ವಿಶ್ವ ಪ್ರಸಿದ್ದ ಕೊಪ್ಪಳ (Koppala) ಜಿಲ್ಲೆಯ ಹನುಮ ಜನ್ಮಸ್ಥಳ ಅಂಜನಾದ್ರಿಯಲ್ಲಿ ( Anjanadri Hill) ಹನುಮ ಮಾಲೆ ವಿಸರ್ಜನೆ ಪ್ರಯುಕ್ತ ಭಕ್ತಸ್ತೋಮವೇ ಹರಿದು ಬಂದಿದೆ. ಸಹಸ್ರಾರು ಹನುಮ ಮಾಲಾಧಾರಿಗಳು ಸರತಿ ರಾಮ ಹನುನ ನಾಮ ಸ್ಮರಣೆ ಮಾಡುತ್ತಲೇ ಮಾಲೆ ವಿಸರ್ಜನೆ ಮಾಡಿದರು. ಇದರ ಮಧ್ಯೆ ಭಕ್ತನೋರ್ವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ (Lawrence Bishnoi) ಫೋಟೋ ಹಿಡಿದು ಬಂದು ಗಮನ ಸೆಳೆದಿದ್ದಾನೆ.
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕೋಳಿವಾಡ ನಿವಾಸಿಯಾಗಿರುವ ರಾಜು ಎಂಬ ಹನುಮ ಭಕ್ತ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ ಫೋಟೋ ಹಿಡಿದು ಹನುಮ ಜನ್ಮಸ್ಥಳ ಆಂಜನಾದ್ರಿಗೆ ಬಂದಿದ್ದಾನೆ.
ಬರೋಬ್ಬರಿ 9 ದಿನಗಳ ಕಾಲ ಹನುಮ ಮಾಲೆಯನ್ನು ಧರಿಸಿದ್ದ ರಾಜು, ಬಹಿರಂಗವಾಗಿ ತಾನು ಲಾರೆನ್ಸ್ ಬಿಷ್ಣೋಯಿ ಅಭಿಮಾನಿ ಎಂದು ಘೋಷಿಸಿಕೊಂಡು, ಅಚ್ಚರಿ ಮೂಡಿಸಿದ್ದಾರೆ.
ರಾಜು ತಾನು ಲಾರೆನ್ಸ್ ಬಿಷ್ಣೋಯಿ ಅಭಿಮಾನಿ ಎಂದು ಹೇಳಿಕೊಂಡಿದ್ದು, ‘ಲಾರೆನ್ಸ್ ಬಿಷ್ಣೋಯಿಯಿಂದ ದೇಶ ಉಳಿದಿದೆ ಎಂಬ ಮನೋಭಾವ ನಮ್ಮದು’ ಎಂದು ಹೇಳಿರುವುದು ಚರ್ಚೆಗೆ ಕಾರಣವಾಗಿದೆ. ಹನುಮ ಭಕ್ತನಾಗಿ ಮಾಲೆ ಧರಿಸಿರುವ ಯುವಕ ಗ್ಯಾಂಗ್‌ಸ್ಟರ್‌ನ ಫೋಟೋ ಹಿಡಿದು ಬಂದಿರುವುದು ಅಚ್ಚರಿಯ ಜೊತೆ ಜೊತೆಗೆ ಆತಂಕಕ್ಕೆ ಕಾರಣವಾಗಿದೆ.
700 ಸದಸ್ಯರ ಸಾಮ್ರಾಜ್ಯಕ್ಕೆ ಲಾರೆನ್ಸ್ ಡಾನ್
ಲಾರೆನ್ಸ್ ಬಿಷ್ಣೋಯಿ ಈಗ 700 ಸದಸ್ಯರ ಜಾಲ ಹೊಂದಿದ ಭೂಗತ ಸಾಮ್ರಾಜ್ಯಕ್ಕೆ ಡಾನ್. ಭಾರತ ಮಾತ್ರವಲ್ಲ. ಕೆನಡಾದಂತಹ ಹಲವು ರಾಷ್ಟ್ರಗಳಲ್ಲೂ ಹಬ್ಬಿದೆ ಬಿಷ್ಣೋಯಿ ಗ್ಯಾಂಗ್ ವಿಷಬೇರು. ಕೆನೆಡಾದಲ್ಲಿ ಕುಳಿತೇ ಭಾರತದಲ್ಲಿ ಆಪ ರೇಟ್ ಮಾಡೋ ಗೋಲ್ಡಿ ಬ್ರಾರ್, ಈ ಲಾರೆನ್ಸ್ ಬಿಷ್ಣೊಯಿ ಬಲಗೈ ಭಂಟ. ಇವರಿಬ್ಬರ ಕಾಲೇಜು ಗೆಳೆಯ ವಿಕ್ಕಿಯನ್ನ ಕೊಂದ ಹಂತಕರಿಗೆ ಹಣಕಾಸು ಸೇರಿದಂತೆ ಸಕಲ ನೆರವು ನೀಡಿದ್ದೇ ಸಿಂಗರ್ ಸಿಧು ಮೂಸೇವಾಲಾ ಜೀವಕ್ಕೆ ಸಂಚಕಾರ ಬರಲು ಕಾರಣ.
