ಮೇಷ :-
ಈ ದಿನವು ನಿಮಗೆ ಉತ್ತಮ ದಿನವಾಗಿರುವುದಿಲ್ಲ. ಆದ್ದರಿಂದ ಶಾಂತ ಹಾಗೂ ಎಚ್ಚರಿಕೆಯಿಂದಿರಿ, ಅವುಗಳು ಸಾಗಲಿ ಎಂಬುದಾಗಿ ಗಣೇಶ ಸಲಹೆ ನೀಡುತ್ತಾರೆ. ಇಂದು ನೀವು ಅತ್ಯಂತ ಭಾವುಕರಾಗಿರುವ ಸಾಧ್ಯತೆಯಿರುವುದರಿಂದ ಮತ್ತು ನಿಮ್ಮ ಮನಸ್ಸಿಗೆ ಬೇಗನೇ ನೋವಾಗುವ ಸಂಭವವಿರುವುದರಿಂದ ಎಚ್ಚರಿಕೆಯಿಂದಿರಿ.
ತಾಯಿಯ ಆರೋಗ್ಯ ಮತ್ತು ಇತರ ನಿರ್ಣಾಯಕ ವಿಚಾರಗಳು ನಿಮ್ಮನ್ನು ಚಿಂತೆಯಲ್ಲಿರಿಸಲಿವೆ. ಅಪರಿಚಿತ ನೀರಿನ ಪ್ರದೇಶಗಳು ಅಪಾಯಕಾರಿ ಎಂಬುದನ್ನು ಸಾಬೀತುಪಡಿಸಬಹುದು ಆದ್ದರಿಂದ ಎಚ್ಚರದಿಂದಿರಿ. ನಿಮ್ಮ ಘನತೆಯನ್ನು ಹೊಣೆಯಾಗಿಸುವಂತಹ ಯಾವುದೇ ಕಾರ್ಯವನ್ನು ಇಂದು ಮಾಡಬೇಡಿ. ನಿಮ್ಮ ಆಸ್ತಿಗೆ ಸಂಬಂಧಿಸಿದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಡಿ ಯಾಕೆಂದರೆ ಈ ದಿನವು ಸೂಕ್ತ ದಿನವಲ್ಲ. ನಿಮ್ಮ ಪ್ರತೀ ಹೆಜ್ಜೆಯಲ್ಲೂ ಎಚ್ಚರದಿಂದಿರಬೇಕಾದ ದಿನ.
ವೃಷಭ :-
ಚಿಂತೆಗಳ ಗಂಟುಮೂಟೆಯನ್ನು ಬಿಟ್ಟುಬಿಡಿ ಮತ್ತು ಈ ದಿನವು ಪರಿಪೂರ್ಣವಾಗಿರುವುದರಿಂದ ಲವಲವಿಕೆಯ ಭಾವನೆಯನ್ನು ಹೊಂದಿ. ಇಂದು ನೀವು ಉತ್ತಮ ಸೃಜಶೀಲತೆಯನ್ನು ಹೊಂದಿರುತ್ತೀರಿ ಮತ್ತು ಸಾಹಿತ್ಯದತ್ತ ನಿಮ್ಮ ಒಲವನ್ನು ವೃದ್ಧಿಸುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ತಾಯಿಯೊಂದಿಗಿನ ಆರೋಗ್ಯಕರ ಸಂವಾದವು ಅವರೊಂದಿಗಿನ ನಿಮ್ಮ ಸಮೀಕರಣವನ್ನು ಹೆಚ್ಚಿಸುತ್ತದೆ. ಸ್ವಾದಿಷ್ಟ ಆಹಾರ ಮತ್ತು ಸಂತಸಭರಿತ ಪ್ರವಾಸದ ಸಾಧ್ಯತೆಯಿದೆ. ಹೊಣೆಯಿಂದ ಹಣಕಾಸು ಮತ್ತು ಆರ್ಥಿಕ ವಿಚಾರಗಳತ್ತ ಗಮನಹರಿಸಲು ಇದು ಸಕಾಲ. ಅದೃಷ್ಟ ನಿಮ್ಮದಾಗಲಿ.
