ಗಂಡನಿಗೆ ಈ ಉದ್ಯೋಗ ಇದ್ದರೆ ಗೃಹಲಕ್ಷ್ಮೀ ಹಣ ಬರೋದಿಲ್ಲ – ಹೊಸ ರೂಲ್ಸ್ – Gruhalakshmi Scheme

Spread the love

ನೀವು ಕೂಡ ಪ್ರತೀ ತಿಂಗಳು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದುಕೊಳ್ತಾ ಇದ್ದೀರಾ.? ಹಾಗಾದರೆ ರಾಜ್ಯ ಸರ್ಕಾರದಿಂದ ಜಾರಿಗೆ ಬಂದಿರುವ ಈ ಹೊಸ ನಿಯಮವನ್ನು ತಿಳಿದುಕೊಳ್ಳುವುದು ಅತೀ ಅಗತ್ಯವಾಗಿದೆ. ರಾಜ್ಯ ಸರ್ಕಾರ ಈಗ ಗೃಹಲಕ್ಷ್ಮಿ ಯೋಜನೆಯ ಹಣಕ್ಕೆ ಸಂಬಂಧಪಟ್ಟಂತೆ ರಾಜ್ಯಾದ್ಯಂತ ಹೊಸ ನಿಯಮವನ್ನ ಜಾರಿಗೆ ತಂದಿದೆ. ಗೃಹಲಕ್ಷ್ಮಿ ಹಣವನ್ನು ಪಡೆದುಕೊಳ್ಳುತ್ತಿರುವ ಮಹಿಳೆಯ ಗಂಡನಾದವನು ಈ ಕೆಲಸವನ್ನ ಮಾಡ್ತಾ ಇದ್ದರೆ ಇನ್ನು ಮುಂದೆ ಮಹಿಳೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಯಾವುದೇ ಕಾರಣಕ್ಕೂ ಬರುವುದಿಲ್ಲ ಅಂತ ರಾಜ್ಯ ಸರ್ಕಾರ ಈಗ ಆದೇಶವನ್ನ ಹೊರಡಿಸಿದೆ.

WhatsApp Group Join Now

ಗೃಹಲಕ್ಷ್ಮಿ ಯೋಜನೆಯ ನಿಯಮದ ಪ್ರಕಾರ ಬಿಪಿಎಲ್ ರೇಷನ್ ಕಾರ್ಡುಗಳನ್ನ ಹೊಂದಿರುವ ಮಹಿಳೆಯರು ಮಾತ್ರ ಗೃಹಲಕ್ಷ್ಮಿ ಯೋಜನೆಯ ಹಣವನ್ನ ಪಡೆದುಕೊಳ್ಳಬಹುದಾಗಿದೆ. ಮಹಿಳೆಯ ಪತಿ ತೆರಿಗೆಯನ್ನ ಪಾವತಿ ಮಾಡುತ್ತಿದ್ದರೆ, ಅಂದರೆ ಆತ ಯಾವುದಾದರೂ ಒಂದು ಬಿಸಿನೆಸ್ ಮಾಡುತ್ತಿದ್ದು, ಪ್ರತಿವರ್ಷ ತೆರಿಗೆ ಪಾವತಿ ಮಾಡುತ್ತಿದ್ದರೆ ಇನ್ನು ಮುಂದೆ ಆತನ ಪತ್ನಿ ಗೃಹಲಕ್ಷ್ಮಿ ಯೋಜನೆ ಹಣವನ್ನ ಪಡೆದುಕೊಳ್ಳಲು ಸಾಧ್ಯವಿಲ್ಲ.

ಕೇವಲ ತೆರಿಗೆ ಮಾತ್ರವಲ್ಲದೆ ಆತ ಜಿಎಸ್ಟಿ ಪಾವತಿ ಮಾಡುತ್ತಿದ್ದರೂ ಕೂಡ ಆತನ ಪತ್ನಿ ಗೃಹಲಕ್ಷ್ಮಿ ಯೋಜನೆ ಹಣವನ್ನ ಇನ್ನು ಮುಂದೆ ಪಡೆದುಕೊಳ್ಳಲು ಸಾಧ್ಯವಿಲ್ಲ. ಕೇವಲ ಪತಿಯಾದವನು ಮಾತ್ರವಲ್ಲ ಪತ್ನಿಯಾದವಳು ತೆರಿಗೆ ಅಥವಾ ಜಿಎಸ್ಟಿ ಪಾವತಿ ಮಾಡುತ್ತಿದ್ದರೆ, ಆ ಮಹಿಳೆ ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆ ಹಣವನ್ನ ಪಡೆದುಕೊಳ್ಳಲು ಸಾಧ್ಯವಿಲ್ಲ.

WhatsApp Group Join Now

ಜಿಎಸ್ಟಿ ಮತ್ತು ತೆರಿಗೆ ಪಾವತಿ ಮಾಡುತ್ತಿರುವವರ ಬಿಪಿಎಲ್ ರೇಷನ್ ಕಾರ್ಡುಗಳನ್ನ ರದ್ದು ಮಾಡಲು ಈಗಾಗಲೇ ಆದೇಶವನ್ನ ಹೊರಡಿಸಲಾಗಿದೆ. ಈಗಾಗಲೇ ಸರಿ ಸುಮಾರು ಎರಡೂವರೆ ಲಕ್ಷ ಬಿಪಿಎಲ್ ರೇಷನ್ ಕಾರ್ಡುಗಳನ್ನ ರದ್ದು ಮಾಡಲಾಗಿದೆ. ರದ್ದು ಮಾಡಲಾದ ಬಿಪಿಎಲ್ ರೇಷನ್ ಕಾರ್ಡಿನ ಮಹಿಳೆಯರು ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆ ಹಣವನ್ನ ಪಡೆದುಕೊಳ್ಳಲು ಸಾಧ್ಯವಿಲ್ಲ.


Spread the love

Leave a Reply