ಗೋವು ಸಾಗಿಸುತ್ತಿದ್ದ ಲಾರಿ ತಡೆದಿದ್ದಕ್ಕೆ ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ಹಲ್ಲೆ

Spread the love

ಗೋವುಗಳನ್ನು ಸಾಗಿಸುತ್ತಿದ್ದ ಲಾರಿಗಳನ್ನು ತಡೆದು, ಅಕ್ರಮ ಗೋವು ಸಾಗಣೆ ಮಾಡಲಾಗುತ್ತಿದೆಯೇ ಎಂದು ಪರಿಶೀಲನೆ ಮಾಡಿದ್ದಕ್ಕೆ ಇಬ್ಬರು ಹಿಂದು ಕಾರ್ಯಕರ್ತರ ಮೇಲೆ ಅನ್ಯಕೋಮಿನ ಯುವಕರು ಹಲ್ಲೆ ಮಾಡಿದ ಟನೆ ನಗರದ ರಿಂಗ್ ರಸ್ತೆಯ ರಾಮನಗರದ ಬಳಿ ಬುಧವಾರ ನಡೆದಿದೆ.

ಹಿಂದು ಕಾರ್ಯಕರ್ತರಾದ ರೋಹಿತ್ ಪಿಸ್ಕೆ, ಅನೀಲ ಹಲ್ಲೆಗೊಳಗಾದವರು. ಗೋವುಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ತಡೆದಿರುವ ಹಿಂದು ಕಾರ್ಯಕರ್ತರಾದ ರೋಹಿತ್, ಅನೀಲ ಸೇರಿ ಇತರರು ಅಕ್ರಮ ಗೋವುಗಳು ಇವೆಯೇ ಎಂದು ಪ್ರಶ್ನಿಸಿ, ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಸ್ಥಳಿಯ ಅನ್ಯಕೋಮಿನ ಯುವಕರು ದಾಖಲೆ ಜತೆಗೆ, ಅನುಮತಿ ಪಡೆದು ಗೋವುಗಳ ಸಾಗಣೆ ಮಾಡುತ್ತಿರುವ ವಾಹವನ್ನು ತಡೆಯುತ್ತೀರಾ ಎಂದು ಧಮ್ಕಿ ಹಾಕಿದ್ದಾರೆ.

ಈ ವೇಳೆ ಮಾತಿನ ಚಕಮಕಿ ನಡೆದಿದ್ದು, ರೋಹಿತ್ ಮತ್ತು ಅನೀಲ ಮೇಲೆ ಮೂರ್ನಾಲ್ಕು ಜನರು ಕೂಡಿ ಕೈಗಳಿಂದ ಕಟ್ಟಿಗೆ ತುಂಡಿನಿಂದ ಹಲ್ಲೆ ಮಾಡಿದ ಹಲ್ಲೆಯ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು,ಸಬ್ ಅರ್ಬನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ. ಶಿವಸೇನೆಯ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡು ದಾಖಲಾದ ಹಿಂದೂ ಕಾರ್ಯಕರ್ತರ ಆರೋಗ್ಯ ವಿಚಾರಿಸಿದರು.

WhatsApp Group Join Now


Spread the love

Leave a Reply