Horoscope Today : ಡಿಸೆಂಬರ್‌ 12 ರಂದು ಯಾವ ರಾಶಿಗೆ ಶುಭ.? ಯಾವ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

Spread the love

ಮೇಷ :- ಉಜ್ವಲ ಕಲ್ಪನಾಶಕ್ತಿ, ಕ್ರಿಯಾತ್ಮಕ ಪ್ರೇರಣೆ ಮತ್ತು ನಾವೀನ್ಯ ಕಲಾತ್ಮಕತೆ ಇವೆಲ್ಲವೂ ಇಂದು ನಿಮ್ಮ ದಿನವನ್ನು ಗುರುತಿಸಲಿದೆ. ಇಂದು ನಿಮ್ಮ ಮಾನಸಿಕ ಮತ್ತು ದೈಹಿಕ ಸ್ಥಿತಿಯು ಅತ್ಯುತ್ತಮವಾಗಿರುತ್ತದೆ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ನೀವು ಅದೃಷ್ಟಕಾರಿ ಮೇಷ ರಾಶಿಯವರು ಕಲ್ಪನಾ ಲೋಕದಲ್ಲಿರುತ್ತೀರಿ ಮತ್ತು ನಿಮ್ಮ ಕ್ರಿಯಾತ್ಮಕತೆ ಮತ್ತು ನಾವೀನ್ಯತೆಯು ಉತ್ತುಂಗಕ್ಕೇರಲಿದೆ.

ಸಾಹಿತ್ಯ, ಕಲೆ ಮತ್ತು ಶೈಕ್ಷಣಿಕ ಆಸಕ್ತಿಗಳು ಇಂದಿನ ಗ್ರಹಗತಿಗಳ ಅದ್ಭುತ ಪ್ರಭಾವದ ಅನುಗ್ರಹವನ್ನು ಪಡೆಯಲಿದೆ. ಇವೆಲ್ಲದರ ಜೊತೆಗೆ ಮನೆಯಲ್ಲಿನ ಸೊಗಸಾದ ಮತ್ತು ಅಕ್ಷುಬ್ಧ ವಾತಾವರಣವು ನಿಮ್ಮನ್ನು ಸಂತಸದಲ್ಲಿರಿಸಲಿದೆ. ಕಾರ್ಯಸ್ಥಳದಲ್ಲಿ ನಿಮ್ಮ ಮೇಲಾಧಿಕಾರಿಗಳೊಂದಿಗೆ ವ್ಯವಹರಿಸುವಾಗ ಎಚ್ಚರದಿಂದಿರಿ ಮತ್ತು ನಿಮ್ಮ ಸಾಮಾನ್ಯ ಕಾರ್ಯಗಳಲ್ಲಿ ಅಡೆತಡೆ ಉಂಟಾದರೆ ಅಥವಾ ನೀವು ಹೆಚ್ಚು ತೊಂದರೆ ಪಡಬೇಕಾಗಿ ಬಂದರೆ ಸಿಡಿಮಿಡಿಗೊಳ್ಳಬೇಡಿ. ಇವೆಲ್ಲವೂ ತಾತ್ಕಾಲಿಕ!

