Horoscope Today : 15 ಫೆಬ್ರವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

Spread the love

ಮೇಷ :-

ಈ ದಿನವು ಮಿಶ್ರಫಲವನ್ನು ತರಲಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಕುಟುಂಬ ಸದಸ್ಯರೊಂದಿಗೆ ಸಂವಾದ ಮತ್ತು ಚರ್ಚೆಯಲ್ಲಿ ತೊಡಗಿಕೊಳ್ಳುವಿರಿ. ನಿಮ್ಮ ಮನೆಯ ಒಳಾಂಗಣ ವಿನ್ಯಾಸವನ್ನು ಬದಲಾಯಿಲು ಕಾರ್ಯದಲ್ಲಿ ನಿಮ್ಮ ದಿನದಲ್ಲಿ ಹೆಚ್ಚಿನ ಭಾಗ ಕಳೆಯಲಿದೆ. ಮೇಲಾಧಿಕಾರಿಗಳೊಂದಿಗೆ ಸಭೆ ಮತ್ತು ಚರ್ಚೆ ನಡೆಸುವ ಸಾಧ್ಯತೆಯಿದೆ.

ಸರಕಾರದಿಂದ ಕೆಲವು ಪ್ರಯೋಜನಗಳು ಸಿಗುವ ಸಾಧ್ಯತೆಯಿದೆ. ಕಚೇರಿ ಸಂಬಂಧ ಪ್ರವಾಸ ತೆರಳಬಹುದು. ಕೆಲಸದಲ್ಲಿ ಹೊಣೆ ಹೆಚ್ಚಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಈ ದಿನವು ಉದ್ವೇಗದಿಂದ ಕೂಡಿರುತ್ತದೆ ಮತ್ತು ನೀವು ದಣಿವಾದಂತೆ ಕಂಡುಬರಬಹುದು. ನಿಮ್ಮ ತಾಯಿಗೆ ಆರ್ಥಿಕ ಲಾಭ ಉಂಟಾಗುವ ಸಾಧ್ಯತೆಯಿದೆ.

ವೃಷಭ :-

ಇಂದು ನೀವು ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಅಥವಾ ಹೊಸ ಕಾರ್ಯ ಪ್ರಾರಂಭಿಸುವ ಸಾಧ್ಯತೆಯಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಹೊಸದೇನನ್ನಾದರೂ ಸಾಧಿಸಲು ನೀವು ಎದುರುನೋಡುತ್ತಿರಬಹುದು. ದೇವಾಲಯಗಳ ಭೇಟಿಯು ನಿಮ್ಮ ಮನಸ್ಥಿತಿಯನ್ನು ಸುಧಾರಿಸಲಿದೆ ಮತ್ತು ನೀವು ಸಂಪೂರ್ಣ ಭಕ್ತಿಯಿಂದಿರುತ್ತೀರಿ. ದೀರ್ಘ ಪ್ರಯಾಣ ತೆರಳುವಿರಿ. ದೂರದೂರಿನ ಸ್ನೇಹಿತರಿಂದ ಶುಭಸುದ್ದಿ ಬರುವ ನಿರೀಕ್ಷೆಯಿದೆ. ವಿದೇಶಗಳಿಗೆ ಪ್ರವಾಸ ತೆರಳುವ ಸಾಧ್ಯತೆಯಿದೆ. ನಿಮ್ಮ ಆರೋಗ್ಯದ ಬಗ್ಗೆ ಎಚ್ಚರವಹಿಸಿ.

