ಮೇಷ :-
ನಿಮ್ಮ ಸ್ನೇಹಿತರೊಂದಿಗೆ ಆನಂದದಿಂದ ಸಮಯ ಕಳೆಯುವ ಕಾಲ ಎಂದು ಗಣೇಶ ಹೇಳುತ್ತಾರೆ. ನಿಮ್ಮ ಸ್ನೇಹಿತರ ಅನಿರೀಕ್ಷಿತ ಉಡುಗೊರೆಯು ನಿಮಗೆ ಖುಷಿನೀಡಲಿದೆ. ಅದಕ್ಕೆ ಪ್ರತಿಯಾಗಿ ನೀವು ಕೂಡಾ ಅವರಿಗೆ ಸಹಾಯಮಾಡಬೇಕಾಗಿ ಬರಬಹುದು. ಹೊಸ ಸಂಬಂಧ ನಿಮ್ಮ ಭವಿಷ್ಯದಲ್ಲಿ ಅದೃಷ್ಟವನ್ನು ತರಲಿದೆ.
ಹಾಗೂ ಮಕ್ಕಳು ನಿಮ್ಮ ಪಾಲಿಗೆ ಅದೃಷ್ಚವಂತರಾಗುತ್ತಾರೆ. ದೂರದ ಪ್ರಕೃತಿ ತಾಣಕ್ಕೆ ಪ್ರವಾಸ ತೆರಳುವ ಸಾಧ್ಯತೆಯಿದೆ. ಸರಕಾರಕ್ಕೆ ಸಂಬಂಧಿಸಿದ ವಿಚಾರಗಳು ಇತ್ಯರ್ಥಗೊಂಡು ನಿಮಗೆ ಒಳ್ಳೆಯ ಸುದ್ದಿ ಬರುವ ಸಾಧ್ಯತೆ ಇದೆ.
ವೃಷಭ :-
ವೃತ್ತಿನಿರತರಿಗೆ ಹಾಗೂ ಕೆಲಸಕ್ಕೆ ಸಂಬಂಧಿಸದ ವಿಚಾರಗಳಿಗೆ ಇಂದು ಉತ್ತಮ ದಿನ ಎಂದು ಗಣೇಶ ಹೇಳುತ್ತಾರೆ. ಹೊಸ ಕೆಲಸಗಳು ಹಾಗೂ ಯೋಜನೆಗಳು ಸುಲಭವಾಗಿ ಫಲಕಾರಿಯಾಗುತ್ತದೆ. ನಿಮ್ಮ ಮೇಲಾಧಿಕಾರಿಗಳು ಮತ್ತು ಸಹೋದ್ಯೋಗಿಗಳು ಪ್ರೋತ್ಸಾಹದಿಂದಿರುತ್ತಾರೆ. ಖಂಡಿತವಾಗಿಯೂ ಬಡ್ತಿ ಸಿಗುವ ಸಂಭವಿದೆ ಮತ್ತು ವ್ಯವಹಾರ ಹಾಗೂ ವೃತ್ತಿಕ್ಷೇತ್ರಗಳಲ್ಲಿ ಉತ್ತಮ ಪ್ರತಿಫಲ ದೊರೆಯಲಿದೆ. ಅಪೂರ್ಣಗೊಂಡಿರುವ ಕಾರ್ಯಗಳು ಪೂರ್ಣಗೊಳ್ಳಲಿವೆ. ವೈವಾಹಿಕ ಸಂತಸ, ಮತ್ತು ಸರಕಾರಿ ಸಂಬಂಧಿತ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ.
