ಮೇಷ :-
ಹಣಕಾಸು ಮತ್ತು ವ್ಯವಹಾರ ಸಂಬಂಧಿ ವಿಚಾರಗಳಿಗೆ ಇಂದು ಅನುಕೂಲಕರ ದಿನ ಎಂಬುದಾಗಿ ಗಣೇಶ ಹೇಳುತ್ತಾರೆ. ಆರ್ಥಿಕ ಲಾಭದ ಹೊರತಾಗಿ ಭವಿಷ್ಯದಲ್ಲಿ ನಿಮಗೆ ಸಹಾಯವಾಗುವಂತಹ ದೀರ್ಘಾವಧಿಯ ಬಂಡವಾಳ ಹೂಡಲಿದ್ದೀರಿ. ಸ್ನೇಹಿತರು ಮತ್ತು ಪ್ರೀತಿಪಾತ್ರರೊಂದಿಗೆ ನೀವು ಕಳೆಯುವ ಸಮಯವು ನಿಮ್ಮನ್ನು ಎಂದಿಗಿಂತಲೂ ಖುಷಿಯಲ್ಲಿರಿಸುತ್ತದೆ.
ಸಣ್ಣ ಪ್ರವಾಸಕ್ಕೆ ತೆರಳಲು ಯೋಜನೆ ರೂಪಿಸಬಹುದು. ಧಾರ್ಮಿಕತೆಯತ್ತ ಹೆಚ್ಚಿನ ಒಲವು ತೋರುವ ಸಾಧ್ಯತೆಯಿದೆ.
ವೃಷಭ :-
ನೀವು ಸಂವಹನ ಮತ್ತು ಸಾರ್ವಜನಿಕ ಸಂಭಾಷಣಾ ಕ್ಷೇತ್ರದಲ್ಲಿದ್ದರೆ, ಕೇಳುಗರನ್ನು ಮೋಡಿ ಮಾಡುವ ಸಾಮರ್ಥ್ಯವು ನಿಮಗೆ ಬರಲಿದೆ. ಅಲ್ಲದೆ ಮುಖಾಮುಖಿ ಮಾತುಕತೆಯಲ್ಲಿ ಕೂಡ ನಿಮ್ಮ ಕೇಳುಗರನ್ನು ಮಂತ್ರಮುಗ್ಧಗೊಳಿಸುವಿರಿ. ಇದು ನಿಮ್ಮ ಪರಿಚಯಸ್ಥರೊಂದಿಗೆ ದೀರ್ಘ ಸಂಬಂಧವನ್ನು ಹೊಂದಿಸಿಕೊಳ್ಳಲು ಅವಕಾಶ ಮಾಡಿಕೊಡಲಿದೆ. ನೀವು ವಿದ್ಯಾರ್ಥಿಗಳಾಗಿದ್ದಲ್ಲಿ, ನಿಮ್ಮ ಜ್ಞಾನವನ್ನು ಗ್ರಹಿಸುವ ಮತ್ತು ಪಡೆದುಕೊಳ್ಳುವ ಸಾಮರ್ಥ್ಯವು ಎಂದಿಗಿಂತ ಹೆಚ್ಚಾಗಲಿದೆ. ನಿಮ್ಮ ಆರೋಗ್ಯವು ಉತ್ತಮ ಸ್ಥಿತಿಯಲ್ಲಿ ಇರಲಾರದು ಮತ್ತು ನಿಮ್ಮ ಕಠಿಣ ಪ್ರಯತ್ನಗಳು ನಿರೀಕ್ಷಿತ ಫಲಿತಾಂಶವನ್ನು ನೀಡುವ ಸಾಧ್ಯತೆಯಿಲ್ಲ. ಆದರೆ, ಇವೆಲ್ಲವೂ ಗೂಳಿಯ ಓಟದ ರಭಸದ ಮುಂದೆ ಕ್ಷುಲ್ಲಕ.
