ಮೇಷ :-
ಇಂದು ನೀವು ಅತ್ಯಂತ ಎಚ್ಚರಿಕೆಯಿಂದಿರಬೇಕಾಗುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಸ್ನೇಹಿತರು ಮತ್ತು ನೆರೆಹೊರೆಯವರೊಂದಿಗೆ ಇಂದು ನೀವು ಬೌದ್ಧಿಕ ಚರ್ಚೆಯಲ್ಲಿ ತೊಡಗಿಕೊಳ್ಳುವ ಸಾಧ್ಯತೆಯಿದೆ. ಏನೇ ಆದರೂ, ಇವುಗಳು ತ್ವರಿತವಾಗಿ ಬಿಸಿ ಚರ್ಚೆಯಾಗಿ ಮಾರ್ಪಡಾಗುತ್ತದೆ.
ಆದ್ದರಿಂದ ಅವುಗಳಿಂದ ದೂರವಿರಿ. ಜೊತೆಗೆ, ಚಿಂತೆಯು ನಿಮ್ಮನ್ನು ಕಾಡಲಾರಂಬಿಸುತ್ತದೆ ಮತ್ತು ನಿದ್ದೆಗೆಡಿಸುತ್ತದೆ. ಇದು ನಿಮ್ಮ ಮಾನಸಿಕ ಮತ್ತು ದೈಹಿಕ ಸ್ಥಿತಿಯ ದುರ್ಬಲತೆಗೆ ಕಾರಣವಾಗುತ್ತದೆ. ಪ್ರಯಾಣ ಯೋಜನೆಗಳೇನಾದರೂ ಇದ್ದಲ್ಲಿ, ಅದನ್ನು ಬೇರೊಂದು ದಿನಕ್ಕೆ ಮುಂದೂಡಿ. ನೆಮ್ಮದಿಯನ್ನು ಕಾಣಲು ಯೋಗ ಮತ್ತು ಧ್ಯಾನ ಮಾಡಿ.
ವೃಷಭ :-
ಸೂಕ್ಷ್ಮಗ್ರಾಹಿಗಳಾದ ವೃಷಭ ರಾಶಿಯವರು ಇಂದು ಹೆಚ್ಚು ಭಾವೋದ್ವೇಗಕ್ಕೆ ಒಳಗಾಗುವ ಸಾಧ್ಯತೆಯಿದೆ ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ.ದಿನದ ಕಾರ್ಯವನ್ನು ನೀವು ಸರಿಯಾದ ಸಮಯಕ್ಕೆ ಮುಗಿಸುವುದರಿಂದ ಇಂದು ನಿಮಗೆ ನಿರಾಳತೆ ಸಿಗಬಹುದು. ಇಂದು ಸಂಪೂರ್ಣ ಚೈತನ್ಯದಿಂದ ಕೂಡಿರುತ್ತೀರಿ ಜೊತೆಗೆ, ನಿಮ್ಮ ಒಡಹುಟ್ಟಿದವರಿಂದ ನಿಮಗೆ ಪ್ರಯೋಜನ ಉಂಟಾಗುವುದರೊಂದಿಗೆ, ಅವರೊಂದಿಗಿನ ಸಹಬಾಳ್ವೆಯು ವರ್ಧಿಸುತ್ತದೆ. ಆರ್ಥಿಕ ಲಾಭ ಉಂಟಾಗಲಿದೆ. ಏನೇ ಆದರೂ, ಮಧ್ಯಾಹ್ನದ ಬಳಿಕ ಗ್ರಹಗತಿಗಳು ಖಿನ್ನತೆಗೊಳಗಾಗುತ್ತವೆ ಮತ್ತು ಬದಲಾಗುವ ಸಾದ್ಯತೆಯಿದೆ. ಇದರಿಂದಾಗಿ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದ ವೆಚ್ಚಗಳು ಉಂಟಾಗುತ್ತದೆ.
