‘ನಾವು ಗ್ಯಾರಂಟಿ ಕೊಡಲ್ಲ, ನಾಳೆಯಿಂದ ನಿಲ್ಸೋಣ’- ಗ್ಯಾರಂಟಿ ಟೀಕಿಸೋರಿಗೆ ಗೃಹ ಸಚಿವ ಪರಂ ಟಕ್ಕರ್

Spread the love

ಐದು ಗ್ಯಾರಂಟಿ (Gurantee) ಘೋಷಣೆ ಮಾಡುವ ಮೂಲಕ ಕಾಂಗ್ರೆಸ್ (Congress) ಅಧಿಕಾರದ ಗದ್ದುಗೆಗೇರಿದೆ. ಆದರೆ ಗ್ಯಾರಂಟಿಗಳನ್ನು ಟೀಕಿಸುವವರ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಟೀಕಾಕಾರರ ವಿರುದ್ಧ ಡಾ. ಜಿ. ಪರಮೇಶ್ವರ್ (Dr. G Parameshwar) ಕಿಡಿಕಾರಿದ್ದಾರೆ.

‘ವಿರೋಧ ಪಕ್ಷದವರು ಪದೇ ಪದೇ ನಮ್ಮ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಾರೆ. ಗ್ಯಾರಂಟಿ ಕೊಡದೆ ರಸ್ತೆ, ಚರಂಡಿ ನಿರ್ಮಾಣ ಮಾಡಿದ್ದರೆ ಜನರು ಉದ್ಧಾರ ಆಗ್ತಾರಾ’? ಎಂದು ಗೃಹ ಸಚಿವ ಜಿ.ಪರಮೇಶ್ವರ್ ಪ್ರಶ್ನೆ ಮಾಡಿದ್ದಾರೆ.

ತುಮಕೂರಿನಲ್ಲಿ ಮಾತನಾಡಿದ ಪರಮೇಶ್ವರ್,‌ ‘ಗ್ಯಾರಂಟಿ ಯೋಜನೆಯಿಂದ ಜನರ ಜೀವನ ಉದ್ಧಾರ ಆಗಿದೆ. ಆದರೆ ಬರೀ ರಸ್ತೆ, ಚರಂಡಿಗಳನ್ನೇ ಮಾಡ್ತಾ ಇದ್ದರೆ ಜನರು ಉದ್ಧಾರ ಆಗ್ತಾರಾ’ ಎಂದು ಪ್ರಶ್ನೆ ಮಾಡಿದ್ದಾರೆ.

‘ಹಲವರು ಗ್ಯಾರಂಟಿಗಳನ್ನು ವಿರೋಧ ಮಾಡುತ್ತಿದ್ದಾರೆ. ಸುಖಾ ಸುಮ್ಮನೇ ಗ್ಯಾರಂಟಿ ಕಾರ್ಯಕ್ರಮವನ್ನು ಟೀಕೆ ಮಾಡುತ್ತಾರೆ. ಈ ಕಾರ್ಯಕ್ರಮ ಯಾರು ಒಪ್ಪೋದಿಲ್ಲವೋ ಅವರಿಗೆ ಒಂದು ಪ್ರಶ್ನೆ. ಈ ಜನ ಏನಾಗಬೇಕು? ಆಯ್ತಪ್ಪ ನಾವು ಗ್ಯಾರಂಟಿ ಕೊಡೋದಿಲ್ಲ. ನಾಳೆಯಿಂದ ನಿಲ್ಸಿ ಬಿಡೋಣ’ ಎಂದು ಪರಮೇಶ್ವರ್ ಹೇಳಿದರು.

‘ನಾವು ನುಡಿದಂತೆ ಗ್ಯಾರಂಟಿಗಳನ್ನು ನೀಡುತ್ತಿದ್ದೇವೆ‌: ಹಾಗಂತ ನಾವು ರಸ್ತೆ ಮಾಡೋದನ್ನು ನಿಲ್ಲಿಸಿಲ್ಲ. ಮನೆಗಳನ್ನು ಕಟ್ಟೋದನ್ನು ನಿಲ್ಲಿಸಿಲ್ಲ. ಯಾವ ಕಾರ್ಯಕ್ರಮವನ್ನೂ ನಿಲ್ಲಿಸಿಲ್ಲ. ಕೆಲಸ ಮಾಡಲು ಒಂದಿಷ್ಟು ನಿಧಾನ ಆಗಿರಬಹುದು’ ಎಂದು ಒಪ್ಪಿಕೊಂಡರು.

