ಹೃದಯ ವೈಫಲ್ಯ ಪ್ರಕರಣಗಳು ಹೆಚ್ಚಳ: ಇದಕ್ಕೆ ಕಾರಣವೇನು.? ಲಕ್ಷಣಗಳ ಬಗ್ಗೆ ವೈದ್ಯರ ಎಚ್ಚರಿಕೆ!

Spread the love

ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿತ ಸಮಸ್ಯೆಗಳು ಹೆಚ್ಚುತ್ತಿರುವ ಹಿನ್ನೆಲೆ ಹೃದಯ ವೈಫಲ್ಯ (Heart Failure) ಕುರಿತು ವೈದ್ಯರು ಮಹತ್ವದ ಎಚ್ಚರಿಕೆ ನೀಡಿದ್ದಾರೆ. ಹೃದಯವು ದೇಹಕ್ಕೆ ಅಗತ್ಯವಾದಷ್ಟು ರಕ್ತವನ್ನ ಸರಿಯಾಗಿ ಪಂಪ್ ಮಾಡಲಾಗದ ಸ್ಥಿತಿಯನ್ನ ಹೃದಯ ವೈಫಲ್ಯ ಎಂದು ಕರೆಯಲಾಗುತ್ತದೆ.

ಇಂದು ಚಿಕ್ಕಮಕ್ಕಳಲ್ಲಿಯೂ ಹಾರ್ಟ್‌ ಅಟ್ಯಾಕ್‌ ಕಾಮನ್‌ ಆಗಿದೆ. ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯೇ ಹೃದಯ ವೈಫಲ್ಯಕ್ಕೆ ಪ್ರಮುಖ ಕಾರಣವೆಂದು ತಿಳಿದುಬಂದಿದೆ.

ವೈದ್ಯರ ಪ್ರಕಾರ, ಹೈ ಬ್ಲಡ್ ಪ್ರೆಶರ್, ಡಯಾಬಿಟಿಸ್, ಹೃದಯಾಘಾತದ ಹಿಸ್ಟರಿ, ಧೂಮಪಾನ ಮತ್ತು ಕಳಪೆ ಜೀವನಶೈಲಿಯೇ ಹೃದಯಾಘಾತಕ್ಕೆ ಪ್ರಮುಖ ಕಾರಣಗಳಾಗಿವೆ. ಇವುಗಳನ್ನ ನಿರ್ಲಕ್ಷಿಸಿದರೆ ನಿಮ್ಮ ಸಮಸ್ಯೆ ಗಂಭೀರವಾಗುವ ಸಾಧ್ಯತೆ ಇದೆ.

ಹೃದಯ ವೈಫಲ್ಯದ ಪ್ರಮುಖ ಲಕ್ಷಣಗಳಲ್ಲಿ ಉಸಿರಾಟದ ತೊಂದರೆ, ದಣಿವು, ಕಾಲುಗಳಲ್ಲಿ ಊತ ಮತ್ತು ಹೃದಯದ ವೇಗದಲ್ಲಿ ಏರಿಳಿತ ಸೇರಿವೆ. ಕೆಲವೊಮ್ಮೆ ಮಲಗಿದಾಗಲೂ ಉಸಿರಾಟ ಕಷ್ಟವಾಗುತ್ತದೆ. ನಿಮ್ಮಲ್ಲಿಯೂ ಈ ಲಕ್ಷಗಳು ಕಂಡುಬಂದರೆ ಕೂಡಲೇ ಎಚ್ಚೆತ್ತುಕೊಳ್ಳಬೇಕು. ಸರಿಯಾದ ಸಮಯಕ್ಕೆ ಸರಿಯಾದ ಚಿಕಿತ್ಸೆ ತೆಗೆದುಕೊಂಡರೆ ನೀವು ಅಪಾಯದಿಂದ ಪಾರಾಗಬಹುದು. ಇಲ್ಲದಿದ್ದರೆ ನಿಮ್ಮ ಜೀವಕ್ಕೆ ಅಪಾಯ ಎದುರಾಗುತ್ತದೆ. ಹೀಗಾಗಿ ಈ ಬಗ್ಗೆ ನೀವು ಎಚ್ಚರಿಕೆ ವಹಿಸಬೇಕು.

ಆರೋಗ್ಯಕರ ಆಹಾರ ಪದ್ಧತಿ, ನಿಯಮಿತ ವ್ಯಾಯಾಮ ಮತ್ತು ಒತ್ತಡ ನಿಯಂತ್ರಣವನ್ನ ಪಾಲಿಸುವಂತೆ ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ. ಆರಂಭದಲ್ಲೇ ಲಕ್ಷಣಗಳನ್ನ ಗುರುತಿಸಿ ಚಿಕಿತ್ಸೆ ಪಡೆದರೆ ಹೃದಯ ವೈಫಲ್ಯವನ್ನ ನಿಯಂತ್ರಿಸಬಹುದು ಎಂಬುದು ವೈದ್ಯರ ಸಲಹೆಯಾಗಿದೆ. ಹೀಗಾಗಿ ಹೃದಯಾಘಾತ ತಪ್ಪಿಸಲು ನೀವು ಆಗಾಗ ನಿಮ್ಮ ಆರೋಗ್ಯವನ್ನ ತಪಾಸಣೆ ಮಾಡಿಕೊಳ್ಳುವುದು ಉತ್ತಮ. ಅಲ್ಲದೇ ನಿಮ್ಮ ಜೀವನಶೈಲಿ ಮತ್ತು ಆಹಾರ ಪದ್ಧತಿಯನ್ನೂ ಆರೋಗ್ಯಕರವಾಗಿಟ್ಟುಕೊಳ್ಳುವುದು ಉತ್ತಮ.

(ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ತಜ್ಞ ಮೂಲಗಳ ಮಾಹಿತಿಯನ್ನ ಆಧರಿಸಿದೆ. ಇದನ್ನ Kannada News Time ದೃಢಪಡಿಸುವುದಿಲ್ಲ. ಇಲ್ಲಿನ ಸಲಹೆಗಳನ್ನ ಪಾಲಿಸುವ ಮುನ್ನ ತಜ್ಞರ ಸಲಹೆ ಪಡೆಯುವುದು ಉತ್ತಮ.)

WhatsApp Group Join Now

Spread the love

Leave a Reply