Hindu Property Act 2025 : ಈ ಸಂದರ್ಭದಲ್ಲಿ ಹೆಣ್ಣು ಮಗಳಿಗೆ ತಂದೆಯ ಆಸ್ತಿ ಪಡೆಯಲು ಸಾಧ್ಯ ಆಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಇದೀಗ ಮಹತ್ವದ ತೀರ್ಪನ್ನ ಹೊರಡಿಸಿದ್ದು, 2005ಕ್ಕೂ ಮೊದಲು ಒಂದು ವೇಳೆ ತಂದೆ ತೀರಿ ಹೋಗಿದ್ರೆ ಹೆಣ್ಣು ಮಕ್ಕಳಿಗೆ ಆಸ್ತಿ ಪಾಲಿಲ್ಲ. ಏನಿದು ಸುಪ್ರೀಂ ಕೋರ್ಟ್ ತೀರ್ಪು.? ತಿಳಿಯೋಣ.
2005 ಸೆಪ್ಟೆಂಬರ್ 9ರವರೆಗೆ ತಂದೆ ಬದುಕಿದ್ರೆ ಮಾತ್ರ ಅಣ್ಣ ತಮ್ಮಂದಿರಂತೆ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳು ಪಾಲು ಪಡೆಬಹುದು ಅಂತ ಹೇಳಿತ್ತು. 1956ರ ಹಿಂದೂ ಉತ್ತರಾಧಿಕಾರ ಕಾಯ್ದೆಗೆ 2005 ಸೆಪ್ಟೆಂಬರ್ 9ರಂದು ಮಹತ್ವದ ತೀರ್ಪನ್ನ ಕೂಡ ತರಲಾಗಿತ್ತು. ಅದಕ್ಕೂ ಮೊದಲು ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೆ ಪಾಲು ಇರಲಿಲ್ಲ. ಜೀವನ ನಿರ್ವಹಣೆಗೆ ಒಟ್ಟು ಕುಟುಂಬದಿಂದ ಹೆಣ್ಣುಮಕ್ಕಳು ನೆರವು ಕೊರಬಹುದಿತ್ತು.
ಇನ್ನು ಕಾಯ್ದೆಗೆ ತಿದ್ದುಪಡಿ ಆದ ನಂತರ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣುಮಕ್ಕಳು ಸಮಾನ ಪಾಲು ಪಡೆಯಲು ಅರ್ಹರು ಅಂತ ಹೇಳಲಾಗ್ತಾ ಇತ್ತು. ಇನ್ನು ಕಾಯ್ದೆ ತಿದ್ದುಪಡಿ ಆದ ನಂತರ 2004 ಡಿಸೆಂಬರ್ 20ಕ್ಕೂ ಮೊದಲು ಆಸ್ತಿ ಹಂಚಿಕೆಯಾಗಿದ್ದರೆ ಪಾಲು ಕೇಳುವಂತಿಲ್ಲ ಎಂಬ ನಿರ್ಧಾರವನ್ನ ವಿಧಿಸಲಾಗಿತ್ತು. ಆದರೆ ಈಗ ಸುಪ್ರೀಂ ಕೋರ್ಟ್ ಹೊಸ ನಿರ್ಬಂಧವನ್ನ ಕೂಡ ಸೇರಿಸಿದೆ.