ಕೃಷ್ಣಮೃಗ ಕೊಂದ ಸಲ್ಮಾನ್ ಈಗ ‘ಟಾರ್ಗೆಟ್’
ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆಗಾಗಿ ಪ್ರಾಣವನ್ನೇ ಮುಡಿಪಾಗಿಟ್ಟ ಬಿಷ್ಣೋಯಿ ಸಮುದಾಯಕ್ಕೆ ಸೇರಿದ ಭೂಗತ ಪಾತಕಿ ಲಾರೆನ್ಸ್ ಬಿಷ್ಣೋಯಿ, ಕೃಷ್ಣಮೃಗ ಬೇಟೆಯಾಡಿದ ಸಲ್ಮಾನ್ ಖಾನ್ ಹಿಂದೆ ಬಿದ್ದಿದ್ದಾನೆ. ಪ್ರಕೃತಿಗೆ ವಿರುದ್ಧವಾಗಿ ನರಮಾನವರ ಕೊಲೆ, ಸುಲಿಗೆ ಮಾಡೋದನ್ನೇ ವೃತ್ತಿ ಮಾಡಿಕೊಂಡ ನರರಕ್ಕಸ ಲಾರೆನ್ಸ್ ಬಿಷ್ಣೋಯಿ, ಕೃಷ್ಣಮೃಗದಂತಹ ಕಾಡುಪ್ರಾಣಿಗಳ ಬಗ್ಗೆ ಮಾತ್ರ ಮಮಕಾರ ಬಿಟ್ಟಿಲ್ಲ. ಇದರ ಫಲವೇ ಈಗ ಟಾರ್ಗೆಟ್ ಸಲ್ಮಾನ್ ಖಾನ್.
ಬಿಷ್ಣೋಯಿ ಹಿಸ್ಟರಿ ಸ್ವಲ್ಪ ಕೆದಕೋದಾದ್ರೆ, ಪಂಜಾಬ್ ನಲ್ಲಿ ಪೊಲೀಸ್ ಇಲಾಖೆಯಲ್ಲಿದ್ದ ತಂದೆ, ಆನಂತರ ಹೊರ ಳಿದ್ದು ಕೃಷಿಯತ್ತ. ಇವನು ಹುಟ್ಟಿದಾಗ ಬೆಳ್ಳಗೆ ಹೊಳೆಯುತ್ತಿದ್ದ ಕಾರಣ, ಈತನ ತಾಯಿ ಸುನೀತ ಇಟ್ಟ ಹೆಸರು ಲಾರೆನ್ಸ್ ಅಂತಾ. ತಕ್ಷಣಕ್ಕೆ ಕ್ರೈಸ್ತ ಹೆಸರಂತೆ ಕಂಡ್ರೂ, ಪಕ್ಕಾ ಬಿಷ್ಣೋಯಿ ಪರಿವಾರಕ್ಕೆ ಸೇರಿದ್ದ ಲಾರೆನ್ಸ್, ಆನಂತರ ಓದಿದ್ದು ಚಂಡೀಗಢದಲ್ಲಿ.