ಮಿಥುನ :-
ನೆಮ್ಮದಿರಹಿತ ಮತ್ತು ನಿರಾಶಾವಾದದ ಭಾವನೆಗಳು ನಿಮ್ಮ ಮನಸ್ಸನ್ನು ಕಾಡುವುದರೊಂದಿಗೆ, ಈ ದಿನವು ಏನೋ ಒಂದು ರೀತಿ ಅಸಂಗತವಾಗಿದೆ. ಅದನ್ನು ತಪ್ಪಿಸಿ ಎಂಬುದಾಗಿ ಗಣೇಶ ಸಲಹೆ ನೀಡುತ್ತಾರೆ. ನಿಮ್ಮ ದೈಹಿಕ ಆರೋಗ್ಯವು ಉತ್ತಮ ಸ್ಥಿತಿಯಲ್ಲಿರುವುದಿಲ್ಲ ಮತ್ತು ಮನೆಯಲ್ಲಿನ ಪರಿಸ್ಥಿತಿಗಳು ಶಾಂತರೀತಿಯಲ್ಲಿರುತ್ತದೆ. ವಿದ್ಯಾರ್ಥಿಗಳಿಗೆ ತಮ್ಮ ಅಧ್ಯಯನದಲ್ಲಿ ಏಕಾಗ್ರತೆಯನ್ನು ಪಡೆಯಲು ಕಷ್ಟಕರವಾಗಬಹುದು. ಏನೇ ಆದರೂ, ದಿನದ ಮಧ್ಯಭಾಗದ ವೇಳೆ ಗ್ರಹಗತಿಗಳು ಮಿನುಗಲಾರಂಭಿಸುತ್ತದೆ. ನಿಮ್ಮ ಪ್ರತಿಸ್ಪರ್ಧಿಗಳ ವಿರುದ್ಧ ನೀವು ಗೆಲುವು ಸಾಧಿಸುತ್ತೀರಿ ಮತ್ತು ನಿಮ್ಮೊಂದಿಗೆ ಗೆಲುವಿನ ಸನ್ನಿವೇಶವನ್ನು ಸೃಷ್ಟಿಸುತ್ತೀರಿ. ಸಂಜೆಯ ವೇಳೆ ಸ್ನೇಹಿತರ ಭೇಟಿಗೆ ಉತ್ತಮ ಸಮಯ. ನೀವು ಧನಾತ್ಮಕವಾಗಿ ಯೋಚಿಸುವ ಅಗತ್ಯವಿದೆ.
ಕರ್ಕಾಟಕ :-
ದಿನದ ಪೂರ್ವಾರ್ಧವು ನಿಮ್ಮೊಂದಿಗೆ ಪರಿಪೂರ್ಣವಾಗಿ ವರ್ತಿಸುತ್ತದೆ ಇದರಿಂದಾಗಿ ನೀವು ಚೈತನ್ಯ ಹಾಗೂ ಉಲ್ಲಾಸದಿಂದಿರುತ್ತೀರಿ. ತಿರುಗಾಟ ಅಥವಾ ಪ್ರವಾಸವು ದಿನವನ್ನು ಇನ್ನಷ್ಟು ಉತ್ತಮವಾಗಿಸಬಲ್ಲುದು. ಏನೇ ಆದರೂ, ದ್ವಿತೀಯಾರ್ಧದಲ್ಲಿ ಸನ್ನಿವೇಶವು ಬದಲಾಗುವುದನ್ನು ಕಾಣಬಹುದು. ನೀವು ಅತ್ಯಂತ ಭಾವೋದ್ವೇಗಕ್ಕೆ ಒಳಗಾಗುವಿರಿ. ಇದನ್ನು ಮುಂದುವರಿಸಬೇಡಿ ಎಂಬುದಾಗಿ ಗಣೇಶ ಎಚ್ಚರಿಸುತ್ತಾರೆ. ಮಧ್ಯಾಹ್ನದ ಬಳಿಕ ಅಸಮಾಧಾನ ಮತ್ತು ಖರ್ಚುವೆಚ್ಚಗಳು ಹೆಚ್ಚಳಗೊಳ್ಳುವ ಸಂಭವವಿದೆ. ಅನೈತಿಕ ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ದೂರವಿಡಿ ಅವು ನಿಮ್ಮ ಅಮೂಲ್ಯ ಸಮಯವನ್ನು ಹಾಳುಮಾಡಬಹುದು.
