2005ರ ಹಿಂದೂ ಉತ್ತರಾಧಿಕಾರ ಕಾಯ್ದೆಯ ಪ್ರಕಾರ ಹೆಣ್ಣುಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಸಮಾನ ಹಕ್ಕನ್ನ ನೀಡಿದೆ. ಆದರೆ ಇದೊಂದು ಹೆಣ್ಣು ಮಕ್ಕಳಿಗೆ ದೊಡ್ಡ ಶಕ್ತಿಯಾದರೂ ಕೂಡ ಕೆಲವೊಂದು ಕಾನೂನಿನ ಸಂದರ್ಭದಲ್ಲಿ ಹೆಣ್ಣುಮಕ್ಕಳಿಗೆ ಆಸ್ತಿ ಸಿಗದೆ ಇರಬಹುದು. ಆಕೆಗೆ ಆಸ್ತಿಯ ಪಾಲು ಸಿಗದಿರುವ ಸಾಧ್ಯತೆಗಳು ಕೂಡ ಈ ಸಮಯದಲ್ಲಿ ಹೆಚ್ಚಾಗಿರುತ್ತವೆ.
ತಂದೆಯ ಸ್ವಯಂ ಸಂಪಾದಿತ ಆಸ್ತಿ :- ತಂದೆ ತನ್ನ ಸ್ವಂತ ಗಳಿಕೆಯಿಂದ ಆಸ್ತಿಯನ್ನ ಗಳಿಸಿದರೆ ಅಥವಾ ಖರೀದಿ ಮಾಡಿದ್ರೆ ಅದರ ಮೇಲೆ ಅವರಿಗೆನೇ ಸಂಪೂರ್ಣವಾದ ಹಕ್ಕಿರುತ್ತದೆ. ಇದು ಪೂರ್ವಜರ ಆಸ್ತಿ ಅಲ್ಲದ ಕಾರಣ ತಂದೆ ಇಚ್ಚಿಸಿದವರಿಗೆ ಈ ಆಸ್ತಿಯನ್ನ ಮಾರಾಟ ಮಾಡಬಹುದು ಅಥವಾ ಉಡುಗೊರೆಯಾಗಿ ನೀಡಬಹುದು. ಈ ಸಂದರ್ಭದಲ್ಲಿ ವಿಲ್ ನಲ್ಲಿ ಮಗಳಿಗೆ ಪಾಲು ಇಲ್ಲದಿದ್ರೆ ಹಕ್ಕು ಸಿಗುವುದಿಲ್ಲ.
2005 ಕ್ಕಿಂತ ಮೊದಲು ಆದ ಕಾನೂನು ಬದ್ದ ವಿಭಜನೆ :- ಪೂರ್ವಜರ ಆಸ್ತಿಯನ್ನು 2005ರ ಅಕ್ಟೋಬರ್ 20 ಕ್ಕಿಂತ ಮೊದಲು ಕುಟುಂಬದ ಸದಸ್ಯರ ನಡುವೆ ಕಾನೂನು ಬದ್ಧವಾಗಿ ವಿಂಗಡಿಸಿ, ಅದನ್ನ ನೊಂದಾಯಿಸಿದರೆ ಆ ವಿಭಜನೆಯ ನಂತರ ಮಗಳು ಆಸ್ತಿಯಲ್ಲಿ ಹಕ್ಕನ್ನು ಒತ್ತಾಯಿಸಲು ಸಾಧ್ಯ ಆಗುವುದಿಲ್ಲ.
ಉಡುಗೊರೆಯಾಗಿ ನೀಡಿದ ಆಸ್ತಿ ಮಾನ್ಯವಾಗಿದ್ರೆ :- ಪೂರ್ವಜರ ಆಸ್ತಿಯನ್ನ ಕಾನೂನುಬದ್ದ ಉಡುಗೊರೆ ಪತ್ರ ಮೂಲಕ ಯಾರಿಗಾದರೂ ಹಸ್ತಾಂತರ ಮಾಡಿದ್ರೆ ಮತ್ತು ಆ ಉಡುಗೊರೆ ಮಾನ್ಯವಾಗಿದ್ರೆ ಮಗಳು ಆಸ್ತಿಯಲ್ಲಿ ಯಾವುದೇ ಹಕ್ಕನ್ನ ಕೇಳಲು ಬರುವುದಿಲ್ಲ.
