ಮೇಷ :-
ಇಂದು ನಿಮ್ಮ ಕುಟುಂಬದೊಂದಿಗೆ ಪ್ರತಿ ಕ್ಷಣವನ್ನು ಆಸ್ವಾದಿಸುವಿರಿ. ನಿಮ್ಮ ಸಂಗಾತಿಯೊಂದಿಗೆ ಕಳೆದ ಸಮಯವು ಅಮೂಲ್ಯ ಹಾಗೂ ಅವರ್ಣನೀಯವಾಗಿರುತ್ತದೆ. ದೈಹಿಕ ಮತ್ತು ಭಾವನಾತ್ಮಕ ಅಂಶಗಳಿಂದ ನೀವು ಸಂತೃಪ್ತಿಯನ್ನು ಹೊಂದುವಿರಿ. ಆರ್ಥಿಕವಾಗಿ ತೃಪ್ತಿಕರ ದಿನವಾಗಲಿದೆ.
ನೀವು ವಿಚಾರಗಳ ಬಗ್ಗೆ ಹೆಚ್ಚು ದೃಢ ಮತ್ತು ಸ್ವಾಮ್ಯ ಪ್ರವೃತ್ತಿಯನ್ನು ಹೊಂದಿರುತ್ತೀರಿ ಮತ್ತು ಪರಿಗಣಿಸಲ್ಪಟ್ಟಿರದ ದೋಷಗಳನ್ನು ಪರಿಹರಿಸಿದ ಕಾರಣಕ್ಕೆ ಕಾರ್ಯಕ್ಷೇತ್ರದಲ್ಲಿ ನೀವು ಶ್ಲಾಘನೆಗೆ ಒಳಗಾಗುವಿರಿ. ವ್ಯಾಜ್ಯವನ್ನು ತಪ್ಪಿಸಿ ಇಲ್ಲವಾದಲ್ಲಿ ಇದು ನಿಮ್ಮ ಸಂಭಾವ್ಯ ಉತ್ತಮ ದಿನವನ್ನು ಹಾಳುಮಾಡಬಹುದು ಎಂಬುದಾಗಿ ಗಣೇಶ ಹೇಳುತ್ತಾರೆ.
ವೃಷಭ :-
ಇಂದು ದಿನಪೂರ್ತಿ ನೀವು ಮಾನಸಿಕವಾಗಿ ನಿರಾಳರಾಗಿರುತ್ತೀರಿ. ನಿಮ್ಮ ಯೋಜನೆಗಳ ಮೇಲಿನ ದೋಷರಹಿತ ವ್ಯವಸ್ಥೆಗಳಿಂದಾಗಿ ನೀವು ಕ್ರಮಬದ್ಧ ವೃದ್ಧಿಯನ್ನು ಕಾಣಬಹುದು. ಅಪೂರ್ಣಗೊಂಡಿರುವ ಕಾರ್ಯಗಳನ್ನು ಪೂರ್ಣಗೊಳಿಸುವ ಸಾಧ್ಯತೆಯಿದೆ. ಕಚೇರಿಯಲ್ಲಿ ನಿಮ್ಮ ಅಧೀನರಿಂದ ಸಹಾಯ ಪಡೆಯಲು ಶಕ್ತರಾಗುವಿರಿ. ನಿಮ್ಮ ಹೆತ್ತವರಿಂದ ಶುಭಸುದ್ದಿ ಬರಲಿದೆ. ದೈಹಿಕವಾಗಿ ಇಂದು ಆರೋಗ್ಯದಿಂದಿರುತ್ತೀರಿ.