ಮಿಥುನ :-
ಇಂದು ನೀವು ಮಿಶ್ರ ಭಾವನೆಗಳನ್ನು ಅನುಭವಿಸುತ್ತೀರಿ ಎಂಬುದಾಗಿ ಗಣೇಶ ಹೇಳುತ್ತಾರೆ. ನೀವು ಎಷ್ಟೇ ಆಯಾಸ ಹೊಂದಿದ್ದರೂ, ಚಿಂತೆಯಲ್ಲಿದ್ದರೂ ನಿಮ್ಮ ಪ್ರೀತಪಾತ್ರರ ಭೇಟಿಯು ನಿಮ್ಮನ್ನು ಉಲ್ಲಾಸದಿಂದಿರಿಸುತ್ತದೆ.ನಿಮ್ಮ ಧನಾತ್ಮಕ ದೃಷ್ಟಿಕೋನ ಹಾಗೂ ಸಾಮರ್ಥ್ಯವು ನಿಮ್ಮ ಕಾರ್ಯದಲ್ಲಿ ಮತ್ತು ಅದರ ಪ್ರತಿಫಲದಲ್ಲಿ ಪ್ರತಿಬಿಂಬಿತಗೊಳ್ಳಬಹುದು. ನೀವು ಪ್ರೋತ್ಸಾಹ ಹಾಗೂ ಉತ್ತೇಜನ ನೀಡುವ ಸಹೋದ್ಯೋಗಿಗಳನ್ನು ಕಂಡುಕೊಳ್ಳಬಹುದು. ಆದರೂ, ಹಣಕಾಸು ಮೂಲದಲ್ಲಿ ಗಣನೀಯ ಇಳಿಕೆಯಾಗಲಿದೆ ಮತ್ತು ನೀವು ಅವುಗಳ ಬಗ್ಗೆ ಎಚ್ಚರವಹಿಸಿ. ಗೃಹಕ್ಷೇತ್ರದಲ್ಲಿ ಈ ದಿನವು ಶಾಂತಿಯಿಂದ ಕೂಡಿರುತ್ತದೆ.
ಕರ್ಕಾಟಕ :-
ಸಂತಸ ಹಾಗೂ ಖುಷಿ ಹಾಗೂ ಸ್ನೇಹಿತರನ್ನು ನೀವು ಹೊಂದಿರುವಿರಿ. ಅದು ಎಂದಿಗಿಂತ ವಿಭಿನ್ನ.ಆದ್ದರಿಂದ ಇದರ ಗರಿಷ್ಠ ಪ್ರಯೋಜನ ಪಡೆಯಿರಿ ಎಂಬುದಾಗಿ ಗಣೇಶ ಹೇಳುತ್ತಾರೆ. ಇಂದು ನೀವು ಉತ್ಸಾಹದಿಂದಿರುತ್ತೀರಿ ಮತ್ತು ಧನಾತ್ಮಕ ಶಕ್ತಿಯು ದಿನಪೂರ್ತಿ ನಿಮ್ಮ ಸುತ್ತಲಿರುತ್ತದೆ.ಇಂದು ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ತಿರುಗಾಟಕ್ಕೆ ತೆರಳುವ ಮೂಲಕ ಆನಂದಿಸಬೇಕಾದ ದಿನವಾಗಿದೆ.ನಿಮ್ಮ ಪತ್ನಿಯಿಂದ ನೀವು ಸಂತೋಷದ ಸುದ್ದಿಯನ್ನು ಕೇಳುವಿರಿ ಮತ್ತು ನಿಮ್ಮ ಪತ್ನಿಯ ನೀವು ಖುಷಿ ಹಾಗೂ ಸಂತೋಷಗೊಳ್ಳುತ್ತೀರಿ. ಅದ್ಭುತ ದಿನ ಇದಾಗಿದೆ.
