ಮೇಷ :-
ನಿಮ್ಮ ವರ್ತನೆ ಹಾಗೂ ಮಾತಿನ ಮೇಲೆ ಸ್ತಿಮಿತವಿಡಿ ಎಂಬುದಾಗಿ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ಹಗೆತನ ಮತ್ತು ಕೋಪವನ್ನು ತೊಡೆದುಹಾಕುವಂತೆ ನಿಮಗೆ ಸಲಹೆ ನೀಡಲಾಗುತ್ತದೆ. ನಿಮ್ಮ ಶತ್ರುಗಳ ಹಗ್ಗೆ ಎಚ್ಚರದಿಂದಿರಿ. ರಹಸ್ಯ ವಿಚಾರಗಳು ನಿಮ್ಮ ಗಮನ ಸೆಳೆಯಬಹುದು.
ಪ್ರಯಾಣದ ವೇಳೆ ಅನಿರೀಕ್ಷಿತ ಅಡೆತಡೆಗಳು ಉಂಟಾಗುವ ಸಾಧ್ಯತೆಯಿರುವುದರಿಂದ ಪ್ರಯಾಣವನ್ನು ತಪ್ಪಿಸಿ. ಸಾಧ್ಯವಿದ್ದಷ್ಟು ಇಂದು ಹೊಸ ಯೋಜನೆಯನ್ನು ಪ್ರಾರಂಭಿಸಬೇಡಿ. ಆಧ್ಯಾತ್ಮಿಕ ಅಭಿವೃದ್ಧಿಯ ಸಂಭಾವ್ಯತೆಯಿದೆ. ಈ ದಿನವು ನಿಮಗೆ ಮಿಶ್ರಫಲವನ್ನು ನೀಡಬಹುದು.
ವೃಷಭ :-
ಈ ದಿನವು ಅನುಕೂಲಕರ ದಿನವಾಗಲಿದೆ. ನೀವು ಆರೋಗ್ಯವಾಗಿ ಮತ್ತು ಉಲ್ಲಾಸವಾಗಿರುತ್ತೀರಿ. ಮಾನಸಿಕ ಮತ್ತು ದೈಹಿಕ ಆರೋಗ್ಯವು ಸುಸ್ಥಿತಿಯಲ್ಲಿರುತ್ತದೆ. ಹೆಚ್ಚಿನ ಸಮಯವನ್ನು ನಿಮ್ಮ ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಕಳೆಯುವಿರಿ. ಸಾಮಾಜಿಕ ವಲಯದಲ್ಲಿ ಯಶಸ್ಸನ್ನು ಸಾಧಿಸುವಿರಿ. ದೂರದ ಪ್ರದೇಶಗಳಿಂದ ಶುಭಸುದ್ಧಿ ಹಾದಿಯಲ್ಲಿದೆ.ವೈವಾಹಿಕ ಜೀವನದಲ್ಲಿ ಸಂತಸ ತುಂಬಿರುತ್ತದೆ. ಅನಿರೀಕ್ಷಿತ ಧನಲಾಭದ ಯೋಗವಿದೆ.
ಮಿಥುನ :-
ಅನುಕೂಲಕರ ದಿನವು ನಿಮ್ಮ ಹಾದಿಯಲ್ಲಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಮನೆಯ ವಾತಾವರಣವು ಹರ್ಷ ಹಾಗೂ ಶಾಂತಿಯಿಂದ ತುಂಬಿರುತ್ತದೆ. ಮನೆಯಲ್ಲಿ ಆನಂದದ ಸಮಾರಂಭಗಳು ನಡೆಯಲಿವೆ. ನೀವು ಖರ್ಚು ಮಾಡುತ್ತೀರಿ ಆದರೆ ಅಗತ್ಯವಿದ್ದರೆ ಮಾತ್ರ. ಹಣಕಾಸು ಲಾಭ ದೊರೆಯವು ಸಾಧ್ಯತೆಯಿದೆ. ನೀವು ಆರೋಗ್ಯವಂತರಾಗಿರುತ್ತೀರಿ ಮತ್ತು ನಿಮ್ಮ ಕೆಲಸಗಳಲ್ಲಿ ಯಶಸ್ಸನ್ನು ಸಾಧಿಸುತ್ತೀರಿ. ಮಹಿಳಾ ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆಯಿದೆ. ಬಾಕಿ ಉಳಿದಿರುವ ಕಾರ್ಯಗಳು ಚೈತನ್ಯವನ್ನು ತರಲಿವೆ. ನಿಮ್ಮ ಕೋಪವು ನಿಮ್ಮ ಕೆಲಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಕಾರಣ ಕೋಪವನ್ನು ನಿಯಂತ್ರಿಸುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ.ಸಹೋದ್ಯೋಗಿಗಳಿಂದ ಸಹಕಾರ ದೊರೆಯಲಿದೆ. ನಿಮ್ಮ ಪ್ರತಿಸ್ಪರ್ಧಿಗಳ ಎದುರು ಗೆಲುವು ಸಾಧಿಸುತ್ತೀರಿ.