ಮಿಥುನ :-
ಇಂದು ನಿಮ್ಮ ಮನಸ್ಸು ಗೊಂದಲ ಹಾಗೂ ಅಸ್ಥಿರತೆಯಿಂದ ತುಂಬಿರುತ್ತದೆ ಎಂಬುದಾಗಿ ಗಣೇಶ ಭಾವಿಸುತ್ತಾರೆ. ಇದರ ಜೊತೆಗೆ ಅಧಿಕ ಉದ್ವೇಗವು ನಿಮ್ಮನ್ನು ಮಾನಸಿಕವಾಗಿ ತುಮುಲದಲ್ಲಿರಿಸುತ್ತದೆ. ನಿಮ್ಮ ತಾಯಿಯ ಕುರಿತಾಗಿ ನೀವು ಹೆಚ್ಚು ಭಾವುಕರಾಗಬಹುದು. ಬೌದ್ಧಿಕ ಚರ್ಚೆಯಲ್ಲಿ ಪಾಲ್ಗೊಳ್ಳಬಹುದು ಆದರೆ, ಸಂಘರ್ಷವನ್ನು ತಪ್ಪಿಸಿ ಮತ್ತು ಇದನ್ನು ಒಂದು ಚಿಂತನೆಗಳ ಆರೋಗ್ಯಕರ ವಿನಿಮಯ ಎಂಬುದಾಗಿ ತಿಳಿದುಕೊಳ್ಳಿ. ಕುಟುಂಬ ಮತ್ತು ಚರ ಆಸ್ತಿಗಳಿಗೆ ಸಂಬಂಧಿಸಿದ ಚರ್ಚೆಗಳಿಂದ ದೂರವಿರಿ. ನಿಮ್ಮ ಪ್ರೀತಿಪಾತ್ರರೊಂದಿಗೆ ಸಣ್ಣ ಜಗಳವನ್ನು ನಿರೀಕ್ಷಿಸಬಹುದು. ಪ್ರಯಾಣಕ್ಕೆ ಈ ದಿನ ಸೂಕ್ತವಲ್ಲ.
ಕರ್ಕಾಟಕ :-
ಇಂದು ನಿಮಗೆ ನಿಮ್ಮ ಸಹೋದರರಿಂದ ಲಾಭ ಉಂಟಾಗಬಹುದು. ನಿಮ್ಮ ಸ್ನೇಹಿತರನ್ನು ಭೇಟಿ ಮಾಡುವ ಅವಕಾಶದಿಂದ ಮತ್ತು ನಿಮ್ಮ ಪ್ರೀತಿಪಾತ್ರರೊಂದಿಗೆ ಅನ್ಯೋನ್ಯವಾಗಿರುವುದರಿಂದ ನಿಮಗೆ ಪ್ರಯೋಜನಗಳುಂಟಾಗುವ ಸಾಧ್ಯತೆಯಿದೆ. ನೀವು ಸುಂದರ ತಾಣಗಳಿಗೆ ಭೇಟಿ ನೀಡಬಹುದು. ಇಂದಿನ ಎಲ್ಲಾ ಕಾರ್ಯಗಳಲ್ಲಿ ನೀವು ಯಶಸ್ಸನ್ನು ಸಾಧಿಸುತ್ತೀರಿ ಎಂಬುದಾಗಿ ಗಣೇಶ ನಂಬುತ್ತಾರೆ. ನಿಮ್ಮ ದ್ವೇಷಿಗಳು ಮತ್ತು ಪ್ರತಿಸ್ಪರ್ಧಿಗಳು ನಿಮ್ಮನ್ನು ಹತೋಟಿಯಲ್ಲಿಡುವಲ್ಲಿ ವಿಫಲರಾಗುತ್ತಾರೆ. ನಿಮ್ಮ ಭಾವನಾತ್ಮಕತೆಯು ನಿಮ್ಮ ಪ್ರೀತಿಪಾತ್ರರೊಂದಿಗಿನ ಸಂಬಂಧವನ್ನು ಉಳಿಸಿಕೊಳ್ಳಲು ನೆರವಾಗುತ್ತದೆ. ಆಗುಹೋಗುಗಳಿಂದ ನಿಮ್ಮ ವರ್ಧಿಸಿದ ಉತ್ತಮ ದಿನಗಳ ಫಲಿತಾಂಶವು ನಿಮಗೆ ತಿಳಿಯುವುದು. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ನೀವು ಗೌರವ ಸಂಪಾದಿಸುವಿರಿ.