ಸಿಂಹ :-
ಈ ದಿನ ನಿಮ್ಮ ಗ್ರಹಗತಿಗಳು ಪ್ರಕಾಶಿತವಾಗುವುದಿಲ್ಲ ಎಂಬುದಾಗಿ ಗಣೇಶ ಎಚ್ಚರಿಕೆ ನೀಡುತ್ತಾರೆ. ಇಂದು ನೀವು ಚಿಂತೆಯಲ್ಲಿ ಸಿಲುಕಬಹುದು. ಇದು ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರಲಿದೆ. ಯಾರೊಂದಿಗೂ ವಾಗ್ವಾದ ಮತ್ತು ಅಸಭ್ಯ ವರ್ತನೆಯನ್ನು ತಪ್ಪಿಸಿ ಇದು ನಿಮ್ಮ ವಿರುದ್ಧ ಕಾರ್ಯನಿರ್ವಹಿಸಬಹುದು. ಭಿನ್ನಾಭಿಪ್ರಾಯಗಳನ್ನು ಸರಿಪಡಿಸಲು ಪ್ರಯತ್ನಿಸಿ. ನ್ಯಾಯಾಲಯ ಮತ್ತು ಕಾನೂನು ವಿಚಾರಗಳನ್ನು ಇನ್ನೊಂದು ದಿನಕ್ಕೆ ಮುಂದೂಡಬೇಕು. ವಿದೇಶದಿಂದ ಬರುವ ಶುಭಸುದ್ದಿಗಳು ನಿಮ್ಮ ದಿನವನ್ನು ಇನ್ನಷ್ಟು ಉತ್ತಮವಾಗಿಸಲಿದೆ.
ಕನ್ಯಾ :-
ಕನ್ಯಾ ರಾಶಿಯವರು ಇಂದು ಸ್ನೇಹಿತರು ಮತ್ತು ಮನೆಮಂದಿಯೊಂದಿಗೆ ಸಂತಸದಲ್ಲಿರುವ ಕಾರಣ ಇದೊಂದು ಅದ್ಭುತ ದಿನವಾಗಿದೆ ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ. ಘನತೆಯಲ್ಲಿ ಹೆಚ್ಚಳ ಮತ್ತು ಸಾಮಾಜಿಕ ಮನ್ನಣೆಯು ನಿಮ್ಮನ್ನು ಇಂದು ಸಂತೋಷದಲ್ಲಿರಿಸುತ್ತದೆ. ಬಂಡವಾಳ ಮತ್ತು ಹಣಕಾಸು ಪ್ರಯೋಜನಗಳು ಉಂಟಾಗಲಿವೆ. ಉದ್ಯಮಿಗಳಿಗೂ, ನಿಮ್ಮ ವ್ಯವಹಾರವು ನಾಣ್ಯಗಳೊಂದಿಗೇ ಬರುವ ಕಾರಣ ಉತ್ತಮ ದಿನವಾಗಿರುವ ಭರವಸೆಯಿದೆ. ಇಂದು ನೀವು ಸುಂದರ ಪ್ರದೇಶಗಳಿಗೆ ಪ್ರವಾಸ ತೆರಳಲಿದ್ದೀರಿ. ಏನೇ ಆದರೂ, ನೀವು ಕಾರ್ಯ ಸಂಬಂಧ ಪ್ರಯಾಣ ತೆರಳಬಹುದು. ನಿಮ್ಮ ಸಂಗಾತಿಯೊಂದಿಗೆ ಖುಷಿ ಹಾಗೂ ಸಂತಸದಿಂದಿರುತ್ತೀರಿ. ಮತ್ತು ಇದು ಆಕರ್ಷಕ ವೈವಾಹಿಕ ಸಂತಸವನ್ನು ಪುನಶ್ಚೇತನಗೊಳಿಸಲಿದೆ.
