Gruhalakshmi Scheme : ಗೃಹಲಕ್ಷ್ಮಿ ಯರಿಗೆ ಈ ಕೆಲಸ ಕಡ್ಡಾಯ | 10ನೇ ಕಂತಿಗೆ ಹೊಸ ರೂಲ್ಸ್ | ಮಹಿಳೆಯರಿಗೆ ಗುಡ್ ನ್ಯೂಸ್.!

Spread the love

Gruhalakshmi Scheme : ನಮಸ್ಕಾರ ಸ್ನೇಹಿತರೇ, ಪ್ರತಿ ತಿಂಗಳು ₹2,000 ಹಣ ಪಡೆದುಕೊಳ್ಳುತ್ತಿರುವ ರಾಜ್ಯದ ಎಲ್ಲಾ ಗೃಹಲಕ್ಷ್ಮಿ ಮಹಿಳೆಯರಿಗೆ ಯೋಜನೆಯಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿ ಹೊಸ ನಿಯಮ ಜಾರಿಗೊಳಿಸಲಾಗಿದೆ. ಪ್ರತಿ ತಿಂಗಳು ಗೃಹಿಣಿಯರ ಖಾತೆಗೆ ₹2,000 ರೂ. ಗಳನ್ನು ಜಮಾ ಮಾಡುವ ಗೃಹಲಕ್ಷ್ಮಿ ಯೋಜನೆ(Gruhalakshmi Scheme) ಆರಂಭವಾಗಿ ಸುಮಾರು ಒಂಬತ್ತು ತಿಂಗಳು ಕಳೆದಿದೆ. ಈಗಾಗಲೇ ಎಂಟು ಮತ್ತು ಒಂಬತ್ತನೇ ಕಂತಿನ ಹಣವನ್ನ ಕೂಡ ಬಿಡುಗಡೆ ಮಾಡಲಾಗಿದೆ.

WhatsApp Group Join Now

ಏಪ್ರಿಲ್ ತಿಂಗಳಿನಲ್ಲಿ ₹4,000 ರೂಪಾಯಿಗಳು ಮಹಿಳೆಯರ ಖಾತೆಗೆ ಜಮಾ ಆಗಿದೆ. ಹೌದು, ಪ್ರತಿ ತಿಂಗಳು 20ನೇ ತಾರೀಖಿನಿಂದ ಗೃಹಲಕ್ಷ್ಮಿ ಯೋಜನೆಯ(Gruhalakshmi Scheme) ಹಣ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತದೆ. ಆದರೆ ಈ ಚುನಾವಣೆಯ ಹಿನ್ನಲೆಯಲ್ಲಿ ಒಂಬತ್ತನೇ ಕಂತಿನ ಹಣವನ್ನ ಮಾತ್ರ ಬಹಳ ಬೇಗ ಬಿಡುಗಡೆ ಮಾಡಲಾಗಿತ್ತು. ಸಾಕಷ್ಟು ಜನ ಏಪ್ರಿಲ್ ತಿಂಗಳಿನಲ್ಲಿಯೇ ಮೇ ತಿಂಗಳ ಹಣವನ್ನ ಪಡೆದುಕೊಂಡಿದ್ದಾರೆ. ಒಂಬತ್ತನೇ ಕಂತಿನ ಹಣ ಮೇ 20ನೇ ತಾರೀಖಿನ ಒಳಗಡೆ ಫಲಾನುಭವಿಗಳ ಖಾತೆ ತಲುಪುವ ನಿರೀಕ್ಷೆ ಇದೆ.

ಇದನ್ನೂ ಕೂಡ ಓದಿ : PM Vishwakarma : ಕೇಂದ್ರದ ಈ ಯೋಜನೆಯಲ್ಲಿ ನಿಮಗೂ ಸಿಗಲಿದೆ 3 ಲಕ್ಷ ರೂಪಾಯಿ ಸಾಲ. ಡೈರೆಕ್ಟ್ ಲಿಂಕ್ ಮೂಲಕ ಅರ್ಜಿ ಸಲ್ಲಿಸಿ

