ಮೇಷ :-
ಈ ದಿನಪೂರ್ತಿ ನೀವು ಧನಾತ್ಮಕ ಶಕ್ತಿಯನ್ನು ಹೊಂದಿರುತ್ತೀರಿ ಎಂದು ಗಣೇಶ ಹೇಳುತ್ತಾರೆ. ಇಂದು ನೀವು ಸಂಪೂರ್ಣವಾಗಿ ಉಲ್ಲಾಸದಿಂದಿರುತ್ತೀರಿ ಮತ್ತು ಉತ್ಸಾಹದಿಂದ ನಿಮ್ಮ ಕಾರ್ಯವನ್ನು ಮುಂದುವರಿಸುತ್ತೀರಿ. ಲಕ್ಷ್ಮೀದೇವಿಯು ನಿಮ್ಮ ಮೇಲೆ ಪೂರ್ಣ ಅನುಗ್ರಹವನ್ನು ತೋರುತ್ತಾಳೆ.
ಮನೆಯ ಅದ್ಭುತ ವಾತಾವರಣದಲ್ಲಿ ಕುಟುಂಬ ಸದಸ್ಯರೊಂದಿಗೆ ಕಳೆದ ಕ್ಷಣಗಳು ನಿಮ್ಮನ್ನು ಸಂಪೂರ್ಣವಾಗಿ ಲವಲವಿಕೆಯಲ್ಲಿರಿಸುತ್ತದೆ. ಸಾಮಾಜಿಕ ಸ್ನೇಹಕೂಟ ಅಥವಾ ಸಂಧ್ಯಾವಿನೋದಗಳಿಗೆ ತೆರಳಬಹುದು. ಈ ಅದ್ಭುತ ಸಮಯದ ಸಂಪೂರ್ಣ ಪ್ರಯೋಜನವನ್ನು ಪಡೆಯಿರಿ. ಮತ್ತು ಈ ಕ್ಷಣವನ್ನು ಆನಂದಿಸಿ. ನಿಮ್ಮ ತಾಯಿಯ ಕಡೆಯಿಂದ ಶುಭಸುದ್ದಿ ಬರಲಿದೆ.
ವೃಷಭ :-
ಎಚ್ಚರಿಕೆಯಿಂದಿರಿ. ಈ ದಿನ ನೀವು ಜಾಗರೂಕರಾಗಿರಬೇಕು ಎಂಬುದಾಗಿ ಗಣೇಶ ಸಲಹೆ ನೀಡುತ್ತಾರೆ. ಇಂದು ನೀವು ಚಿಂತೆಯಿಂದ ಕೂಡಿರಬಹುದು. ಇದಕ್ಕೆ ಅನಾರೋಗ್ಯ ಅಥವಾ ಕಣ್ಣಿನ ತೊಂದರೆ ಕಾರಣವಾಗಿರಬಹುದು. ನಿಮ್ಮ ಕುಟುಂಬದವರಿಂದ ನೀವು ಕೋಪಕ್ಕೆ ಒಳಗಾಗಬಹುದು. ಇದು ಜಗಳವನ್ನು ತಂದೊಡ್ಡಬಹುದು. ಈ ದಿನ ಕೈಗೆತ್ತಿಕೊಂಡ ಕಾರ್ಯವು ಅಪೂರ್ಣಗೊಳ್ಳಲಿದೆ. ಖರ್ಚಿನ ಮೇಲೆ ನಿಯಂತ್ರಣವಿರಲಿ ಇಲ್ಲವಾದಲ್ಲಿ ನಿಮ್ಮ ಕಿಸೆ ಪೂರ್ತಿ ಖಾಲಿಯಾಗಬಹುದು. ಆದರೂ, ಕಠಿಣ ಪರಿಶ್ರಮವು ಇಂದು ಯಶಸ್ಸನ್ನು ನೀಡಲಿದೆ. ಎಚ್ಚರಿಕೆಯಿಂದಿರಿ ಅಪಘಾತದ ಸಂಭಾವ್ಯತೆಯನ್ನು ಹೊಂದಿರುವಿರಿ.