ವೃಷಭ :-

ನಿಮ್ಮ ಮಾತು ಮತ್ತು ಸಿಡುಕಿನ ಮೇಲೆ ಹೆಚ್ಚಿನ ನಿಯಂತ್ರಣವಿರಿಸುವಂತೆ ಗಣೇಶ ನಿಮಗೆ ಎಚ್ಚರಿಕೆ ನೀಡುತ್ತಾರೆ. ವಾತಾವರಣವು ಉದ್ರೇಕಕಾರಿಯಾಗಿರುತ್ತದೆ ಮತ್ತು ಇದು ನಿಮ್ಮ ಅಸಹನೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ನಿಮ್ಮ ಸುತ್ತಲಿರುವ ಜನರು ಎಂದಿಗಿಂತ ಹೆಚ್ಚು ಮುಂಗೋಪಿಗಳಾಗಿರುತ್ತಾರೆ. ಶಾಂತರಾಗಿರುವುದು ಇದಕ್ಕೆ ಅತ್ಯುತ್ತಮ ಪರಿಹಾರ. ನೀರಿರುವ ಪ್ರದೇಶಗಳಿಂದ ದೂರವಿರಿ ಯಾಕೆಂದರೆ ಇಂದು ನೀವು ಜಾಗರೂಕ ಮನಸ್ಥಿತಿಯಲ್ಲಿರುವುದಿಲ್ಲ. ಎಲ್ಲವನ್ನೂ ಹಗುರವಾಗಿ ಸ್ವೀಕರಿಸಿ ಮತ್ತು ನಿಮ್ಮ ಆಯಾಸಗೊಂಡಿರುವ ಮನಸ್ಸು ಮತ್ತು ದೇಹವು ಚೇತರಿಸಿಕೊಳ್ಳಲಿ. ಕಾನೂನು ಅಥವಾ ಪಿತ್ರಾರ್ಜಿತ ಸಂಬಂಧಿ ಕಾಗದಪತ್ರಗಳಿಗೆ ಸಹಿ ಹಾಕುವಾಗ ಎಚ್ಚರಿಕೆಯಿರಲಿ. ಅದೃಷ್ಟವಷಾತ್, ಮಧ್ಯಾಹ್ನದ ಬಳಿಕ ಗ್ರಹಗತಿಗಳು ಚೇತರಿಸಿಕೊಳ್ಳಲಿವೆ ಮತ್ತು ನಿಮ್ಮ ಧನಾತ್ಮಕ ಮನಸ್ಥಿತಿ ಮತ್ತು ಕ್ರಿಯಾತ್ಮಕತೆಯಲ್ಲಿ ಹಠಾತ್ ವರ್ಧನೆಯನ್ನು ಕಾಣುವಿರಿ. ವಿಶ್ರಾಂತಿಗಾಗಿ ಸಮಯ ವಿನಿಯೋಗಿಸಿ.

ಮಿಥುನ :-

ದಿನದ ಪ್ರಸನ್ನತೆಯನ್ನು ಆನಂದಿಸಿ ಮತ್ತು ಅದು ಶಾಂತಿಯಿಂದಲೇ ಸಾಗಲಿ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಸಹೋದರರೊಂದಿಗಿನ ಉತ್ತಮ ಸಹಮತವು ಇಂದು ಪ್ರಯೋಜನಕಾರಿಯಾಗಲಿದೆ. ನಿಮ್ಮ ಆತ್ಮೀಯರೊಂದಿಗಿನ ಖುಷಿಭರಿತ ಸಂಜೆಯು ನಿಮಗೆ ಅದೃಷ್ಟಕಾರಿ ಸಮಯವನ್ನು ತರಲಿದೆ. ಏನೇ ಆದರೂ, ಮಧ್ಯಾಹ್ನದ ಬಳಿಕ ಗ್ರಹಗತಿಗಳು ಮಂದವಾಗಲಿವೆ. ನೀವು ಹೆಚ್ಚು ಸೂಕ್ಷ್ಮಗ್ರಾಹಿಗಳಾಗುತ್ತೀರಿ;ಪರಿಣಾಮವಾಗಿ, ಅಸಹನೆ ಮತ್ತು ವಿವಾದಗಳು ನಿಮ್ಮ ಸುತ್ತ ಸುಳಿಯಲಾರಂಭಿಸುತ್ತವೆ. ನಿಮ್ಮ ಉದ್ವೇಗವನ್ನು ನಿಯಂತ್ರಣದಲ್ಲಿರಿಸಿ ಮತ್ತು ಯಾವುದೇ ಕಾನೂನು ವಿಚಾರಗಳಲ್ಲಿ ತೊಡಗಿಕೊಳ್ಳುವ ಮುನ್ನ ಎರಡೆರಡು ಬಾರಿ ಯೋಚಿಸಿ. ನಿಮ್ಮ ಮಾನಸಿಕ ಸಮಾನತೆಯನ್ನು ಕಾಯ್ದುಕೊಳ್ಳಲು ಶಾಂತರಾಗಿರಿ ಮತ್ತು ಧ್ಯಾನ ಮಾಡಿ.