ಸಿಂಹ :-
ಇಂದು ನೀವು ನಿರ್ವಹಿಸಬೇಕಾದ ಎಲ್ಲರದ ಬಗ್ಗೆ ಚಿಂತಿಸಿ ನೀವು ಕಂಗಾಲಾಗಿರುವಂತೆ ಅನಿಸಬಹುದು. ಏನೇ ಆದರೂ, ಕುಟುಂಬದ ಬೆಂಬಲವು ನಿಮ್ಮಲ್ಲಿ ಸಂತೋಷವನ್ನು ಉಂಟುಮಾಡುತ್ತದೆ ಮತ್ತು ಎಲ್ಲವೂ ಸುಸೂತ್ರವಾಗಿ ನಡೆಯಲು ನೆರವಾಗುತ್ತದೆ. ತುಂಬಾ ದೂರದಲ್ಲಿ ಕಂಪನಿ ಅಥವಾ ವ್ಯಕ್ತಿಯೊಂದಿಗೆ ನಿಮ್ಮ ಸಂಬಂಧವು ವೃದ್ಧಿಗೊಳ್ಳುವುದನ್ನು ಕಾಣಬಹುದು. ಇದು ನಿಮಗೆ ದೀರ್ಘ ಸಮಯದವರೆಗೆ ಲಾಭ ಉಂಟುಮಾಡಲಿದೆ ಎಂಬುದಾಗಿ ಗಣೇಶ ಭಾವಿಸುತ್ತಾರೆ. ನಿಮ್ಮ ಕಠಿಣ ಪರಿಶ್ರಮದಿಂದ ಅಪೇಕ್ಷಿತ ಫಲಿತಾಂಶವನ್ನು ಪಡೆಯಲಾರಿರಿ. ಇಂದು ನಿಮಗೆ ಸಾಮಾನ್ಯ ದಿನವಾಗಲಿದೆ.
ಕನ್ಯಾ :-
ಇಂದು ನಿಮಗೆ ಉತ್ತಮ ದಿನ ಎಂಬುದಾಗಿ ಗಣೇಶ ಹೇಳುತ್ತಾರೆ. ನೀವು ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹೊಂದುತ್ತೀರಿ. ಧನಲಕ್ಷ್ಮಿಯು ನಿಮ್ಮ ಮೇಲೆ ಅನುಗ್ರಹ ತೋರುತ್ತಾರೆ ಮತ್ತು ನಿಮಗೆ ಆರ್ಥಿಕವಾಗಿ ತೃಪ್ತಿ ಉಂಟಾಗಲಿದೆ. ನೀವು ನಿಮ್ಮ ಸ್ನೇಹಿತರೊಂದಿಗೆ ಅಥವಾ ಪ್ರೀತಿಪಾತ್ರರೊಂದಿಗೆ ನಿಮ್ಮ ದಿನವನ್ನು ವಿಶೇಷವಾಗಿ ಕಳೆಯಲಿದ್ದೀರಿ. ಯಾವುದೇ ರೀತಿಯ ಪ್ರಯಾಣವು ಉತ್ತಮ.
ತುಲಾ :-
ನಿಮ್ಮ ಸಿಟ್ಟಿನ ಮೇಲೆ ನಿಯಂತ್ರಣವಿರಲಿ. ಸಾಧ್ಯವಿದ್ದರೆ ಯಾವುದೇ ರೀತಿ ವಾಗ್ವಾದಗಳಿಂದ ಅನಗತ್ಯ ಚರ್ಚೆಗಳಿಂದ ದೂರವಿರಿ.ಕುಟುಂಬದಲ್ಲಿ ಯಾರೊಬ್ಬರೊಂದಿಗಾದರೂ ನೀವು ವ್ಯಾಜ್ಯಕ್ಕೆ ಒಳಗಾಗಬಹುದು. ನೀವು ಕೆಲವು ದೈಹಿಕ ತೊಂದರೆಗಳನ್ನು ಅನುಭವಿಸಬಹುದು. ವಿಶೇಷವಾಗಿ ಅಪಾಯಕ್ಕೆ ಸಿಲುಕಬಹುದು. ಗಣೇಶ ಹೇಳುವಂತೆ ನೀವು ಅಪಘಾತ ಸಂಭಾವ್ಯತೆಯನ್ನು ಹೊಂದಿದ್ದೀರಿ. ನ್ಯಾಯಾಲಯ ಮತ್ತು ಕಾನೂನು ಸಂಬಂಧಿ ಕಾರ್ಯಗಳನ್ನು ನಿಭಾಯಿಸುವಾಗ ಎಚ್ಚರವಹಿಸಿ.ಆತ್ಮಗೌರವದ ಕಾರಣದಿಂದಾಗಿ ನಿಮಗೆ ಹಿನ್ನಡೆ ಉಂಟಾಗುವ ಸಾಧ್ಯತೆಯಿದೆ. ಆಧ್ಯಾತ್ಮಿಕ ಮತ್ತು ಧಾರ್ಮಿಕ ಕಾರ್ಯಗಳು ನಿಮ್ಮನ್ನು ಕಠಿಣ ಸಮಯದಿಂದ ಪಾರುಮಾಡಲು ನೆರವಾಗಬಹುದು.