ಮಿಥುನ :-
ಈ ದಿನ ನಿಮಗೆ ಸಾಕಷ್ಟು ಪ್ರಯೋಜನಗಳನ್ನು ತರಲಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಏಕಾಂಗಿಗಳು ಉತ್ತಮ ಜೀವನ ಸಂಗಾತಿಯನ್ನು ಪಡೆಯುವ ಸಾಧ್ಯತೆಯಿದೆ. ಹಣಕಾಸು ಪ್ರಯೋಜನಗಳಿಗೆ ಉತ್ತಮ ದಿನ. ಸ್ನೇಹಿತರನ್ನು ಭೇಟಿಯು ಮತ್ತು ಸಂಭ್ರಮಗಳ ವಿನಿಮಯವು ಈ ದಿನವನ್ನು ಫಲಪ್ರದವಾಗಿಸುತ್ತದೆ. ಎಲ್ಲಾ ಉತ್ತಮ ಸಂಗತಿಗಳು ಜೊತೆಯಾಗಿ ಬರಲಿವೆ. ಜೊತೆಗೆ ಮಗ ಮತ್ತು ಪತ್ನಿಯು ಸಹಾಯವನ್ನು ಸಾಬೀತುಪಡಿಸಲಿದ್ದಾರೆ ಮತ್ತು ನಿಮಗಾಗಿ ಸ್ವಾದಿಷ್ಟ ಭೋಜನ ಕಾದಿದೆ. ನಿಮ್ಮ ಮಕ್ಕಳಿಂದ ಉತ್ತಮ ಸುದ್ದಿಯನ್ನು ನಿರೀಕ್ಷಿಸಬಹುದು. ನಿಮ್ಮ ಖಜಾನೆಯ ಗಾತ್ರ ಹಿಗ್ಗುವುದು ಉದ್ಯೋಗ/ವ್ಯವಹಾರಗಳಲ್ಲಿನ ಪ್ರಯೋಜನವನ್ನು ಸೂಚಿಸುತ್ತದೆ. ಜೊತೆಗೆ ಆದಾಯದಲ್ಲಿನ ಹೆಚ್ಚಳ ಕೂಡಾ. ಈ ಅದೃಷ್ಟಕಾರಿ ಸಮಯ ಪ್ರಯೋಜನವನ್ನು ಪಡೆದುಕೊಳ್ಳಿ.
ಕರ್ಕಾಟಕ :-
ಕರ್ಕಾಟಕ ರಾಶಿಯವರಿಗೆ ಅವಕಾಶಗಳು ಕಾದಿವೆ ಎಂದು ಗಣೇಶ ಹೇಳುತ್ತಾರೆ. ಎಲ್ಲಾ ಕಾರ್ಯಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ನೀವು ಮೇಲಾಧಿಕಾರಿಗಳೊಂದಿಗಿನ ಅತೀ ಮುಖ್ಯ ಚರ್ಚೆಗಳಲ್ಲಿ ನೀವು ಭಾಗವಹಿಸುವ ಸಾಧ್ಯತೆಯಿದೆ ಮತ್ತು ನಿಮ್ಮ ನಿರ್ವಹಣೆಯ ಬಗ್ಗೆ ಅವರು ಸಂತಸಪಡುತ್ತಾರೆ. ಬಡ್ತಿ ಸಿಗುವ ಸಾಧ್ಯತೆಯಿದೆ. ನಿಮ್ಮ ಗೃಹ ಸೌಂದರ್ಯ ವೃದ್ಧಿಗೆ ಸಂಬಂಧಿಸಿ ಹೊಸ ವಿಷಯಗಳ ಬಗ್ಗೆ ಮನೆಯಲ್ಲಿ ನಿಮ್ಮ ಕುಟುಂಬ ಸದಸ್ಯರೊಂದಿಗೆ ಉತ್ತಮ ರೀತಿಯ ಸಂವಾದವನ್ನು ಹೊಂದಿರುತ್ತೀರಿ. ಕಚೇರಿ ಸಂಬಂಧ ಪ್ರವಾಸ ತೆರಳಬಹುದು. ನಿಮ್ಮ ಆರೋಗ್ಯ ಮತ್ತು ತಾಯಿಯೊಂದಿಗಿನ ನಿಮ್ಮ ಸಂಬಂಧದ ಕುರಿತಂತೆ ಧನಾತ್ಮ ಸುದ್ದಿಗಳು ಬರಲಿವೆ. ಸರಕಾರಿ ಸಂಬಂಧಿ ಕಾರ್ಯಗಳಿಂದ ಪ್ರಯೋಜನಗಳು ಸಿಗುವ ಸಾಧ್ಯತೆ ದಟ್ಟವಾಗಿದೆ.