ತುಲಾ :-
ಈ ದಿನ ನಿಮ್ಮ ಅದೃಷ್ಟವು ಸಮತೋಲನದಲ್ಲಿರುತ್ತದೆ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ.ಮನೆಯಲ್ಲಿನ ಹಾಗೂ ಕಚೇರಿಯಲ್ಲಿನ ಸಾಮರಸ್ಯದ ವಾತಾವರಣ ನಿಮ್ಮ ವಿಚಾರಗಳನ್ನು ಅನುಕೂಲಕರವಾಗಿಸುತ್ತದೆ. ನಿಮ್ಮ ವೃತ್ತಿಗೆ ಸಂಬಂಧಿಸಿ ಗ್ರಹಗತಿಗಳು ಪ್ರಕಾಶಿಸುತ್ತಿವೆ ಮತ್ತು ನಿಮ್ಮ ಉತ್ಪಾದಕತೆಯ ಬಗ್ಗೆ ಮೇಲಾಧಿಕಾರಿಗಳು ತೃಪ್ತಿಗೊಂಡಿರುವಂತೆ ಅನಿಸುತ್ತದೆ ಹಾಗೂ ಬಡ್ತಿ ಸಿಗುವ ಸಾಧ್ಯತೆಯಿದೆ. ಸರಕಾರಿ ಅಥವಾ ಕಾನೂನು ಕೆಲಸಗಳಿಗೆ ಹಸಿರು ನಿಶಾನೆ ಸಿಗಬೇಕು. ಮುಂದಕ್ಕೆ ಸಾಗಿ, ಅಂತಹ ವ್ಯವಹಾರಗಳಿಗೆ ಇಂದು ಸೂಕ್ತ ದಿನ. ಜನರ ಸಂಘವು ಫಲಪ್ರದವಾಗಿರುವುದರಿಂದ ನಿಮ್ಮ ಸುತ್ತಲಿರುವ ಹೆಚ್ಚು ಹೆಚ್ಚು ಜನರೊಂದಿಗೆ ಬೆರೆಯಿರಿ. ನಿಮ್ಮ ತಾಯಿಯು ನಿಮಗೆ ಪ್ರಯೋಜನವನ್ನು ನೀಡಲಿದ್ದಾರೆ.
ವೃಶ್ಚಿಕ :-
ಮಾನಸಿಕವಾಗಿ ಮತ್ತು ದೈಹಿಕವಾಗಿ ಇಂದು ನೀವು ನಿರಾಸಕ್ತಿ ಭಾವನೆಯನ್ನು ಹೊಂದುವಿರಿ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ವ್ಯವಹಾರದಲ್ಲಿ ತಾತ್ಕಾಲಿಕ ಅಡೆತಡೆಗಳನ್ನು ನೀವು ಅನುಭವಿಸಬಹುದು. ಇದು ನಿಮಲ್ಲಿ ಅಸಮಾಧಾನವನ್ನುಂಟುಮಾಡುತ್ತದೆ. ಎಚ್ಚರಿಕೆಯಿಂದಿರಿ ಮತ್ತು ನಿಮ್ಮ ವರಿಷ್ಠರು ಮತ್ತು ಮೇಲಾಧಿಕಾರಿಗಳೊಂದಿಗಿನ ವಾಗ್ವಾದಗಳನ್ನು ತಪ್ಪಿಸಿ. ನಿಮ್ಮ ಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸಿ. ಮತ್ತು ಅವರೊಂದಿಗಿನ ಮನಸ್ತಾಪವನ್ನು ಬಗೆಹರಿಸಿ. ಖರ್ಚು ಹೆಚ್ಚಾಗಲಿರುವ ಕಾರಣ ನಿಮ್ಮ ಕಿಸೆಯತ್ತ ಗಮನವಿರಲಿ. ಇಂದು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಇಂದು ನೀವು ರಾಜಕೀಯ ವಿವಾದಗಳನ್ನು ಎದುರಿಸಬೇಕಾದೀತು. ಆದರೂ, ತಾಳ್ಮೆಯಿಂದಿರಿ. ಮತ್ತು ಅವುಗಳು ಸುಲಭವಾಗಿ ಬಗೆಹರಿಯುತ್ತವೆ. ಸಾಗುತ್ತಿರಲಿ.
