ಅವರಪ್ಪರಾಣೆ ಸಿಎಂ ಆಗಲ್ಲ ಎಂದಿದ್ದ ಸಿದ್ದರಾಮಯ್ಯನವರು ನಮ್ಮ ಮನೆ ಬಾಗಿಲಿಗೆ ಬಂದಿದ್ದರು : ಎಚ್‌.ಡಿ ಕುಮಾರಸ್ವಾಮಿ

Spread the love

2018ರಲ್ಲಿ ಸಿದ್ದರಾಮಯ್ಯ ಅವರಪ್ಪರಾಣೆ ಹೆಚ್‌ಡಿಕೆ ಸಿಎಂ ಆಗಲ್ಲ ಎಂದಿದ್ದರು. ಆಮೇಲೆ ನಮ್ಮ ಮನೆ ಬಾಗಿಲಿಗೆ ಬಂದಿದ್ದರು ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಹೇಳಿದರು.

ಇನ್ನೂ ಯಾವುದೇ ಕಾರಣಕ್ಕೂ ಜೆಡಿಎಸ್ ಅಧಿಕಾರಕ್ಕೆ ಬರಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ, 2018ರಲ್ಲಿ ಸಿದ್ದರಾಮಯ್ಯ ಅವರಪ್ಪರಾಣೆ ಹೆಚ್‌ಡಿಕೆ ಸಿಎಂ ಆಗಲ್ಲ ಎಂದಿದ್ದರು.

ಆಮೇಲೆ ನಮ್ಮ ಮನೆ ಬಾಗಿಲಿಗೆ ಬಂದಿದ್ದರು. ಈ ಸರ್ಕಾರದ ಆಯಸ್ಸು 2 ವರ್ಷ ಮಾತ್ರ, 2028ಕ್ಕೆ ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ. ನನಗೆ ಸಿಎಂ ಆಗೋದು ಮುಖ್ಯವಲ್ಲ. ನಾಡಿನಲ್ಲಿ ಜನತೆಯ ಸರ್ಕಾರ ತರೋದು ಮುಖ್ಯ ಎಂದು ಹೇಳಿದರು.

ಮಾತನಾಡುವ ಚಪಲ ಎಂದ ಡಿಕೆ ಸುರೇಶ್‌ಗೆ ಕೌಂಟರ್ ಕೊಟ್ಟ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರ, ನನಗೆ ಮಾತಾಡೋ ಚಪಲ, ಅವನಿಗೆ ಲೂಟಿ ಚಪಲ ಎಂದು ವಾಗ್ದಾಳಿ ನಡೆಸಿದರು.

ರಾಮನಗರದಲ್ಲಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಡಿಕೆಶಿ ತಮ್ಮ ಮೊನ್ನೆ ಏನೋ ಹೇಳವ್ನೆ, ನಮಗೆ ಮಾತನಾಡುವ ಚಪಲ ಅಂದವ್ನೆ ಹೌದು. ನನಗೆ ಮಾತನಾಡುವ ಚಪಲವಾದರೆ, ನನಗೆ ಮಾತಾಡುವ ಚಪಲ. ಅವನಿಗೆ ಲೂಟಿ ಚಪಲ. ಇನ್ನೂ ಅಧಿಕಾರ ಯಾರಿಗೂ ಶಾಶ್ವತವಲ್ಲ, ನನ್ನನ್ನು ರಾಮನಗರದಿಂದ ಓಡಿಸಲು ಆಗಲ್ಲ. 2028ಕ್ಕೆ ಗೆದ್ದು ನಿಜವಾದ ರಾಮರಾಜ್ಯ ತರೋದು ಶತಸಿದ್ಧ ಎಂದು ಶಪಥ ಮಾಡಿದರು.

ಡಿಕೆಶಿ ಜೊತೆ ಚರ್ಚೆ ಅನಾವಶ್ಯಕ. ನಾನು ಆ ವ್ಯಕ್ತಿ ಜೊತೆ ಹೋಲಿಕೆ ಮಾಡಿಕೊಳ್ಳಲ್ಲ. ನಾನು ಕಲ್ಲುಬಂಡೆ ಒಡೆದು ಜೀವನ ಮಾಡಿಲ್ಲ. ಯಾರ ಜಮೀನನ್ನೂ ಕಬಳಿಸಿಲ್ಲ ಎಂದ ಡಿಕೆ ಸಹೋದರರ ವಿರುದ್ಧ ಗುಡುಗಿದರು.

WhatsApp Group Join Now

Spread the love

Leave a Reply