Horoscope Today : 18 ಜನವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

Spread the love

ಮೇಷ :-

ಮೇಷ ರಾಶಿಯವರಿಗೆ ಈ ದಿನವು ಸಾಮಾನ್ಯ ದಿನವಾಗಲಿದೆ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ಈ ದಿನ ಸಿಗುವ ಪ್ರತಿಫಲವನ್ನು ಪಡೆಯಲು ಅನಗತ್ಯ ವಾಗ್ವಾದಗಳು, ಅರ್ಥಹೀನ ಚರ್ಚೆಗಳನ್ನು ಮತ್ತು ನಕಾರಾತ್ಮಕತೆಯಿಂದ ದೂರವಿರಬೇಕು. ಇಲ್ಲವಾದಲ್ಲಿ ಈ ದಿನವು ಸಂಪೂರ್ಣವಾಗಿ ಶ್ರಮದಾಯಕವಾಗಿರುತ್ತದೆ ಮತ್ತು ಇದು ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.

ಕಾರ್ಯಗಳ ಪೂರ್ಣಗೊಳಿಸುವಿಕೆ ಮತ್ತು ಯೋಜನ ಅವಧಿ ನಿಭಾಯಿಸುವಿಕೆಯು ಇಂದು ನಿಮಗೆ ಕಷ್ಟವಾಗಲಾರದು. ಈ ದಿನವು ಫಲಪ್ರದವಾಗಿರುತ್ತದೆ. ಮಧ್ಯಾಹ್ನದ ಬಳಿಕ, ಪ್ರತೀ ಗಂಟೆಯಲ್ಲಿ ಪರಿಸ್ಥಿತಿಗಳು ಉತ್ತಮವಾಗಿರುತ್ತದೆ. ನಿಮ್ಮ ಹಣಕಾಸು ಮತ್ತು ಹೂಡಿಕೆಗೆ ಸಂಬಂಧಿಸಿ ನೀವು ಉತ್ತಮ ರೀತಿಯಲ್ಲಿ ಯೋಜನೆ ರೂಪಿಸಬಹುದು. ನಿಮ್ಮ ಪರೋಪಕಾರಿ ಮನೋಭಾವವು ಸಂಜೆಯ ವೇಳೆಗೆ ಪ್ರಕಟಗೊಳ್ಳುತ್ತದೆ ಮತ್ತು ನಿಮ್ಮ ಸಹಾಯದ ಅಗತ್ಯವಿರುವ ಜನರಿಗೆ ನೀವು ಸಹಾಯ ಮಾಡುವಿರಿ.

ವೃಷಭ :-

ಗ್ರಹಗತಿಗಳು ನಿಮಗೆ ಅನುಗ್ರಹವನ್ನು ನೀಡಿಲ್ಲ ಎಂಬುದಾಗಿ ಗಣೇಶ ಹೇಳುತ್ತಾರೆ. ಆದ್ದರಿಂದ, ಯಾವುದೇ ಕಾರ್ಯ ಪ್ರಾರಂಭಿಸುವ ಮುನ್ನ ಅಥವಾ ಯಾವುದರಲ್ಲಾದರೂ ತೊಡಗಿಕೊಳ್ಳುವ ಮುನ್ನ ಅನೈತಿಕ ಅಥವಾ ಕಾನೂನುಬಾಹಿರ ಪ್ರದೇಶಗಳನ್ನು ಮೆಟ್ಟಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಹೊಸ ಯೋಜನೆ ಮತ್ತು ಕಾರ್ಯಗಳನ್ನು ಕೈಗೆತ್ತಿಕೊಳ್ಳುವುದನ್ನು ತಪ್ಪಿಸಿ. ಈ ದಿನವು ಫಲಪ್ರದವಾಗಿರುವುದಿಲ್ಲ. ಬದಲಾಗಿ, ಹವ್ಯಾಸಗಳಲ್ಲಿ ಮತ್ತು ಇತರ ಉಲ್ಲಾಸಕಾರಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ. ಇದು ಉದ್ವೇಗ ಮತ್ತು ಒತ್ತಡಗಳನ್ನು ತೊಡಗಿಸಲು ಸಹಾಯಕವಾಗುತ್ತದೆ. ಮಾತಿನಲ್ಲಿನ ಹಿಡಿತವು ತಿಳುವಳಿಕೆಯ ಮನಸ್ಸನ್ನು ನೀಡುತ್ತದೆ. ಈ ಉಕ್ತಿಯನ್ನು ಪಾಲಿಸಿ ಮತ್ತು ನೀವು ಸಿಡುಕಿನಿಂದ ನಿಮ್ಮನ್ನು ಹೇಗೆ ರಕ್ಷಿಸಿಕೊಳ್ಳುವಿರಿ ಎಂಬುದನ್ನು ಕಾಣಿರಿ. ವೃತ್ತಿಕ್ಷೇತ್ರಕ್ಕೆ ಸಂಬಂಧಿಸಿಯೂ, ನಿಮ್ಮ ಕಾರ್ಯವನ್ನು ವಿಳಂಬಗೊಳಿಸುವಂತಹ ಕೆಲವು ಅಡೆತಡೆಗಳನ್ನು ನೀವು ಎದುರಿಸಬೇಕಾದೀತು. ಕಚೇರಿಯಲ್ಲಿ ನಿಮ್ಮ ಮೇಲಾಧಿಕಾರಿಗಳನ್ನು ಪ್ರಭಾವಿತಗೊಳಿಸುವುದು ಸುಲಭವಲ್ಲ. ನೀವು ಹೆಚ್ಚು ಶ್ರಮಪಡಬೇಕಾಗುತ್ತದೆ.