ಸಿಂಹ :-
ಈ ದಿನ ಗ್ರಹಗತಿಗಳು ಸಾಕಷ್ಟು ವಿರೋಧ ಪ್ರಭಾವವನ್ನು ಹೊಂದಿರುವ ಸಾಧ್ಯತೆಯಿದೆ. ಇಂದು ನೀವು ಏನೇ ಮಾಡಿದರೂ ಅದರಲ್ಲಿ ಎಚ್ಚರಿಕೆಯಿಂದಿರುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ನಿಮ್ಮ ಆರೋಗ್ಯವು ಅನಿರೀಕ್ಷಿತವಾಗಿ ಹದಗೆಡುವ ಸಂಭವವಿರುವುದರಿಂದ ಆರೋಗ್ಯದ ಬಗ್ಗೆ ಎಚ್ಚರದಿಂದಿರಿ. ಕಾಳಜಿವಹಿಸಿ. ಆಹಾರ ಕ್ರಮ ಮತ್ತು ವ್ಯಾಯಾಮದೊಂದಿಗೆ ಧಾರ್ಮಿಕ ಚಟುವಟಿಕೆಗಳನ್ನು ಅನುಸರಿಸಿ. ಇದು ನಿಮಗೆ ಪ್ರಚೋದನಕಾರಿಯಾಗಿರಲು ಆವಶ್ಯಕವಿರುವ ಮಾನಸಿಕ ಸ್ಪಷ್ಟತೆಯನ್ನು ನೀಡುತ್ತದೆ. ಋಣಾತ್ಮಕ ಮತ್ತು ಅನೈತಿಕ ಪ್ರಭಾವಗಳಿಂದ ದೂರವಿರಿ. ಜನರು ನಿಮ್ಮ ತಾಳ್ಮೆಯನ್ನು ಪರೀಕ್ಷಿಸಿದರೂ, ಇಂದು ನೀವು ತಾಳ್ಮೆಯಿಂದಿರಿ. ಧ್ಯಾನ, ಆಧ್ಯಾತ್ಮ ಮತ್ತು ಪ್ರಾರ್ಥನೆಯು ನಿಮ್ಮನ್ನು ಸಮಾಧಾನದಲ್ಲಿರಿಸುತ್ತದೆ.
ಕನ್ಯಾ :-
ಘನತೆ, ಅಧಿಕಾರ ವೃದ್ಧಿ, ಗೌರವ ಮತ್ತು ಸಾಮಾಜಿಕ ಸಮ್ಮತಿ. ಇಂದು ನೀವು ನಿಮ್ಮ ಕೆಲಸ ಮತ್ತು ಮನೆಯಲ್ಲಿನ ಸಂಬಂಧಗಳನ್ನು ಪ್ರೋತ್ಸಾಹಿಸಲು ನೀವು ಪಡುವ ಶ್ರಮಕ್ಕೆ ತಕ್ಕುದಾದ ಪ್ರತಿಫಲನನ್ನು ನೀವು ಸಂತೋಷದಿಂದ ಪಡೆಯುವಿರಿ. ಶಾಪಿಂಗ್ ಪ್ರಯಾಣವು ಇಂದಿನ ಕಾರ್ಯಸೂಚಿಯಾಗಲಿದೆ. ಇಂದು ನೀವು ನಿಮ್ಮ ಬಗ್ಗೆ ಮತ್ತು ಇತರರ ಬಗ್ಗೆ ಹೆಚ್ಚು ಪ್ರೀತಿಯನ್ನು ತೋರುತ್ತೀರಿ. ವಾಹನ ಅಥವಾ ದುಬಾರಿ ಆಭರಣ ಖರೀದಿಸುವ ಮೂಲಕ ನಿಮ್ಮನ್ನು ನೀವೇ ಪುರಸ್ಕರಿಸುವಿರಿ. ಮುಂದಕ್ಕೆ ಸಾಗಿ, ನಿಮಗೆ ಎಲ್ಲಾ ಹಕ್ಕುಗಳಿವೆ ಮತ್ತು ಇದು ನೀವು ಕಷ್ಟದಿಂದ ಸಂಪಾದಿಸಿದ ಹಣ. ನಿಮ್ಮ ಪ್ರೀತಿಪಾತ್ರರೊಂದಿಗೆ ಅಥವಾ ಪ್ರೇಮಿಯೊಂದಿಗಿನ ಸಣ್ಣ ಜಗಳವು ಸುಲಭವಾಗಿ ಬಗೆಹರಿಯಲಿವೆ. ಇದು ನಿಮ್ಮ ಸಂಬಂಧವನ್ನು ಇನ್ನಷ್ಟು ಭದ್ರಪಡಿಸಲಿವೆ. ಗ್ರಹಗತಿಗಳು ಈ ಉತ್ತಮ ಅದೃಷ್ಟವನ್ನು ವ್ಯವಹಾರ ಕ್ಷೇತ್ರಗಳಿಗೂ ಹಬ್ಬುತ್ತವೆ. ಕಾರ್ಯಸ್ಥಳದಲ್ಲಿನ ಜೊತೆಗಾರರೊಂದಿಗಿನ ಸಂಬಂಧವು ಪ್ರಯೋಜನಕಾರಿಯಾಗಿದೆ.
ತುಲಾ :-
ಎಲ್ಲಾ ರೀತಿಯಲ್ಲೂ ಉತ್ತಮ ದಿನವು ನಿಮಗಾಗಿ ಕಾದಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಮನಸ್ಸು ಕುಟುಂಬ ಮತ್ತು ಮನೆಯವರೊಂದಿಗಿರುತ್ತದೆ ಮತ್ತು ಆವಶ್ಯಕವಿರುವ ಮಾನಸಿಕ ಸ್ಥಿರತೆ ಮತ್ತು ಶಾಂತಿಯಿಂದ ನೀವು ಸಂತೋಷಪಡುತ್ತೀರಿ. ನೀವು ನಿಮ್ಮ ಸಹೋದ್ಯೋಗಿಗಳು, ವರಿಷ್ಠರು ಮತ್ತು ಮೇಲಾಧಿಕಾರಿಗಳು ಇಂದು ಒಂದೇ ಮನಸ್ಥಿತಿಯನ್ನು ಹೊಂದಿದ್ದು, ಇದರಿಂದಾಗಿ ಕಾರ್ಯಕ್ಷೇತ್ರದಲ್ಲಿನ ವಾತಾವರಣವು ಹಿತಕರವಾಗಿರುತ್ತದೆ. ಇಂದು ನೀವು ಪ್ರೋತ್ಸಾಹದಿಂದ ತುಂಬಿರುತ್ತೀರಿ. ಇಂದು ನೀವು ಸಹವಾಸಪ್ರಿಯರಾಗಿರುತ್ತೀರಿ ಮತ್ತು ಸಂಜೆಯ ವೇಳೆ ಕಚೇರಿ ವಿನೋದ ಕೂಟಕ್ಕಾಗಿ ಎದುರು ನೋಡುತ್ತಿರುತ್ತೀರಿ. ಶುಭಸುದ್ದಿ ಬರಬಹುದು.ಜನಪ್ರಿಯತೆಯು ಇನ್ನಷ್ಟು ವೃದ್ಧಿಗಾಯಲಿದೆ. ವಿರೋಧಿಗಳ ವಿರುದ್ಧ ಗೆಲುವು ಪಡೆಯುವಿರಿ,
ವೃಶ್ಚಿಕ :-
ಈ ದಿನವು ಮಿಶ್ರ ಪ್ರಭಾವವನ್ನು ಹೊಂದಿರುತ್ತದೆ. ಯಾವುದೇ ಹೊಸ ಅಥವಾ ಬಿರುಸಿನ ಕಾರ್ಯ ಪ್ರಾರಂಭ ಕುರಿತಾಗಿ ಗಣೇಶ ನಿಮಗೆ ಎಚ್ಚರಿಕೆ ನೀಡುತ್ತಾರೆ.