ಕರ್ಕಾಟಕ :-
ಇಂದು ನೀವು ಸ್ವಲ್ಪ ಜಾಗರೂಕರಾಗಿರುವ ಸಾಧ್ಯತೆಯಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಮಾನಸಿಕ ಮತ್ತು ದೈಹಿಕ ಆರೋಗ್ಯವು ಹದಗೆಡಲಿದೆ. ಇಂದು ಯಾವುದೇ ಹೊಸ ಯೋಜನೆಗಳನ್ನು ಪ್ರಾರಂಭಿಸಬೇಡಿ. ಮಾನಸಿಕ ಅವಿಶ್ರಾಂತ ಮತ್ತು ಭೀತಿಯನ್ನು ಹೊಂದುವಿರಿ. ನೀವು ಅಹಿತಕರ ಭಾವನೆಯನ್ನು ಹೊಂದುವಿರಿ. ಉದರ ಸಂಬಂಧಿ ತೊಂದರೆಗಳು ನಿಮ್ಮನ್ನು ಕಾಡಬಹುದು. ಅನಿರೀಕ್ಷಿತ ಖರ್ಚುವೆಚ್ಚಗಳಿಗೆ ಸಿದ್ಧರಾಗಿರಿ. ಪ್ರೀತಿಪಾತ್ರರೊಂದಿಗಿನ ಸಣ್ಣ ಜಗಳವು ನಿಮ್ಮ ಸಂಬಂಧದ ಬಿರುಕಿಗೆ ಕಾರಣವಾಗಬಹುದು. ಪ್ರಯಾಣವನ್ನು ತಪ್ಪಿಸಿ. ಮುಜುಗರಕ್ಕೆ ಒಳಗಾಗುವುದನ್ನು ತಪ್ಪಿಸಲು ನಿಮ್ಮ ಲೈಂಗಿಕ ಆಕಾಂಕ್ಷೆಗಳನ್ನು ನಿಯಂತ್ರಿಸಿ.
ಸಿಂಹ :-
ಸಿಂಹ ರಾಶಿಯವರಿಗೆ ಅನುಕೂಲಕರ ದಿನ ಕಾದಿದೆ. ಕುಟುಂಬದಲ್ಲಿ ಉಂಟಾದ ಚರ್ಚೆಗಳಿಂದಾಗಿ ಬೇಸರ ಉಂಟಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಮಾನಸಿಕ ಮತ್ತು ದೈಹಿಕ ಆರೋಗ್ಯವು ಸುಸ್ಥಿತಿಯಲ್ಲಿರುತ್ತದೆ. ಗೊಂದಲ ಮತ್ತು ಋಣಾತ್ಮಕ ಆಲೋಚಲನೆಗಳು ನಿಮ್ಮನ್ನು ಕಾಡುತ್ತದೆ. ನಿಮ್ಮ ತಾಯಿಯು ಅನಾರೋಗ್ಯ ಹೊಂದಬಹುದು. ಒತ್ತಡವಿರುತ್ತದೆ ಮತ್ತು ಇದರಿಂದಾಗಿ ನೀವು ನಿದ್ರಾರಹಿತರಾಗಬಹುದು. ನೀರು ಮತ್ತು ಮಹಿಳೆಯ ಬಗ್ಗೆ ಎಚ್ಚರದಿಂದಿರಿ. ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡಲಾರಿರಿ. ನಿಮ್ಮ ಕೆಲಸವು ನಿಮ್ಮನ್ನು ಚಿಂತೆಗೀಡುಮಾಡಬಹುದು. ಆಸ್ತಿ ಸಂಬಂಧಿತ ವಿಚಾರಗಳಲ್ಲಿ ಎಚ್ಚರಿಕೆಯಿಂದಿರಿ.
