Gruhajyothi Scheme : ನಮಸ್ಕಾರ ಸ್ನೇಹಿತರೇ, ಕಳೆದ ಬಾರಿ ನಡೆದ ವಿಧಾನಸಭೆಯ ಚುನಾವಣೆಯ ಮೊದಲು, ಕಾಂಗ್ರೆಸ್ ಪಕ್ಷವು ಐದು ಗ್ಯಾರಂಟಿ ಯೋಜನೆಗಳನ್ನು ರೂಪಿಸಿಕೊಂಡು ಚುನಾವಣೆಯನ್ನು ಪ್ರತಿನಿಧಿಸಿತ್ತು, ಇದೇ ಕಾರಣದಿಂದಾಗಿ ಕಾಂಗ್ರೆಸ್ ಸರ್ಕಾರವು ಆ ಚುನಾವಣೆಯಲ್ಲಿ ಬಹುಮತದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಿತ್ತು. ಅಧಿಕಾರಕ್ಕೆ ಬಂದ ನಂತರ ತಾನು ಘೋಷಿಸಿದ ಗ್ಯಾರಂಟಿಗಳನ್ನು ಒಂದೊಂದಾಗಿ ಜಾರಿಗೆ ತರುವುದಕ್ಕೆ ಶುರು ಮಾಡಿತು. ವಿರೋಧ ಪಕ್ಷಗಳು ಗ್ಯಾರಂಟಿ ಯೋಜನೆಗಳ ಬಗ್ಗೆ ವಿರೋಧ ವ್ಯಕ್ತಪಡಿಸಿದರೂ ಸಹ ಕಾಂಗ್ರೆಸ್ ಸರ್ಕಾರ ಎಲ್ಲಾ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿತ್ತು,
ಆದರೆ ಈಗ ಗೃಹಜೋತಿ ಯೋಜನೆಯ(Gruhajyothi Scheme) ಬಗ್ಗೆ ಮಹತ್ವದ ಆದೇಶವನ್ನು ಸರ್ಕಾರ ಹೊರಡಿಸಿದೆ. ಏನದು ಮಹತ್ವದ ಆದೇಶ.? ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ.
ಇದನ್ನೂ ಕೂಡ ಓದಿ : Raitha Siri Yojane : ರೈತ ಸಿರಿ ಯೋಜನೆಗೆ ಅರ್ಜಿ ಆಹ್ವಾನ.! ಈ ಯೋಜನೆಯಿಂದ ರೈತರಿಗೆ ಸಿಗುತ್ತೆ ₹10,000/- ರೂಪಾಯಿ ಹಣ – ಹೇಗೆ ಪಡೆಯುವುದು.?
ಕಾಂಗ್ರೆಸ್ ಸರ್ಕಾರ ಚುನಾವಣೆಯಲ್ಲಿ ಗೆದ್ದ ಬಳಿಕ, ಗೃಹಲಕ್ಷ್ಮಿ ಯೋಜನೆ(Gruhalakshmi), ಗೃಹ ಜ್ಯೋತಿ(Gruhajyothi) ಯೋಜನೆ , ಅನ್ನಭಾಗ್ಯ ಯೋಜನೆ(Annabhagya), ಶಕ್ತಿ (Shakthi), ಯುವನಿಧಿ(Yuvanidhi) ಯೋಜನೆ ಜಾರಿಗೆ ತಂದಿತ್ತು. ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯ ಬಳಿಕ ಎಲ್ಲಾ ಗ್ಯಾರಂಟಿ ಯೋಜನೆಗಳು ಬಂದ್ ಆಗುತ್ತದೆ ಎಂದು ಪ್ರತಿಪಕ್ಷಗಳು ಎಲ್ಲೆಡೆ ಪ್ರಚಾರ ಮಾಡಿತ್ತು, ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಆ ರೀತಿ ಏನನ್ನೂ ಮಾಡದೇ, ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಿಕೊಂಡು ಬಂದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದಿರುವ ಗ್ಯಾರೆಂಟಿ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗಲು ಈಗಾಗಲೇ ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಇದೆಲ್ಲವೂ ಸರ್ಕಾರಕ್ಕೆ ದೊಡ್ಡ ತಲೆ ನೋವಾಗಿದೆ ಎಂದು ಹೇಳಬಹುದು. ಸರ್ಕಾರಕ್ಕೆ ಆರ್ಥಿಕವಾಗಿ ಸಂಕಷ್ಟಕ್ಕೆ ಪರಿಹಾರವಾಗಿ ಯಾವುದೇ ರೀತಿಯ ರೂಲ್ಸ್ ಜಾರಿಗೆ ತಂದರೂ ಕೂಡ ಇದರ ದೊಡ್ಡ ಹೊಡೆತ ಬಡಜನರ ಮೇಲೆ ಬೀಳುತ್ತದೆ. ಒಂದು ಕಡೆ ದೇಶದಲ್ಲಿ ಬೆಲೆ ಏರಿಕೆ ಜಾಸ್ತಿಯಾಗುತ್ತಿದೆ. ಮತ್ತೊಂದೆಡೆ ಸರ್ಕಾರವು ಹೊಸ ಹೊಸ ರೂಲ್ಸ್ ಗಳನ್ನು ಜಾರಿಗೆ ತರುತ್ತಿದೆ.
ಇದನ್ನೂ ಕೂಡ ಓದಿ : PM Awas Yojana : ಪಿಎಂ ಆವಾಸ್ ಯೋಜನೆಗೆ ಅರ್ಜಿಗಳು ಆರಂಭ | 2024-25 ನೇ ಸಾಲಿನ ಮನೆಗಳಿಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ
ಗೃಹಜೋತಿ(Gruhajyothi) ಯೋಜನೆಯಿಂದ ಹೊಸ ನಿಯಮ ಜಾರಿ!
ಸರ್ಕಾರದ ಗ್ಯಾರಂಟಿ ಯೋಜನೆಯಾದ ಗೃಹ ಜ್ಯೋತಿ ಯೋಜನೆಯ ಮೂಲಕ ಪ್ರತಿ ಮನೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಪ್ರತಿ ಮನೆಗೆ ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ಎಂದು ಘೋಷಿಸಿದ್ದರೂ ಸಹ, ಅವರ ಮನೆಯ ಪ್ರತಿ ತಿಂಗಳು ಎಷ್ಟು ವಿದ್ಯುತ್ ಬಳಸುತ್ತಿದ್ದರು ಎನ್ನುವ ಆಧಾರವನ್ನು ಲೆಕ್ಕ ಹಾಕಿ. ಅದಕ್ಕೆ ಹೆಚ್ಚುವರಿಯಾಗಿ 10% ವಿದ್ಯುತ್ ಅನ್ನು ಗ್ರಾಹಕರು ಬಳಸಬಹುದು ಎಂದು ಸರ್ಕಾರವು ಹೇಳಿತ್ತು. ಇಷ್ಟು ದಿವಸ ಜನರು ಹೆಚ್ಚಾಗಿ ವಿದ್ಯುತ್ ಬಳಕೆ ಮಾಡಿರುವ ಹಣವನ್ನು ಪಾವತಿ ಮಾಡಬೇಕೆಂದು ಸರ್ಕಾರವು ತಿಳಿಸಿತ್ತು.