‘ಬಹಳ ಮುಖ್ಯವಾಗಿ ಮನುಷ್ಯನ ಜೀವನ ಸಾವಿರಾರು ವರ್ಷದ ಶೋಷಣೆ, ಅದು ಮುಂದುವರಿಯಬಾರದು ಅನ್ನೋದೇ ನಮ್ಮೆಲ್ಲರ ಉದ್ದೇಶ. ಅದಕ್ಕಾಗಿ ಗ್ಯಾರಂಟಿ ಕೊಡುತ್ತೇವೆ’ ಎಂದು ಪರಮೇಶ್ವರ್ ಸಮರ್ಥನೆ ಮಾಡಿಕೊಂಡಿದ್ದಾರೆ.

‘ಗ್ಯಾರಂಟಿ ರದ್ದು ಮಾಡಿದರೆ ಉಳಿಯುವ 58 ಸಾವಿರ ಕೋಟಿ ರೂಪಾಯಿ ಏನು ನಾವು ಕೊಡ್ತಾ ಇದ್ದೀವಿ, ಆ ಹಣದಿಂದ ರಸ್ತೆ ಮಾಡೋದ್ರಿಂದ, ಚರಂಡಿ ಮಾಡೋದ್ರಿಂದ ಅಥವಾ ಇನ್ನೇನೊ ಕಾರ್ಯಕ್ರಮ ಮಾಡೋದ್ರಿಂದ ಆ ಬಡವರ ಜೀವನ ಏನಾಗುತ್ತದೆ? ಉದ್ಧಾರ ಆಗುತ್ತಾ’ ಎಂದು ಪರಮೇಶ್ವರ್ ಪ್ರಶ್ನೆ ಮಾಡಿದ್ದಾರೆ. ‘ಭೌತಿಕ ಸೌಲಭ್ಯಕ್ಕಿಂತ ಜನರ ಜೀವನಕ್ಕೆ ಬೇಕಾದ ಕಾರ್ಯಕ್ರಮ ಕೊಡಬೇಕು’ ಎಂದು ಪ್ರಸ್ತಾಪ ಮಾಡಿದರು.

ಕಾಂಗ್ರೆಸ್‌ನ 5 ಗ್ಯಾರಂಟಿಗಳು ಯಾವ್ಯಾವು..?
ಗೃಹ ಜ್ಯೋತಿ: ಎಲ್ಲಾ ಮನೆಗಳಿಗೂ 200 ಯೂನಿಟ್‌ ಉಚಿತ ವಿದ್ಯುತ್‌
• ಗೃಹ ಲಕ್ಷ್ಮಿ: ಪ್ರತಿ ಮನೆ ಯಜಮಾನಿಗೆ ಪ್ರತಿ ತಿಂಗಳು ₹2000 ರೂ.
• ಅನ್ನ ಭಾಗ್ಯ: ಬಿಪಿಎಲ್‌ ಕುಟುಂಬಗಳಿಗೆ 10 ಕೆಜಿ ಆಹಾರ ಧಾನ್ಯ.
• ಯುವನಿಧಿ: ಎರಡು ವರ್ಷಗಳ ಕಾಲಕ್ಕೆ ನಿರುದ್ಯೋಗಿ ಭತ್ಯೆ – ಪದವೀಧರರಿಗೆ ತಿಂಗಳಿಗೆ ₹3000 ಮತ್ತು ಡಿಪ್ಲೋಮಾ ಮಾಡಿದವರಿಗೆ ತಿಂಗಳಿಗೆ ₹1500
• ಶಕ್ತಿ ಯೋಜನೆ: ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಸಾಮಾನ್ಯ ಬಸ್ಸುಗಳಲ್ಲಿ ಎಲ್ಲಾ ಮಹಿಳೆಯರಿಗೂ ಉಚಿತ ಪ್ರಯಾಣ. ಈ ಯೋಜನೆ ಎಲ್ಲಾ ಯೋಜನೆಗಳಲ್ಲೇ ಹಿಟ್ ಆಗಿರೋ‌ ಯೋಜನೆ.

WhatsApp Group Join Now

Spread the love

Leave a Reply