Horoscope Today : 13 ಫೆಬ್ರವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

Spread the love

ಮೇಷ :-

ಇಂದು ನಿಮಗೆ ನಿಸ್ತೇಜ ದಿನ ಕಾದಿದೆ ಎಂಬುದಾಗಿ ಗಣೇಶ ಶಕುನ ಹೇಳುತ್ತಾರೆ. ನೀವು ಆಯಾಸ, ಆಲಸ್ಯ ಮತ್ತು ವಿಶ್ರಾಂತಿರಹಿತ ಭಾವನೆಯನ್ನು ಹೊಂದುವ ನಿರೀಕ್ಷೆ ಇದೆ. ನೀವು ಸಂಪೂರ್ಣವಾಗಿ ಕಳೆಗುಂದಿರುವ ಕಾರಣ ಯಾರಿಗಾದರೂ ಏನನ್ನಾದರೂ ಮಾಡಲು ನಿಮಗೆ ಆಸಕ್ತಿ ಇರುವುದಿಲ್ಲ.

ನೀವು ವಿಶೇಷವಾಗಿ ನಿಮ್ಮ ಅವಿಶ್ರಾಂತದ ಬಗ್ಗೆ ಜಾಗ್ರತೆ ವಹಿಸಬೇಕಾದ ಅಗತ್ಯವಿದೆ. ಸಣ್ಣ ಸಣ್ಣ ವಿಷಯಗಳಿಗೆ ತಾಳ್ಮೆ ಕಳೆದುಕೊಳ್ಳಬೇಡಿ. ಮನೆಯಲ್ಲೇ ಆಗಲಿ ಅಥವಾ ಕಚೇರಿಯಲ್ಲೇ ಆಗಲಿ ಇತರರನ್ನು ಅಸಮಧಾನಪಡಿಸುವುದನ್ನು ನೀವು ಆದಷ್ಟು ತಪ್ಪಿಸಬೇಕು. ಇದು ದೀರ್ಘಕಾಲದಲ್ಲಿ ತೊಂದರೆಯನ್ನುಂಟುಮಾಡುತ್ತದೆ. ಕೆಲವು ಧಾರ್ಮಿಕ ಕ್ರಿಯೆಗಳಲ್ಲಿ ನೀವು ಭಾಗವಹಿಸುವ ಸಾಧ್ಯತೆಯಿದೆ.

ವೃಷಭ :-

ಈ ದಿನದಂದು ನಿಮ್ಮ ಆರೋಗ್ಯವು ಉತ್ತಮವಾಗಿರುವಂತೆ ಕಂಡುಬರುವುದಿಲ್ಲ. ದೈಹಿಕವಾಗಿ ಮತ್ತು ಮಾನಸಿಕವಾಗಿ ನೀವು ಪರಿಸ್ಥಿತಿಯ ಕೈಗೊಂಬೆಯಾಗುವ ಸಂಭವವಿದೆ. ಹೊಸ ಯೋಜನೆ ಮತ್ತು ಕಾರ್ಯಾರಂಭಗಳಿಗೆ ಈ ದಿನವನ್ನು ಕೆಟ್ಟ ದಿನ ಎಂಬುದಾಗಿ ಗಣೇಶ ಪರಿಗಣಿಸುತ್ತಾರೆ.ನೀವು ತೆಗೆದುಕೊಳ್ಳುವ ಆಹಾರದ ಬಗ್ಗೆ ಎಚ್ಚರದಿಂದಿರಿ. ಆರೋಗ್ಯಕರವಲ್ಲದ ತಿನಿಸುಗಳ ಸೇವನೆಯು ಕಿರಿಕಿರಿಯನ್ನುಂಟುಮಾಡುವ ಪ್ರಸಂಗ ಉಂಟಾಗಬಹುದು. ಪ್ರಯಾಣವನ್ನು ತಪ್ಪಿಸಲು ಪ್ರಯತ್ನಿಸಿ. ನೀವು ಈ ದಿನಕ್ಕಾಗಿ ಯೋಜಿಸಿದ ಎಲ್ಲಾ ಕಾರ್ಯಗಳನ್ನು ನೀವು ಪೂರ್ಣಗೊಳಿಸುವ ಸಾಧ್ಯತೆಯು ಕಂಡುಬರುವುದಿಲ್ಲ. ಎಲ್ಲಾ ವಿಚಾರಗಳನ್ನು ಹಗುರವಾಗಿ ತೆಗೆದುಕೊಳ್ಳಿ. ಧ್ಯಾನದಿಂದ ನಿಮಗೆ ಸಹಾಯವಾಗಬಹುದು.