ವ್ಯವಹಾರ ಸಂಬಂಧಿತ ಪ್ರಯಾಣದಿಂದ ದೂರವಿರಿ ಅಥವಾ ಕನಿಷ್ಟ ಈ ದಿನ ಸಂಜೆಯವರೆಗೆ ಮುಂದೂಡಿ. ವಿದ್ಯಾರ್ಥಿಗಳಿಗೆ ಮತ್ತು ಎಲ್ಲಾ ಶೈಕ್ಷಣಿಕ ವಿಚಾರಗಳಿಗೆ ಈ ದಿನವು ಉತ್ತಮ ದಿನ ಎಂದು ಸಾಬೀತಾಗಲಿದೆ ಆದ್ದರಿಂದ ಅದ್ಯಾಪಕರು, ತರಬೇತುದಾರರು , ಬರಹಗಾರರು ಪ್ರಯೋಜನವನ್ನು ಪಡೆಯಲಿದ್ದೀರಿ. ಹಣಕಾಸು ಮತ್ತು ಆರ್ಥಿಕತೆಗೆ ಸಂಬಂಧಿಸಿದಂತೆ ಇಂದು ಸಾಮಾನ್ಯ ದಿನ. ಇಂದು ನೀವು ಏನು ಶ್ರಮಪಡುತ್ತೀರಿ ಅವೆಲ್ಲದತ್ತೂ ಪ್ರತಿಫಲ ಸಿಗಲಿದೆ. ಶೇರುಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಡಿ. ಅದು ಸುಲಭದ ಹಣವಾಗಿರಬಹುದು ಆದರೆ, ಗ್ರಹಗತಿಗಳು ಸುಲಭವಾಗಿರುವುದಿಲ್ಲ. ಅದರಿಂದ ದೂರವಿರಿ.
ಧನು :-
ಈ ದಿನವು ನಿಮಗೆ ಸಾಮಾನ್ಯ ದಿನವಾಗಿರುತ್ತದೆ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ಈ ದಿನವು ಆಸಕ್ತಿಯಲ್ಲಿರುವಂತೆ ಅನಿಸುವುದಿಲ್ಲ ಆದರೂ, ನೀವು ಶ್ರಮಪಡಬೇಕಾಗುತ್ತದೆ. ಮುಂದೆ ಸಾಗುವ ಹಾದಿಯು ಉತ್ತಮವಾಗಿ ಕಂಡುಬರದ ಕಾರಣ ಎಚ್ಚರಿಕೆಯಿಂದಿರಲು ಪ್ರಯತ್ನಿಸಿ. ನಿಮ್ಮ ಮಾನಸಿಕ ಸ್ಥಿರತೆ ಮತ್ತು ಸಾಮಾಜಿಕ ಗೌರವಕ್ಕೆ ಬೆದರಿಕೆ ಉಂಟುಮಾಡುವಂತಹ ಸಾರ್ವಜನಿರ ಜಗಳಗಳು ಉಂಟಾಗುವ ಸಾಧ್ಯತೆಯಿದೆ. ಆದ್ದರಿಂದ ತುಂಬಾ ಆತ್ಮೀಯರಾಗಿದ್ದರೂ ಅಥವಾ ನಿಮಗೆ ಅತೀಮುಖ್ಯವಾಗಿರುವ ವ್ಯಕ್ತಿಗಳಾಗಿದ್ದರೂ, ಜಗಳಗಂಟರ ಪ್ರಭಾವದಿಂದ ದೂರವಿರಿ. ನೆಮ್ಮದಿಯ ಕೊರತೆ ಹಾಗೂ ಭಿನ್ನಾಭಿಪ್ರಾಯಗಳಿಂದಾಗಿ ಮನೆಯ ವಾತಾವರಣವು ಭಿನ್ನಾಭಿಪ್ರಾಯಗಳಿಂದ ಕೂಡಿರುತ್ತದೆ. ಗ್ರಹಗತಿಗಳ ಕಾರ್ಯಸೂಚಿಯು ಕಾನೂನು ತೊಡಕು ಮತ್ತು ಆಸ್ತಿ ಸಂಬಂಧಿತ ವಿಚಾರಗಳಲ್ಲಿನ ಅಪನಂಬಿಕೆಯ ಮೇಲಿರುತ್ತದೆ. ಏನೇ ಆದರೂ, ವಿಶ್ವಾಸ ಕಳೆದುಕೊಳ್ಳಬೇಡಿ.