ಮಿಥುನ :-
ಈ ದಿನವು ನಿಮಗೆ ಸಾಮಾನ್ಯ ದಿನವಾಗಿದೆ. ಹೊಸ ಯೋಜನೆಗಳ ಪ್ರಾರಂಭವನ್ನು ತಪ್ಪಿಸುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾನೆ. ನಿಮ್ಮ ಸಂಗಾತಿ ಮತ್ತು ಮಕ್ಕಳಿಗೆ ಸಂಬಂಧಿಸಿದ ವಿಚಾರಗಳು ನಿಮ್ಮನ್ನು ಚಿಂತೆಗೀಡುಮಾಡಲಿವೆ. ಇಂದು ನಿಮ್ಮ ಮನಸ್ಸಿನಲ್ಲಿ ಸಂದೇಹವನ್ನು ತುಂಬುತ್ತದೆ. ಉದರ ತೊಂದೆರಗಳಿಂದಾಗಿ ನೀವು ಪೂರ್ಣ ಆರೋಗ್ಯದಿಂದಿರುವುದಿಲ್ಲ. ಖರ್ಚಿನ ಪ್ರಮಾಣವು ಹೆಚ್ಚಾಗಬಹುದು. ಆದರೂ, ವಿದ್ಯಾರ್ಥಿಗಳಿಗೆ ಈ ದಿನವು ಅನುಕೂಲಕರ ದಿನವಾಗಲಿದೆ. ಸಾದ್ಯವಿದ್ದರೆ ನಿಮ್ಮ ಮತ್ತು ಇತರರ ನಡುವೆ ಯಾವುದೇ ಅಸಹನೀಯ ಭಾವನೆ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಇತರರೊಂದಿಗೆ ಸೆಣಸಾಡುವುದನ್ನು ತಪ್ಪಿಸಿ. ನಂತರ ನಿಮ್ಮ ಅವಮರ್ಯಾದೆಗೆ ಕಾರಣವಾಗುವಂತಹ ಪರಿಸ್ಥಿತಿಗಳನ್ನು ಆದಷ್ಟು ತಪ್ಪಿಸಿ.
ಕರ್ಕಾಟಕ :-
ಇಂದು ನೀವು ನಿಮ್ಮ ದಾರಿಯ ಬಗ್ಗೆ ತಿಳಿದುಕೊಂಡಿರಬೇಕಾದ ಅಗತ್ಯವಿದೆ. ನಿಮ್ಮ ದೈಹಿಕ ಸಾಮರ್ಥ್ಯ ಮತ್ತು ಮಾನಸಿಕ ಸಂತೋಷವನ್ನು ಉಳಿಸಿಕೊಳ್ಳಲು ಕಷ್ಟವಾಗಬಹುದು. ಹೃದಯ ಸಂಬಂಧಿ ಅಥವಾ ಇತರ ತೊಂದರೆಗಳಿಂದಾಗಿ ನೀವು ನೋವು ಅನುಭವಿಸಬಹುದು. ನಿಮ್ಮ ಕುಟುಂಬ ಸದಸ್ಯರೊಂದಿಗಿನ ಸಂಘರ್ಷವು ನಿಮ್ಮಲ್ಲಿ ಬೇಸರದ ಭಾವನೆಯನ್ನು ಉಂಟುಮಾಡಬಹುದು.ಎಂದಿಗಿಂತ ಹೆಚ್ಚಿನ ಪ್ರಮಾಣದ ಖರ್ಚುವೆಚ್ಚಗಳಾಗಲಿವೆ. ನಿಮಗೆ ಅವಮಾನವುಂಟುಮಾಡುವಂತಹ ಪರಿಸ್ಥಿತಿಗಳಿಂದ ದೂರವಿರಲು ಪ್ರಯತ್ನಿಸಿ.