ಕರ್ಕಾಟಕ :-

ದಯಾಪೂರ್ಣ! ಎಂಬುದಾಗಿ ಗಣೇಶ ಹೇಳುತ್ತಾರೆ. ಈ ದಿನವು ನಿಮಗಾಗಿ ಅನೇಕ ಅದೃಷ್ಟಗಳನ್ನು ಹೊಂದಿದೆ ಮತ್ತು ಕರ್ಕಾಟಕ ರಾಶಿಯವರಿಗೆ ಇಂದು ಉತ್ತಮ ಸಮಯವಾಗಿದೆ. ಮೋಸದ ವಿಚಾರಗಳನ್ನು ನೇರವಾಗಿಸಲು ನಿಮ್ಮ ಸಿಹಿ ಮಾತುಗಳು ಖಂಡಿತವಾಗಿಯೂ ತಪ್ಪದ ಗುರಿಕಾರ ಹಾದಿಯಾಗಿದೆ. ಸಂಜೆಯ ವೇಳೆ ಸಂತಸಭರಿತ ಪ್ರವಾಸ ತೆರಳಬಹುದು. ನಿಮ್ಮ ಸಹೋದ್ಯೋಗಿಗಳೊಂದಿಗಿನ ಸಾಮೀಪ್ಯವನ್ನು ನೀವು ಆನಂದಿಸಬಹುದು. ಇದು ನಿಮ್ಮನ್ನು ದಿನಪೂರ್ತಿ ಉಲ್ಲಾಸ ಹಾಗೂ ಗೆಲುವಿನಿಂದಿರಿಸುತ್ತದೆ. ಉಜ್ವಲ ದಿನವನ್ನು ಹೊಂದಿರಿ.

ಸಿಂಹ :-

ಗಮನವಿರಿಸುವಿಕೆ ಮತ್ತು ದೃಢನಿರ್ಧಾರವು ನಿಮ್ಮ ದಿನದ ಕ್ಲಿಷ್ಟ ಪರಿಸ್ಥತಿಗಳಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಲು ಸಹಕಾರಿಯಾಗುತ್ತದೆ ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ. ಮನೆಯಲ್ಲಿನ ವಾತಾವರಣವು ಶಾಂತ ಹಾಗೂ ಸ್ನೇಹಪರವಾಗಿರುತ್ತದೆ. ವಿವಾಹಿತರು ವೈವಾಹಿಕ ಸಂತಸವನ್ನು ಆನಂದಿಸುವಿರಿ. ಮನೆಯಲ್ಲಿನ ಹಿರಿಯರಿಂದ ಪ್ರಯೋಜನ ಉಂಟಾಗಲಿದೆ. ಆಡಂಬರದ ವಸ್ತುಗಳಿಗೆ ಸೌಕರ್ಯಗಳಿಗೆ ನೀವು ನಿಮ್ಮ ಆದಾಯದ ಸ್ವಲ್ಪ ಭಾಗವನ್ನು ವೆಚ್ಚ ಮಾಡಬಹುದು. ಏನೇ ಆದರೂ, ನಿಮ್ಮ ಕಿಸೆ ತೂತಾಗದಂತೆ ಜಾಗ್ರತೆ ವಹಿಸಿ. ವಿದೇಶದಲ್ಲಿ ನೆಲೆಸಿರುವು ನಿಮ್ಮ ಸ್ನೇಹಿತರು ಮತ್ತು ಒಡನಾಡಿಗಳೊಂದಿಗಿನ ಮರುಸಂಪರ್ಕವು ನಿಮಗೆ ಸಂತಸದ ಅನುಭವವನ್ನು ನೀಡಲಿದೆ. ಅವರಿಂದ ನಿಮಗೆ ಶುಭಸುದ್ದಿಗಳು ಬರುವ ಸಾಧ್ಯತೆಯಿದೆ. ಖುಷಿಭರಿತ ದಿನವನ್ನು ಹೊಂದಿರಿ.

