19 ಮಾರ್ಚ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

Spread the love

ಮೇಷ :-

ಇಂದಿನ ದಿನವು ಅನನುಕೂಲತೆಯಿಂದ ಕೂಡಿರುವ ಸಾಧ್ಯತೆಯಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಮಾನಸಿಕ ಸ್ಥಿತಿ ಮತ್ತು ದೈಹಿಕ ಆರೋಗ್ಯವು ನಿಮ್ಮ ಉತ್ಸಾಹಗುಂದಿಸುತ್ತದೆ. ಅನಗತ್ಯ ಖರ್ಚುಗಳ ವೆಚ್ಚವೂ ವರ್ಧಿಸುವ ಸಾಧ್ಯತೆಯಿದೆ. ನಿಮ್ಮ ಉಳಿತಾಯದಲ್ಲಿ ಬಂಡವಾಳ ಹೂಡುವ ಬಗ್ಗೆ ಇಂದು ನೀವು ಯೋಜನೆ ರೂಪಿಸಬೇಕಾದ ಅಗತ್ಯವಿದೆ.

ನೀವು ಉದಾರಿಗಳಾದ ಕಾರಣ ನೀವು ಹೆಚ್ಚು ಕಳೆದುಕೊಳ್ಳುವ ಸಾಧ್ಯತೆಯಿದೆ. ಆದ್ದರಿಂದ ಎಚ್ಚರದಿಂದಿರಿ. ಕೊಡುಕೊಳ್ಳುವಿಕೆಯ ವಿಚಾರಗಳಲ್ಲಿ ವ್ಯವಹರಿಸುವಾಗ ನೀವು ಜಾಗರೂಕತೆಯಿಂದ ಇರಬೇಕಾಗುತ್ತದೆ. ಇಂದು ನೀವು ಆಧ್ಯಾತ್ಮದತ್ತ ಒಲವು ತೋರುತ್ತೀರಿ. ನಿರ್ಧಾರ ಕೈಗೊಳ್ಳಲು ನಿಮಗೆ ಇಂದು ಕಷ್ಟಕರವಾಗಬಹುದು ಪರಿಣಾಮವಾಗಿ ದಿನವಿಡೀ ವಿವಿಧ ರೀತಿಯ ಗೊಂದಲಗಳು ನಿಮ್ಮನ್ನು ಕಾಡುತ್ತಿರುತ್ತವೆ.

ವೃಷಭ :-

ಈ ದಿನವು ನಿಮ್ಮನ್ನು ಸಂಭಾವ್ಯ ಖುಷಿಯಲ್ಲಿರಿಸುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಲಕ್ಷ್ಮೀದೇವಿಯು ನಿಮ್ನನ್ನು ಹರಸುತ್ತಾಳೆ ಮತ್ತು ಇದರ ಪರಿಣಾಮವಾಗಿ ನಿಮ್ಮ ವ್ಯವಹಾರದಲ್ಲಿ ವೃದ್ಧಿಯಾಗಲಿದೆ. ಸ್ನೇಹಿತರು ಮತ್ತು ಪ್ರೀತಿಪಾತ್ರರು ಆತ್ಮೀಯತೆಯ ವಾತಾವರಣವನ್ನು ಸೃಷ್ಟಿಸಲಿದ್ದಾರೆ. ವ್ಯವಹಾರದಲ್ಲಿ ಮತ್ತು ವೃತ್ತಿಯಲ್ಲಿ ಹೊಸ ಸ್ನೇಹ ಅಥವಾ ಪರಿಚಯ ಉಂಟಾಗುವ ಸಾಧ್ಯತೆಯಿದೆ. ಸಣ್ಣ ಪ್ರವಾಸವು ನಿಮಗೆ ಸಾಕಷ್ಟು ಸಂತಸವನ್ನು ತರಬಹುದು. ಸಂಕ್ಷಿಪ್ತವಾಗಿ, ಈ ದಿನವು ಎಲ್ಲಾ ಕ್ಷೇತ್ರಗಳಲ್ಲಿ ನಿಮಗೆ ಆನಂದವನ್ನು ನೀಡಲಿದೆ.