ಮಿಥುನ :-

ಇಂದು ಜಾಗರೂಕರಾಗಿರುವಂತೆ ಮತ್ತು ನಿಮ್ಮ ಕಾಲ ಮೇಲೆ ನಿಂತಿರುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ಯಾವುದೇ ಹೊಸ ಕಾರ್ಯದ ಪ್ರಾರಂಭವನ್ನು ತಪ್ಪಿಸಿ. ನೀವು ಅಹಿತಕರ ಭಾವನೆ ಹೊಂದಬಹುದು ಮತ್ತು ಮುಂಗೋಪಿಯಾಗಿರಬಹುದು. ನಂತರ ನಿರಾಕರಿಸಬೇಕಾಗಬಹುದಾದ ಸಂಗತಿಗಳನ್ನು ಮಾಡಬೇಡಿ ಅಥವಾ ಹೇಳಬೇಡಿ. ನೀವು ಅಸ್ವಸ್ಥರಾಗಿದ್ದಲ್ಲಿ ನಿಮ್ಮ ಔಷಧವನ್ನು ಬದಲಾಯಿಸಬೇಡಿ ಅಥವಾ ಶಸ್ತ್ರಚಿಕಿತ್ಸೆಗೆ ಒಳಗಾಗಬೇಜಿ. ಅನೈತಿಕ ಅಥವಾ ನ್ಯಾಯವಲ್ಲದ ಕಾರ್ಯಗಳನ್ನು ಮಾಡಬೇಡಿ. ದುಂದುವೆಚ್ಚದ ಬಗ್ಗೆ ಜಾಗರೂಕರಾಗಿರಿ. ನೀವು ಮಾತನಾಡುವ ರೀತಿಯ ಬಗ್ಗೆ ಅರಿತುಕೊಂಡಿರಿ ಮತ್ತು ವಿನಯದಿಂದಿರಿ. ತೊಂದರೆಗಳನ್ನು ಆಹ್ವಾನಿಸಬೇಡಿ. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿ. ಇಂದು ಕೆಟ್ಟ ದಿನ. ಪ್ರಾರ್ಥನೆಯಿಂದ ಸಹಾಯವಾಗಲಿದೆ..

ಕರ್ಕಾಟಕ :-

ಈ ದಿನವು ಖುಷಿ, ನಲಿವು, ನಗು ಮತ್ತು ಮೋಜಿನಿಂದ ತುಂಬಿರುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಇಂದು ನೀವು ವಿದೇಶೀಯವರನ್ನು ಭೇಟಿ ಮಾಡುವ ಸಂಭವವಿದೆ. ಸಂತೋಷ ಮತ್ತು ಮನರಂಜನೆಯ, ಹೊಸ ಉಡುಪುಗಳ ಗಳಿಕೆಯಲ್ಲಿ ವಿಶೇಷ ಪ್ರಮಾಣದಲ್ಲಿ ಸಮಯ ಕಳೆಯಲಿದ್ದೀರಿ. ಪ್ರೇಮಪ್ರಕರಣಗಳು ಸಂತೋಷದ ತಿರುವನ್ನು ಪಡೆಯಲಿವೆ. ಉತ್ತಮ ಖಾದ್ಯ, ಶ್ರೇಷ್ಯ ಕಂಪನಿ, ದೂರದ ಕಾರು ಪ್ರಯಾಣ ಇವೆಲ್ಲವೂ ನಿಮ್ಮ ದಿನವನ್ನು ಇನ್ನಷ್ಟು ಹರ್ಷದಾಯಕವಾಗಿಸಲಿದೆ. ನಿಮ್ಮ ಘನತೆ ಮತ್ತು ಜನಪ್ರಿಯತೆಯು ಉನ್ನತ ಮಟ್ಟಕ್ಕೆ ಏರಲಿದೆ. ಉತ್ತಮ ಲಾಭ, ಉತ್ತಮ ಆರೋಗ್ಯ ಇವೆಲ್ಲವನ್ನೂ ನೀವು ಹೊಂದುತ್ತೀರಿ.