ಕನ್ಯಾ :-
ಯಾವುದೇ ಕಾರ್ಯವನ್ನು ಪ್ರಾರಂಭಿಸುವ ಮೊದಲು ಸಾಕಷ್ಟು ಯೋಚಿಸುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ.ನಿಮ್ಮ ಸ್ನೇಹಿತರೊಂದಿಗೆ ಸಂಭ್ರಮದಿಂದ ಕಾಲ ಕಳೆಯುವಿರಿ. ಇಂದು ನೀವು ಅತ್ಯಂತ ಭಾವುಕರಾಗಿರುವಿರಿ. ನಿಮ್ಮ ಹೃದಯಕ್ಕೆ ಹತ್ತಿರವಾಗಿರುವ ಜನರನ್ನು ಇಂದು ನೀವು ಭೇಟಿಮಾಡಲಿರುವಿರಿ. ನಿಮ್ಮ ಒಡಹುಟ್ಟಿದವರಿಂದ ಪ್ರಯೋಜನ ಉಂಟಾಗಲಿದೆ. ನಿಮ್ಮ ಪ್ರತಿಸ್ಪರ್ಧಿಗಳ ಎದುರಲ್ಲಿ ನೀವು ಉನ್ನತಿಯನ್ನು ಕಾಣುತ್ತೀರಿ. ರಹಸ್ಯ ಆಧ್ಯಾತ್ಮ ವಿಚಾರಗಳಲ್ಲಿ ಅಭಿವೃದ್ಧಿ ಉಂಟಾಗುವ ಸಾಧ್ಯತೆಯಿದೆ.
ತುಲಾ :-
ಇಂದು ನೀವು ದಿಗ್ಭ್ರಮೆಯಿಂದ ಕೂಡಿರುವ ಸಾದ್ಯತೆಯಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ದಿನವಿಡೀ ನಿಮ್ಮನ್ನು ಗೊಂದಲದಲ್ಲಿ ಸಿಲುಕಿಸುವಂತಹ ಹೊಸ ಯೋಜನೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ತಪ್ಪಿಸುವಂತೆ ನಿಮಗೆ ಸಲಹೆ ನೀಡಲಾಗುತ್ತದೆ. ನಿಮ್ಮ ಸಹೋದ್ಯೋಗಿಗಳೊಂದಿಗಿನ ಸಂಬಂಧವು ಔಪಚಾರಿಕವಾಗಿರಲಿ ಯಾಕೆಂದರೆ, ಅವರೊಂದಿಗೆ ಮನಸ್ತಾಪ ಉಂಟಾಗುವ ಸಾದ್ಯತೆಯಿದೆ ಮತ್ತು ಇದು ನಿಮ್ಮ ಭಾವುಕತೆಯ ಮೇಲೆ ಪ್ರಭಾವ ಬೀರಬಹುದು. ಒಪ್ಪಂದಗಳಿಗೆ ಸಹಿ ಹಾಕುವಾಗ ಸ್ವಲ್ಪ ಎಚ್ಚರಿಕೆಯಿಂದಿರಿ. ಪ್ರಯಾಣವನ್ನು ಮುಂದೂಡಬೇಕು. ಹಣಕಾಸು ಲಾಭ ಉಂಟಾಗಲಿದೆ. ನಿಮ್ಮ ಆರೋಗ್ಯ ಮತ್ತು ವೈಯಕ್ತಿಕ ಸಂಬಂಧಗಳು ಉತ್ತಮವಾಗಿರುವುದಿಲ್ಲ.
ವೃಶ್ಚಿಕ :-
ಈ ದಿನವು ಆರಾಮದಾಯಕ ದಿನವಾಗಿರುತ್ತದೆ. ನಿಮ್ಮ ಮನಸ್ಸು ಮತ್ತು ದೇಹ ಸುಸ್ಥಿತಿಯಲ್ಲಿರುತ್ತದೆ. ಕುಟುಂಬ ಸದಸ್ಯರೊಂದಿಗೆ ನೀವು ಕಾಲ ಕಳೆಯುವ ಮೂಲಕ ನೀವು ಸಂತೋಷವನ್ನು ಪಡೆಯುವಿರಿ. ನಿಮ್ಮ ಸ್ನೇಹಿತರಿಂದ ಮತ್ತು ಕುಟುಂಬ ಸದಸ್ಯರಿಂದ ಉಡುಗೊರೆಗಳನ್ನು ಪಡೆಯುವ ಸಾದ್ಯತೆಯಿದೆ ಮತ್ತು ಇದು ನಿಮ್ಮನ್ನು ಇನ್ನಷ್ಚು ಹರ್ಷಿತರನ್ನಾಗಿಸುತ್ತದೆ. ನಿಮ್ಮ ಪ್ರೀತಿಪಾತ್ರರೊಂದಿಗಿನ ಭೇಟಿಯು ಫಲಕಾರಿಯಾಗಲಿದೆ. ಕೆಲವು ಶುಭಸುದ್ದಿಗಳು ನಿಮ್ಮ ಹಾದಿಯಲ್ಲಿವೆ. ಪ್ರಯಾಣವು ಸಂತೋಷದಾಯಕವಾಗಿರುತ್ತದೆ. ನಿಮ್ಮ ಲೈಂಗಿಕ ಜೀವನವು ದಿಗ್ಭ್ಪಮೆಭರಿಸುವಂತಿರುತ್ತದೆ.