ಮಿಥುನ :-
ಹೊಸ ಕಾರ್ಯಗಳಿಗೆ ಈ ದಿನವು ಶುಭಕರವಲ್ಲ ಎಂಬುದಾಗಿ ಗಣೇಶ ಎಚ್ಚರಿಕೆ ನೀಡುತ್ತಾರೆ. ನೀವು ಆಲಸ್ಯ, ಆಯಾಸ ಮತ್ತು ನಿರುತ್ಸಾಹದಿಂದ ಕೂಡಿರುವ ಸಾಧ್ಯತೆಯಿದೆ. ಉದರ ಸಂಬಂಧಿ ತೊಂದರೆಗಳನ್ನು ನಿರೀಕ್ಷಿಸಬಹುದು. ವೃತ್ತಿಗೆ ಸಂಬಂಧಿಸಿ, ನೀವು ಇಂದು ನಿಮ್ಮ ಹಾದಿಯಲ್ಲಿ ಸಾಗುವುದಿಲ್ಲ. ನೀವು ನಿಮ್ಮ ಮೇಲಾಧಿಕಾರಿಗಳಲ್ಲಿ ಅಸಮಾಧಾನವನ್ನು ಉಂಟುಮಾಡಬಹುದು. ಅನಗತ್ಯ ಖರ್ಚುಗಳನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಎಲ್ಲಾ ಪ್ರಮುಖ ಯೋಜನೆಗಳನ್ನು ಮತ್ತು ನಿರ್ಧಾರಗಳನ್ನು ಮುಂದಕ್ಕೆ ಹಾಕಿ.
ಕರ್ಕಾಟಕ :-
ಇಂದಿನ ದಿನವು ನಕಾರಾತ್ಮಕವಾಗಿರುವುದನ್ನು ಗಣೇಶ ಕಾಣುತ್ತಾರೆ. ಶಕ್ತಿ ಹಾಗೂ ಉತ್ಸಾಹದ ಕೊರತೆಯು ನಿಮ್ಮಲ್ಲಿ ಕಾಡಬಹುದು. ಖಿನ್ನತೆ ಮತ್ತು ನಿರಾಶಾವಾದದಿಂದ ದೂರವಿರಲು ನೀವು ಕಠಿಣವಾಗಿ ಪ್ರಯತ್ನಿಸುವ ಅಗತ್ಯವಿದೆ. ನಿಮ್ಮ ಪ್ರಕ್ಷುಬ್ಧತೆಯನ್ನು ನಿಯಂತ್ರಿಸಲು ಪ್ರಯತ್ನಿಸಿ. ಅನಿರೀಕ್ಷಿತ ವೆಚ್ಚಗಳಿಗೆ ಸಿದ್ಧರಾಗಿರಿ. ಕುಟುಂಬ ಸದಸ್ಯರೊಂದಿಗಿನ ಸಂಘರ್ಷವನ್ನು ತಪ್ಪಿಸಿ. ಹೊಸ ಕಾರ್ಯ ಪ್ರಾರಂಭಕ್ಕೆ ಈ ದಿನ ಸೂಕ್ತವಲ್ಲ. ಹೊಸ ಸಂಪರ್ಕ ಮತ್ತು ಪರಿಚಯಗಳು ಉತ್ತಮ ರೀತಿಯದ್ದಾಗಿರುವುದಿಲ್ಲ. ಕಚೇರಿ ವ್ಯವಹಾರಗಳಲ್ಲಿ ಪಿತೂರಿಯ ಕೆಲಸಗಳ ಆಲೋಚನೆಯನ್ನು ತೊಡೆದುಹಾಕಿ.
ಸಿಂಹ :-
ನಿಮ್ಮ ಸಂಗಾತಿಯೊಂದಿಗೆ ಜಗಳ ಕಾಯುವ ಸಾಧ್ಯತೆಯನ್ನು ಗಣೇಶ ಕಾಣುತ್ತಾರೆ. ವೈವಾಹಿಕ ಸುಖವು ಕ್ಷೀಣಸ್ಥಿತಿಯಲ್ಲಿರುತ್ತದೆ. ನಿಮ್ಮ ಭಿನ್ನಾಭಿಪ್ರಾಯಗಳು ನಿಮ್ಮ ಆರೋಗ್ಯದ ಮೇಲೆ ಹಾನಿಯುಂಟುಮಾಡುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ವಿಚಾರಗಳು ಇನ್ನಷ್ಟು ಜಟಿಲವಾಗಲಿವೆ ಮತ್ತು ನಿಭಾಯಿಸಲು ಕಷ್ಟವಾಗಲಿವೆ. ಸಾಮಾನ್ಯ ವಿಚಾರಗಳು ನಿಮ್ಮ ನಕಾರಾತ್ಮಕತೆಯನ್ನು ಇನ್ನಷ್ಟು ಹೆಚ್ಚಿಸಲಿವೆ. ಸಾರ್ವಜನಿಕ ವಿಚಾರಗಳಲ್ಲಿ ನಿಮ್ಮ ಹೆಸರಿಗೆ ಕಳಂಕ ತರುವಂತಹ ವಿಷಯಗಳಲ್ಲಿ ಭಾಗಿಯಾಗುವುದನ್ನು ತಪ್ಪಿಸಿ. ಉದ್ಯಮ ಪಾಲುದಾರರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. ವ್ಯಾಜ್ಯಗಳಿಂದ ದೂರವಿರಿ.