ಸಿಂಹ :-

ಸಾಮಾನ್ಯ ದಿನವೊಂದು ನಿಮಗಾಗಿ ಕಾದಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಗೃಹಕ್ಷೇತ್ರಕ್ಕೆ ಸಂಬಂಧಿಸಿದಂತೆ ನಿಮಗೆ ಯಾವ ತೊಂದರೆಗಳೂ ಇರುವುದಿಲ್ಲ. ಏನೇ ಆದರೂ, ಕಾರ್ಯಕ್ಷೇತ್ರದಲ್ಲಿ ನಿಮ್ಮ ಸಹೋದ್ಯೋಗಿಗಳು ತಾತ್ಸಾರ ಹಾಗೂ ಅಸಹಕಾರ ಮನೋಭಾವವನ್ನು ತೋರಬಹುದು. ನೀವು ಮಾಡುತ್ತಿರುವ ಕೆಲಸಗಳಲ್ಲಿ ತೊಂದರೆ ಉಂಟಾಗಬಹುದು. ನಿಮ್ಮ ಪ್ರತಿಸ್ಪರ್ಧಿಗಳು ಹೆಚ್ಚು ಕ್ರಿಯಾಶೀಲ ಹಾಗೂ ತೊಂದರೆ ಉಂಟುಮಾಡುವವರಾಗಿರುತ್ತಾರೆ. ನಿಮ್ಮ ಮೇಲಾಧಿಕಾರಿಗಳನ್ನು ಅಸಮಾಧಾನಗೊಳಿಸದಂತಿರಲು ಪ್ರಯತ್ನಿಸಿ. ಮನೆಯಿಂದ ಬರುವ ಕೆಟ್ಟ ಸುದ್ದಿಯು ನಿಮ್ಮಉದ್ವೇಗ ವರ್ಧನೆಗೆ ಕಾರಣವಾಗಬಹುದು. ಹತಾಶೆ ಅಥವಾ ಖಿನ್ನತೆಗೆ ಒಳಗಾಗಬೇಡಿ.ನಿರಾಶೆಗಳ ಅಧೀನರಾಗಬೇಡಿ. ನಾಳೆ ಮತ್ತೊಂದು ಹೊಸದಿನವಿದೆ.

ಕನ್ಯಾ :-

ನಿಮ್ಮ ಮಕ್ಕಳು ಇಂದಿನ ಚಿಂತೆಯ ಮೂಲವಾಗಿರುತ್ತಾರೆ ಎಂಬುದಾಗಿ ಗಣೇಶ ಹೇಳುತ್ತಾರೆ. ನೀವು ಏನು ತಿನ್ನುತ್ತೀರಿ ಎಂಬುದರ ಬಗ್ಗೆ ಎಚ್ಚರವಹಿಸಿ. ಉದರ ಸಂಬಂಧಿ ತೊಂದರಗಳುಂಟಾಗುವ ಸಾಧ್ಯತೆಗಳು ಬಲವಾಗಿವೆ. ಈ ದಿನವು ನೀವು ಯೋಜಿಸಿದಂತೆ ಇರುವುದಿಲ್ಲ. ಅನಿರೀಕ್ಷಿತ ಖರ್ಚುವೆಚ್ಚಗಳು ಉಂಟಾಗಬಹುದು. ಬೌದ್ಧಿಕ ಚರ್ಚೆಗಳಿಂದ ದೂರವಿರಲು ಪ್ರಯತ್ನಿಸಿ. ಬಂಡವಾಳ ಹೂಡಿಕೆ ಮತ್ತು ಹಣ ತೊಡಗುವಿಕೆಗೆ ಈ ದಿನ ಶ್ರೇಯಸ್ಕರವಲ್ಲ. ನಿಮ್ಮ ಪ್ರೀತಿಪಾತ್ರರೊಂದಿಗೆ ಇಂದು ಖುಷಿಯಿಂದ ಕಾಲಕಳೆಯುವಿರಿ.