ಮಿಥುನ :-

ಈ ದಿನವು ನಿಮಗೆ ಸಾಕಷ್ಟು ಲಾಭಗಳನ್ನು ಆಹ್ವಾನಿಸಲಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಅವಿವಾಹಿತರಿಗೆ ಉತ್ತಮ ಸಂಗಾತಿ ದೊರೆಯುವ ಸಾಧ್ಯತೆಯಿದೆ. ಆರ್ಥಿಕ ಲಾಭಗಳಿಗೂ ಇಂದು ಉತ್ತಮ ದಿನ. ಗೆಳೆಯರ ಭೇಟಿ ಮತ್ತು ಸಂತೋಷ ಹಂಚುವಿಕೆಯು ಈ ದಿನವನ್ನು ಫಲಭರಿತವನ್ನಾಗಿಸುತ್ತದೆ. ಈಗ, ಎಲ್ಲಾ ಉತ್ತಮ ವಿಚಾರಗಳು ಒಟ್ಟಾಗಿ ಬರಲಿವೆ. ನಿಮ್ಮ ಅಭಿವೃದ್ಧಿಯ ಬಗ್ಗೆ ನಿಮ್ಮ ಮಗ ಮತ್ತು ಪತ್ನಿಯು ಸಮರ್ಥನೆಯಲ್ಲಿ ತೊಡಗಿರುವ ಜೊತೆಗೆ ನಿಮಗೆ ಸ್ವಾದಿಷ್ಟ ಭೋಜನ ಉಪಚಾರವೂ ಸಿಗಲಿದೆ. ನಿಮ್ಮ ಮಕ್ಕಳಿಂದ ಶುಭ ಸುದ್ದಿಯನ್ನು ನಿರೀಕ್ಷಿಸಬಹುದು.ಇಂದು ನಿಮ್ಮ ಉದ್ಯೋಗ/ವ್ಯವಹಾರದಲ್ಲಿ ಅಬಿವೃದ್ಧಿ ಮತ್ತು ಆದಾಯದಲ್ಲಿನ ವರ್ಧನೆ ಉಂಟಾಗಲಿದ್ದು, ಇಂದು ನಿಮ್ಮ ಕಿಸೆ ಭರ್ತಿಯಾಗಿರಬಹುದು. ಈ ಆಕಸ್ಮಿಕ ಸಮಯದ ಉತ್ತಮ ಪ್ರಯೋಜನ ಪಡೆದುಕೊಳ್ಳಿ.

ಕರ್ಕಾಟಕ :-

ಕರ್ಕಾಟಕ ರಾಶಿಯವರಿಗೆ ಇಂದು ಅವಕಾಶಗಳು ಕಾದಿವೆ ಎಂಬುದಾಗಿ ಗಣೇಶ ಹೇಳುತ್ತಾರೆ. ಎಲ್ಲಾ ಕಾರ್ಯಗಳು ಇಂದು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ನಿಮ್ಮ ಮೇಲಾಧಿಕಾರಿಗಳೊಂದಿಗೆ ನೀವು ಅತಿ ಮುಖ್ಯ ಚರ್ಚೆಯಲ್ಲಿ ತೊಡಗಬಹುದು ಮತ್ತು ಇದರಲ್ಲಿನ ನಿಮ್ಮ ನಿರ್ವಹಣೆಯ ಬಗ್ಗೆ ಅವರು ಸಂತಸಗೊಳ್ಳಬಹುದು. ಇಂದು ನಿಮಗೆ ಬಡ್ತಿ ಸಿಗುವ ಯೋಗವಿದೆ. ಗೃಹಕ್ಷೇತ್ರದಲ್ಲಿ, ನಿಮ್ಮ ಕುಟುಂಬ ಸದಸ್ಯರೊಂದಿಗಿನ ಸಂವಾದವು ಮತ್ತು ನಿಮ್ಮ ಮನೆಯ ಸೌಂದರ್ಯ ವೃದ್ಧಿಗಾಗಿ ನೀವು ಕೈಗೊಳ್ಳುವ ಹೊಸ ಆಲಂಕಾರಿಕ ವಿಚಾರಗಳಿಂದ ನಿಮ್ಮನ್ನು ಸಂತೋಷದಲ್ಲಿರಿಸುತ್ತದೆ. ಇಂದು ನೀವು ಕಚೇರಿ ನಿಮಿತ್ತ ಪ್ರವಾಸ ತೆರಳುವಿರಿ. ನಿಮ್ಮ ಆರೋಗ್ಯ, ಮತ್ತು ತಾಯಿಯೊಂದಿಗಿನ ನಿಮ್ಮ ಸಂಬಂಧದ ಬಗ್ಗೆ ಧನಾತ್ಮಕ ಸುದ್ದಿಗಳು ಬರಲಿವೆ. ಸರಕಾರಿ ಸಂಬಂಧಿ ಕಾರ್ಯಗಳಿಂದ ಪ್ರಯೋಜನ ಸಿಗುವ ಸಾಧ್ಯತೆಗಳು ದಟ್ಟವಾಗಿವೆ..