ಆದರೆ ಈಗ ಗ್ಯಾರಂಟಿ ಯೋಜನೆಗಳಿಂದಾಗಿ ಸರ್ಕಾರಕ್ಕೆ ಆಗುತ್ತಿರುವ ಆರ್ಥಿಕ ಭಾರವನ್ನು ತಪ್ಪಿಸಲು, ಹೊಸ ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಇನ್ನು ಮುಂದೆ ಗೃಹಜೋತಿ(Gruhajyothi) ಯೋಜನೆ ವಿದ್ಯುತ್ ಬಳಸುತ್ತಿರುವವರು ಸರ್ಕಾರ ಸೂಚಿಸಿರುವ ಲಿಮಿಟ್ ಗಿಂತ ಹೆಚ್ಚಿನ ವಿದ್ಯುತ್ ಬಳಕೆ ಮಾಡಿದರೆ, ಅವರು ಗೃಹಜ್ಯೋತಿ ಸೌಲಭ್ಯದಿಂದ ವಂಚಿತರಾಗುತ್ತಾರೆ. ಹಾಗು ಮುಂದೆ ಕೂಡ ವಿದ್ಯುತ್ ಬಿಲ್ ಪಾವತಿಸಬೇಕಾಗುತ್ತದೆ. ಇದು ರಾಜ್ಯ ಸರ್ಕಾರದ ಹೊಸ ನಿಯಮವಾಗಿದ್ದು, ಜನರು ಇನ್ನು ಮುಂದೆ ಎಚ್ಚರಿಕೆಯಿಂದ ವಿದ್ಯುತ್ ಬಳಕೆ ಮಾಡುವುದು ಸೂಕ್ತವಾಗಿದೆ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
- Arecanut Price : ಇಂದಿನ ಅಡಿಕೆ ಧಾರಣೆ : ಚೇತರಿಕೆ ಕಂಡಿತಾ ಅಡಿಕೆ ದರ : ಇಲ್ಲಿದೆ ಡಿಸೆಂಬರ್ 23ರ ದರಪಟ್ಟಿ
- ರಕ್ತನಾಳಗಳಲ್ಲಿ ಬ್ಲಾಕೇಜ್ ಇಲ್ಲದಿದ್ದರೂ ಕಾಡಬಹುದು ಹೃದಯಾಘಾತ! ಏನಿದು MINOCA? 2025ರಲ್ಲಿ ಈ ಪ್ರಕರಣಗಳು ಹೆಚ್ಚುತ್ತಿರುವುದು ಏಕೆ?
- ‘ಲವರ್’ ಜೊತೆ ಸೇರಿ ಪತಿಗೆ ನೇಣು ಬಿಗಿದು ಕೊಂದು ‘ಹೃದಯಾಘಾತ’ ಎಂದು ಬಿಂಬಿಸಿದ ಪಾಪಿ ಪತ್ನಿ.!
- ಮುಸ್ಲಿಂ ವೈದ್ಯೆಯ ನಕಾಬ್ ಎಳೆದ ಪ್ರಕರಣ : ಸಿಎಂ ನಿತೀಶ್ ಭಾವಚಿತ್ರಕ್ಕೆ ಚಪ್ಪಲಿ ಏಟು
- Horoscope Today : ಡಿಸೆಂಬರ್ 23 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
- ಫೆಬ್ರವರಿ-ಮಾರ್ಚ್ ತಿಂಗಳ `ಗೃಹಲಕ್ಷ್ಮಿ’ ಹಣ ಬಿಡುಗಡೆ : ಸಿಎಂ ಸಿದ್ದರಾಮಯ್ಯ ಘೋಷಣೆ
- ಡಿ ಕೆ ಶಿವಕುಮಾರ್ ಎಷ್ಟೇ ಯತ್ನಿಸಿದರೂ ನಾನು ಸಿದ್ದರಾಮಯ್ಯ ಪರ : ಮಾಜಿ ಸಚಿವ ಕೆ.ಎನ್ ರಾಜಣ್ಣ
- ಗಂಡ ಇಷ್ಟ ಇಲ್ಲ, ಪ್ರೇಮಿಯೂ ಸೇರಿಸ್ತಿಲ್ಲ; ‘ಯಾರಿಗೆ ಬೇಕು ಈ ಲೋಕ’ವೆಂದು ಲೈವ್ನಲ್ಲಿ ನೇಣಿಗೆ ಶರಣಾದ ಗೃಹಿಣಿ!