ತುಲಾ :-

ಭಾವೋದ್ವೇಗ ಮತ್ತು ದುರ್ಬಲತೆಗಳನ್ನು ತೋರಿಸಿಕೊಳ್ಳುವ ಸಾಮರ್ಥ್ಯವು ಕೆಲವೊಮ್ಮೆ ಒಳ್ಳೆಯ ವಿಚಾರವಾಗಲಿದೆ ಮತ್ತು ಇಂದು ಅಧಿಕ ಆಕರ್ಷಣೆಯಿಂದಲೂ ಕೂಡಿರುತ್ತದೆ ಎಂಬುದಾಗಿ ಗಣೇಶ ಕಣ್ಣುಮಿಟುಕಿಸುತ್ತಾರೆ. ಇಂದು ನೀವು ಪ್ರಾಯೋಗಿಕವಾಗಿ ಭಾವಪರವಶತೆಯಿಂದ ತುಂಬಿರುತ್ತೀರಿ. ಎಲ್ಲಾ ರೀತಿಯಿಂದಲೂ, ಭಾವಾವೇಶ ಹಾಗೂ ಸೂಕ್ಷ್ಮಭಾವನೆಯನ್ನು ಹೊಂದುತ್ತೀರಿ. ನಿಮ್ಮ ಪ್ರೀತಿಪಾತ್ರರೊಂದಿಗೆ ಭಿನ್ನಾಭಿಪ್ರಾಯ ಅಥವಾ ತಾಯಿಯ ಆರೋಗ್ಯವು ಇದಕ್ಕೆ ಕಾರಣವಾಗಬಹುದು. ಅನಿರೀಕ್ಷಿತ ನಷ್ಟ ಮತ್ತು ಗೌರವ ನಷ್ಟವು ಉಂಟಾಗುವ ಸಾಧ್ಯತೆಯಿದೆ. ಒಟ್ಟಾರೆಯಾಗಿ, ಗ್ರಹಗತಿಗಳು ಪ್ರಸಕ್ತ ವಿರೋಧವಾಗಿರದ ಕಾರಣ, ವಿಶ್ರಾಂತರಾಗಿ, ಇದು ಕೂಡಾ ಕಳೆದುಹೋಗಬಹುದು.

ವೃಶ್ಚಿಕ :-

ಉಲ್ಲಾಸ ಮತ್ತು ಸಂತೋಷವು ಇಂದು ನಿಮ್ಮ ಎರಡನೇ ಹೆಸರು. ಇಂದು ನಿಮಗೆ ಅದೃಷ್ಟದಾಯಕ ದಿನವು ಕಾದಿದೆ ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ. ನಿಮ್ಮ ಸಂತೋಷವು ಎಲ್ಲೆಂದರಲ್ಲಿ ಹರಡುತ್ತದೆ ಪರಿಣಾಮವಾಹಿ ಎಲ್ಲಾ ರೀತಿಯ ಹರ್ಷದಾಯಕ ಚರ್ಚೆ ಮತ್ತು ಕೂಟಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವಿರಿ. ನೀವು ಇತ್ತೀಚೆಗೆ ಸಂಪರ್ಕವನ್ನೇ ಕಳೆದುಕೊಂಡಿರುವ ಕೆಲವು ಸ್ನೇಹಿತರನ್ನು ಮರುಪಡೆಯಲು ನೀವು ಸಾಕಷ್ಟು ಪ್ರಯತ್ನಪಡುತ್ತೀರಿ. ಹೊಸ ಯೋಜನೆಗಳನ್ನು ಅವರೊಂದಿಗೆ ಪ್ರಾರಂಭಿಸಲು ನೀವು ಯೋಜನೆ ರೂಪಿಸಿರುವ ಕಾರಣ, ಇದು ನಿಮಗೆ ಲಾಭವನ್ನು ತರಲಿದೆ. ಸಂಪನ್ಮೂಲಗಳಲ್ಲಿ ವೃದ್ಧಿ ಹಾಗೂ ಕಾರ್ಯದಲ್ಲಿ ಯಶಸ್ಸು ದೊರೆಯುವ ಕಾರಣ ಇದು ಉತ್ತಮ ಸಮಯ. ಸಣ್ಣ ಸಂತಸಭರಿತ ಪ್ರವಾಸ ಕೈಗೊಳ್ಳುವಿರಿ.