ಸಿಂಹ :-

ಈ ದಿನವು ಸಾಧಾರಣ ದಿನವಾಗಿದೆ ಎಂದು ಗಣೇಶ ಹೇಳುತ್ತಾರೆ. ಧಾರ್ಮಿಕ ಮತ್ತು ಶುಭಕರ ಚಟುವಟಿಕೆಗಳಲ್ಲಿ ನೀವು ಭಾಗಿಯಾಗಬಹುದು ಜೊತೆಗೆ ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸ ತೆರಳಬಹುದು. ಇಂದು ನಿಮ್ಮ ಸಿಡುಕಿನ ಬಗ್ಗೆ ನೀವು ಹತೋಟಿಯಿರಿಸಬೇಕು. ವಿದೇಶದಲ್ಲಿರುವ ನಿಮ್ಮ ಪ್ರೀತಿಪಾತ್ರರಿಂದ ನೀವು ಸುದ್ದಿಯನ್ನು ನಿರೀಕ್ಷಿಸಬಹುದು. ನಿಮ್ಮ ಕಾರ್ಯದಲ್ಲಿ ಅಡೆತಡೆಗಳನ್ನು ಎದುರಿಸಬೇಕಾಗುವುದರಿಂದ ಇಂದು ನಿಯೋಜಿಸಿದ ಕಾರ್ಯದ ಮೇಲೆ ಗಮನಹರಿಸಿ ಮತ್ತು ಅದನ್ನು ಪೂರ್ಣಗೊಳಿಸುವ ಬಗ್ಗೆ ನೀವು ಏಕಾಗ್ರತೆಯನ್ನು ಹೊಂದಬೇಕಾಗುತ್ತದೆ. ಮಾನಸಿಕವಾಗಿ ನೀವು ಅಸ್ಥಿರತೆಯಿಂದ ಕೂಡಿರಬಹುದು. ಇದಕ್ಕೆ ನಿಮ್ಮ ಮಕ್ಕಳು ಕಾರಣವಾಗಿರಬಹುದು.

ಕನ್ಯಾ :-

ನೀವು ಹೊಸ ಯೋಜನೆಗಳನ್ನು ಪ್ರಾರಂಭಿಸಲು ಆಲೋಚಿಸಿದ್ದಲ್ಲಿ ಈ ದಿನ ಶ್ರೇಯಸ್ಕರವಲ್ಲ ಎಂದು ಗಣೇಶ ಹೇಳುತ್ತಾರೆ. ರಸ್ತೆಬದಿಯ ಮಳಿಗೆಗಳಲ್ಲಿರುವ ಚಾಟ್ಸ್ ಮುಂತಾದ ತಿನಿಸುಗಳನ್ನು ತಿನ್ನಬೇಡಿ. ಅವುಗಳಿಂದ ನಿಮ್ಮ ಆರೋಗ್ಯಕ್ಕೆ ತೊಂದರೆ ಉಂಟಾಗಬಹುದು. ನಿಮ್ಮ ಕೋಪವನ್ನು ನಿಗ್ರಹಿಸಿ ಮತ್ತು ಒರಟು ಮಾತುಗಳನ್ನು ನಿಯಂತ್ರಿಸಿ. ಇದು ಕೆಲವು ಅಹಿತಕರ ಸನ್ನಿವೇಶಗಳನ್ನು ತಡೆಯಲು ಸಹಕಾರಿಯಾಗುತ್ತದೆ. ನಿಮ್ಮ ಕುಟುಂಬ ಸದಸ್ಯರೊಂದಿಗಿನ ಕೋಪಭರಿತ ವಾಗ್ವಾದಗಳು ನಿಮ್ಮನ್ನು ಬೇಸರಗೊಳಿಸುತ್ತದೆ. ನೀರಿರುವ ಪ್ರದೇಶಗಳಿಂದ ದೂರವಿರಿ. ಖರ್ಚುವೆಚ್ಚದಳು ಹೆಚ್ಚಾಗಲಿವೆ. ಅನೈತಿಕ ಅಥವಾ ಕಾನೂನುಬಾಹಿರ ಚಟುವಟಿಕೆಗಳಿಂದ ದೂರವಿರುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ಇದು ಸಂಘರ್ಷಕ್ಕೆ ಹಾದಿ ಮಾಡಿಕೊಡುತ್ತದೆ.