ಕನ್ಯಾ :-

ಇಂದು ನೀವು ಅತೀ ಸೂಕ್ಷ್ಮಗ್ರಾಹಿ ಹಾಗೂ ಮಿತಿಮೀರಿದ ಭಾವೋದ್ವೇಗಕ್ಕೆ ಒಳಗಾಗುವಿರಿ, ಹೆಚ್ಚು ದುರ್ಬಲರಾಗಬೇಡಿ ಎಂಬುದಾಗಿ ಗಣೇಶ ಸಲಹೆ ನೀಡುತ್ತಾರೆ. ಸಂಘರ್ಷ ಮತ್ತು ಕಲಹಗಳ ಕಡೆಗಣಿಸುವಿಕೆಯು ಜಾಣತನದ ವಿಚಾರವಾಗಿದೆ. ಏನಾದರೂ ಕಟುಮಾತುಗಳನ್ನು ನುಡಿಯದಂತೆ ನಿಮ್ಮ ನಾಲಗೆಯನ್ನು ನಿಯಂತ್ರಿಸಿ ಇಲ್ಲವಾದಲ್ಲಿ ನಿಮ್ಮ ಆತ್ಮೀಯರನ್ನು ನೀವು ನೋಯಿಸುವ ಸಾಧ್ಯತೆಯಿದೆ. ನೀವು ನಿಮ್ಮ ಹಣವನ್ನು ಅಪಾಯದಲ್ಲಿರಿಸಬೇಡಿ. ನಿಮ್ಮ ತಂದೆಯಿಂದ ಮತ್ತು ಮನೆಯಲ್ಲಿನ ಹಿರಿಯರಿಂದ ನಿಮಗೆ ಅಗತ್ಯವಿರುವ ಬೆಂಬಲವು ಸಿಗಲಿದೆ, ಇದು ನಿಮ್ಮನ್ನು ಬಹುಮಟ್ಟಿಗೆ ಒತ್ತಡ ಮತ್ತು ಆತಂಕಗಳಿಂದ ನಿರಾಳರನ್ನಾಗಿಸುತ್ತದೆ. ನಿಮ್ಮ ದೇಹವು ಸದೃಢ ಮತ್ತು ಆರೋಗ್ಯದಿಂದರಲಿ ನಿಮ್ಮ ದೇಹಕ್ಕೆ ವ್ಯಾಯಾಮದ ಅಗತ್ಯವಿದೆ. ಆದ್ದರಿಂದ ನಿಮ್ಮ ದೈನಂದಿನ ಜೀವನಕ್ರಮಕ್ಕೆ ಯೋಜನೆ ರೂಪಿಸಿ.