ಧನು :-

ಈ ದಿನವು ನಿಮಗೆ ಸ್ಪಷ್ಟ ಧೋರಣೆಯಿಲ್ಲದ ದಿನವಾಗಿದೆ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ಅನಗತ್ಯ ವೆಚ್ಚಗಳ ಸಂಭಾವ್ಯತೆಯಿದೆ. ಪರಿತಾಪ ಮತ್ತು ಬೇಸರಗಳಿಂದ ನಿಮ್ಮ ಹೃದಯ ಭಾರದಿಂದ ಕೂಡಿರಬಹುದು. ಮನೆಯಲ್ಲಿನ ಭಿನ್ನಾಭಿಪ್ರಾಯಗಳು ನಿಮ್ಮ ಹೆಚ್ಚಿನ ವ್ಯಥೆಗೆ ಕಾರಣವಾಗಬಹುದು.ನಿಮ್ಮ ಪ್ರಯತ್ನಗಳ ಫಲಿತಾಂಶವು ನಿಮ್ಮ ನಿರೀಕ್ಷೆಗಿಂತ ಕಡಿಮೆ ಇರಬಹುದು. ಗೊಂದಲ ಮತ್ತು ಸಂದಿಗ್ಧತೆಗಳು ನಿಮ್ಮನ್ನು ಬೇಸರದಲ್ಲಿರಿಸುತ್ತದೆ. ಎಲ್ಲಾ ಅತೀ ಮುಖ್ಯ ವಿಚಾರಗಳನ್ನು ಮುಂದೂಡುವಂತೆ ಗಣೇಶ ನಿಮಗೆ ಒತ್ತಾಯಿಸುತ್ತಾರೆ. ವಿದೇಶೀ ವ್ಯಾಪಾರ ಮತ್ತು ಸಂಪರ್ಕಗಳು ಲಾಭದಾಯಕವಾಗಲಿವೆ.

ಮಕರ :-

ಪ್ರಾರ್ಥನೆಯ ಮೂಲಕ ದಿನದ ಪ್ರಾರಂಭವು ನಿಮ್ಮನ್ನು ಉಲ್ಲಾಸದಾಯಕವಾಗಿರಿಸುತ್ತದೆ. ಇಂದು ನೀವು ಧಾರ್ಮಿಕ ಚಟುವಟಿಕೆಗಳನ್ನು ನಿರ್ವಹಿಸುವ ಸಾಧ್ಯತೆಯಿದೆ. ನಿಮ್ಮ ಮನೆಯ ವಾತಾವರಣವು ಸಕಾರಾತ್ಮಕವಾಗಿರುತ್ತದೆ. ನಿಮ್ಮ ಸ್ನೇಹಿತರಿಂದ ಮತ್ತು ಪ್ರೀತಿಪಾತ್ರರಿಂದ ಉಡುಗೊರೆಗಳನ್ನು ನಿರೀಕ್ಷಿಸಿ. ವೃತ್ತಿಗೆ ಸಂಬಂಧಿಸಿದಂತೆ, ನಿಮ್ಮ ಪ್ರಾಬಲ್ಯವು ಎಲ್ಲಾ ಕ್ಷೇತ್ರಗಳಲ್ಲೂ ಮಹತ್ತರ ರೀತಿಯಲ್ಲಿ ಪ್ರಭಾವ ಬೀರುತ್ತದೆ. ನಿಮ್ಮ ಕೆಲಸದ ಬಗ್ಗೆ ನಿಮ್ಮ ಮೇಲಾಧಿಕಾರಿಗಳು ಮೆಚ್ಚುವೆ ವ್ಯಕ್ತಪಡಿಸುವ ಸಂಭವವಿದೆ. ಅನುಕೂಲಕರ ಪರಿಸ್ಥಿತಿಯ ಪ್ರಯೋಜನವನ್ನು ಪಡೆದುಕೊಳ್ಳುವ ಮೂಲಕ ನೀವು ನಿಮ್ಮ ಕಾರ್ಯವನ್ನು ಯಶಸ್ವಿಯಾಗಿ ಪೂರೈಸುವಿರಿ ಎಂಬುದಾಗಿ ಗಣೇಶ ಹೇಳುತ್ತಾರೆ. ನೀವು ಮಾನಸಿಕವಾಗಿ ಆರಾಮದಾಯಕರಾಗಿವ ಸಾಧ್ಯತೆಯಿದೆ.