ತುಲಾ :-

ಇಂದು ಸಂತಸಭರಿತ ಹಾಗೂ ನಿಶ್ಚಿಂತೆಯ ದಿನವಾಗಲಿದೆ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ಇಂದು, ಬಹುಸಂಸ್ಕೃತಿಯ ಅಂಶಗಳು/ಘಟನೆಗಳು ನಿಮ್ಮ ದಿನವನ್ನು ಮುಂದುವರಿಸಲಿವೆ. ಇಂದು ವಾರ್ಡ್‌ರೋಬ್‌ನ್ನು ಇನ್ನಷ್ಟು ವೃದ್ಧಿಗೊಳಿಸಲು ಮತ್ತು ಹೊಸ ಉಡುಗೆ ಮತ್ತು ಆಭರಣಗಳನ್ನು ಖರೀದಿಸುವ ದಿನವಾದ್ದರಿಂದ ನಿಮ್ಮನ್ನು ನೀವೇ ಹುರಿದುಂಬಿಸಿಕೊಳ್ಳಿ. ಮಾನಸಿಕವಾಗಿ ಮತ್ತು ದೈಹಿಕವಾಗಿ ನೀವು ಉಲ್ಲಾಸದಿಂದಿರುತ್ತೀರಿ. ಸಮಾಜದಲ್ಲಿನ ಗೌರವ ಮತ್ತು ಮನ್ನಣೆಯ ಜೊತೆ ನೀವೇ ತಯಾರಿಸಿದ ನೀವು ಸ್ವಾದಿಷ್ಟ ಭೋಜನವನ್ನು ಸವಿಯಲಿದ್ದೀರಿ.ಆನಂದಿಸಿ.

ವೃಶ್ಚಿಕ :-

ಇಂದಿನ ದಿನ ಮಿಶ್ರ ಶಕುನಗಳ ದಿನ ಎಂಬುದಾಗಿ ಗಣೇಶ ಹೇಳುತ್ತಾರೆ. ವಿದ್ಯಾರ್ಥಿಗಳು ಓದಿನಲ್ಲಿ ಒಳ್ಳೆಯದನ್ನು ನಿರೀಕ್ಷಿಸಬಹುದು. ಹೊಸ ಯೋಜನೆ ಮತ್ತು ಕಾರ್ಯಗಳನ್ನು ಕೈಗೆತ್ತಿಕೊಳ್ಳುವುದು ಬೇಡ. ಆರ್ಥಿಕವಾಗಿ ನಿಮ್ಮ ಪ್ರಯತ್ನಗಳಿಂದ ಉತ್ತಮ ಫಲಿತಾಂಶವನ್ನು ನಿರೀಕ್ಷಿಸಬಹುದು. ನೀವು ಯಾವುದೇ ಕಾರಣಕ್ಕೂ ಶೇರು ಮಾರುಕಟ್ಟೆಯಿಂದ ದೂರವಿರಿ. ಸಾಧ್ಯವಿದ್ದರೆ ಪ್ರಯಾಣದಿಂದ ದೂರವಿರಿ.

ಧನು :-

ಮಾನಸಿಕ ತುಮುಲದಿಂದಾಗಿ ಇಂದು ನಿಮ್ಮ ಮನಸ್ಸು ಶಾಂತಿಯಿಂದಿರುವುದಿಲ್ಲ ಎಂಬುದಾಗಿ ಗಣೇಶ ಹೇಳುತ್ತಾರೆ. ದಿನವಿಡೀ ಕಾಡಲಿರುವ ಅಸ್ಥಿರ ಮನೆಯ ವಾತಾವರಣದಿಂದಾಗಿ, ನಿಮ್ಮ ಕುಟುಂಬ ಸದಸ್ಯರೊಂದಿಗೆ ನೀವು ಸಂಘರ್ಷಕ್ಕೆ ಒಳಗಾಗಬಹುದು. ಆಸ್ತಿ ಸಂಬಂಧಿತ ವಿಚಾರಗಳಲ್ಲಿ ವ್ಯವಹರಿಸುವಾಗ ಎಚ್ಚರಿಕೆ ವಹಿಸಿ. ಆರ್ಥಿಕ ನಷ್ಟ ಉಂಟಾಗಲಿದೆ. ನಿಮ್ಮ ಹೆಸರಿಗೆ ಕಳಂಕ ತರುವ ಪರಿಸ್ಥಿತಿಯಲ್ಲಿ ಭಾಗಿಯಾಗುವುದನ್ನು ತಪ್ಪಿಸಿ. ನಿಮ್ಮ ತಾಯಿಯ ಆರೋಗ್ಯವು ನಿಮ್ಮನ್ನು ಚಿಂತೆಗೀಡುಮಾಡುತ್ತದೆ. ನಿಮಗೆ ಎದೆನೋವಿನ ಅನುಭವವಾಗಬಹುದು.