ತುಲಾ :-

ನಿಮ್ಮ ನಿಷ್ಕರುಣಿ ಗ್ರಹಗತಿಗಳು ನಿಮ್ಮ ಇಂದಿನ ದಿನವನ್ನು ಕಷ್ಟಕರವಾಗಿಸಲಿದೆ. ಶಾಂತರಾಗಿರಿ ಮತ್ತು ಮಾತುಕತೆಗಳನ್ನು ತಪ್ಪಿಸಿ. ಇಂದು ಹೊಸ ಯೋಜನೆಗಳ ಪ್ರಾರಂಭವು ಉತ್ತಮ ಆಲೋಚನೆಯಲ್ಲ ಎಂಬುದಾಗಿ ಗಣೇಶ ಹೇಳುತ್ತಾರೆ. ಚಿಂತೆಗಳ ಆವರ್ತದಲ್ಲಿ ಸಿಲುಕಿ, ನೀವು ಇಂದು ಏಕಾಗ್ರತೆಯ ಕೊರತೆಯನ್ನು ಎದುರಿಸಬಹುದು. ಈ ಸಮಯದಲ್ಲಿನ ತೀವ್ರ ರೀತಿಯ ಒತ್ತಡವು ನಿಮ್ಮ ಆರೋಗ್ಯಕ್ಕೆ ಹಾನಿಯನ್ನುಂಟುಮಾಡಲಿದೆ. ಶಾಂತರಾಗಿರಿ ಮತ್ತು ವಿಶ್ರಾಂತರಾಗಿರಿ. ಅತೀ ಹೆಚ್ಚು ಉದ್ವೇಗಕ್ಕೆ ಒಳಗಾಗಬೇಡಿ. ಇಂದು ತೀವ್ರ ಖರ್ಚುವೆಚ್ಚಗಳಾಗುವ ಸಂಭವವಿರುವುದರಿಂದ, ಆರ್ಥಿಕ ವಿಚಾರಕ್ಕೆ ಸಂಬಂಧಿಸಿ ಉತ್ತಮ ದಿನವಲ್ಲ.

ವೃಶ್ಚಿಕ :-

ಇದು ನಿರ್ಧಾರಕವಾದುದು. ವಿಸ್ಮಯಕಾರಿ ಆಲೋಚನೆಗಳು, ಸರಿಯಾದ ಹಾದಿಯಲ್ಲಿ ಹೊಸ ಯೋಜನೆಗಳು, ನಿಗದಿತ ಅವಧಿಯೊಳಗೆ ಯೋಜನೆಗಳ ಪೂರ್ಣಗೊಳಿಸುವಿಕೆ, ಎಲ್ಲಾ ಯೋಜನೆಗಳಲ್ಲೂ ಯಶಸ್ಸು ಇವೆಲ್ಲವೂ ಇಂದು ನಿಮಗೆ ಸರಾಗವಾಗಲಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಶ್ಲಾಘನೆಗಳ ಮಳೆಯಲ್ಲಿ ನೆನೆಯಲು ಸಿದ್ಧರಾಗಿರಿ. ಸ್ಥಿರಾಸ್ತಿಗಳಾದ ಭೂಮಿ ಮತ್ತು ಆಸ್ತಿಗಳಿಗೆ ಸಂಬಂಧಿಸಿದ ವ್ಯವಹಾರಗಳನ್ನು ಅಂತಿಮಗೊಳಿಸಲು ಇಂದು ಸಕಾಲ. ಸರಕಾರಿ ಸಂಬಂಧಿತ ಕಾರ್ಯಗಳು ಪ್ರಯೋಜನವನ್ನು ನೀಡಲಿವೆ. ನಿಮ್ಮ ಮನೆಯ ವಾತಾವರಣವನ್ನು ಸ್ನೇಹಪರ ಹಾಗೂ ಶಾಂತಿಯಿಂದಿರಿಸಲು ನೀವು ಹೊಸ ಕಾರ್ಯಾರಂಭ ಮಾಡಲಿದ್ದೀರಿ. ಸ್ನೇಹಿತರೊಂದಿಗಿನ ಸಂಜೆಯ ಭೇಟಿಯು ನಿಮ್ಮನ್ನು ಉಲ್ಲಾಸದಲ್ಲಿರಿಸಲಿದೆ. ಅತೀ ಮುಖ್ಯ ನಿರ್ಧಾರಗಳನ್ನು ಬೇರೊಂದು ದಿನಕ್ಕೆ ಮುಂದೂಡಬೇಕು.