ಮಿಥುನ :-

ಈ ದಿನವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಅನುಕೂಲಕರ ಮತ್ತು ಅನನುಕೂಲಕರ. ಎಂಬುದಾಗಿ ಗಣೇಶ ಹೇಳುತ್ತಾರೆ. ಮೊದಲನೆಯ ಭಾಗವು ಮನರಂಜನೆ, ಸಂತೋಷ, ಉತ್ತಮ ಆರೋಗ್ಯ ಮುಂತಾದವುಗಳನ್ನು ತಂದರೆ, ಎರಡನೆಯ ಭಾಗವು ಸ್ವಲ್ಪ ತೊಂದರೆಯನ್ನು ನೀಡುತ್ತದೆ. ಆದ್ದರಿಂದ ದಿನದ ಕೊಡುಗೆಯ ಪ್ರಯೋಜನವನ್ನು ಪಡೆದುಕೊಳ್ಳಿ ಮತ್ತು ಸಾಮಾಜಿಕವಾಗಿ ಸಮಯ ಕಳೆಯಿರಿ. ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಸಂಭ್ರಮಾಚರಿಸಿ. ಮಧ್ಯಾಹ್ನದ ಬಳಿಕ, ಒತ್ತಡ,ಉದ್ವೇಗ, ವ್ಯಾಧಿಗಶು ಚಿಂತೆಗಳು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ತಡೆಯೊಡ್ಡುವುದರಿಂದ ಪರಿಸ್ಥಿತಿಯು ಸುಲಭವಾಗಿರುವುದಿಲ್ಲ.

ಕರ್ಕಾಟಕ :-

ಕರ್ಕಾಟಕ ರಾಶಿಯವರಿಗೆ ಇಂದು ಸಂತಸಭರಿತ ದಿನವಾಗಿದೆ ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ. ಕಚೇರಿಯಲ್ಲಿನ ಕಾರ್ಯಸ್ನೇಹಿ ವಾತಾವರಣವು ನಿಮ್ಮ ಮನಸ್ಥಿತಿಯನ್ನು ವರ್ಧಿಸಲಿದೆ. ಅದಕ್ಕಿಂತಲೂ ಹೆಚ್ಚಾಗಿ, ಕಾರ್ಯಸ್ಥಳದಲ್ಲಿನ ನಿಮ್ಮ ಪ್ರತಿಸ್ಪರ್ಧಿಗಳು ಕಳಪೆ ನಿರ್ವಹಣೆ ನೀಡಲಿದ್ದಾರೆ ಮತ್ತು ಇದು ನಿಮಗೆ ಲಾಭದಾಯಕವಾಗಲಿದೆ. ನಿಮ್ಮ ತಾಯಿಯ ಕಡೆಯಿಂದ ಬರುವ ಶುಭಸುದ್ದಿಯು ನಿಮ್ಮ ಮನೆಯ ವಾತಾವರಣವನ್ನು ಉಲ್ಲಾಸಿತಗೊಳಿಸಲಿದೆ. ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವು ಉತ್ತಮ ಸ್ಥಿತಿಯಲ್ಲಿರುತ್ತದೆ. ಬೌದ್ಧಿಕ ಚರ್ಚೆಯಲ್ಲಿ ತೊಡಗಿಕೊಳ್ಳಲು ಮತ್ತು ತೀಕ್ಷ್ಣ ಅವಲೋಕನಗಳಿಗೆ ಇದು ಸೂಕ್ತ ಸಮಯ. ಇದು ಸಾಮಾಜಿಕ ವಲಯದಲ್ಲಿ ನಿಮಗೆ ಕೀರ್ತಿಯನ್ನು ತರಲಿದೆ. ಉದ್ಯಮಿಗಳಿಗೆ, ಅವರು ಪಾಲುದಾರರು ಲಾಭವನ್ನು ತರಲಿದ್ದಾರೆ.