ಮಕರ :-

ಇಂದಿನ ದಿನವನ್ನು ನೀವು ನಿಮ್ಮ ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಉಲ್ಲಾಸದಿಂದ ಕಳೆಯುತ್ತೀರಿ.ಹರ್ಷದಾಯಕ ಪ್ರವಾಸ ತೆರಳುವ ಸಾಧ್ಯತೆಯಿದೆ. ಆಸ್ತಿ ಸಂಬಂಧಿತ ಎಲ್ಲಾ ವಿಚಾರಗಳಲ್ಲೂ ಜಾಗರೂಕರಾಗಿರಬೇಕು. ವೃತ್ತಿನಿರತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಈ ದಿನವು ಅನುಕೂಲಕರವಾಗಿರುತ್ತದೆ. ಇಂದು ನೀವು ನಿಮ್ಮ ಸ್ಪರ್ಧಾಗಳುಗಳನ್ನು ಮಣಿಸುತ್ತೀರಿ. ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯವು ಇಂದು ನಿಮ್ಮನ್ನು ವ್ಯಾಕುಲತೆಗೆ ಒಳಪಡಿಸುವುದಿಲ್ಲ. ಸಂಭಾವ್ಯ ಧನಲಾಭದ ಯೋಗವಿದೆ. ಹೊಸ ಯೋಜನೆಗಳನ್ನು ಪ್ರಾರಂಭಿಸಲು ಇಂದು ಸಕಾಲ.

ಕುಂಭ :-

ವಿವಿಧ ವಿಚಾರಗಳ ಬಗ್ಗೆ ನಿರ್ಧಾರ ಕೈಗೊಳ್ಳಲು ಇಂದು ನಿಮಗೆ ಕಷ್ಟವೆನಿಸಬಹುದು ಎಂಬುದಾಗಿ ಗಣೇಶ ಹೇಳುತ್ತಾರೆ. ಅನಗತ್ಯ ವೆಚ್ಚಗಳನ್ನು ತಪ್ಪಿಸಿ. ನಿಮ್ಮ ನಾಲಗೆಯನ್ನು ಹತೋಟಿಯಲ್ಲಿಡಲಾಗದ ನಿಮ್ಮ ಅಸಾಮರ್ಥ್ಯವು ನಿಮ್ಮ ಕುಟುಂಬ ಸದಸ್ಯರೊಂದಿಗೆ ಸಂಘರ್ಷಕ್ಕೆ ಕಾರಣವಾಗುವ ಸಾದ್ಯತೆಯಿದೆ. ವಿದ್ಯಾರ್ಥಿಗಳು ತಮ್ಮ ಓದಿನಲ್ಲಿ ಏಕಾಗ್ರತೆಯನ್ನು ಬೆಳೆಸಿಕೊಳ್ಳಬೇಕು. ಯಶಸ್ವಿಯಾಗಲು ಸ್ವಲ್ಪ ಸಮಯ ಬೇಕಾದೀತು. ತಾಳ್ಮೆಯಿಂದಿರಿ.

ಮೀನ :-

ನೀವು ಮಾನಸಿಕವಾಗಿ ಆರಾಮದಾಯಕ ಹಾಗೂ ದೈಹಿಕಾಗಿ ಆರೋಗ್ಯದಿಂದಿರುವ ಸಾಧ್ಯತೆಯಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಉತ್ಸಾಹವು ಹೊಸ ಯೋಜನೆಗಳನ್ನು ಪ್ರಾರಂಭಿಸಲು ನಿಮಗೆ ಉತ್ತೇಜನ ನೀಡುತ್ತದೆ. ನಿಮ್ಮ ಮನೆಯ ವಾತಾವರಣವು ಅನ್ಯೋನ್ಯವಾಗಿರುವ ಸಾಧ್ಯತೆಯಿದೆ. ನಿಮ್ಮ ಸ್ನೇಹಿತರು ಹಾಗೂ ಪ್ರೀತಿಪಾತ್ರರೊಂದಿಗೆ ಪ್ರವಾಸ ತೆರಳುವಿರಿ. ಆರ್ಥಿಕ ಲಾಭ ಉಂಟಾಗಲಿದೆ. ಧಾರ್ಮಿಕ ಚಟುವಟಿಕೆಗಳಿಗೆ ಮತ್ತು ಯಾತ್ರೆಗಳಿಗೆ ವೆಚ್ಚಮಾಡಬಹುದು.

WhatsApp Group Join Now

Spread the love

Leave a Reply