- ನಾರ್ಮಲ್ ಕೊಲೆಸ್ಟ್ರಾಲ್ ಇದ್ದರೂ ಭಾರತೀಯರಲ್ಲಿ ಹೃದಯಾಘಾತ ಸಂಭವಿಸುವುದೇಕೆ.? ಇಲ್ಲಿದೆ ವೈದ್ಯರು ನೀಡುವ 5 ಆಘಾತಕಾರಿ ಕಾರಣಗಳು
- ಕೊಲೆಸ್ಟ್ರಾಲ್ ಹೆಚ್ಚಾಗಿದೆ ಅಂತ ಚಿಂತೆನಾ? ಈ ಒಂದು ಹಣ್ಣು ತಿಂದ್ರೆ ಸಾಕು ರಕ್ತದಲ್ಲಿರೋ LDL ಕಡಿಮೆಯಾಗುತ್ತೆ.!
- ಬೆಂಗಳೂರಲ್ಲಿ ಆಂಟಿ ಸಹವಾಸ ಬೇಡ ಅಂದ ಯುವಕನ ಮೇಲೆ ಲಾಂಗು, ಮಚ್ಚುಗಳಿಂದ ಹಲ್ಲೆ : ಮಹಿಳೆ ಅರೆಸ್ಟ್
- Horoscope Today : ಡಿಸೆಂಬರ್ 22 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : ಸೋಮವಾರದ 12 ರಾಶಿ ಭವಿಷ್ಯ ಇಲ್ಲಿದೆ
- ರಾಜ್ಯದಲ್ಲಿ ಮರ್ಯಾದಾ ಹತ್ಯೆ : ಅನ್ಯ ಜಾತಿ ಯುವಕನ ಜತೆ ಮದುವೆ : ಗರ್ಭಿಣಿ ಮಗಳನ್ನು ಕೊಂದ ಪಾಲಕರು
- ಅನ್ಯ ಧರ್ಮಿಯ ಜೊತೆ ಮದುವೆ : ಪುತ್ರಿಗೆ ಅಪ್ಪನ ಆಸ್ತಿಯಲ್ಲಿ ಹಕ್ಕಿಲ್ಲ – ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
- ಗ್ಯಾಸ್ಟ್ರಿಕ್ ಎಂದು 5 ವರ್ಷ ಸುಮ್ಮನಿದ್ದ ವ್ಯಕ್ತಿಗೆ ವೈದ್ಯರ ಬಳಿ ಹೋದಾಗ ಕಾದಿತ್ತು ಶಾಕ್!
- ಇಳಿ ವಯಸ್ಸಿನಲ್ಲಿ ಮತ್ತೊಂದು ಮದುವೆಯಾದ ತಂದೆ – ಆಸ್ತಿಗಾಗಿ ಮಕ್ಕಳಿಂದ ಹಲ್ಲೆ.!
- ತಾಕತ್ತಿದ್ರೆ ನೋಟಲ್ಲಿರುವ ಮಹಾತ್ಮ ಗಾಂಧಿ ಚಿತ್ರ ತೆಗೆಯಿರಿ : ಕೇಂದ್ರಕ್ಕೆ ಡಿ.ಕೆ ಶಿವಕುಮಾರ್ ಸವಾಲು!
- ಅಸಮರ್ಥರನ್ನು ಜಗದೇಕ ವೀರ ಎನ್ನಬೇಕೆ? : ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ವಿರುದ್ಧ ಪ್ರಿಯಾಂಕ್ ಖರ್ಗೆ ಟೀಕೆ
- ರಾಜ್ಯದಲ್ಲಿ ಸೀಸನಲ್ ಫ್ಲೂ ಭೀತಿ: ಮಕ್ಕಳು, ಗರ್ಭಿಣಿಯರಿಗೆ ಅಪಾಯ; ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ
- ಸಾಮೂಹಿಕ ಅತ್ಯಾಚಾರ ಪ್ರಕರಣ: ಏಳೂ ಆರೋಪಿಗಳು ಯಾದಗಿರಿಗೆ ಗಡಿಪಾರು



















