ಸಮಿಶ್ರ ಸರ್ಕಾರ ಇದ್ದಾಗ ನನಗೆ ದೆಹಲಿ ಬಿಜೆಪಿ ನಾಯಕರಿಂದ ಕರೆ ಬಂದಿತ್ತು. ನೀವು ಜೈಲಿಗೆ ಹೋಗುತ್ತಿರೊ ಅಥವಾ ಡಿಸಿಎಂ ಆಗುತ್ತಿರೋ ಅಂದಾಗ ಪಕ್ಷ ನಿಷ್ಠೆ ಉಳ್ಳವನಾಗಿದ್ದರಿಂದ ನಾನು ಜೈಲಿಗೆ ಹೋದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದರು.
ಈ ವಿಚಾರವಾಗಿ HD ಕುಮಾರಸ್ವಾಮಿ ನನಗೂ ಮುಖ್ಯಮಂತ್ರಿ ಆಫರ್ ಬಂದಿತ್ತು ಎಂದು ಸ್ಪೋಟಕ್ಕೆ ಹೇಳಿಕೆ ನೀಡಿದ್ದಾರೆ.
ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ, ಬಿಜೆಪಿಯಿಂದ ಡಿಸಿಎಂ ಆಫರ್ ಇತ್ತು ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ನನಗೆ ಮುಖ್ಯಮಂತ್ರಿ ಸ್ಥಾನದ ಆಫರ್ ಇರಲಿಲ್ಲವೇ? ನಾನು ಹೋಗಿದ್ದರೆ ಈಗಲೂ ನಾನು ಮುಖ್ಯಮಂತ್ರಿ ಆಗಿಯೇ ಇರುತ್ತಿದ್ದೆ. ಸದ್ಯಕ್ಕೆ ಅದನ್ನು ಬಿಟ್ಟಾಕಿ ಎಂದು ಮಂಡ್ಯದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಗೆ ಎಚ್ ಡಿ ಕುಮಾರಸ್ವಾಮಿ ತಿರುಗೇಟು ನೀಡಿದರು.
ಇನ್ನು ರಾಜ್ಯದಲ್ಲಿ ಆರ್‌ಎಸ್‌ಎಸ್ ಚಟುವಟಿಕೆ ನಿಷೇಧ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು RSS ಮತ್ತು ಭಾನು ಮುಷ್ತಾಕ್ ವಿಚಾರವಾಗಿ ಪ್ರಾಮುಖ್ಯತೆ ಕೊಡಲ್ಲ. ರಾಜ್ಯದಲ್ಲಿ ಮಳೆ ಅನಾಹುತದಿಂದ ರೈತರು ಸಾಕಷ್ಟು ಸಂಕಷ್ಟದಲ್ಲಿದ್ದಾರೆ. ಅದನ್ನು ಬಗೆಹರಿಸಿ ನಂತರ ಉಳಿದಿದ್ದನ್ನು ಚರ್ಚೆ ಮಾಡೋಣ ಎಂದು ಬೆಂಗಳೂರಿನಲ್ಲಿ ಎಚ್ ಡಿ ಕುಮಾರಸ್ವಾಮಿ ತಿಳಿಸಿದರು.

ನನಗೂ ಮುಖ್ಯಮಂತ್ರಿ ಆಫರ್ ಇತ್ತು : ಡಿಸಿಎಂ ಡಿಕೆ ಶಿವಕುಮಾರ್ ಬಳಿಕ ಎಚ್ ಡಿ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ
WhatsApp Group
Join Now