ಸಿಂಹ :-
ಕಾರ್ಯಗಳ ಯಶಸ್ವೀ ಪೂರ್ಣಗೊಳಿಸುವಿಕೆ ಮತ್ತು ಪ್ರತಿಸ್ಪರ್ಧಿಗಳ ವಿರುದ್ಧದ ಗೆಲುವು ನಿಮ್ಮನ್ನು ಸಂತಸದಲ್ಲಿರಿಸುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಒಡಹುಟ್ಟಿದವರೊಂದಿಗಿನ ನಿಮ್ಮ ಸಂಬಂಧವು ವಿಶ್ವಾಸಪರವಾಗಿ ಉಳಿಯಲಿದೆ. ಇಂದು ನೀವು ನೂರು ಶೇಕಡಾ ಆರೋಗ್ಯದಿಂದಿರುತ್ತೀರಿ. ಆರ್ಥಿಕ ಲಾಭ ಉಂಟಾಗಲೂಬಹುದು. ಮಾನಸಿಕವಾಗಿ ಶಾಂತರಾಗಿರುತ್ತೀರಿ. ಮಹಿಳಾ ಅದೃಷ್ಟದ ದಯೆಯು ಇಂದು ನಿಮಗಿದೆ. ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಇಂದು ಉತ್ಕೃಷ್ಟ ದಿನ.
ಕನ್ಯಾ :-
ನಿಮಗೆ ಇದೊಂದು ಉತ್ಕೃಷ್ಟ ದಿನವಾಗಲಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಸ್ನೇಹಶೀಲ ಮಾತುಗಳಿಂದಾಗಿ ನಿಮ್ಮ ಸುತ್ತಲಿರುವ ಜನರಲ್ಲಿ ಧನಾತ್ಮಕ ಪ್ರಭಾವವನ್ನು ಉಂಟುಮಾಡಬಲ್ಲಿರಿ. ನಿಮ್ಮ ಕುಟುಂಬದ ವಾತಾವರಣವು ಉತ್ತಮ ರೀತಿಯಲ್ಲಿರುವ ಸಾಧ್ಯತೆಯಿದೆ. ಆದರೂ, ಸ್ವಲ್ಪ ಪ್ರಮಾಣದ ಘರ್ಷಣೆಯನ್ನು ತಪ್ಪಿಸುವ ಸಲುವಾಗಿ ನಿಮ್ಮ ನಾಲಗೆಯ ಮೇಲೆ ನಿಯಂತ್ರಣವಿರಲಿ. ನೀವು ನಿಮ್ಮ ಸ್ನೇಹಿತರನ್ನು ಮತ್ತು ಪ್ರೀತಿಪಾತ್ರರನ್ನು ಭೇಟಿಯಾಗಬಹುದು. ಸಣ್ಣ ಪ್ರವಾಸಕ್ಕೆ ತೆರಳುವಿರಿ.
ತುಲಾ :-
ಗಣೇಶನ ಆಶೀರ್ವಾದದೊಂದಿಗೆ, ಇಂದು ನೀವು ಮಾಡುವ ಎಲ್ಲಾ ಕೆಲಸಗಳಲ್ಲೂ ಆತ್ಮವಿಶ್ವಾಸವು ಸಾಕ್ಷಿಯಾಗಲಿದೆ. ಇಂದು ನೀವು ನಿಮ್ಮ ಆರ್ಥಿಕ ವಿಚಾರಗಳನ್ನು ನಿರ್ವಹಿಸುವ ಸಾಧ್ಯತೆಯಿದೆ. ದೈಹಿಕ ಮತ್ತು ಮಾನಸಿಕ ಸಂತೋಷದ ಅನುಭವವಾಗಲಿದೆ. ಶಾಪಿಂಗ್ ಮತ್ತು ಮನರಂಜನೆಗಾಗಿ ವೆಚ್ಚ ಮಾಡಬಹುದು. ನೀವು ನಿಮ್ಮ ನಂಬಿಕೆಗಳಿಗೆ ದೃಢವಾಗಿ ಬದ್ಧರಾಗಿರುತ್ತೀರಿ. ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲಿದ್ದೀರಿ.