ಮಿಥುನ :-

ಈ ದಿನವು ವಿನೋದ ಹಾಗೂ ಆನಂದದಿಂದ ಕೂಡಿರುತ್ತದೆ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ನೀವು ನಿಮ್ಮ ಸಮಯವನ್ನು ನಿಮ್ಮ ಸ್ನೇಹಿತರು ಹಾಗೂ ಕುಟುಂಬ ಸದಸ್ಯರೊಂದಿಗೆ ಖುಷಿ ಹಾಗೂ ಸಂತೋಷದಿಂದ ಕಳೆಯುವ ಸಂಭವವಿದೆ. ಸಾಮಾಜಿಕ ಮನ್ನಣೆ ಹಾಗೂ ಗೌರವವನ್ನು ನೀವು ಎದುರುನೋಡಬಹುದು. ವೈವಾಹಿಕ ಜೀವನವು ಖುಷಿಭರಿತವಾಗಿರುತ್ತದೆ.

ಕರ್ಕಾಟಕ :-

ಉದ್ಯಮಿಗಳು ಅದೃಷ್ಟವು ತಮ್ಮ ಕಡೆಗಿರುವ ದಿನವನ್ನು ಎದುರು ನೋಡಬಹುದು ಎಂಬುದಾಗಿ ಗಣೇಶ ಹೇಳುತ್ತಾರೆ. ಸಹೋದ್ಯೋಗಿಗಳು ನಿಮಗೆ ಸಹಾಯ ಮಾಡಲು ಸಿದ್ಧರಿರುತ್ತಾರೆ. ನಿಮ್ಮ ಕುಟುಂಬ ಸದಸ್ಯರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತೀರಿ ಮತ್ತು ಇದರಿಂದ ಅವರನ್ನು ಸಂತೋಷಪಡಿಸುತ್ತೀರಿ. ದಿನಪೂರ್ತಿ ನಿಮ್ಮ ಮನಸ್ಸು ಶಾಂತಿಯಿಂದ ಇರುತ್ತದೆ. ಕೆಲಸಕ್ಕೆ ಸಂಬಂಧಿಸಿದಂತೆ ನಿಮ್ಮ ಪ್ರತಿಸ್ಪರ್ಧಿಗಳಿಗಿಂತ ನಿಮ್ಮ ನಿರ್ವಹಣೆಯು ಉತ್ತಮವಾಗಿರುತ್ತದೆ ಮತ್ತು ಅವರನ್ನು ಸುಲಭವಾಗಿ ಜಯಿಸುತ್ತೀರಿ. ಕೆಲಸದಲ್ಲಿ ಯಶಸ್ಸಿನ ಭರವಸೆಯಿದೆ. ಖರ್ಚುವೆಚ್ಚಗಳು ಹೆಚ್ಚಾಗುವ ಸಾಧ್ಯತೆಯಿದೆ.