ಮಕರ :-
ನಿರ್ದಿಷ್ಟವಾಗಿ ನಿಮ್ಮ ಕಣ್ಣಿಗೆ ಕಂಡಿರುವ ಯಾವುದೋ ಒಂದು ಕೆಲವನ್ನು ಮಾಡುವ ಬಗ್ಗೆ ನೀವು ಮುಂದೆ ಸಾಗಲು ಇಂದು ಅತ್ಯುತ್ತಮ ದಿನ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ನಿಮ್ಮ ಮನಸ್ಸನ್ನು ಆಕ್ರಮಿಸಿರುವ ಈ ವಿಷಯವು ವೃತ್ತಿ ಅಥವಾ ವ್ಯವಹಾರ ಸೇರಿದಂತೆ ನಿಮ್ಮ ಜೀವನದ ಯಾವುದೇ ಕ್ಷೇತ್ರಕ್ಕೆ ಸಂಬಂಧಿಸಿದ್ದಾಗಿರಬಹುದು. ನಿಮ್ಮ ಮನಸ್ಸಿನ ಮೂಲೆಯಲ್ಲಿರುವ, ಅಥವಾ ಬಹಳ ದಿನಗಳಿಂದ ನಿಮ್ಮ ಮನಸ್ಸಿನಲ್ಲಿ ತುಂಬಿರುವ ಆಲೋಚನೆಗಳನ್ನು ಕಾರ್ಯರೂಪಕ್ಕೆ ತಂದು ಫಲಸಾಧಿಸಲು ಇದು ಉತ್ತಮ ಸಮಯ. ಕಳೆದವಾರ ಹಾಕಲಾಗಿದ್ದ ನಕ್ಷೆಯ ರಚನೆಯನ್ನು ಪಡೆಯಲು ಮಾಹಿತಿಪತ್ರದ ಮೂಲಕ ಹುಡುಕಿ.ನಿಮಗೆ ಗೊತ್ತಿರಲಾರದು. ನೀವು ನಿಮ್ಮ ಒಡಹುಟ್ಟಿದವರಿಂದ ಲಾಭ ಮತ್ತು ಸಹಕಾರವನ್ನು ಪಡೆದುಕೊಳ್ಳುವಿರಿ ಎಂಬುದಾಗಿ ಗಣೇಶ ಹೇಳುತ್ತಾರೆ. ಇದು ನಿಮ್ಮನ್ನು ಸಂತೋಷದಲ್ಲಿರಿಸುತ್ತದೆ. ಆರ್ಥಿಕವಾಗಿ ಎಲ್ಲವೂ ಸುಸ್ಥಿತಿಯಲ್ಲಿರುತ್ತದೆ. ವಿದ್ಯಾರ್ಥಿಗಳಿಗೆ ಇಂದು ಅನುಕೂಲಕರ ದಿನ.