ಸಿಂಹ :-

ಸಿಂಹ ರಾಶಿಯವರಿಗೆ ಇಂದಿನ ವಾತಾವರಣದಲ್ಲಿ ಪ್ರೀತಿಯು ತುಂಬಿರುತ್ತದೆ. ವಿಶಿಷ್ಟ ಹಿಂದಿ ಸಿನಿಮಾದಂತೆ ನೀವು ನಿಮ್ಮ ಸಂಗಾತಿಯನ್ನು ಆಕಸ್ಮಿಕವಾಗಿ ಭೇಟಿಯಾಗುವಿರಿ ಮತ್ತು ನಿಮಗೆ ಇದರ ಅರಿವಾಗುವುದಿಲ್ಲ. ಏನೇ ಆದರೂ, ನಿಮ್ಮ ಕೋಪವು ವಿನೋದಗೇಡಿಯಾಗಿ ವರ್ತಿಸುವ ಸಾಧ್ಯತೆಯಿರುವುದರಿಂದ ಅದರ ಮೇಲೆ ನಿಯಂತ್ರಣವಿರಿಸಿ ಎಂಬುದಾಗಿ ಗಣೇಶ ಸಲಹೆ ನೀಡುತ್ತಾರೆ. ಇಂದು ನಿಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿ ತೊಂದರೆ ಕಂಡುಬರುವ ಕಾರಣ ದೈಹಿಕ ಆರೋಗ್ಯವು ಕುಂಠಿತಗೊಳ್ಳುತ್ತದೆ. ದಿನದ ದ್ವಿತೀಯಾರ್ಧದಲ್ಲಿ ನಿಮ್ಮ ದಿನವು ಉತ್ತಮವಾಗಿರುತ್ತದೆ. ನೀವು ಹೆಚ್ಚು ಉತ್ಸಾಹ ಹಾಗೂ ಚೈತನ್ಯದಿಂದಿರುತ್ತೀರಿ. ನಿಮ್ಮ ಸಹವರ್ತಿಗಳ ಸಹಕಾರದೊಂದಿಗೆ ನಿಮ್ಮ ಉದ್ಯಮದಲ್ಲಿ ಹೆಚ್ಚು ಲಾಭ ಪಡೆಯುವಿರಿ. ನಿಮ್ಮ ಪ್ರತಿಸ್ಪರ್ಧಿಗಳು ನಿಮ್ಮ ಬಗ್ಗೆ ಅಸೂಯೆ ಪಡುತ್ತಾರೆ. ಸೂರ್ಯನು ಹೊಳೆಯುತ್ತಿರುವಾಗ ಅದರ ಆನಂದವನ್ನು ಅನುಭವಿಸಿ.