ಸಿಂಹ :-

ಕಲೆ ಮತ್ತು ಸೃಜನಶೀಲ ಕ್ಷೇತ್ರಗಳಲ್ಲಿ ತೊಡಗಿರುವವರುವವರಿಗೆ ಈ ದಿನ ಅನುಕೂಲಕರವಾಗಿರುವುದರಿಂದ ತಮ್ಮ ಕ್ಷೇತ್ರದಲ್ಲಿ ಅತ್ಯುತ್ತಮ ನಿರ್ವಹಣೆಯನ್ನು ಮಾಡುತ್ತಾರೆ ಎಂಬುದಾಗಿ ಗಣೇಶ ಹೇಳುತ್ತಾರೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡುತ್ತಾರೆ. ನಿಮ್ಮ ಸ್ನೇಹಿತರು ಹಾಗೂ ಪ್ರೀತಿಪಾತ್ರರನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಆರೋಗ್ಯದ ಬಗ್ಗೆ ಗಮನಹರಿಸುವಿರಿ. ಏಕಾಗ್ರತೆಯನ್ನು ಕಾಯ್ದುಕೊಳ್ಳುವ ಸಲುವಾಗಿ ನಿಮ್ಮ ಸಿಟ್ಟನ್ನು ನಿಯಂತ್ರಿಸಿಕೊಳ್ಳಿ.

ಕನ್ಯಾ :-

ಇಂದಿನ ದಿನವು ಅನನುಕೂಲತೆಯಿಂದ ತುಂಬಿರುವ ಸಾಧ್ಯತೆಯಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನೀವು ದೈಹಿಕವಾಗಿ ಆರೋಗ್ಯಕರವಾಗಿರಬಹುದು. ಚಿಂತೆಗಳು ನಿಮ್ಮ ಮನಸ್ಸನ್ನು ಕಾಡಬಹುದು. ನಿಮ್ಮ ಸಂಗಾತಿಯೊಂದಿಗೆ ಜಗಳ ಹಾಗೂ ವಾಗ್ವಾದಗಳು ನಡೆಯುವ ಸಾಧ್ಯತೆಯು ದಟ್ಟವಾಗಿದೆ. ನಿಮ್ಮ ತಾಯಿಯ ಆರೋಗ್ಯವು ನಿಮ್ಮನ್ನು ಚಿಂತೆಗೀಡುಮಾಡಬಹುದು. ಭೂ ಮತ್ತು ಆಸ್ತಿಗಳಿಗೆ ಸಂಬಂಧಿಸಿದ ವಿಚಾರಗಳಲ್ಲಿ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ.

ತುಲಾ :-

ಈ ದಿನಪೂರ್ತಿ ಸಂತಸಕರವಾಗಿರುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಪ್ರತಿಸ್ಪರ್ಧಿಗಳ ಎದುರಿಗೇ ಉತ್ತಮ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತೀರಿ. ಎಲ್ಲಾ ವಿಚಾರದಲ್ಲಿ ಯಶಸ್ಸು ನಿಮಗೆ ಲಭಿಸಲಿದೆ. ನೀವು ನಿಮ್ಮ ಪ್ರೀತಿಪಾತ್ರರನ್ನು ಭೇಟಿಮಾಡಬಹುದು. ನಿಮ್ಮ ಮನಸ್ಸು ಒತ್ತಡರಹಿತವಾಗಿರುತ್ತದೆ. ಯಾತ್ರಾಸ್ಥಳಕ್ಕೆ ತೆರಳುವುದರಿಂದ ನೀವು ಅತ್ಯುನ್ನತ ಆನಂದವನ್ನು ಅನುಭವಿಸುವಿರಿ. ಸಂಬಂಧಗಳಲ್ಲಿರುವ ಭಾವಾವೇಶಗಳು ನಿಮ್ಮನ್ನು ಗೊಂದಲದಲ್ಲಿ ಸಿಲುಕಿಸಬಹುದು.