ಧನು :-
ಪ್ರತಿಕೂಲ ಸ್ಥಿತಿಯ ಸಂಭಾವ್ಯತೆಯಿರುವುದರಿಂದ ಜಾಗರೂಕರಾಗಿರುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ನಿಮ್ಮ ಮತ್ತು ನಿಮ್ಮ ಕುಟುಂಬ ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗುವ ಸಾದ್ಯತೆಯಿರುವುದರಿಂದ ಭಾವನಾತ್ಮಕ ಒತ್ತಡಕ್ಕೆ ಒಳಗಾಗುವ ಸಾಧ್ಯತೆಯಿದೆ. ನಿಮ್ಮ ದುರಾಕ್ರಮಣಕಾರಿ ಸ್ವಭಾವವು ವಾಗ್ವಾದವನ್ನು ಆಹ್ವಾನಿಸುತ್ತದೆ. ನಿಮ್ಮ ಕೋಪ ಮತ್ತು ನಾಲಗೆಯ ಮೇಲೆ ಹಿಡಿತವಿರಲಿ. ಅಪಘಾತ ಮತ್ತು ಅನಾರೋಗ್ಯದ ಸಂಭಾವ್ಯತೆಯಿದೆ. ನೀವು ಯಾವುದೇ ಕಾನೂನು ವಿಚಾರದಲ್ಲಿ ಒಳಗೊಂಡಿದ್ದಲ್ಲಿ, ಎಚ್ಚರಿಕೆಯಿಂದಿರುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ಅನಗತ್ಯ ಕಾರ್ಯಗಳು ನಿಮ್ಮ ಶಾಂತಿಯನ್ನು ಕದಡಬಹುದು.
ಮಕರ :-
ಸಾಮಾಜಿಕ ಕಾರ್ಯಗಳಿಂದ ನಿಮಗೆ ಪ್ರಯೋಜನ ಉಂಟಾಗಲಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಇಂದು ಇತರ ವಿವಿಧ ಕ್ಷೇತ್ರಗಳಿಂದ ನೀವು ಲಾಭ ಪಡೆಯುವಿರಿ. ಆತ್ಮೀಯರೊಂದಿಗಿನ ಭೇಟಿಯೂ ನಿಮಗೆ ಲಾಭದಾಯಕವಾಗಲಿದೆ. ವಿವಾಹದ ಯೋಜನೆಯಲ್ಲಿರುವವರು ತಮ್ಮ ಪ್ರಯತ್ನದಲ್ಲಿ ವೃದ್ಧಿಯನ್ನು ಕಾಣುತ್ತಾರೆ. ಮನೆಯಲ್ಲಿ ಶುಭ ಸಮಾರಂಭ ನಡೆಯಬಹುದು. ನಿಮ್ಮ ಮಕ್ಕಳು ಮತ್ತು ಪತ್ನಿಯು ಸಹಕಾರ ಮನೋಭಾವದಿಂದ ಕೂಡಿರುತ್ತಾರೆ. ಶಾಪಿಂಗ್ ತೆರಳಲು ಇದು ಅನುಕೂಲಕರ ದಿನ. ಶೇರು ಮಾರುಕಟ್ಟೆಯಿಂದ ನಿಮಗೆ ಲಾಭ ಉಂಟಾಗಬಹುದು. ನಿಮ್ಮ ಸಂಗಾತಿಯ ಆರೋಗ್ಯವು ನಿಮಗೆ ಚಿಂತೆಯ ವಿಚಾರವಾಗಬಹುದು.
