ಜೆಡಿಎಸ್ ಪಕ್ಷದ ಬೆಳ್ಳಿ ಹಬ್ಬದ ಹಿನ್ನಲೆಯಲ್ಲಿ ಇಂದು ಹಾಸನದಲ್ಲಿ ಬೃಹತ್ ಸಮಾವೇಶದ ಮೂಲಕ ಜೆಡಿಎಸ್ ಶಕ್ತಿ ಪ್ರದರ್ಶನ ಮಾಡಿದೆ. ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದರು.
ಪ್ರಜ್ವಲ್ ರೇವಣ್ಣ ಕೇಸ್ ನಲ್ಲಿ ಆರೋಪ ಸಾಬೀತುಪಡಿಸಿದ ಪೊಲೀಸ್ ಅಧಿಕಾರಿಗಳಿಗೆ 30 ಲಕ್ಷ ಹಣವನ್ನು ಸರ್ಕಾರವು ಬಹುಮಾನವಾಗಿ ಘೋಷಣೆ ಮಾಡಿರುವ ವಿಚಾರವನ್ನು ಅವರು ಪ್ರಸ್ತಾಪಿಸಿದರು.
ರಾಜ್ಯ ಸರ್ಕಾರದ ಧೋರಣೆಗಳ ವಿರುದ್ಧ ಕಿಡಿಕಾರಿದ ಕುಮಾರಸ್ವಾಮಿ, ರಾಜ್ಯದಲ್ಲಿ ಈ ಹಿಂದೆ ಕಾಡುಗಳ್ಳ ವೀರಪ್ಪನ್ ನನ್ನು ಹಿಡಿಯಲು ಪ್ರಾಣ ಪಣಕ್ಕಿಟ್ಟು ಕಾಡಿಗೆ ಹೋಗಿದ್ದ ಪೊಲೀಸರಿಗೆ ದೇವೇಗೌಡರು ಉಡುಗೊರೆ ನೀಡಿದ್ದರು. ಆದರೆ ಈಗ ಯಾವುದೋ ಅಧಿಕಾರಿಗಳಿಗೆ 30 ಲಕ್ಷ ರೂ ಉಡುಗೊರೆ ಕೊಟ್ಟು ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖೆಯನ್ನು ತಮಗೆ ಬೇಕಾದಂತೆ ಮಾಡಿಸಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.
ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾದ ಎಸ್ಐಟಿ ಅಧಿಕಾರಿಗಳಿಗೆ 30 ಲಕ್ಷ ಬಹುಮಾನ ನೀಡಿದ್ದಾರೆ ಎಂದು ಹೆಚ್ಡಿ ಕುಮಾರಸ್ವಾಮಿ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸರ್ಕಾರದ ಅಧಿಕಾರಿಗಳನ್ನು ಆಡಳಿತ ನಡೆಸುತ್ತಿರುವವರು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಅವರು ಕುಟುಕಿದರು.
ರಾಜ್ಯ ಸರ್ಕಾರದವರು ತಮಗೆ ಬೇಕಾದಂತೆ ಪ್ರಜ್ವಲ್ ರೇವಣ್ಣ ಕೇಸ್ ತನಿಖೆ ಮಾಡಿಸಿದ್ದಾರೆ : ಹೆಚ್ ಡಿ ಕುಮಾರಸ್ವಾಮಿ ಕಿಡಿ
WhatsApp Group
Join Now