ವಿದ್ಯಾರ್ಥಿ ಸಂಘದ ಎಲೆಕ್ಷನ್ನಲ್ಲಿ ಸಕ್ರಿಯ ಪಾತ್ರ ವಹಿಸಿದ ಲಾರೆನ್ಸ್, ಅಲ್ಲೇ ಜಗ್ಗು ಭಗವಾನ್ಪುರಿ ಎಂ ಬಾತನ ಸಹವಾಸಕ್ಕೆ ಬಿದ್ದ. , ಇಷ್ಟರಲ್ಲಾಗಲೇ ಭೂಗತ ಪಾತಕದ ನಂಟು ಬೆಳೆಸಿದ್ದ ಲಾರೆನ್ಸ್, ಗೆದ್ದ ಎದುರಾಳಿ ಕ್ಯಾಂಡಿ ಡೇಟ್ಗಳ ಮೇಲೆಯೇ ಗನ್ ಗುರಿ ಇಡುವಷ್ಟು ನಟೋರಿಯಸ್ ಆಗಿ ಬೆಳೆದುನಿಂತಿದ್ದ. ಅಷ್ಟರಲ್ಲಿ ಜೈಲೂ ಮಾಮೂಲು.
ಹೀಗೆ ಪಾತಕಲೋಕದಲ್ಲಿ ಒಂದೊಂದೇ ಹೆಜ್ಜೆ ಮೇಲೇಳುತ್ತಾ ಬಂದ ಲಾರೆನ್ಸ್ ಬಿಷ್ಣೋಯಿ, ಎಂದಿಗೂ ತನ್ನ ಕಾಲೇಜು ಸ್ನೇಹಿತರನ್ನ ಬಿಟ್ಟುಕೊಡಲಿಲ್ಲ. ಕೆನಡಾದಲ್ಲಿ ಅಬ್ಸ್ಕಾಂಡ್ ಆಗಿರೋ ಗೋಲ್ಡಿ ಬ್ರಾರ್, ಕಳೆದ ವರ್ಷ ಶತ್ರುಗಳ ಗುಂಡಿಗೆ ಬಲಿಯಾದ ವಿಕ್ಕಿ ಮುಂತಾದವರೆಲ್ಲಾ ತನ್ನ ಕಾಲೇಜು ಗೆಳೆಯರೇ. 30 ವರ್ಷದ ಬಿಷ್ಣೋಯಿ ತಲೆ ಮೇಲಿರೋ ಕೊಲೆ, ಸುಲಿಗೆ ಕೇಸ್ಗಳ ಸಂಖ್ಯೆ 50ಕ್ಕೂ ಹೆಚ್ಚು.
4-5 ರಾಜ್ಯಗಳ ಬಿಷ್ಣೋಯಿ ‘ಸಾಮ್ರಾಜ್ಯ’
ನಿಧಾನವಾಗಿ ತನ್ನ ಅಂಡರ್ವರ್ಲ್ಡ್ ಎಂಪೈರ್ ವಿಸ್ತರಿಸಿಕೊಂಡ ಬಿಷ್ಣೋಯಿಗೆ, ಈಗ ರಾಜಸ್ತಾನ, ದೆಹಲಿ, ಪಂಜಾಬ್, ಹರ್ಯಾಣ, ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ತನ್ನದೇ ಆದ ನೆಟ್ವರ್ಕ್ ಇದೆ. ಕೂತಲ್ಲಿಂದಲೇ ಯಾರನ್ನ ಬೇಕಾದ್ರೂ ಉಡೀಸ್ ಮಾಡಬಲ್ಲಷ್ಟು ವಿಶಾಲ ಸಂಪರ್ಕ ಜಾಲವಿದೆ. ಇಂಟರ್ನೆಟ್ ಕಾಲ್ಗಳ ಮೂಲಕವೇ ವಿದೇಶಿ ನೆಟ್ವರ್ಕ್ ಮುಖಾಂತರ ಡೀಲ್ ಕುದುರಿಸೋ ಈ ಡಾನ್, ಪಂಜಾಬ್ ಸಿಂಗರ್, ಕಾಂಗ್ರೆಸ್ ಮುಖಂಡ ಸಿಧು ಮೂಸೇವಾಲಾನನ್ನ ತಿಹಾರ್ ಜೈಲಿನಲ್ಲಿದ್ದುಕೊಂಡೇ ಮುಗಿಸಿದ್ದ.
ಲಾರೆನ್ಸ್ ಬಿಷ್ಣೋಯ್ ಪೋಟೋ ಹಿಡಿದು ಅಂಜನಾದ್ರಿಗೆ ಬಂದ ಬೆಳಗಾವಿ ಮೂಲದ ಹನುಮ ಭಕ್ತ
WhatsApp Group
Join Now