WhatsApp Group Join Now

ಸರ್ಕಾರ ಬಾಕಿಯಿರುವ ಹಣವನ್ನು ಕೂಡ ಫಲಾನುಭವಿಗಳ ಖಾತೆಗೆ ಜಮಾ ಮಾಡುವುದಾಗಿ ತಿಳಿಸಿತ್ತು. ಆದರೆ ಸದ್ಯ ಇದು ಸಾಧ್ಯ ಆಗಿಲ್ಲ. ಆದ್ರೂ ನೀವು ನಿಮ್ಮ ಖಾತೆಗೆ ಸಂಬಂಧಪಟ್ಟ ಹಾಗೆ ಅಪ್ಡೇಟ್ ಗಳನ್ನ ಮಾಡಿಕೊಂಡ್ರೆ ಪ್ರತಿ ತಿಂಗಳು ತಪ್ಪದೆ ನಿಮ್ಮ ಖಾತೆಗೆ ಹಣ ಜಮಾ ಆಗುತ್ತೆ. ನೀವು ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ ಬ್ಯಾಂಕ್ ಖಾತೆಗೆ ಈ-ಕೆವೈಸಿ ಆಗಿರಬೇಕು. ಅಗತ್ಯ ಇದ್ದಲ್ಲಿ ಎನ್ ಪಿಸಿಐ ಮ್ಯಾಪಿಂಗ್ ಆಗಿರಬೇಕು. ಜೊತೆಗೆ ಆಧಾರ್ ಕಾರ್ಡ್ ಅಪ್ ಡೇಟ್ ಕೂಡ ಬಹಳ ಮುಖ್ಯ ಆಗಿರುತ್ತದೆ.

ಅತ್ತೆ ಇಲ್ಲದಿದ್ದರೆ ಸೊಸೆ ಬ್ಯಾಂಕ್ ಖಾತೆಗೆ ಹಣ ಜಮಾ

ಮನೆಯ ಹಿರಿಯ ಯಜಮಾನ ಅತ್ತೆಗೆ ಮಾತ್ರ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗುತ್ತೆ. ಆದರೆ ಒಂದು ವೇಳೆ ಅತ್ತೆ ಮರಣ ಹೊಂದಿದ್ದರೆ, ಮತ್ತೆ ಆ ಮನೆಯ ಹಿರಿಯ ಸೊಸೆ ಹೊಸದಾಗಿ ಅರ್ಜಿಯನ್ನ ಸಲ್ಲಿಸಿ ತಮ್ಮ ಖಾತೆಗೆ ಹಣ ಬರುವಂತೆ ಮಾಡಿಕೊಳ್ಳಬಹುದು ಎಂದು ಸರ್ಕಾರ ತಿಳಿಸಿದೆ.

WhatsApp Group Join Now

ಇದನ್ನೂ ಕೂಡ ಓದಿ : Drought Relief Fund : ರೈತರ ಖಾತೆಗೆ ₹15000 ಸಾವಿರ ಬರ ಪರಿಹಾರ ಜಮಾ – ನಿಮ್ಮ ಸ್ಟೇಟಸ್ ಚೆಕ್ ಮಾಡಿಕೊಳ್ಳಿ

ಹಾಗಾಗಿ ಅತ್ತೆ ಇಲ್ಲದೆ ಇದ್ದಾಗ ಸೊಸೆ ಕೂಡ ಗೃಹಲಕ್ಷ್ಮಿ ಯೋಜನೆಯ ಹಣವನ್ನ ಪಡೆದುಕೊಳ್ಳಬಹುದು. ಸರ್ಕಾರ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಘೋಷಿಸಿಲ್ಲ. ಹಾಗಾಗಿ ಈಗಲೂ ಅರ್ಜಿ ಸಲ್ಲಿಸಲು ಅವಕಾಶ ಇದ್ದು, ಅಗತ್ಯ ಇರುವವರು ಹಾಗು ಅರ್ಹರು ಮತ್ತೆ ಅರ್ಜಿ ಸಲ್ಲಿಸಿ ತಮ್ಮ ಖಾತೆಗೆ ಹಣ ಬರುವಂತೆ ಮಾಡಿಕೊಳ್ಳಬಹುದು.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.


Spread the love

Leave a Reply