ಕನ್ಯಾ :-

ಆಲಸಿ ಮತ್ತು ಅಶಕ್ತ , ಇದು ಇಂದು ನೀವಾಗಲಿದ್ದೀರಿ ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ. ಇಂದು ಖರ್ಚುಗಳು ಹೆಚ್ಚಾಗುವ ಸಾಧ್ಯತೆಯಿರುವುದರಿಂದ ನಿಮ್ಮ ಖಾತೆಯನ್ನು ಸರಿಯಾಗಿ ನಿರ್ವಹಿಸಿ. ನಿಮ್ಮ ಅಹಿತಕರ ಮನಸ್ಥಿತಿಯು ನಿಮಗೆ ಕೆಟ್ಟ ಹೆಸರನ್ನು ತರಲಿದೆ. ನಿಮ್ಮ ಗೌರವಕ್ಕೆ ಕುಂದುಬರಲು ಬಿಡಬೇಡಿ. ಸರಿಯಾದ ಸಮಯಕ್ಕೆ ಯೋಜಿತ ಕಾರ್ಯಗಳು ಪೂರ್ಣಗೊಳ್ಳದ ಕಾರಣ ಅಸಮಾಧಾನಗೊಳ್ಳುವಿರಿ. ನಿಮ್ಮ ಮಕ್ಕಳು ನಿಮ್ಮ ಚಿಂತೆಯ ಮುಖ್ಯ ಕಾರಣರಾಗಿರುತ್ತಾರೆ. ನಿಮ್ಮ ಪ್ರಯಾಣ ಯೋಜನೆಗಳನ್ನು ಬೇರೊಂದು ದಿನಕ್ಕೆ ಮುಂದೂಡಿ.

ತುಲಾ :-

ಹೊಸ ಯೋಜನೆಗಳನ್ನು ಪ್ರಾರಂಭಿಸಲು ಇದು ಅದೃಷ್ಟ ಹಾದೂ ಪರಿಪೂರ್ಣ ದಿನ. ತುಂಬಾ ಸಮಯದ ನಂತರ ನಿಮ್ಮ ಬಾಲ್ಯ ಸ್ನೇಹಿತರ ಭೇಟಿಯು ನಿಮ್ಮ ದಿನವನ್ನು ಇನ್ನಷ್ಟು ಉಲ್ಲಾಸಿತಗೊಳಿಸಲಿದೆ. ನಿಮ್ಮ ಘನತೆ ಮತ್ತು ಗೌರವವು ವೃದ್ಧಿಸಲಿದೆ. ಏನೇ ಆದರೂ, ಸಂಜೆಯ ವೇಳೆಗೆ ನಿಮ್ಮ ಮನಸ್ಸು ಅಸಮಾಧಾನಗೊಳ್ಳಬಹುದು ಮತ್ತು ಇದು ಕುಟುಂಬದಲ್ಲಿ ಸಂಘರ್ಷಕ್ಕೆ ಕಾರಣವಾಗಬಹುದು. ನಿಮ್ಮ ತಾಯಿಯ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆಯಿದೆ. ಆಸ್ತಿ ಮತ್ತು ಸ್ವತ್ತಿಗೆ ಸಂಬಂಧಿಸಿದ ವಿಚಾರಗಳಲ್ಲಿ ಎಚ್ಚರಿಕೆಯಿಂದಿರಿ. ಅಗತ್ಯವಿದ್ದಲ್ಲೆಲ್ಲಾ ಜಾಗರೂಕತೆ ವಹಿಸಿ.

ವೃಶ್ಚಿಕ :-

ನಿರುತ್ಸಾಹ ಭಾವನೆಯು ನಿಮ್ಮನ್ನು ದಿನಪೂರ್ತಿ ಆವರಿಸಲಿದೆ. ಆದರೂ ನೀವು ಕೆಲಸವನ್ನು ಸರಿಯಾದ ಸಮಯದಲ್ಲಿ ಮುಗಿಸುವಿರಿ. ಮುಖ್ಯ ವಿಚಾರಗಳಿಗೆ ಸಂಬಂಧಿಸಿ ನಿರ್ಧಾರ ಕೈಗೊಳ್ಳುವುದನ್ನು ಮುಂದೂಡಿ. ಮನೆಯಲ್ಲಿ ಸಂಬಂಧಗಳಲ್ಲಿ ತೊಡಕು ಉಂಟಾಗಬಹುದು. ಏನೇ ಆದರೂ, ನೀವು ಭಿನ್ನಾಭಿಪ್ರಾಯಗಳನ್ನು ಶೀಘ್ರದಲ್ಲಿ ಪರಿಹರಿಸುವ ಸಾಧ್ಯತೆಯಿದೆ ಮತ್ತು ನಿಮ್ಮ ಒಡಹುಟ್ಟಿದವರೊಂದಿಗೆ ಬೆರೆಯುವ ಮೂಲಕ ನಿಮ್ಮ ಸಂಜೆಯನ್ನು ಕಳೆಯುವಿರಿ.