ಕನ್ಯಾ :-
ಇಂದು ನೀವು ಅತ್ಯಂತ ಖುಷಿಯಲ್ಲಿರುತ್ತೀರಿ ಎಂಬುದಾಗಿ ಗಣೇಶ ಭರವಸೆ ನೀಡುತ್ತಾರೆ. ನೀವು ಮನೆ ಹಾಗೂ ಕಚೇರಿಯಲ್ಲಿ ಸಂಪೂರ್ಣ ಉಲ್ಲಾಸ ಹಾಗೂ ಉತ್ಸಾಹದಿಂದಿರುತ್ತೀರಿ. ನಿಮ್ಮ ಸ್ನೇಹಿತರು ಮತ್ತು ಸಹೋದ್ಯೋಗಿಗಳು ಹಿತಕರ ಹಾಗೂ ಸಹಕಾರ ಮನೋಭಾವವನ್ನು ಹೊಂದಿರುತ್ತಾರೆ. ನೀವು ನಿಮ್ಮ ಎಂದಿನ ವ್ಯಾಧಿಯಿಂದ ಚೇತರಿಕೆ ಕಾಣುವ ಸಾಧ್ಯತೆಯಿದೆ. ನಿಮ್ಮ ಮನೆ ಮತ್ತು ಕುಟುಂಬದಿಂದ ಶುಭಸುದ್ದಿಯನ್ನು ನಿರೀಕ್ಷಿಸಿ. ನಿಮ್ಮ ಕಾರ್ಯದಕ್ಷತೆಯ ಕುರಿತಾಗಿ ನಿಮಗೆ ಪ್ರಶಂಸೆಯು ನಿಶ್ಚಯವಾಗಿದೆ. ಖರ್ಚುವೆಚ್ಚಗಳು ನಿಮ್ಮ ಬಜೆಟ್‌ಗಿಂತ ಹೆಚ್ಚಾಗಬಹುದು.
ತುಲಾ :-
ಸಾಕಷ್ಟು ಹರ್ಷವು ಇಂದು ನಿಮಗಾಗಿ ಕಾದಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಬೌದ್ಧಿಕ ಆಸಕ್ತಿಗಳು ಇಂದು ನಿಮಗೆ ಸಂತೋಷ ಮತ್ತು ಸಂತೃಪ್ತಿಯನ್ನು ನೀಡಲಿವೆ. ನಿಮ್ಮ ಸೃಜನಶೀಲತೆ ಮತ್ತು ಕೌಶಲ್ಯದಲ್ಲಿ ಗಣನೀಯ ವೃದ್ಧಿಯಾಗಲಿದೆ. ದಿನಪೂರ್ತಿ ನೀವು ತಾಜಾ ಹಾಗೂ ಲವಲವಿಕೆಯಿಂದಿರುತ್ತೀರಿ. ತುಂಬಾ ಯೋಚಿಸಬೇಡಿ ಮತ್ತು ಚಿಂತಿಸಬೇಡಿ. ಕೇವಲ ದಿನವನ್ನು ಆನಂದಿಸಿ ಎಂಬುದಾಗಿ ಗಣೇಶ ಹೇಳುತ್ತಾರೆ..