ಧನು :-

ಕಷ್ಟಕರ ದಿನವು ನಿಮಗಾಗಿ ಕಾದಿದೆ, ಆದರೂ, ಧಾರ್ಮಿಕ ಪ್ರವಾಸ ಅಥವಾ ಚಟುವಟಿಕೆಗಳು ನಿಮಗೆ ಸ್ವಲ್ಪ ವಿರಾಮವನ್ನು ನೀಡಬಲ್ಲದು. ದೈಹಿಕವಾಗಿ ನಿತ್ರಾಣ ಹಾಗೂ ದುರ್ಬಲರಾಗಿರುತ್ತೀರಿ, ಕಾರ್ಯದಲ್ಲಿ ಉತ್ತಮ ನಿರ್ವಹಣೆಯನ್ನು ತೋರಲಾರಿರಿ. ಇದು ನಿಮ್ಮ ಸಹೋದ್ಯೋಗಿಗಳೊಂದಿಗಿನ ಭಿನ್ನಾಭಿಪ್ರಾಯಕ್ಕೆ ಎಡೆಮಾಡಿಕೊಡುತ್ತದೆ. ಏನೇ ಆದರೂ, ಮಧ್ಯಾಹ್ನದ ಬಳಿಕ ಪರಿಸ್ಥಿತಿಗಳಲ್ಲಿ ಏರುಗತಿ ಕಾಣಲಿದೆ ಮತ್ತು ನೀವು ನಿರೀಕ್ಷಿತ ಫಲಿತಾಂಶವನ್ನು ಪಡೆಯಬಹುದು. ಇದು ನಿಮ್ಮ ವೃತ್ತಿ ನಿಲುವನ್ನು ಹೆಚ್ಚಿಸಲಿದೆ. ಆಸ್ತಿ ಮತ್ತು ಸ್ವತ್ತುಗಳಿಗೆ ಸಂಬಂಧಿಸಿದ ಎಲ್ಲಾ ವ್ಯವಹಾರಗಳನ್ನು ಪೂರ್ಣಗೊಳಿಸಿ. ಇಂದು ನಿಮ್ಮ ಆರೋಗ್ಯ ಸ್ಥಿತಿಯು ಉತ್ತಮವಾಗಿರುತ್ತದೆ.

ಮಕರ :-

ದುರಾಕ್ರಮಣ ಪ್ರವೃತ್ತಿಯು ಯಾವುದನ್ನೂ ಹತೋಟಿಯಲ್ಲಿರಿಸಲು ಸಹಕರಿಸುವುದಿಲ್ಲ; ಸುದೀರ್ಘ ಚರ್ಚೆಯನ್ನು ತಪ್ಪಿಸಿ, ಶಾಂತರಾಗಿ ಮತ್ತು ಅಗತ್ಯವಿರುವಲ್ಲೆಲ್ಲಾ ಎಚ್ಚರಿಕೆಯಿಂದಿರಿ. ಅನಿರೀಕ್ಷಿತ ಹಣಕಾಸು ವೆಚ್ಚಗಳು ಉಂಟಾಗಲಿದೆ. ಇದು ಗಂಭೀರ ಕಾಯಿಲೆ ಅಥವಾ ವ್ಯಾಧಿಯಿಂದ ನರಳುತ್ತಿರುವ ನಿಮ್ಮ ಪ್ರೀತಿಪಾತ್ರರಿಂದಲೂ ಆಗಿರಬಹುದು. ರಸ್ತೆಬದಿಯ ಸ್ವಾದಿಷ್ಟ ತಿನಿಸುಗಳಿಗೆ ಮಾರುಹೋಗಬೇಡಿ. ಇದು ಯೋಗ್ಯವಾದುದಲ್ಲಿ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಘನತೆಯನ್ನು ಅಪಾಯದಲ್ಲಿರಿಸುವಂತಹ ಯಾವುದೇ ಚಟುವಟಿಕೆ ಅಥವಾ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಡಿ.