ಕುಂಭ :-

ಇಂದು ಮಾನಸಿಕವಾಗಿ ಮತ್ತು ಆರ್ಥಿಕವಾಗಿ ನೀವು ಆಯಾಸಗೊಂಡಿರುವಂತೆ ಅನಿಸಬಹುದು. ನಿಮ್ಮ ಕುಟುಂಬ ಸದಸ್ಯರೊಂದಿಗೆ ಹಿಂಜರಿಕೆ ಭಾವನೆಯನ್ನು ನೀವು ಹೊಂದಬಹುದು. ಬಂಡವಾಳ ಹೂಡುವಾಗ ಮತ್ತು ಕಾನೂನು ಸಂಬಂಧಿ ವಿಚಾರಗಳಲ್ಲಿ ವ್ಯವಹರಿಸುವಾಗ ಎಚ್ಚರಿಕೆ ವಹಿಸಿ. ಹೆಚ್ಚುವರಿ ವೆಚ್ಚಗಳ ಸಾಧ್ಯತೆಯಿದೆ. ವೈಯಕ್ತಿಕ ನಷ್ಟಕ್ಕೊಳಗಾದ ನಂತರವೂ ನೀವು ಪ್ರಯೋಜನವನ್ನು ಪಡೆಯುವಿರಿ, ನಿಮ್ಮ ನಾಲಗೆ ಮತ್ತು ಸಿಟ್ಟಿನ ಮೇಲೆ ನಿಯಂತ್ರಣವಿರಲಿ. ಅಪಘಾತದ ಸಂಭಾವ್ಯತೆಯಿದೆ.

ಮೀನ :-

ಇಂದು ಆಕಸ್ಮಿಕ ಧನಲಾಭದ ಯೋಗವಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಮಕ್ಕಳಿಗೆ ಸಂಬಂಧಿಸಿದಂತೆ ನೀವು ಶುಭಸುದ್ಧಿಯನ್ನು ಪಡೆಯುವಿರಿ. ನಿಮ್ಮ ಬಾಲ್ಯಸ್ನೇಹಿತರ ಭೇಟಿಯಿಂದ ಮನಸ್ಸಿಗೆ ಸಂತಸವಾಗಲಿದೆ. ನೀವು ಹೊಸ ವ್ಯಕ್ತಿಗಳ ಮೈತ್ರಿ ಬೆಳೆಸುವ ಸಾಧ್ಯತೆಯಿದೆ ಮತ್ತು ಇದು ನಿಮ್ಮ ಭವಿಷ್ಯಕ್ಕೆ ಸಹಕಾರಿಯಾಗಲಿದೆ. ಮನೆಯಲ್ಲಿ ಸಾಮಾಜಿಕ ಸಮಾರಂಭಗಳು ಜರಗಲಿವೆ. ವೃತ್ತಿಕ್ಷೇತ್ರಕ್ಕೆ ಸಂಬಂದಿಸಿದಂತೆ, ಹಣಕಾಸು ಲಾಭ ಉಂಟಾಗಲಿದೆ. ಸಂತಸಭರಿತ ಪ್ರಯಾಣ ಕೈಗೊಳ್ಳುವಿರಿ.

WhatsApp Group Join Now

Spread the love

Leave a Reply