ಸಿಂಹ :-
ನೀರಸ ದಿನವು ನಿಮ್ಮದಾಗಲಿದೆ ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ, ಏನೇ ಆದರೂ, ದಿನದ ದ್ವಿತೀಯಾರ್ಧದಲ್ಲಿ ಎಲ್ಲವೂ ಉತ್ತಮವಾಗಿ ಸಾಗುತ್ತದೆ. ಮುಖ್ಯ ನಿರ್ಧಾರ ಕೈಗೊಳ್ಳುವುದನ್ನು ಬೇರೊಂದು ದಿನಕ್ಕೆ ಮುಂದೂಡಿ, ಈ ದಿನವು ಸೂಕ್ತವಾಗಿಲ್ಲ. ಮಾತನಾಡುವ ಮುನ್ನ ಎರಡೆರಡು ಬಾರಿ ಯೋಚಿಸಿ ಮತ್ತು ಯಾರೊಂದಿಗೂ ವಿಶೇಷವಾಗಿ ಸಂಬಂಧಿಗಳು ಮತ್ತು ನೆರೆಹೊರೆಯವರೊಂದಿಗೆ ವಾಗ್ವಾದಕ್ಕಿಳಿಯುವುದನ್ನು ತಪ್ಪಿಸಿ. ಗೃಹಸಂಬಂಧಿ ವೆಚ್ಚಗಳು ಉಂಟಾಗಲಿವೆ ಇದರಿಂದ ಕೈಯಲ್ಲಿ ಹಣ ಸಿದ್ಧವಾಗಿರಲಿ. ಸಣ್ಣ ಔತಣಕೂಟವನ್ನು ಆಯೋಜಿಸಿ ಸ್ನೇಹಿತರು ಮತ್ತು ಸಂಬಂಧಿಕರನ್ನು ಆಹ್ವಾನಿಸುವ ಮೂಲಕ ನಿಮ್ಮ ದಿನವನ್ನು ಇನ್ನಷ್ಟು ಉಲ್ಲಾಸಗೊಳಿಸಬಹುದು.
ಕನ್ಯಾ :-
ಈ ದಿನವು ನಿಮಗೆ ಸ್ವಲ್ಪಮಟ್ಟಿಗೆ ನೆಮ್ಮದಿಯ ದಿನವಾಗಲಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನೀವು ಮಾನಸಿಕವಾಗಿ ಮತ್ತು ದೈಹಿಕವಾಗಿ ಶಾಂತರಾಗಿರುತ್ತೀರಿ. ಪರಿಸ್ಥಿತಿಗಳು ಶಾಂತರೀತಿಯಿಂದ ಕೂಡಿರುತ್ತದೆ ಮತ್ತು ವೈಯಕ್ತಿಕ ಮತ್ತು ವೃತ್ತಿ ಕ್ಷೇತ್ರಕ್ಕೆ ಸಂಬಂಧಿಸಿ ಅನುಕೂಲಕರವಾಗಿರುತ್ತದೆ. ಏನೇ ಆದರೂ, ಮಧ್ಯಾಹ್ನದ ಬಳಿಕ ಸ್ವಲ್ಪ ತೊಂದರೆಗಳನ್ನು ಎದುರಿಸಬಹುದು. ನೀವು ಸ್ವಲ್ಪ ಗೊಂದಲಕ್ಕೆ ಒಳಗಾಗಬಹುದು ಮತ್ತು ಇದು ಕಾನೂನು ಸಂಬಂಧಿ ವಿಚಾರಗಳಲ್ಲಿ ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಅಡಚಣೆಯನ್ನುಂಟುಮಾಡಬಹುದು. ನಿಮ್ಮ ಸಿಟ್ಟು ಮತ್ತು ನಾಲಗೆಯ ಮೇಲೆ ನಿಯಂತ್ರಣವಿರಿಸಿ. ಇಂದು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ನಷ್ಟ ಉಂಟಾಗುವ ಸಂಭವವಿರುವುದರಿಂದ ಜಾಗರೂಕರಾಗಿರಿ.