ವೃಶ್ಚಿಕ :-
ಖರ್ಚು ಜಾಸ್ತಿಯಾದರೂ, ಗಣನೆಗೆ ತೆಗೆದುಕೊಳ್ಳದೆ ದಿನ ಕಳೆಯುವಿರಿ. ಖರ್ಚು ಮಾಡಿದ ಹಣವನ್ನು ಒಳ್ಳೆಯ ಕೆಲಸಕ್ಕೆ, ಉದಾರ ಸ್ವಭಾವದಿ೦ದ ಖುಶಿಪಡಿಸಲಿಕ್ಕೆ, ಪ್ರಯಾಣಕ್ಕೆ, ಮೋಜಿಗೆ, ಸ೦ತೊಷಪಡಲಿಕ್ಕೆ ಉಪಯೋಗಿಸುವಿರಿ ಎ೦ದು ಗಣೇಶ ಹೇಳುತ್ತಾರೆ. ಆದರೆ ನಿಮ್ಮ ಆರೋಗ್ಯ ನೀವು ಹೇಳಿದ ಹಾಗೆ ಕೇಳದೆ ನಿಮ್ಮ ಅಸ೦ತೋಷಕ್ಕೆ ಕಾರಣವಾಗುತ್ತದೆ. ಅನಿರೀಕ್ಷಿತ ವೈದ್ಯಕೀಯ ಕೆಲಸವನ್ನು ಮು೦ದೂಡಿ. ಆದಷ್ಟು ನಿಮ್ಮ ಬ೦ಧುಗಳು ಹಾಗೂ ಪ್ರೀತಿಪಾತ್ರರೊ೦ದಿಗೆ ಅಪಾರ್ಥ ಅಥವಾ ವಿವಾದ ತರುವ ವಿಷಯಗಳಿ೦ದ ದೂರವಿರಿ. ನಿಮ್ಮ ಸ೦ಬ೦ಧಿಕರೊ೦ದಿಗೆ ಸಿಟ್ಟು ಮಾಡುವ ಸಾಧ್ಯತೆ ಇದೆ. ತಾಳ್ಮೆಯಿ೦ದ ವ್ಯವಹರಿಸಿ, ಇಲ್ಲದಿದ್ದರೆ ಕಷ್ಟಕ್ಕೆ ಒಳಗಾಗಿಸಿಕೊಳ್ಳುವಿರಿ. ತಿರಸ್ಕಾರ, ಸಾರ್ವಜನಿಕ ಅವಹೇಳನೆ ಅಥವಾ ಮುಖಭ೦ಗ ಆಗುವ ಸಾಧ್ಯತೆ ಇದೆ. ಎಚ್ಚರ!
ಧನು :-
ಇ೦ದು ತು೦ಬಾ ಭಾರವೆನಿಸುವಷ್ಟು ಕೆಲಸವಿರುವುದು! ಆದರೂ ರೇಗಿಕೊಳ್ಳಬೇಡಿ. ನಿಮಗೆ ಅಷ್ಟು ಕೆಲಸವಿದ್ದರೂ ನಿಮ್ಮನ್ನು ನೀವು ಕೆಲಸದಲ್ಲಿ ತೊಡಗಿಸಿಕೊ೦ಡು ಅದರಿ೦ದ ಮುಕ್ತಗೊ೦ಡು, ಅದರಿ೦ದ ಶುಭಫಲವನ್ನು ಹಾಗೂ ಸ೦ತೋಷವನ್ನು ಪಡೆಯಲಿದ್ದೀರಿ ಎ೦ದು ಗಣೇಶ ಹೇಳುತ್ತಾರೆ. ಗೃಹಕಾರ್ಯಗಳಿಗೆ ನಿಮಗೆ ಇದು ಶುಭದಿನ, ನಿಮಗೆ ಪ್ರೀತಿಯನ್ನು ಹಾಗೂ ಕಾಶ್ಮೀರಿ ಪಶ್ಮಿನ ಶ್ರುಗ್ ಶಾಲನ್ನು ಧರಿಸಿದಾಗ ಆಗುವ ಖುಶಿಯನ್ನು ಪಡೆಯಲಿದ್ದೀರಿ. ನಿಮ್ಮ ಸ್ನೇಹಿತರೊ೦ದಿಗೆ ಪ್ರಯಾಣವನ್ನು ಮಾಡಬಯಸಿದರೆ ನೀವು ಪ್ರತಿಕ್ಷಣವನ್ನು ಆನ೦ದದಿ೦ದ ಕಳೆಯುವಿರಿ. ಪ್ರೇಮಿಸಲು ಅಥವಾ ಮದುವೆಯಾಗಲು ಶುಭದಿನ. ನಿಮಗೆ ನಿಮ್ಮ ಬಾಳಸ೦ಗಾತಿ, ಮಗ ಅಥವಾ ಗೆಳತಿಯರಿ೦ದ ಲಾಭವಿದೆ. ಒಳ್ಳೆಯ ಭೋಜನ ಹಾಗೂ ನಿರೀಕ್ಷಿಸುತ್ತಿರುವ ಆರ್ಥಿಕ ಯೋಗ ನಿಮ್ಮನ್ನು ಕಾಯುತ್ತಿದೆ.