ವೃಶ್ಚಿಕ :-
ಇಂದು, ಶಾಂತಿ ಮತ್ತು ಸಮಾಧಾನದಿಂದಿರುವಂತೆ ಗಣೇಶ ನಿಮಗೆ ಒತ್ತಾಯಿಸುತ್ತಾರೆ. ಆತಂಕವು ತಗ್ಗಲಿದೆ. ಸ್ನೇಹಿತರು ಮತ್ತು ಸಂಬಂಧಿಗಳು ಸ್ನೇಹಪರ ಹಾಗೂ ಸಂತೋಷದಿಂದ ವರ್ತಿಸುತ್ತಾರೆ. ಆರೋಗ್ಯವು ಕಳವಳಕ್ಕೆ ಕಾರಣವಾಗಲಿದೆ. ಹಣ ಮತ್ತು ಆಸ್ತಿಯಲ್ಲಿನ ನಷ್ಟವನ್ನು ನಿರಾಕರಿಸುವಂತಿಲ್ಲ. ಮಹಿಳೆ ಮತ್ತು ಜಲಾವೃತಪ್ರದೇಶಗಳು ನಿಮಗೆ ಅಸಹಿಷ್ಣುವಾಗಲಿದೆ. ನಿಮ್ಮ ಕೀರ್ತಿಯನ್ನು ಅಪಾಯಕ್ಕೆ ತಳ್ಳಬೇಡಿ. ದಾಖಲೆಗಳಿಗೆ ಸಹಿ ಹಾಕುವ ಮುನ್ನ ಎರಡು ಬಾರಿ ಯೋಚಿಸಿ.
ಧನು :-
ದಿನಪೂರ್ತಿ ನೀವು ಸಾಮಾಜಿಕ ಭೇಟಿಯಲ್ಲಿರುತ್ತೀರಿ ಮತ್ತು ಸ್ನೇಹಿತರು ಹಾಗೂ ಕುಟುಂಬ ಸದಸ್ಯರೊಂದಿಗೆ ತಿರುಗಾಟಕ್ಕೆ ತೆರಳಬಹುದು ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ದಿನದ ಪ್ರಾರಂಭದಲ್ಲಿನ ಹೊಸ ಕಾರ್ಯಗಳಿಂದಾಗಿ ಅದೃಷ್ಟವು ನಿಮಗಾಗಿ ಕಾದಿದೆ. ಅದೃಷ್ಟವು ನಿಮ್ಮ ಕಡೆಗಿರುತ್ತದೆ. ಆದ್ದರಿಂದ ನೀವು ಯಶಸ್ಸು ಮತ್ತು ಉತ್ತಮ ಆರೋಗ್ಯವನ್ನು ಪಡೆಯುವಿರಿ. ನಿಮ್ಮ ಕುಟುಂಬ ಸದಸ್ಯರು ಅಥವಾ ಒಡಹುಟ್ಟಿದವರೊಂದಿಗೆ ಖುಷಿಭರಿತ ಪ್ರಯಾಣ ತೆರಳುವಿರಿ. ಅತೀಂದ್ರಿಯ, ಕಲ್ಪನಾತೀತ ಮತ್ತು ಆಧ್ಯಾತ್ಮಿಕ ವಿಚಾರಗಳು ನಿಮ್ಮನ್ನು ಆಕರ್ಷಿಸುತ್ತದೆ ಮತ್ತು ನಿಮ್ಮ ಗಮನ ಸೆಳೆಯುತ್ತವೆ. ಸಾಮಾಜಿಕ ಮನ್ನಣೆ ಮತ್ತು ಗೌರವವು ವರ್ಧಿಸಿದಾಗ ನೀವು ಹರ್ಷಗೊಳ್ಳುವಿರಿ.
ಮಕರ :-
ಇಂದು ನಿಮಗೆ ಅತ್ಯುತ್ತಮ ದಿನವಾಗಿರಲಾರದು ಎಂಬುದಾಗಿ ಗಣೇಶ ಹೇಳುತ್ತಾರೆ. ಪ್ರಾರ್ಥನೆ ಮತ್ತು ಧ್ಯಾನದಿಂದ ನಿಮಗೆ ಸಹಾಯ ಉಂಟಾಗಲಿದೆ. ಕುಟುಂಬ ಸದಸ್ಯರೊಂದಿಗಿನ ಭಿನ್ನಾಭಿಪ್ರಾಯಗಳು ಮತ್ತು ಹಗೆತನವು ನಿಮ್ಮನ್ನು ಆತಂಕ ಹಾಗೂ ದುಃಖದಲ್ಲಿರಿಸುತ್ತದೆ. ದುಂದುವೆಚ್ಚವು ನಿಮ್ಮ ಸಮಸ್ಯೆಗಳನ್ನು ಇನ್ನಷ್ಟು ಹೆಚ್ಚಿಸಬಹುದು. ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ.ವಿದ್ಯಾರ್ಥಿಗಳಿಗೆ ತಮ್ಮ ಓದಿನಲ್ಲಿ ಆಸಕ್ತಿ ಮೂಡುವುದಿಲ್ಲ. ನಿಮ್ಮ ಸಂಗಾತಿಯ ಮನೋಭಾವವು ನಿಮಗೆ ಸಂತೋಷವನ್ನು ತರುವುದಿಲ್ಲ. ಬಂಡವಾಳ ಹೂಡುವ ಸಾಧ್ಯತೆಯಿದೆ.