ಕುಂಭ :-
ಪ್ರಾರಂಭದಲ್ಲಿ ತೊಂದರೆಯಿಲ್ಲದ ಚರ್ಚೆಯ ರೀತಿಯಲ್ಲಿ ಕಂಡುಬಂದಿರಬಹುದಾದ ವಾಗ್ವಾದಗಳಿಂದ ದೂರವಿರಿ. ಈ ವಾಗ್ವಾದಗಳು ಹೀಗಳೆಯುವಿರೆ, ಅಶಾಂತಿಯ ಸಂಘರ್ಷವಾಗಿ ಕೆಡುಕನ್ನುಂಟುಮಾಡುವ ಸಾಧ್ಯತೆಯಿರುವುದರಿಂದ ಇವುಗಳು ಸಂಭಾವ್ಯ ಅಪಾಯಕಾರಿಯಾಗಿದೆ ಎಂಬುದಾಗಿ ಗಣೇಶ ಎಚ್ಚರಿಕೆ ನೀಡುತ್ತಾರೆ. ಜಗಳಗಳು ನಿಮ್ಮ ಕುಟುಂಬಕ್ಷೇತ್ರದ ಶಾಂತಿ ಮತ್ತು ಸಮಾಧಾನವನ್ನು ಕದಡುತ್ತದೆ. ನೀವು ಕಷ್ಟ ಪರಿಸ್ಥಿತಿ, ಕೆಲದಸದಲ್ಲಿನ ಜನರು, ಮತ್ತು ನಿಮ್ಮ ದುರ್ಬಲ ನಿರ್ಧಾರ ಕೈಗೊಳ್ಳುವಿಕೆ ಸಾಮರ್ಥ್ಯದ ಎದುರು ಸೋಲುವಿರಿ. ಇದು ನಿಮ್ಮನ್ನು ಇನ್ನಷ್ಟು ಒತ್ತಡದಲ್ಲಿರಿಸುತ್ತದೆ. ಧಾರ್ಮಿಕ ಮತ್ತು ಇತರ ದೈವಿಕ ಉದ್ದೇಶಗಳಲ್ಲಿ ನಿಮ್ಮ ಹಣ ಮತ್ತು ಸಮಯವನ್ನು ಕಳೆಯುವುದರಿಂದ ನೀವು ನೆಮ್ಮದಿಯನ್ನು ನಿರೀಕ್ಷಿಸಬಹುದು. ಒತ್ತಡವನ್ನು ಯಶಸ್ವಿಯಾಗಿ ನಿಭಾಯಿಸಲು ಕಟ್ಟುನಿಟ್ಟಿನ ಆರೋಗ್ಯ ಮತ್ತು ಆಹಾರ ಕ್ರಮಗಳಿಗೆ ಬದ್ಧರಾಗಿರುವುದು ಅತೀ ಮುಖ್ಯ.
ಮೀನ :-
ಅದೃಷ್ಟದಾಯಕ ದಿನವು ನಿಮಗಾಗಿ ಕಾದಿದೆ ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ. ಸದೃಢ ಸಾಮರ್ಥ್ಯ ಮತ್ತು ಉತ್ಸಾಹದೊಂದಿಗೆ ಇಂದು ನೀವು ಪ್ರಾಯೋಗಿಕವಾಗಿ ಪ್ರಕಾಶಿತಗೊಳ್ಳುತ್ತೀರಿ. ಹೊಸ ಯೋಜನೆಗಳನ್ನು ಪ್ರಾರಂಭಿಸಲು, ಮನಸ್ಸಲ್ಲಿದ್ದ ಕೆಲವು ವ್ಯವಹಾರ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಇಂದು ಸೂಕ್ತ ದಿನ. ಮುಂದಕ್ಕೆ ಸಾಗಿ, ಹೂಡಿಕೆ ಮಾಡಿ ಮತ್ತು ಲಾಭ ಪಡೆಯಿರಿ. ಆದರೂ, ಹಣದ ವಿಚಾರದಲ್ಲಿ ಮಿತವ್ಯಯವಿರಲಿ. ಮಿತಿಮೀರಿದ ಖರ್ಚು ಮಾಡುವ ಗುಣವು ನಿಮ್ಮ ರಾಶಿಯವರಿಗೆ ಸಾಮಾನ್ಯ. ನಿಮ್ಮ ಸ್ಮೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ರಸದೌತಣವು ನಿಮಗಾಗಿ ಕಾದಿದೆ. ಕೆಲಸದಲ್ಲಿ ಯಶಸ್ಸು ಸಾಧಿಸುತ್ತೀರಿ. ಹಳೆಯ ದೇವಾಲಯಗಳಿಗೆ ಅಥವಾ ನಿಮಗಿಷ್ಟವಾದ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿನೀಡುವ ಬಗ್ಗೆ ಚಿಂತಿಸುತ್ತೀರಿ.ಸಾಮಾನ್ಯವಾಗಿ ಹೇಳುದಾದರೆ ಪ್ರಯಾಣವು ನಿಮ್ಮನ್ನು ಉತ್ಸಾಹಿತರನ್ನಾಗಿಸುತ್ತದೆ.
Horoscope Today : 20 ಮಾರ್ಚ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
WhatsApp Group
Join Now