜೆಯಲ್ಲಿ ಪಾಲ್ಗೊಳ್ಳಲು ನಿಮಗೆ ನೀವೇ ಅನುವು ಮಾಡಿಕೊಡಿ. ಸಿನಿಮಾ ನೋಡಿ ಅಥವಾ ಸಾಹಸಿ ಪ್ರವಾಸಗಳ ಯೋಜನೆ ರೂಪಿಸಿ. ಪ್ರಶಂಸೆಗಳಿಗಾಗಿ ಎದುರು ನೋಡುತ್ತಿದ್ದರೆ, ಇಂದು ಸಾಮಾಜಿಕ ಮನ್ನಣೆಗಾಗಿ ಅತ್ಯುತ್ತಮ ದಿನ. ಇದಕ್ಕಿಂತ ಹೆಚ್ಚು ನೀವು ಇನ್ನೇನು ಕೇಳುವಿರಿ? ಅದ್ಭುತ ದಿನವು ನಿಮಗಾಗಿ ಕಾದಿದೆ.
ಧನು :-
ಈ ದಿನವನ್ನು ಧನಲಾಭದ ದಿನವನ್ನಾಗಿ ನಿರೂಪಿಸಲಾಗಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಮನೆಯಲ್ಲಿ ನೆಲೆಯಾಗಿರುವ ಉಲ್ಲಾಸಕರ ಮತ್ತು ಗೆಲುವಿನ ವಾತಾವರಣದಿಂದಾಗಿ ನೀವು ತೃಪ್ತಿ ಹಾಗೂ ಖುಷಿಯಿಂದಿರುತ್ತೀರಿ. ವೃತ್ತಿನಿರತರಿಗೆ ಮತ್ತು ಕಚೇರಿ ಉದ್ಯೋಗಿಗಳಿಗೆ ಬಡ್ತಿ, ವೇತನ ಹೆಚ್ಚಳ ಶ್ಲಾಘನೆಗಳು ದೊರೆಯಲಿವೆ. ನಿಮ್ಮ ಜೊತೆ ಕೆಲಸಗಾರರು ವಿಧೇಯ ಹಾಗೂ ಸಹಕಾರ ಮನೋಭಾವವನ್ನು ಹೊಂದಿರುವ ನಿರೀಕ್ಷೆಯಿದೆ. ನಿಮ್ಮ ಹುಟ್ಟೂರಿನಿಂದ ಶುಭಸುದ್ದಿ ಬರುವ ನಿರೀಕ್ಷೆಯಿದೆ. ಪ್ರತಿಸ್ಪರ್ಧಿಗಳು ಮತ್ತು ವೈರಿಗಳು ನಿಮ್ಮಿಂದ ದೂರವಿರಬಹುದು. ಎಲ್ಲರೊಂದಿಗೂ ವಿನಯ ಹಾಗೂ ಸಭ್ಯತೆಯಿಂದಿರಿ. ಸ್ನೇಹಿತೆಯರನ್ನು ಭೇಟಿ ಮಾಡುವ ಸಂಭವವಿದೆ. ನೀವು ದಿನವಿಡೀ ತಾಜಾ ಹಾಗೂ ಉಲ್ಲಾಸದಿಂದಿರುತ್ತೀರಿ.
ಮಕರ :-
ಈ ದಿನವು ನಿಮ್ಮನ್ನು ಒತ್ತಡ ಹಾಗೂ ಗೊಂದಲದಲ್ಲಿರಿಸುವ ಸಾಧ್ಯತೆಯಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ದೈನಂದಿನ ಹಾಜರಾಗುವ ಉತ್ಸಾಹವನ್ನು ನೀವು ಕಳೆದುಕೊಳ್ಳಬಹುದು. ಅತ್ಯಂತ ಪ್ರಮುಖ ಹಾಗೂ ಆವಶ್ಯಕವಾದ ಯಾವುದೇ ವಿಚಾರಗಳನ್ನು ಇಂದು ಕೈಗೊಳ್ಳಬೇಡಿ. ಸಂಗತಿಗಳು ನಿಮ್ಮ ಹಾದಿಯಲ್ಲಿ ಸಾಗುವ ಸಾಧ್ಯತೆಯಿಲ್ಲ. ನಿಮ್ಮ ಮಕ್ಕಳ ಆರೋಗ್ಯ ಮತ್ತು ವರ್ತನೆಯು ನಿಮ್ಮನ್ನು ಇನ್ನಷ್ಟು ಚಿಂತೆಗೀಡುಮಾಡುತ್ತದೆ. ಮನೆಯಲ್ಲಿನ ಹಿರಿಯ ಜೀವಿಗಳಿಗೆ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳಿವೆ. ನಿಮ್ಮ ಮೇಲಾಧಿಕಾರಿಗಳಿಂದ ಅಸಾಮಾಧಾನವನ್ನು ಎದುರಿಸಬಹುದು. ಅನಗತ್ಯ ಖರ್ಚಿನ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಕುಂಭ :-