ವೃಶ್ಚಿಕ :-
ಲಾಭದಾಯಕ ದಿನವು ನಿಮಗಾಗಿ ಕಾದಿದೆ. ನೀವು ನಿರೀಕ್ಷಿಸುತ್ತಿದ್ದ ಎಲ್ಲಾ ಪ್ರಾಪಂಚಿಕ ಸಂತೋಷಗಳು ನಿಮಗೆ ಸಿಗಲಿವೆ ಎಂಬುದಾಗಿ ಗಣೇಶ ಹೇಳುತ್ತಾರೆ. ವಿವಾಹದ ಯೋಜನೆ ನಡೆಸುತ್ತಿರುವವರಿಗೆ ಇದು ಸಕಾಲ. ಆರ್ಥಿಕವಾಗಿ, ಉದ್ಯಮಿಗಳಿಗೆ ಅಧಿಕ ಲಾಭ ಉಂಟಾಗಲಿದೆ. ನೀವು ವೃತ್ತಿಪರರಾಗಿದ್ದಲ್ಲಿ ನಿಮ್ಮ ಮೇಲಾಧಿಕಾರಿಗಳು ನಿಮ್ಮ ನಿರ್ವಹಣೆಯ ಬಗ್ಗೆ ಸಂತಸಪಡುತ್ತಾರೆ. ನಿಮ್ಮ ಸ್ನೇಹಿತರನ್ನು ಭೇಟಿಮಾಡುವಿರಿ ಮತ್ತು ಅತ್ಯಂತ ಸುಂದರ ಪ್ರದೇಶಗಳಿಗೆ ತೆರಳುವಿರಿ.
ಧನು :-
ಇಂದು ನಿಮಗೆ ಅದೃಷ್ಟದ ದಿನ. ನಿಮ್ಮ ಸಹಜ ಅಪೇಕ್ಷೆಯು ಇತರರಿಗೆ ಸಹಾಯಕವಾಗುತ್ತದೆ ಇದು ನಿಮ್ಮ ದಿನವನ್ನು ಉತ್ತಮವಾಗಿಸುತ್ತದೆ. ನಿಮ್ಮ ವ್ಯವಹಾರದಲ್ಲಿ ಸಫಲರಾಗುವಿರಿ ಮಕ್ಕು ವ್ಯವಹಾರ ಉದ್ದೇಶಕ್ಕಾಗಿ ನೀವು ಪ್ರಯಾಣ ಬೆಳೆಸಬಹುದು. ಉದ್ಯೋಗಿಯಾಗಿ, ನಿಮ್ಮ ಮೇಲಾಧಿಕಾರಿಗಳು ನಿಮ್ಮ ಕೆಲಸದ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾರೆ ಮತ್ತು ಬಡ್ತಿ ಸಿಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಮಕರ :-
ಮಾನಸಿಕ ಮತ್ತು ಭಾಷಾ ಪರಿಣಿತಿಯ ಅಗತ್ಯವಿರುವ ಚಟುವಟಿಕೆಗಳಲ್ಲಿ ನೀವು ದಿನ ಹೆಚ್ಚಿನ ಭಾಗದಲ್ಲಿ ತೊಡಗಿಕೊಳ್ಳುವಿರಿ. ನೀವು ಸಣ್ಣದನ್ನೇ ಮಾಡಿರಬಹುದು ಆದರೂ ಅದು ಮಹತ್ವದ್ದಾಗಿರುತ್ತದೆ. ಭಾಷಾ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಬಹುದು. ಬರಹಗಾರರ ಕ್ಷೇತ್ರಗಳಿಂದ ಬರುವಂತಹ ಮಾನಸಿಕ ಯಾತನೆಗಳನ್ನು ನೀವು ಹೊಂದುವಿರಿ. ನಿಮ್ಮ ಮಕ್ಕಳ ಶಿಕ್ಷಣ ಮತ್ತು ಆರೋಗ್ಯವು ಚಿಂತೆಯ ಕಾರಣವಾಗಿರುತ್ತದೆ. ಆಲೋಚಿಸದೆ ಖರ್ಚು ಮಾಡಬೇಡಿ.