ಕುಂಭ :-
ಅನುಕೂಲಕರ ದಿನ ನಿಮಗಾಗಿ ಕಾದಿದೆ. ಇಂದು ನೀವು ಏನೇ ಮಾಡಿದರೂ ಅದರಲ್ಲಿ ಯಶಸ್ಸು ಸಾಧಿಸುತ್ತೀರಿ ಮತ್ತು ಅತ್ಯಂತ ಸಂತೋಷದಿಂದಿರುತ್ತೀರಿ. ನಿಮ್ಮ ಕೆಲಸದ ವಾತಾವರಣವು ಉತ್ತಮವಾಗಿರುತ್ತದೆ ಮತ್ತು ನೀವು ಅಗಾಧ ಯಶಸ್ಸನ್ನು ಕಾಣುವಿರಿ. ನಿಮ್ಮ ಹಿರಿಯ ಅಧಿಕಾರಿಗಳು ಮತ್ತು ಮೇಲಾಧಿಕಾರಿಗಳು ನಿಮ್ಮ ಮೇಲೆ ಸಂತಸ ವ್ಯಕ್ತಪಡಿಸುತ್ತಾರೆ ಮತ್ತು ನಿಮ್ಮನ್ನು ಒತ್ತಡರಹಿತರನ್ನಾಗಿ ಮಾಡುತ್ತಾರೆ. ಸಂಸಾರ ಜೀವನವು ಆನಂದಕರವಾಗಿರುತ್ತದೆ. ನಿಮ್ಮ ಜನಪ್ರಿಯತೆಯು ವೃದ್ಧಿಯಾಗುವ ಸಾಧ್ಯತೆಯಿದೆ.
ಮೀನ :-
ವೃತ್ತಿಕ್ಷೇತ್ರಕ್ಕೆ ಸಂಬಂಧಿಸಿದ ಹಗೆತನ ಉಂಟಾಗಲಿದೆ. ಮೇಲಾಧಿಕಾರಿಗಳೊಂದಿಗೆ ಮತ್ತು ಸಹೋದ್ಯೋಗಿಳೊಂದಿಗೆ ಮತ್ತು ವೃತ್ತಿಯಲ್ಲಿ ಮತ್ತು ವ್ಯವಹಾರದಲ್ಲಿನ ವೈರಿಗಳೊಂದಿಗೆ ಸಮಾಲೋಚನೆ ನಡೆಸುವಾಗ ಜಾಗರೂಕರಾಗಿರುವಂತೆ ಗಣೇಶ ನಿಮಗೆ ಎಚ್ಚರಿಕೆ ನೀಡುತ್ತಾರೆ. ಇದು ಕೆರಳಿಸುವಂತಹ ವಿಚಾರವಾಗಿರಬಹುದು ಮತ್ತು ನೀವು ಉದ್ದೇಶರಹಿತವಾಗಿ ಹೇಳುವ ಯಾವುದೋ ಒಂದು ಮಾತು ಕ್ಷೋಭೆಯನ್ನು ಹೆಚ್ಚಿಸಬಹುದು. ಪ್ರತಿ ಮಾತನ್ನು ಆಡುವಾಗಲೂ ಎರಡೆರಡು ಬಾರಿ ಯೋಚಿಸಿ ಇಲ್ಲದಿದ್ದಲ್ಲಿ ನಿಮ್ಮ ಮೇಲಾಧಿಕಾರಿಗಳ ಕೋಪಕ್ಕೆ ಗುರಿಯಾಗುವಿರಿ. ಚರ್ಚೆ ಮತ್ತು ಮಾತುಕತೆಗಳಿಂದ ದೂರವಿರಿ. ಧ್ಯಾನದಲ್ಲಿ ಮತ್ತು ಋಣಾತ್ಮಕ ಚಿಂತನೆಗಳನ್ನುಮತ್ತು ಭಾವುಕತೆಯನ್ನು ದೂರ ಮಾಡುವ ಕಾರ್ಯಗಳಲ್ಲಿ ತೊಡಗಿಕೊಳ್ಳಿ. ಇದು ನಿಮಗೆ ಹಿತಕರ ಮತ್ತು ಹಗುರ ಭಾವನೆಯನ್ನು ಉಂಟುಮಾಡಬಹುದು.ವ್ಯವಹಾರದಲ್ಲಿ ಅನಿರೀಕ್ಷಿತ ಅಡೆತಡೆಗಳು ಉಂಟಾಗಬಹುದು.
ಈ ಶುಕ್ರವಾರಕೆ ನಿಮ್ಮ ಜಾತಕ ನೋಡಿ – 19 ಡಿಸೆಂಬರ್ 2025 – ದಿನ ಭವಿಷ್ಯ
WhatsApp Group
Join Now