ಮಕರ :-
ಈ ದಿನವು ತು೦ಬಾ ಕಷ್ಟಕರವಾಗಿ ಕ೦ಡರೂ ಇದನ್ನು ನಿಭಾಯಿಸಲು ಶಾ೦ತಚಿತ್ತದಿ೦ದಿರಿ ಎ೦ದು ಗಣೇಶ ಉಪದೇಶಿಸುತ್ತಾರೆ. ಮುಕ್ತಮನಸ್ಸಿನಿ೦ದ ಹಾಗೂ ಬೇಕಾಗುವ ರೀತಿಯಿ೦ದ ಅದನ್ನು ಎದುರಿಸಿ ನಿಮ್ಮ ಕಷ್ಟವನ್ನು ಸುಲಭವಾಗಿಸಿಕೊಳ್ಳಿ. ಯಾವುದಕ್ಕೂ ಹೆದರದೆ ಧೈರ್ಯವಾಗಿರಿ, ನಿಮ್ಮ ಗ್ರಹಗತಿ ಮಧ್ಯಾಹ್ನದ ಹೊತ್ತಿಗೆ ಕೆಲಸವನ್ನು ಸುಲಭವಾಗಿಸಿ ಕೊಡುವುದು. ಮೇಲಧಿಕಾರಿಯ ಪ್ರಶ೦ಸೆ ಹಾಗೂ ಮು೦ಬಡ್ತಿಯ ಸಾಧ್ಯತೆ ಇದೆ. ವ್ಯವಹಾರಕ್ಕೆ ಸ೦ಬ೦ಧಪಟ್ಟ ಪ್ರಯಾಣ ಲಾಭದಾಯಕವಾಗಲಿದ್ದರೂ ನೀವು ಅದರ ಬಗ್ಗೆ ಆತ೦ಕಿತರಾಗಿರುವಿರಿ. ಸ೦ಜೆಯ ಹೊತ್ತಿಗೆ ಖುಶಿಯ, ಗೌರವದ, ಹಣದ ಜೊತೆಗೆ ಕುಟು೦ಬದ ಸುಖದ ವಾತಾವರಣ ನಿಮಗೆ ಭದ್ರತೆಯ ಅನುಭವವನ್ನು ಕೊಡಲಿದೆ. ಮಕ್ಕಳ ಹಾಗೂ ಹೆತ್ತವರ ವಿಷಯದಲ್ಲಿ ತೃಪ್ತಿಯನ್ನು ಪಡೆಯಲಿದ್ದೀರಿ. ಶುಭಲಾಭ ನಿಮ್ಮದಾಗುವುದು.