ಕುಂಭ :-
ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ವಿರುದ್ಧ ಗಣೇಶ ನಿಮಗೆ ಎಚ್ಚರಿಕೆ ನೀಡುತ್ತಾರೆ. ಕಾನೂನುಬಾಹಿರ ಕಾರ್ಯಗಳಲ್ಲಿ ತೊಡಗಿಕೊಳ್ಳುವುದು ಸ್ವೀಕಾರ್ಹವಲ್ಲದಿದ್ದರೂ, ಇಂದು ನೀವು ಕಾನೂನು ಕ್ರಿಯೆಗಳಿಗೆ ಒಳಗಾಗುವಿರಿ. ಋಣಾತ್ಮಕ ಆಲೋಚನೆಗಳು ಮಾನಸಿಕವಾಗಿ ಕಿರಿಕಿರಿಯನ್ನುಂಟುಮಾಡಲಿವೆ. ನಿಮ್ಮ ಸಿಡುಕನ್ನು ನಿಯಂತ್ರಿಸಲಾಗದ ನಿಮ್ಮ ಅಶಕ್ತತೆಯೊಂದೇ ಇಂದಿನ ಚಿಂತೆಗೆ ಕಾರಣವಾಗಲಿದೆ. ಆದ್ಯಾತ್ಮದೆಡೆಗಿನ ಒಲವು ನೈತಿಕ ಮತ್ತು ಉತ್ತಮ ಅದೃಷ್ಟದೆಡೆಗಿನ ಹಾದಿಯನ್ನು ಕಾಣಲು ಸಹಾಯ ಮಾಡುತ್ತದೆ.
ಮೀನ :-
ಇಂದು ನಿಮ್ಮ ಸೃಜನಶೀಲತೆಯನ್ನು ಜಗತ್ತಿಗೆ ತೋರಿಸಿಕೊಡುವುದರಿಂದ ಜಗತ್ತು ಇಂದು ನಿಮ್ಮನ್ನು ವಿಭಿನ್ನ ‘ನೀವಾಗಿ’ ಕಾಣುತ್ತದೆ. ಸಾಹಿತ್ಯ, ನಟನೆ, ನೃತ್ಯ ಯಾವುದೇ ಇರಲಿ ನಿಮ್ಮ ಕೌಶಲ್ಯವನ್ನು ಪ್ರದರ್ಶಿಸುತ್ತೀರಿ ಮತ್ತು ಇದು ನಿಮ್ಮ ಪ್ರೀತಿಪಾತ್ರರಿಂದ ಶ್ಲಾಘನೆಗೊಳಪಡುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ವ್ಯವಹಾರವನ್ನು ವೃದ್ಧಿಗೊಳಿಸಲು ನೀವು ಕ್ರಿಯಾಶೀಲ ಪಾಲುದಾರರ ಅನ್ವೇಷಣೆಯಲ್ಲಿದ್ದಲ್ಲಿ, ಇಂದು ನಿಮಗೆ ಅವರು ದೊರಕಬಹುದು. ಸಿನಿಮಾ ನೋಡುವ ಮೂಲಕ ಅಥವಾ ಸ್ನೇಹಿತರೊಂದಿಗೆ ಕಾಫಿ ಹಂಚಿಕೊಂಡು ಹರಟೆ ಹೊಡೆಯುವ ಮೂಲಕ ನಿಮ್ಮನ್ನು ನೀವು ಮನರಂಜಿಸಬೇಕಾದ ಸಮಯ. ಇದಕ್ಕಿಂತ ಹೆಚ್ಚು ಇನ್ನೇನು ಬೇಕು? ದೀರ್ಘರಾತ್ರಿಯ ಸ್ನೇಹಕೂಟಕ್ಕೆ ತೆರಳಿ. ನಿಮ್ಮ ಗೊಂದಲದ ದಿನಚರಿಯಿಂದ ಬಿಡುವು ಪಡೆಯಿರಿ.
Horoscope Today : 06 ಫೆಬ್ರವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
WhatsApp Group
Join Now