ಕುಂಭ :-

ನಿಮ್ಮ ಗ್ರಾಹಕರು ಮತ್ತು ಉದ್ಯಮ ಪಾಲುದಾರರೊಂದಿಗೆ ಸ್ನೇಹಪರವಾಗಿ ವ್ಯವಹರಿಸಿ ಇದು ನಿಮಗೆ ಲಾಭವನ್ನು ತರಬಹುದು ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಸಹೋದ್ಯೋಗಿಗಳೊಂದಿಗಿನ ಚರ್ಚೆಯನ್ನು ತಪ್ಪಿಸಿ. ಇದು ಆರೋಗ್ಯಕರ ಸಮಾನತೆಯನ್ನು ಹಾಳುಗೆಡಹುತ್ತದೆ. ಸಂಪೂರ್ಣ ಪ್ರಯತ್ನಗಳ ಹೊರತಾಗಿಯೂ ನಿಮ್ಮ ಕಾರ್ಯದ ಫಲಿತಾಂಶದಲ್ಲಿ ನೀವು ತೃಪ್ತಿಯನ್ನು ಹೊಂದುವುದಿಲ್ಲ. ಮನೆಯ ವಾತಾವರಣವು ಶಾಂತ ಹಾಗೂ ಸಮಾಧಾನದಿಂದಿರುತ್ತದೆ. ಏನೇ ಆದರೂ, ವಿದ್ಯುತ್ ನಿಲುಗಡೆ, ನೀರಿನ ಕೊರತೆ ಇತ್ಯಾದಿಗಳು ನಿಮ್ಮ ದೈನಂದಿನ ಕೆಲಸಗಳಲ್ಲಿ ಅಡತಡೆಗಳನ್ನು ಉಂಟುಮಾಡುತ್ತದೆ. ನಿಮ್ಮ ಸಂಗಾತಿಯೊಂದಿಗೆ ಸಂಘರ್ಷಕ್ಕೊಳಗಾಗುವ ಸಾಧ್ಯತೆಗಳು ದಟ್ಟವಾಗಿವೆ. ವಿದ್ಯಾರ್ಥಿಗಳ ಅಭಿವೃದ್ಧಿಯ ವರದಿಯು ಅನುಕೂಲಕರ ಫಲಿತಾಂಶವನ್ನು ನೀಡಲಿದೆ.

ಮೀನ :-

ಈ ದಿನವು ಸಾಮಾನ್ಯ ದಿನವಾಗಲಿದೆ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ನೀವು ನಿಮ್ಮ ಕುಟುಂಬ ಸದಸ್ಯರೊಂದಿಗೆ ಉತ್ತಮ.ಹಬಾಳ್ವೆಯನ್ನು ಹಂಚಿಕೊಳ್ಳುವಿರಿ. ಆದರೆ, ನಿಮ್ಮ ಸಂಗಾತಿಯೊಂದಿಗೆ ಸಣ್ಣ ಕಲಹಕ್ಕೆ ಒಳಗಾಗುವ ಸಾಧ್ಯತೆಯಿದ್ದು, ಇದು ನಿಮ್ಮನ್ನು ದಿನವಿಡೀ ವಿಷಣ್ಣತೆಯಲ್ಲಿರಿಸಲಿದೆ. ಕೆಲವರಿಗೆ, ಅವರ ಹೆತ್ತವರ ಆರೋಗ್ಯವು ಚಿಂತೆಗೆ ಕಾರಣವಾಗಲಿದೆ. ನಿಮ್ಮ ದೈನಂದಿನ ಕಾರ್ಯಗಳು ಯೋಜನೆಯಂತೆ ನೆರವೇರುವುದಿಲ್ಲ ಮತ್ತು ಸಹೋದ್ಯೋಗಿಗಳಿಂದ ಬೆಂಬಲದ ನಿರೀಕ್ಷೆಯು ನಿಷ್ಫಲವಾಗಲಿದೆ. ಇದು ನಿಮ್ಮನ್ನು ಅಸಮಾಧಾನಗೊಳಿಸುತ್ತದೆ. ಸಾಮಾಜಿಕವಾಗಿ, ನೀವು ನಿರೀಕ್ಷಿಸಿದ ಶ್ಲಾಘನೆಯನ್ನು ಪಡೆಯುವುದಿಲ್ಲ.

WhatsApp Group Join Now

Spread the love

Leave a Reply