ನಿಮ್ಮ ದಿನವು ಪ್ರೀತಿ ಮತ್ತು ವಾತ್ಸಲ್ಯದಿಂದ ತುಂಬಿರುತ್ತದೆ ಎಂಬುದಾಗಿ ಗಣೇಶ ಸ್ಪಷ್ಟಪಡಿಸುತ್ತಾರೆ. ನಿಮ್ಮ ಆಲೋಚನೆಗಳು ಅಲ್ಲಿಂದಿಲ್ಲಿಗೆ ಹಾರಲಿವೆ ಮತ್ತು ನೀವು ಅವಿಶ್ರಾಂತ ಹಾಗೂ ಗೊಂದಲಕ್ಕೆ ಒಳಗಾಗಬಹುದು. ಹಣಕಾಸಿಗೆ ಸಂಬಂಧಿಸಿದ ಸಭೆ ಮತ್ತು ಮಾತುಕತೆಗಳು ನಡೆಯುವ ಸಾಧ್ಯತೆಯಿದೆ. ಮಹಿಳೆಯರು ಆಡಂಬರದ ಮತ್ತು ಸೌಂದರ್ಯ ಸಾಧನಗಳನ್ನು ಖರೀದಿಸುವ ಮೂಲಕ ಮುಕ್ತವಾಗಿ ಖರ್ಚುಮಾಡುವ ಸಂಭವವಿದೆ. ತಾಯಿಯು ಸಹಾಯ ಮತ್ತು ಪ್ರಯೋಜನ ದೊರೆಯಲಿದೆ. ಆಸ್ತಿ ಸಂಬಂಧಿತ ವಿಚಾರಗಳ ವ್ಯವಹಾರದಲ್ಲಿ ವಿಶೇಷ ಎಚ್ಚರಿಕೆಯ ಅಗತ್ಯವಿದೆ. ವಿದ್ಯಾರ್ಥಿಗಳು ತಮ್ಮ ಓದಿನಲ್ಲಿ ಉತ್ಕೃಷ್ಟ ನಿರ್ವಹಣೆ ಮಾಡುತ್ತಾರೆ. ನಿಷ್ಠುರತೆ ಮತ್ತು ಅಸಹನೆಯು ನಿಮ್ಮ ದಿನವನ್ನು ಹಾಳುಮಾಡಲಿದೆ. ಎಚ್ಚರಿಕೆಯಿಂದಿರಿ.
ಮೀನ :-
‘ಕೈಕೆಸರಾದರೆ ಬಾಯಿ ಮೊಸರು’ ಉಕ್ತಿಯನ್ನು ಇಂದು ಪಾಲಿಸಿ. ಅದೃಷ್ಟದ ಒಟ್ಟಾರೆ ಗತಿಯು ಇಂದು ಇನ್ನಷ್ಟು ಬಲಗೊಳ್ಳುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಜೊತೆಗೆ ನಿಮ್ಮ ಸೃಜನಶೀಲತೆ ಮತ್ತು ಕ್ರಿಯಾತ್ಮಕತೆಯಲ್ಲಿ ಖಚಿತ ವರ್ಧನೆಯಾಗುವ ನಿರೀಕ್ಷೆಯಿದೆ. ಮುಂದಕ್ಕೆ ಸಾಗಿ ಮತ್ತು ಬೇಗನೇ ಕಾರ್ಯರೂಪಗೊಳ್ಳುವುದರಿಂದ ತ್ವರಿತ ನಿರ್ಧಾರಗಳನ್ನು ಕೈಗೊಳ್ಳಿ. ನಿಮ್ಮ ಧನಾತ್ಮಕ ದೃಷ್ಟಿಕೋನ, ಕೇಂದ್ರೀಕೃತ ಸ್ವಭಾವ ಮತ್ತು ದೃಢತೆಯು ನಿಮ್ಮ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಹಕಾರಿಯಾಗುತ್ತದೆ. ನಿಮ್ಮ ಸ್ನೇಹಿತರೊಂದಿಗೆ ಅಥವಾ ಒಡಹುಟ್ಟಿದವರೊಂದಿಗೆ ಸಾಹಸಿ ಪ್ರವಾಸದ ಯೋಜನೆಗಳನ್ನು ಕೈಗೊಳ್ಳಿ. ಕೆಲವರೊಂದಿಗಿನ ಆತ್ಮೀಯತೆಯನ್ನು ನೀವು ತೀವ್ರವಾಗಿ ಆನಂದಿಸುವಿರಿ. ಸಾಮಾಜಿಕ ಮನ್ನಣೆ ಸಿಗಲಿದೆ.
Horoscope Today : 23 ಮಾರ್ಚ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
WhatsApp Group
Join Now