ತುಲಾ :-
ಈ ದಿನ ಎಲ್ಲಾ ವಿಚಾರಗಳು ಸುಂದರ ಹಾಗೂ ಉಲ್ಲಾಸಕರವಾಗಿರುತ್ತದೆ ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ. ಇದಕ್ಕಿಂತಲೂ ಹೆಚ್ಚಾಗಿ, ನೀವು ಮನೆಯನ್ನು ಅಲಂಕರಿಸುವುದರಲ್ಲಿ ಅದನ್ನು ನಿಮ್ಮಂತೆ ಇನ್ನಷ್ಟು ರಂಗು ಹಾಗೂ ಲವಲವಿಕೆಯಿಂದ ಇರಿಸುವಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತೀರಿ. ಮನೆಯಲ್ಲಿರುವವರ ಮನಸ್ಥಿತಿಯು ಶಾಂತ ಹಾಗೂ ಉತ್ಸಾಹದಿಂದ ಕೂಡಿರುತ್ತದೆ. ಕಚೇರಿಯಲ್ಲಿನ ಹಿರಿಯ ಅಧಿಕಾರಿಗಳು ಲಾಭವನ್ನು ನೀಡಲಿದ್ದಾರೆ. ಇದೇ ಸಮಯಕ್ಕೆ, ನೀವು ಹಣಕಾಸು ಮೂಲಗಳನ್ನು ಅನುಕೂಲಕರವಾಗಿ ನಿಭಾಯಿಸುತ್ತೀರಿ. ವಿವಾಹಿತರು ಮತ್ತು ಹೆತ್ತವರು ಹೆಮ್ಮೆಯ ತಂದೆತಾಯಿ ಅಥವಾ ಸಂಗಾತಿಯಾಗುತ್ತಾರೆ ಯಾಕೆಂದರೆ ನಿಮ್ಮ ಮಕ್ಕಳು ಅಥವಾ ಸಂಗಾತಿ ನಿಮ್ಮನ್ನು ತೀವ್ರ ಸಂತೋಷದಲ್ಲಿರಿಸಲಿದ್ದಾರೆ. ಆರೋಗ್ಯವು ಉತ್ತಮವಾಗಿರುತ್ತದೆ ಮತ್ತು ಪರಿಣಾಮವಾಗಿ ನೀವು ಸಂತೋಷದಿಂದಿರುತ್ತೀರಿ.
ವೃಶ್ಚಿಕ :-
ವೃಶ್ಚಿಕ ರಾಶಿಯವರಿಗೆ ಇಂದು ಅದೃಷ್ಟ ದಿನವು ಕಾದಿದೆ ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ. ಧಾರ್ಮಿಕ ಪ್ರವಾಸಗಳು ಮತ್ತು ಆರ್ಥಿಕ ಲಾಭಗಳು ದಿನದ ಹೆಚ್ಚಿನ ಭಾಗದಲ್ಲಿ ನಿಮಗೆ ಸಂತೋಷವನ್ನು ನೀಡಲಿದೆ. ನಿಮ್ಮ ಉತ್ತಮ ಆರೋಗ್ಯ ಮತ್ತು ಶಾಂತಿಯುತ ಮನಸ್ಸು ಒಟ್ಟಾದಿ ಅದ್ಭುತ ರೀತಿಯಲ್ಲಿ ಕಾರ್ಯನಿರ್ವಹಿಸಲಿದೆ. ಪರಿಣಾಮವಾಗಿ, ನಿಮ್ಮ ಕೆಲಸಗಳನ್ನು ಅವಧಿಯ ಮುನ್ನ ಯಶಸ್ವಿಯಾಗಿ ಪೂರ್ಣಗೊಳಿಸುವಿರಿ. ನೀವು ಶಾಂತಿಯುತ ಕುಟುಂಬ ಜೀವನ, ಮತ್ತು ನಿಮ್ಮ ತಾಯಿಯೊಂದಿಗೆ ಉತ್ತಮ ಸಹಬಾಳ್ವೆಯನ್ನು ಅನುಭವಿಸುತ್ತೀರಿ. ದೂರದೂರಿನಲ್ಲಿರುವ ನಿಮ್ಮ ಒಡನಾಡಿಗಳು ನಿಮಗೆ ಶುಭ ಸುದ್ದಿಯನ್ನು ನೀಡುವ ನಿರೀಕ್ಷೆಯಿದೆ. ವೈವಾಹಿಕ ಸಂತೋಷವು ಸಿಗಲಿದೆ. ಇದೊಂದು ಅದ್ಭುತ ದಿನವಾಗಲಿದೆ.