ಧನು :-

ಫಲಪ್ರದ ದಿನವು ನಿಮಗಾಗಿ ಕಾದಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮಗೆ ಇಂದು ಧನಲಾಭ ಹಾಗೂ ಕೆಲಸದಲ್ಲಿ ಯಶಸ್ಸು ಲಭಿಸುವುದರಿಂದ ಲಕ್ಷ್ಮೀದೇವಿ ಮತ್ತು ಗಣೇಶ ಇಬ್ಬರೂ ತೀವ್ರ ಸಂತೋಷದಲ್ಲಿರುವಂತೆ ಅನಿಸುತ್ತದೆ. ಅಭಿವೃದ್ಧಿಗಳು ನಿಮ್ಮನ್ನು ಉತ್ತೇಜನಗೊಳಿಸಲಿವೆ ಮತ್ತು ನೀವು ನೀವು ಕೈಗೊಳ್ಳುವ ಪ್ರತೀ ಕಾರ್ಯದಲ್ಲೂ ಕಾರ್ಯತತ್ಪರತೆ ಮತ್ತು ಉತ್ಸಾಹವನ್ನು ನೀವು ಪ್ರದರ್ಶಿಸುವಿರಿ. ಸಂಜೆಯ ವೇಳೆಗೆ, ದೇವಾಲಯಕ್ಕೆ ತೆರಳಿ ಸ್ವಲ್ಪ ಹೊತ್ತು ಮೌನವಾಗಿ ಕುಳಿತುಕೊಳ್ಳಿ. ಇದು ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡುತ್ತದೆ. ಮನೆಯಲ್ಲಿ ಮತ್ತು ಕಾರ್ಯದಲ್ಲಿ ಸ್ವಲ್ಪ ಒತ್ತಡವನ್ನು ಎದುರಿಸಬೇಕಾಗಿ ಬರಬಹುದು. ನಿಮ್ಮ ಕಿಸೆಯ ಬಗ್ಗೆ ಗಮನವಿರಲಿ ಮತ್ತು ಅನಗತ್ಯ ಖರ್ಚುಗಳನ್ನು ತಪ್ಪಿಸಿ.

ಮಕರ :-

ದಿನದ ಪೂರ್ವಾರ್ಧದಲ್ಲಿ ನೀವು ಕ್ಷೋಭೆ ಹಾಗೂ ಕಿರಿಕಿರಿಗೆ ಒಳಗಾಗುವಿರಿ. ನಿಮ್ಮ ಮನಸ್ಸಿನ ಗೊಂದಲಗಳು ನಿಮ್ಮ ವೈಯಕ್ತಿಕ ಸಂಬಂಧಗಳ ಮೇಲೆ ಪರಿಣಾಮ ಬೀರುವುದರಿಂದ ಎಚ್ಚರಿಕೆಯಿಂದಿರಿ. ನಿಮ್ಮ ಆತ್ಮೀಯರೊಂದಿಗೆ ನೀವು ವ್ಯಾಜ್ಯಕ್ಕೆ ಒಳಗಾಗಬಹುದು ಅಥವಾ ಅವರನ್ನು ನೋಯಿಸಬಹುದು. ಅಂತಹ ಪರಿಸ್ಥಿತಿಗಳನ್ನು ತಪ್ಪಿಸಲು ಮೌನವಾಗಿರಲು ಪ್ರಯತ್ನಿಸಿ ಮತ್ತು ಧ್ಯಾನಮಾಡಿ. ಇದು ಖಂಡಿತ ನಿಮಗೆ ಮಾನಸಿಕ ಶಾಂತಿಯನ್ನು ನೀಡುತ್ತದೆ. ಏನೇ ಆದರೂ, ದಿನದ ದ್ವಿತೀಯಾರ್ಧದಲ್ಲಿ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರುತ್ತದೆ. ಮನೆಯ ವಾತಾವರಣವು ಸಂತಸ ಹಾಗೂ ಸಮಾಧಾನದಿಂದ ಕೂಡಿರುತ್ತದೆ. ವಿವಾಹಿತರು ವೈವಾಹಿಕ ಸಂತಸವನ್ನು ಆನಂದಿಸಬಹುದು. ಸಂಜೆಯ ವೇಳೆಗೆ ನೀವು ಶುಭ ಸಮಾರಂಭಗಳಲ್ಲಿ ಪಾಲ್ಗೊಳ್ಳಬಹುದು.