ಕುಂಭ :-
ಆರ್ಥಿಕವಾಗಿ ವಿಶೇಷ ದಿನವು ನಿಮಗಾಗಿ ಕಾದಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಆಹ್ಲಾದಕರ ಹಾಗೂ ಉಲ್ಲಾಸವು ನಿಮ್ಮ ಕುಟುಂಬದಲ್ಲಿ ನೆಲೆಯಾಗಿರುತ್ತದೆ. ಸ್ನೇಹಿತರು ಮತ್ತು ಜೊತೆಗಾರರೊಂದಿಗೆ ಸಂತೋಷ ಕ್ಷಣಗಳನ್ನು ಅನುಭವಿಸುವಿರಿ. ಖುಷಿಭರಿತ ತಿರುಗಾಟ ಅಥವಾ ಸಣ್ಣ ಪ್ರವಾಸದ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ನಿಮ್ಮ ದೃಷ್ಟಿಕೋನದಲ್ಲಿ ಋಣಾತ್ಮಕ ಚಿಹ್ನೆಯಿರಬಹುದು. ಧ್ಯಾನ ಮತ್ತು ಪ್ರಾರ್ಥನೆಯ ಮೂಲಕ ಅದನ್ನು ತೊಡೆದುಹಾಕಿ.
ಮೀನ :-
e
ಆಸ್ತಿ ಸಂಬಂಧಿತ ಕಾನೂ3ನು ಕ್ರಮಗಳಿಗೆ ಈ ದಿನ ಸಕಾಲವಲ್ಲ ಎಂಬುದಾಗಿ ಗಣೇಶ ಎಚ್ಚರಿಕೆ ನೀಡುತ್ತಾರೆ. ಆದರೆ ಉಳಿದ ಎಲ್ಲಾ ವಿಚಾರಗಳಲ್ಲಿ ನೀವು ಆತ್ಮವಿಶ್ವಾಸದಿಂದ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ನಿಮ್ಮ ಆರೋಗ್ಯದ ಬಗ್ಗೆ ನೀವು ಹೆಚ್ಚು ಸೂಕ್ಷ್ಮತೆಯನ್ನು ಹೊಂದಿರಬೇಕು. ನಿಮ್ಮ ಆತ್ಮೀಯರು ಅಲ್ಪಾವಧಿಗೆ ನಿಮ್ಮಿಂದ ದೂರವಾಗಲಿದ್ದಾರೆ. ವಾಗ್ವಾದಗಳು ಮತ್ತು ಭಿನ್ನಾಭಿಪ್ರಾಯಗಳು ಉಂಟಾಗುವ ಸಾಧ್ಯತೆಯಿದೆ. ‘ಪೊದೆಯೊಳಗಿನ ಎರಡು ಹಕ್ಕಿಗಳಿಗಿಂತ ಕೈಯಲ್ಲಿರುವ ಒಂದೇ ಹಕ್ಕಿ ಲೇಸು’ ಎಂಬ ಗಾದೆ ಮಾತನ್ನು ಅಗತ್ಯವಾಗಿ ಅನುಸರಿಸಬೇಕು. ಯಾವುದೇ ಒಪ್ಪಂದ ಮಾಡುವ ಮುನ್ನ ಅಥವಾ ಒಡಂಬಡಿಕೆಗಳಿಗೆ ಸಹಿ ಹಾಕುವ ಮುನ್ನ ಎರಡೆರಡು ಬಾರಿ ಆಲೋಚಿಸಿ. ಅನಿರೀಕ್ಷಿತ ಘಟನೆಗಳಿಗೆ ಸಿದ್ಧರಾಗಿರಿ.
Horoscope Today : 17 ಮಾರ್ಚ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
WhatsApp Group
Join Now