ಧನು :-
ಇಂದು ಮುಂಜಾನೆಯು ಎಂದಿನಂತೆ ಉತ್ಸಾಹ ಹಾಗೂ ಉಲ್ಲಾಸದಿಂದಿರುವುದಿಲ್ಲ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಅನಾರೋಗ್ಯ ಮತ್ತು ಸೂಕ್ಷ್ಮಮನಸ್ಸು ನಿಮ್ಮನ್ನು ಒತ್ತಡದಲ್ಲಿರಿಸಲಿದೆ. ಸಂಗೀತ ಕೇಳಿ ಲವಲವಿಕೆಯ ನೃತ್ಯ ಮಾಡಿ. ಇವು ಖಂಡಿತವಾಗಿಯೂ ಅಂತಹ ಕೆಟ್ಟ ನಿರಾಶಾವಾದದ ಆಲೋಚನೆಗಳಿಂದ ಮುಕ್ತಿ ನೀಡುತ್ತದೆ. ನಿಮಗೆ ಆರ್ಥಿಕ ಬಿಕ್ಕಟ್ಟು ಉಂಟಾಗಬಹುದು ಆದರೆ ಅದು ಮಧ್ಯಾಹ್ನದವರೆಗೆ ಮಾತ್ರ, ನಂತರ ಪರಿಸ್ಥಿತಿಯು ಸ್ವಲ್ಪ ಸುಧಾರಿಸಲ್ಪಡುತ್ತದೆ. ಅನಿರೀಕ್ಷಿತ ಆರ್ಥಿಕ ಲಾಭ ಉಂಟಾಗಲಿದೆ. ಉದ್ಯಮಿಗಳಿಗೆ ಇದು ಲಾಭದಾಯಕ ಸಮಯ. ಸ್ನೇಹಿತರೊಂದಿಗಿನ ನಿಶ್ಚಿಂತೆಯ, ಸಂತಸಭರಿತ ಸಂಜೆಯನ್ನು ನಿರೀಕ್ಷಿಸಿ. ಇದಕ್ಕಿಂತ ಹೆಚ್ಚಿನದ್ದನ್ನು ಕೇಳಲು ಇನ್ನೇನು ಇಲ್ಲ.
ಮಕರ :-
ನಿಮ್ಮ ಮನೆಮಂದಿಯೊಂದಿಗೆ, ಸ್ನೇಹಿತರು ಮತ್ತು ಪ್ರೀತಪಾತ್ರರೊಂದಿಗೆ ತಿರುಗಾಟಕ್ಕೆ ಹೋಗಲು ಯೋಜನೆ ರೂಪಿಸುವ ಮೂಲಕ ನಿಮ್ಮ ದಿನವನ್ನು ಪ್ರಾರಂಭಿಸುತ್ತೀರಿ ಎಂಬುದಾಗಿ ಗಣೇಶ ಹೇಳುತ್ತಾರೆ. ಏನೇ ಆದರೂ, ದಿನದ ದ್ವಿತೀಯಾರ್ಧದಲ್ಲಿ ಹಣಕಾಸು ತೊಡಕುಗಳು ಉಂಟಾಗುವುದನ್ನು ಗ್ರಹಗತಿಗಳು ಸೂಚಿಸುವುದರಿಂದ ನಿಮ್ಮ ಖರ್ಚುಗಳು ಮಿತಿಮೀರದಂತೆ ಎಚ್ಚರವಹಿಸಿ. ಬಹುಶಃ ನೀವು ಮಾಡಿರುವ ವೆಚ್ಚದ ನ್ಯಾಯಯುಕ್ತ ಪಾಲನ್ನು ಪಡೆಯಲು ನೀವು ವಿಫಲರಾಗುವಿರಿ. ಮಧ್ಯಾಹ್ನದ ಬಳಿಕ ಗ್ರಹಗತಿಗಳು ನಿಮ್ಮನ್ನು ಚಿಂತೆ ಹಾಗೂ ನೋವಲ್ಲಿ ಇರಿಸಲಿದೆ. ಉದ್ವೇಗವು ನಿಮ್ಮನ್ನು ಪ್ಲೇಗ್‌ನಂತೆ ಕಾಡಲಿದೆ. ಸರಕಾರಿ ವ್ಯವಹಾರಗಳಲ್ಲಿ ವೈಷಮ್ಯವನ್ನು ಹೊಂದಿರುವವರು ಅಥವಾ ಅನೈತಿಕವಾಗಿ ವ್ಯವಹರಿಸುವವರು ತಮ್ಮ ಚಟುವಟಿಕೆಗಳಲ್ಲಿ ನಿಗಾವಿರಿಸಿ.