ಧನು :-
ಇಂದು ನೀವು ಹೆಚ್ಚು ಜಾಗರೂಕರಾಗಿರಿ ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ. ಇಂದು ನಿಮ್ಮ ಭಾವುಕತೆಯು ನಿಮ್ಮ ಮನಸ್ಸನ್ನು ಆಳಬಹುದು ಇಂದು ನಿಮ್ಮ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯಕ್ಕೆ ಧಕ್ಕೆ ಉಂಟುಮಾಡಬಹುದು. ಆದ್ದರಿಂಗ ಹೊಸ ಯೋಜನೆಗಳನ್ನು ಇಂದು ಪ್ರಾರಂಭಿಸಬೇಡಿ. ನಿಮ್ಮ ಅಹಿತಕರ ಮನಸ್ಥಿತಿ ಮತ್ತು ನಾಲಗೆಯು ನಿಮ್ಮನ್ನು ತೊಂದರೆಯಲ್ಲಿ ಸಿಲುಕಿಸುತ್ತದೆ. ಆದ್ದರಿಂದ ಎಚ್ಚರದಿಂದಿರಿ. ಅನೈತಿಕ ಮತ್ತು ಕಾನೂನುಬಾಹಿರ ಚಟುವಟಿಕೆಗಳಿಂದ ದೂರವಿರಿ. ಇದು ನಿಮ್ಮ ಗೌರವದ ಮೇಲೆ ತೀವ್ರ ಪರಿಣಾಮ ಬೀರಬಹುದು. ನಿಮ್ಮ ಹಣ ಮತ್ತು ಆರೋಗ್ಯ ಎರಡರ ಹಾನಿಗೂ ಕಾರಣವಾಗುವಂತಹ ಹಾಳುಮೂಳು ತಿಂಡಿಗಳನ್ನು ತಿನ್ನಬೇಡಿ.ಎಚ್ಚರಿಕೆಯಿಂದಿರಿ.
ಮಕರ :-
ಎದ್ದೇಳಿ, ಕಾಫಿಯ ಪರಿಮಳವನ್ನು ಆಸ್ವಾದಿಸಿ. ಅದೃಷ್ಟ ಮಕರ ರಾಶಿಯವರಿಗೆ ಎಲ್ಲಾ ಕಡೆಯಿಂದಲೂ ಧನಲಾಭ ಉಂಟಾಗಲಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಆದಾಯ ಮೂಲಗಳು ಹೆಚ್ಚಲಿವೆ. ಮತ್ತು ನೀವು ಏನು ಮಾಡಿದರೂ ಅದರಲ್ಲಿ ಉತ್ಕೃಷ್ಟರಾಗಿರುತ್ತೀರಿ. ನೀವು ನಂಬಿಕೆ ಗಳಿಸುತ್ತೀರಿ ಮತ್ತು ವಿವಿಧ ಏಜೆನ್ಸಿಗಳ ವ್ಯವಹಾರಗಳು ಅಭಿವೃದ್ಧಿಯನ್ನು ತರಲಿದೆ ಮತ್ತು ಯಶಸ್ಸು, ಸಾಮಾಜಿಕ ಗೌರವ ನಿಮ್ಮದಾಗಲಿದೆ. ನಿಮಗಿಷ್ಟವಾದ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಮೂಲಕ ನಿಮ್ಮ ಸೃಜನಶೀಲತೆಯಲ್ಲಿ ಸಮಯ ಕಳೆಯುತ್ತೀರಿ ಮತ್ತು ಇದು ಮನೋರಂಜನೆಯ ಉತ್ತಮ ಆಲೋಚನೆಯಾಗಿದೆ. ಇಂದು ಕೆಲವು ಕಳೆದು ಹೋದ ಗಮನವನ್ನು ಪಡೆದುಕೊಳ್ಳಲು ಸಹಾಯವಾಗುತ್ತದೆ. ಶಾಪಿಂಗ್ ಹಾಗೂ ಮನರಂಜನೆಗೆ ತೆರಳುವಿರಿ. ಆರೋಗ್ಯವು ಉತ್ತಮ ಸ್ಥಿತಿಯಲ್ಲಿದೆ. ಒಟ್ಟಾದಿ ಅದ್ಭುತ ದಿನ.