ವೃಶ್ಚಿಕ :-

ಇಂದು ನಿಮಗೆ ಸಾಧಾರಣ ದಿನವಾಗಲಿದೆ ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ ಜೊತೆಗೆ ಅನಗತ್ಯ ಖರ್ಚುವೆಚ್ಚಗಳ ಬಗ್ಗೆ ಗಮನಹರಿಸುವಂತೆ ನಿಮ್ಮನ್ನು ಒತ್ತಾಯಿಸುತ್ತಾರೆ.ನೀವು ಮಾತನಾಡುವ ಶೈಲಿಯ ಬಗ್ಗೆ ಎಚ್ಚರವಹಿಸಿ. ಸ್ನೇಹಪರ ಹಾಗೂ ವಿನಯದಿಂದಿರಲು ಪ್ರಯತ್ನಿಸಿ. ಇಂದು ಮನೆಯಲ್ಲಿನ ಶಾಂತಿ ಮತ್ತು ಸಾಮರಸ್ಯವನ್ನು ಖಚಿತಪಡಿಸುತ್ತದೆ. ಅನಗತ್ಯವಾಗಿ ನಿರಾಶಾವಾದಿಯಾಗಿರುವ ಬಗ್ಗೆ ಎಚ್ಚರವಹಿಸಿ. ಧಾರ್ಮಿಕ ಕಾರಣಗಳಿಗಾಗಿ ವೆಚ್ಚ ಮಾಡಬೇಕಾದೀತು.ವಿಶೇಷವಾಗಿ ಅಧ್ಯಯನದಲ್ಲಿ ತೊಡಗಿರುವವರಿಗೆ ಈ ದಿನವು ನಿರರ್ಥಕವಾಗಬಹುದು.

ಧನು :-

ಹಣಕಾಸು ಯಶಸ್ಸು ಇಂದು ನಿಮಗೆ ದೊರಕಲಿದೆ ಮತ್ತು ನೀವು ಕೈಗೊಂಡ ಕಾರ್ಯವನ್ನು ಸರಿಯಾದ ಸಮಯದಲ್ಲಿ ಪೂರ್ಣಗೊಳಿಸಲು ಶಕ್ತರಾಗುವಿರಿ. ಧಾರ್ಮಿಕ ಕ್ಷೇತ್ರಗಳಿಗೆ ತೆರಳಬಹುದು. ನಿಮ್ಮ ಪ್ರೀತಿಪಾತ್ರರ ಅಥವಾ ಒಡಹುಟ್ಟಿದವರ ಮನೆಯಲ್ಲಿ ಶುಭಸಮಾರಂಭಗಳಿಗೆ ನೀವು ತೆರಳಬೇಕಾಗಬಹುದು. ಅವರ ಭೇಟಿಯು ನಿಮ್ಮನ್ನು ಸಂತೋಷದಲ್ಲಿರಿಸುತ್ತದೆ ಮತ್ತು ನಿಮ್ಮ ವೈವಾಹಿಕ ಜೀವನವನ್ನು ವ್ಯಾಪಿಸುತ್ತದೆ. ಉತ್ತಮ ಆಹಾರ, ಮಾನಸಿಕ ಸ್ಥಿರತೆ ಮತ್ತು ಸಾಮಾಜಿಕ ಸ್ಥಾನಮಾನ ವೃದ್ಧಿ ಇವೆಲ್ಲವೂ ನಿಮ್ಮನ್ನು ನಗುವಂತೆ ಮಾಡುತ್ತದೆ. ನಿಮ್ಮ ಸಾಮಾನ್ಯ ಆರೋಗ್ಯದ ಬಗ್ಗೆ ನಿರ್ಲ್ಯಕ್ಷ ತಾಳದಂತೆ ಗಣೇಶ ನಿಮ್ಮನ್ನು ಒತ್ತಾಯಿಸುತ್ತಾರೆ. ಅದರ ಬಗ್ಗೆ ಗಮನಹರಿಸಿ.

ಮಕರ :-

ಸಣ್ಣ ಅಪಘಾತ ಅಥವಾ ಮಾನಸಿಕ ಒತ್ತಡವು ನಿಮ್ಮ ನಕ್ಷೆಯಲ್ಲಿರುವ ಮುನ್ಸೂಚನೆಯನ್ನು ಗಣೇಶ ನೀಡುತ್ತಾರೆ. ಆದ್ದರಿಂಗ ದಿನಪೂರ್ತಿ ಎಚ್ಚರಿಕೆಯಿಂದಿರಿ. ಸಹೋದ್ಯೋಗಿಗಳ ಮಧ್ಯಪ್ರವೇಶ, ನಿಮ್ಮ ಸಂಬಂಧಿಕರು ಅಥನಾ ಮಕ್ಕಳೊಂದಿಗೆ ನಿಮ್ಮದೇ ಆರೋಗ್ಯದ ಕುರಿತಂತೆ ಸಣ್ಣ ಜಗಳ ಇವು ಒತ್ತಡಕ್ಕೆ ಕಾರಣವಾಗಿರಬಹುದು. ಎಚ್ಚರಿಕೆಯಿಂದ ಪ್ರಯಾಣಿಸಿ. ಕಠಿಣ ಪರಿಶ್ರಮವು ನಿಮಗೆ ಸಹಾಯ ಮಾಡುತ್ತದೆ.