ಕುಂಭ :-
ಆರೋಗ್ಯ, ಸಂಪತ್ತು, ಸಂತೋಷ ಮುಂತಾದ ಮೂರು ಅನುಗ್ರಹಗಳೊಂದಿಗೆ ಉತ್ತಮ ದಿನವನ್ನು ಗಣೇಶ ಇಂದು ನಿಮಗೆ ದಯಪಾಲಿಸುತ್ತಾರೆ. ಆನಂದಿಸಿ. ಇಂದು ನೀವು ಚಿತ್ತಾಕರ್ಷಕವಾಗಿರಲು ಪ್ರಯತ್ನಿಸಬಹುದು ಇದರಿಂದಾಗಿ ಬಟ್ಟೆಬರೆ ಮತ್ತು ಇತರ ಸೌಂದರ್ಯ ಸಾಧನಗಳಿಗಾಗಿ ನೀವು ಸಾಕಷ್ಟು ಹಣವನ್ನು ವ್ಯಯಿಸಬಹುದು. ಇತರ ಖರೀದಗಳಿಗೂ ಇದು ಉತ್ತಮ ದಿನ. ನಿಮ್ಮ ಕಾಯುವ ಸಮಯವು ಮುಗಿಯಿತು ಯಾಕೆಂದರೆ, ನೀವು ಅನೇಕ ದಿನಗಳಿಂದ ಕಾಯುತ್ತಿದ್ದ ದ್ವಿಚಕ್ರ ವಾಹನವು ನಿಮ್ಮ ಬಾಗಿಲಿಗೆ ಬರಲಿದೆ. ಖಂಡಿತವಾಗಿಯೂ ನೀವು ಖರೀದಿಸಿದ ನಂತರವೇ ಎಂಬುದಾಗಿ ಗಣೇಶ ಹೇಳುತ್ತಾರೆ.ವ್ಯವಹಾರದಲ್ಲಿ ಗಳಿಕೆ ಮತ್ತು ಲಾಭ ಉಂಟಾಗುವುದು ಮಾತ್ರವಲ್ಲದೆ ಕೀರ್ತಿ ಮತ್ತು ಮನ್ನಣೆಯೂ ದೊರೆಯಲಿದೆ. ಸ್ನೇಹಿತರೊಂದಿಗೆ ಪ್ರವಾಸ ತೆರಳುವಿರಿ. ಈ ಅಪರೂಪದ ಕ್ಷಣದ ಗರಿಷ್ಠ ಪ್ರಯೋಜನ ಪಡೆದುಕೊಳ್ಳಿ.
ಮೀನ :-
ಸಾಧಾರಣ ದಿನವು ನಿಮಗಾಗಿ ಕಾದಿದೆ . ಆಕರ್ಷಕವಾಗಿರುವ ಬಹುಸಂಸ್ಕೃತಿ ಆಕರ್ಷಣೆಯಿಂದ ಮತ್ತು ವಾಗ್ವಾದಗಳಿಗೆ ಹಾದಿ ಮಾಡಿಕೊಡುವಂತಹ ಬೌದ್ಧಿಕ ಸಂವಾದಗಳಿಂದ ದೂರ ಉಳಿಯುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ . ಏನೇ ಆದರೂ, ದ್ವಿತೀಯಾರ್ಧವು ಅನುಕೂಲಕರ ಸಮಯವನ್ನು ನೀಡುವ ಸುಳಿವು ಒದಗಿಸುತ್ತದೆ. ನೀವು ಮಾನಸಿಕ ಮತ್ತು ದೈಹಿಕವಾಗಿ ಸ್ಥಿರವಾಗಿರುವ ಕಾರಣ ನಿಮಗೆ ಇದು ಉತ್ತಮ ಸಮಯವಾಗಲಿದೆ. ಕಾರ್ಯಸ್ಥಳದಲ್ಲಿನ ಯೋಗ್ಯ ವಾತಾವರಣವು ಪರಿಣಾಮಕಾರಿ ಫಲಿತಾಂಶವನ್ನು ನೀಡಲು ಸಹಕಾರಿಯಾಗಲಿದೆ. ನಿಮ್ಮನ್ನು ನೀವು ಸಾಬೀತುಪಡಿಸಲು ಉತ್ತಮ ಸಮಯ ಮತ್ತು ಸ್ಪರ್ಧಿಗಳಿಗೆ ಇದು ಕೆಟ್ಟ ಸಮಯ. ನೀವು ವಿಜಯಿಗಳಾಗಿ ಹೊರಹೊಮ್ಮುವಿರಿ.
Horoscope Today : 06 ಜನವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
WhatsApp Group
Join Now