ಕುಂಭ :-
ಕಾರ್ಯದಲ್ಲಿ ನೀವು ಇಂದು ಯಶಸ್ಸು, ಕೀರ್ತಿ ಮತ್ತು ಮನ್ನಣೆಯನ್ನು ಪಡೆಯಲಿದ್ದೀರಿ ಎಂಬುದಾಗಿ ಗಣೇಶ ಶಕುನ ಹೇಳುತ್ತಾರೆ. ನೀವು ಭಾವುಕರಾಗಿರುತ್ತೀರಿ ಆದರೆ, ಮಾನಸಿಕವಾಗಿ ಉಲ್ಲಾಸದಿಂದಿರುತ್ತೀರಿ.ನೀವು ಸಹೋದ್ಯೋಗಿಗಳಿಂದ ಪ್ರೋತ್ಸಾಹವನ್ನು ನಿರೀಕ್ಷಿಸಬಹುದು ಮತ್ತು ಇದು ನಿಮ್ಮ ಯೋಜನೆಗೆ ಉತ್ತಮ ಫಲಿತಾಂಶವನ್ನು ನೀಡಬಹುದು. ಪ್ರಸಿದ್ಧಿಯನ್ನು ಆನಂದಿಸಿ. ಕುಟುಂಬ ಸದಸ್ಯರೊಂದಿಗೆ ಬೆರೆಯುವುದರಿಂದ ಮತ್ತು ಅವರೊಂದಿಗೆ ಸಂಭ್ರಮದ ಪ್ರವಾಸ ತೆರಳುವುದರಿಂದ ನೀವು ಇನ್ನಷ್ಟು ಉಲ್ಲಾಸಿತರಾಗುವಿರಿ. ಆದರೂ, ಕೆಲವು ಅತೀ ಮುಖ್ಯ ಚಟುವಟಿಕೆಗಳಿಂದಾಗಿ ನಿಮ್ಮ ಖರ್ಚು ಹೆಚ್ಚಾಗಲಿದೆ.
ಮೀನ :-
ನೀವು ಹೊಸ ಅಂಶಗಳನ್ನು ಕಂಡುಕೊಂಡಿರುವುದರಿಂದ ಮತ್ತು ನಿಮ್ಮ ಕೌಶಲ್ಯವನ್ನು ವೃದ್ಧಿಸಲು ಎದುರುನೋಡುತ್ತಿರುವುದರಿಂದ ನಿಮ್ಮ ಸೃಜನಶೀಲತೆಯು ಭಾಗಶಃ ನಿಮ್ಮನ್ನು ಆಳುತ್ತದೆ. ಮುಂದಕ್ಕೆ ಸಾಗಿ ಮತ್ತು ಸಾಹಿತ್ಯ, ಬರಹ ಮುಂತಾದ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ಒತ್ತಡವ್ನನು ದೂರಮಾಡಿ ಎಂಬುದಾಗಿ ಗಣೇಶ ಹೇಳುತ್ತಾರೆ. ಚೆಲುವಾದ ಜೋಡಿಗಳಿಗೆ ಪ್ರಣಯ ಹಾಗೂ ಪ್ರೀತಿಯನ್ನು ಹಂಚಲು ಇಂದು ಉತ್ತಮ ಸಮಯ. ಈ ಎಲ್ಲಾ ಕ್ಷಣಗಳನ್ನು ನೀವು ನಂತರ ಇಷ್ಟಪಡುತ್ತೀರಿ.ಮೀನ ರಾಶಿಯ ವಿದ್ಯಾರ್ಥಿಗಳು ತಮ್ಮ ಶೈಕ್ಷಿಣಿಕ ಹಾದಿಯಲ್ಲಿ ನಿಧಾನವಾಗಿ ಸಾಗಲಿದ್ದಾರೆ. ಆದರೂ, ಅಪರಿಚಿತ ನೀರಿರುವ ಪ್ರದೇಶಗಳಿಂದ ದೂರವಿರುವಂತ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ನಿಮ್ಮ ಸಿಟ್ಟಿನ ಬಗ್ಗೆ ನಿಯಂತ್ರಣವಿರಿಸಿ ಇಲ್ಲವಾದಲ್ಲಿ ನಿಮ್ಮ ಉತ್ತಮ ದಿನವನ್ನು ಹಾಳುಮಾಡಬಹುದು.
Horoscope Today : 02 ಫೆಬ್ರವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
WhatsApp Group
Join Now