ಕುಂಭ :-

ಲಕ್ಷ್ಮೀದೇವಿಯು ನಿಮ್ಮನ್ನು ಅನುಗ್ರಹಿಸುತ್ತಾಳೆ ಮತ್ತು ಮತ್ತು ಲೌಕಿಕ ಸಮೃದ್ಧಿಯೊಂದಿಗೆ ಹೆಚ್ಚಿದ ಗೌರವ ಮತ್ತು ಘನತೆಯನ್ನು ದಯಪಾಲಿಸಲಿದ್ದಾಳೆ. ಕೆಲಸ, ವ್ಯಾಪಾರ, ಮತ್ತು ವ್ಯವಹಾರಗಳಲ್ಲಿ ಅದೃಷ್ಟ ಗ್ರಹಗತಿಗಳಿಂದ ಮತ್ತು ಸ್ನೇಹಿತೆಯರಿಂದ ಪ್ರಯೋಜನವಾಗಲಿದೆ.ಮಕ್ಕಳೊಂದಿಗೆ ಉತ್ತಮ ಸಂಬಂಧವನ್ನು ಗಣೇಶ ಹರಸುತ್ತಾರೆ ಮತ್ತು ಅವರ ಕಡೆಯಿಂದ ಶುಭಸುದ್ದಿ ಪಡೆಯುವಿರಿ ಮತ್ತು ಸಂತಸದ ಪ್ರವಾಸ ತೆರಳುವಿರಿ. ಪ್ರೀತಿ ಅಥವಾ ಮದುವೆಯ ಅನ್ವೇಷಣೆಯಲ್ಲಿರುವವರಿಗೆ ಉತ್ತಮ ಸಮಯ. ಅವರಿಗೆ ಸಂಬಂಧಗಳು ಕೂಡಿ ಬರಬಹುದು.

ಮೀನ :-

ಆಹ್ಲಾದಕರ ಮತ್ತು ಆಶಾದಾಯಕ ದಿನವು ನಿಮಗಾಗಿ ಕಾದಿದೆ ಎಂಬುದಾಗಿ ಗಣೇಶ ಭರವಸೆ ನೀಡುತ್ತಾರೆ. ನಿಮ್ಮ ಮೇಲಾಧಿಕಾರಿಗಳು ನಿಮ್ಮನ್ನು ಪ್ರಶಂಸಿಸುವ ಸಾಧ್ಯತೆಯಿದೆ. ನೀವು ಉದ್ಯಮದಲ್ಲಿರಬಹುದು ಅಥವಾ ಸೇವೆಯಲ್ಲಿರಬಹುದು ಧನಾತ್ಮಕ ಫಲಿತಾಂಶವನ್ನು ನೀವು ನಿರೀಕ್ಷಿಸಬಹುದು. ಸಂದರ್ಭಗಳ ಬದಲಾವಣೆಯ ರೀತಿಯಿಂದ ನೀವು ಹರ್ಷಪಡುತ್ತೀರಿ. ನಿಮ್ಮ ತಂದೆ ಅಥವಾ ಹಿರಿಯರಿಂದ ಲಾಭ ಮತ್ತು ಸಹಕಾರವನ್ನು ನಿರೀಕ್ಷಿಸಬಹುದು. ಮನೆಯ ವಾತಾವರಣವು ಪರಮಾನಂದದ ಮೂಲವಾಗಿರುತ್ತದೆ.

WhatsApp Group Join Now

Spread the love

Leave a Reply