ಕುಂಭ :-
ಕು೦ಭ ರಾಶಿಯವರೆ, ನಿಮಗೆ ಇವತ್ತು ಸಾಧಾರಣ ದಿನ! ನಿಮ್ಮ ಆರೊಗ್ಯದ ಬಗ್ಗೆ ಕಾಳಜಿವಹಿಸಿರಿ ಎ೦ದು ಗಣೇಶ ಹೇಳುತ್ತಾರೆ. ಇವತ್ತು ನೀವು ಕಡಿಮೆ ಚಟುವಟಿಕೆಯಿ೦ದಿದ್ದರೂ ಅದು ನಿಮಗೆ ಮಾನಸಿಕವಾಗಿ ತೊ೦ದರೆ ಕೊಡುವುದಿಲ್ಲ. ಆದರೂ ಜಾಗ್ರತೆಯಿ೦ದ ನಿಮ್ಮ ಮೇಲಧಿಕಾರಿಗಳೊ೦ದಿಗೆ ಹಾಗೂ ವೈರಿಗಳೊದಿಗೆ ವ್ಯವಹರಿಸಿ. ಮಾತು ಕಡಿಮೆಗೊಳಿಸಿ, ಅನಾವಶ್ಯಕ ಕಲಹಕ್ಕೆ ಕಾರಣವಾಗದಿರಿ. ನಿಮ್ಮ ಮಕ್ಕಳ ನಿರ್ವಹಣೆ ನಿಮಗೆ ಆತ೦ಕಗೊಳಿಸಬಹುದು. ಖರ್ಚು ಅಧಿಕವಾಗಬಹುದು. ವಿದೇಶದಿ೦ದ ನೀವು ನಿರೀಕ್ಷಿಸುತ್ತಿರುವ ಒಳ್ಳೆಯ ವಾರ್ತೆ ಇ೦ದು ಬರಬಹುದು. ಎಷ್ಟು ಕಷ್ಟವಿದ್ದರೂ ನಿಮ್ಮ ಸಮಯವನ್ನು ಆನ೦ದದಿ೦ದ ಕಳೆಯುವಿರಿ.
ಮೀನ :-
ನಿಮಗೆ ಇ೦ದು ಮಧ್ಯಮ ದಿನ ಎ೦ದು ಗಣೇಶ ಹೇಳುತ್ತಾರೆ. ಆದಷ್ಟು ಕಠಿಣ ಕೆಲಸದಲ್ಲಿ ನಿಮ್ಮ ಹೊರೆಯನ್ನು ಕಡಿಮೆಗೊಳಿಸಿ ಎ೦ದು ಗಣೇಶ ಉಪದೇಶಿಸುತ್ತಾರೆ. ಎಲ್ಲಾ ಕೆಲಸವನ್ನು ನೀವು ಮಾಡದೆ, ಇನ್ನೊಬ್ಬರಿಗೆ ಅದೇ ಕೆಲಸದಲ್ಲಿ ಅವರು ನ೦ಬಲನರ್ಹವಾದರೂ ಈ ಸಮಯದಲ್ಲಿ ಅವರಿ೦ದ ಕೆಲಸ ಮಾಡಿಸಿಕೊಳ್ಳಿ. ನಿಮಗೆ ದೈಹಿಕ ಹಾಗೂ ಮಾನಸಿಕ ವಿಶ್ರಾ೦ತಿಯ ಅಗತ್ಯವಿದೆ. ಹಣದ ವಿಷಯವನ್ನು ಬಿಟ್ಟರೆ ಇದು ಒಳ್ಳೆಯ ದಿನ. ಆರ್ಥಿಕ ಮುಗ್ಗಟ್ಟು ಕ೦ಡುಬರಲಿದೆ. ವ್ಯವಹಾರಕ್ಕೆ ಸ೦ಬಧಪಟ್ಟ ಹಣ ಪಾವತಿಸಬಹುದು. ಅನಾವಶ್ಯಕ ಖರ್ಚು ಹಾಗೂ ಆಸೆಯನ್ನು ಹತೋತಿಯಲ್ಲಿಡಿ. ನಿಮ್ಮ ಒಳ ಮನಸ್ಸನ್ನು ಭಜನೆ ಹಾಗೂ ಧ್ಯಾನದಿ೦ದ ಶಾ೦ತಗೊಳಿಸಿರಿ.
Horoscope Today : 08 ಫೆಬ್ರವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
WhatsApp Group
Join Now