ಸ್ವಯಂ ಪ್ರೇರಿತ ನಿರಾಕರಣೆ :- ಮಗಳು ತನ್ನ ಆಸ್ತಿಯ ಪಾಲನ್ನು ಸ್ವಯಂ ಪ್ರೇರಿತವಾಗಿ ಬಿಟ್ಟುಕೊಡುವ ಒಪ್ಪಂದಕ್ಕೆ ಸಹಿ ಹಾಕಿದ್ರೆ ಈ ಸಂದರ್ಭದಲ್ಲಿ ಆಕೆ ಹಕ್ಕನ್ನು ಕೇಳಲು ಸಾಧ್ಯ ಆಗುವುದಿಲ್ಲ
ಕಾನೂನುಬದ್ದ ವೀಲ್ ಮೂಲಕ ಹೊರಗೆ ಇಡುವಂತದ್ದು :- ಅಂದರೆ ತಂದೆ ಒಂದು ಕಾನೂನುಬದ್ದ ವೀಲ್ ನ್ನ ಬರೆದು ಅದರಲ್ಲಿ ಮಗಳನ್ನ ಆಸ್ತಿಯಿಂದ ಸ್ಪಷ್ಟವಾಗಿ ಹೊರಗಿಟ್ಟಿದ್ರೆ ಮಗಳಿಗೆ ಆ ಸಂದರ್ಭದಲ್ಲಿ ಆಸ್ತಿಯ ಪಾಲು ಸಿಗುವುದಿಲ್ಲ.
ಟ್ರಸ್ಟ್ ನಲ್ಲಿ ಇರ್ತ್ಯತ್ರಗೊಂಡಂತಹ ಆಸ್ತಿ :- ಅಂದ್ರೆ ಆಸ್ತಿಯನ್ನ ಕಾನೂನುಬದ್ಧವಾಗಿ ಟ್ರಸ್ಟ್ ಗೆ ವರ್ಗಾಯಿಸಿದ್ರೆ ಅಥವಾ ಬೇರೆ ಕಾನೂನು ಬದ್ಧ ವಿಧಾನಗಳ ಮೂಲಕ ಹಸ್ತಾಂತರ ಮಾಡಿದ್ರೆ ಮಗಳಿಗೆ ಆಸ್ತಿಯ ಪಾಲು ಸಿಗೋದಿಲ್ಲ
ಟ್ರಸ್ಟ್ ಗೆ ವರ್ಗಾಯಿಸಿದ ಆಸ್ತಿ :- ಪೂರ್ವಜರ ಆಸ್ತಿಯನ್ನ ಟ್ರಸ್ಟ್ ನಲ್ಲಿ ಒಂದುವೇಳೆ ಇತ್ಯರ್ಥಗೊಂಡರೆ ಅಂದರೆ ಪೂರ್ವಜರ ಆಸ್ತಿಯನ್ನ ಟ್ರಸ್ಟ್ ಮೂಲಕ ಅಥವಾ ಕಾನೂನುಬದ್ಧವಾಗಿ ಬೇರೆಯವರಿಗೆ ಹಸ್ತಾಂತರ ಮಾಡಿದ್ರೆ ಮಾತ್ರ ಈ ಹಸ್ತಾಂತರ ಒಂದು ವೇಳೆ ಮಾನ್ಯವಾಗಿದ್ರೆ ಮಗಳಿಗೆ ಈ ಆಸ್ತಿ ಮೇಲೆ ಯಾವುದೇ ಹಕ್ಕು ಇರುವುದಿಲ್ಲ.