ಭಾರತದಲ್ಲಿ ಹೊಸ ಜಿಎಸ್ಟಿ ದರಗಳು ಜಾರಿಯಾಗಿದೆ. ಜಾರಿಗೆ ಬಂದಿರುವಂತಹ ಹೊಸ ಸರಕು ಮತ್ತು ಸೇವಾ ತೆರಿಗೆ ದರಗಳು ದೇಶದ ಆರ್ಥಿಕತೆಯಲ್ಲಿ ಮಹತ್ವದ ಬದಲಾವಣೆಯನ್ನ ತರಲಿದೆ. ಸೆಪ್ಟೆಂಬರ್ 22, 2025 ರಿಂದ ಜಾರಿಗೆ ಬರುವಂತೆ ಸರ್ಕಾರವು ಜಿಎಸ್ಟಿ ಸ್ಲಾಬ್ ಗಳನ್ನ ಮೂರು ಹಂತಗಳಿಗೆ ಪರಿಷ್ಕರಣೆ ಮಾಡಿದೆ. ಈ ಹೊಸ ವ್ಯವಸ್ಥೆಯು ಅಗತ್ಯ ವಸ್ತುಗಳನ್ನ ಹೆಚ್ಚು ಅಗ್ಗವಾಗಿಸುವ ಮೂಲಕ ಜನಸಾಮಾನ್ಯರಿಗೆ ನೆರವಾಗಲಿದೆ. ಅದೇ ರೀತಿ ಐಷಾರಾಮಿ ಮತ್ತು ಅನಾರೋಗ್ಯಕರ ವಸ್ತುಗಳ ಮೇಲೆ ಹೆಚ್ಚಿನ ತೆರಿಗೆಯನ್ನ ವಿಧಿಸಿದೆ.
ಹೊಸ ಜಿಎಸ್ಟಿ ರಚನೆಯಲ್ಲಿ ಹಿಂದಿನ 5%, 12%, 18% ಹಾಗು 28% ಸ್ಲಾಬ್ ಗಳ ಬದಲಿಗೆ 5%,18% ಮತ್ತು 40%ರ ಮೂರು ಹಂತಗಳನ್ನ ಜಾರಿಗೆ ತರಲಾಗಿದೆ. ಈ ಹೊಸ ದರಗಳಿಂದಾಗಿ ಹಲವಾರು ವಸ್ತುಗಳ ಬೆಲೆಗಳು ಕೂಡ ಏರಿಕೆ ಅಥವಾ ಇಳಿಕೆಯಾಗಲಿವೆ. ದಿನನಿತ್ಯ ಬಳಕೆಯ ಅಗತ್ಯ ವಸ್ತುಗಳಾದ ಬೇಳೆಕಾಳು, ಧಾನ್ಯ, ಗೋಧಿಹಿಟ್ಟು, ಸಸ್ಯಜನ್ಯ ಎಣ್ಣೆ, ಹಾಲು, ಮೊಸರು ಮತ್ತು ಇತರ ಆಹಾರಗಳ ಪದಾರ್ಥಗಳು 5% ಸ್ಕ್ಯಾಬ್ ಅಡಿಯಲ್ಲಿ ತೆರಿಗೆ ವಿಧಿಸಲ್ಪಟ್ಟಿರುವುದರಿಂದ ಅವುಗಳ ಬೆಲೆಗಳು ಕಡಿಮೆಯಾಗಲಿದೆ.
ಸಿಗರೇಟ್, ತಂಬಾಕು, ಪಾನ್ ಮಸಾಲಾ ಮತ್ತು ಇತರ ಅನಾರೋಗ್ಯಕರ ವಸ್ತುಗಳು 40% ಸ್ಕ್ಯಾಬ್ ಅಡಿಯಲ್ಲಿ ಸೇರಿವೆ. ಇದರೊಂದಿಗೆ ಐಷಾರಾಮಿ ಕಾರುಗಳು, ಐಷಾರಾಮಿ ಹಡಗುಗಳು, ಮತ್ತೆ ಖಾಸಗಿ ವಿಮಾನಗಳ ಮೇಲಿನ ತೆರಿಗೆ ಕೂಡ ಹೆಚ್ಚಾಗಲಿದೆ. ಇನ್ನು ಆನ್ಲೈನ್ ಗೇಮಿಂಗ್, ಜೂಜು ಮತ್ತು ಲಾಟರಿಗಳ ಮೇಲೆ ಕೂಡ 40% ತೆರಿಗೆ ವಿಧಿಸಲಾಗ್ತಾ ಇತ್ತು. ಈ ಸ್ಲಾಬ್ ಗಳು ಇನ್ನು ಮುಂದೆ ದುಬಾರಿ ಆಗಲಿವೆ.