ಕುಂಭ :-

ಇಂದು ನಿಮಗೆ ಫಲಪ್ರದ ದಿನವು ಕಾದಿದೆ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ಸಾಮಾಜಿಕ ಚಟುವಟಿಕೆಗಳಲ್ಲಿ ಹಾಗೂ ಸಮಾರಂಭಗಳಲ್ಲಿನ ನಿಮ್ಮ ಸಕ್ರಿಯ ಪಾಲ್ಗೊಳ್ಳುವಿಕೆಯು ನಿಮ್ಮ ಚೈತನ್ಯವನ್ನು ವರ್ಧಿಸುತ್ತದೆ ಮತ್ತು ಮನ್ನಣೆಯನ್ನು ನೀಡುತ್ತದೆ. ವಧೂವರರ ಅನ್ವೇಷಣೆಯಲ್ಲಿರುವವರು ಇಂದು ಅವರ ಸಂಗಾತಿಯನ್ನು ಭೇಟಿ ಮಾಡಬಹುದು ಇದು ಮನೆಯಲ್ಲಿನ ಸಂತಸ ಹಾಗೂ ಖುಷಿಗೆ ಕಾರಣವಾಗಬಹುದು. ಏನೇ ಆದರೂ, ನಿಮ್ಮ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಕಂಡುಬರಬಹುದು. ನಿಮ್ಮ ಪರ್ಸ್ ಮೇಲೆ ಸ್ವಲ್ಪ ಗಮನವಿರಲಿ. ನಿಮ್ಮ ವೆಚ್ಚಗಳು ಮಿತಿಮೀರದಂತೆ ನೋಡಿಕೊಳ್ಳಿ. ಉತ್ತಮ ದಿನವನ್ನು ಹೊಂದಿ.

ಮೀನ :-

ಸಂತಸಭರಿತ ದಿನವು ನಿಮಗಾಗಿ ಕಾದಿದೆ ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ. ನಿಮ್ಮ ಉದ್ಯಮವು ಏಳಿಗೆಯ ಅವಧಿಯನ್ನು ಆನಂದಿಸುತ್ತಿದೆ ಮತ್ತು ಇದು ನಿಮಗೆ ಗೌರವನನ್ನೂ ತರಲಿದೆ. ನಿಮ್ಮ ಮೇಲಾಧಿಕಾರಿಗಳು ನಿಮ್ಮ ಕಾರ್ಯದ ಬಗ್ಗೆ ಸಂತುಷ್ಟರಾಗುತ್ತಾರೆ ಮತ್ತು ಇದು ನಿಮ್ಮಲ್ಲಿ ಧನಾತ್ಮಕ ನಿಲುವನ್ನು ತೋರ್ಪಡಿಸುತ್ತದೆ. ನಿಮ್ಮ ಲಾಭ ಮತ್ತು ಆದಾಯಗಳು ವರ್ಧಿಸುವ ಸಾಧ್ಯತೆಯಿದೆ. ನೀವು ಸದ್ಯ ಆನಂದಿಸುತ್ತಿರುವ ಅನುಗ್ರಹಪೂರ್ವಕ ಸಮಯಕ್ಕಾಗಿ ಮತ್ತು ಆಶೀರ್ವಾದಗಳಿಗಾಗಿ ನಿಮ್ಮ ತಂದೆ ಹಾಗೂ ಹಿರಿಯರಿಗೆ ಧನ್ಯವಾದ ಹೇಳಿ. ಉತ್ತಮ ಕಾರ್ಯಗಳೊಂದಿಗೆ ನಿಮ್ಮ ದಿನವನ್ನು ಕೊನೆಗೊಳಿಸಿ. ಇದು ಧನಸಹಾಯ ಅಥವಾ ದೇಣಿಗೆಯಾಗಿರಬಹುದು.

WhatsApp Group Join Now

Spread the love

Leave a Reply