ಗ್ರಾಮ ಪಂಚಾಯತ್ ನೇರ ನೇಮಕಾತಿ 2024 – ಹೇಗೆ ಅರ್ಜಿ ಸಲ್ಲಿಸುವುದು.?  Grama Panchayat Recruitment 2024

Grama Panchayat Recruitment 2024 : ನಮಸ್ಕಾರ ಸ್ನೇಹಿತರೇ, ಮೈಸೂರು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ,  ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.

ಇದನ್ನೂ ಕೂಡ ಓದಿ : Agriculture Loan : ಕೃಷಿ ಕೆಲಸಕ್ಕಾಗಿ ಬಡ್ಡಿ ರಹಿತ ಸಾಲ…! ರೈತರು ಕೂಡಲೇ ಅರ್ಜಿ ಸಲ್ಲಿಸಿ – ಹೇಗೆ ಸಾಲ ಪಡೆಯುವುದು.?

ಉದ್ಯೋಗ ವಿವರಗಳು :-

ಇಲಾಖೆ ಹೆಸರು :- ಮೈಸೂರು ಗ್ರಾಮ ಪಂಚಾಯತ್ ವ್ಯಾಪ್ತಿಯ
ಹುದ್ದೆಗಳ ಹೆಸರು :- ಗ್ರಂಥಾಲಯ ಮೇಲ್ವಿಚಾರಕರು
ಒಟ್ಟು ಹುದ್ದೆಗಳು :- 19
ಅರ್ಜಿ ಸಲ್ಲಿಸುವ ಬಗೆ :- ಆನ್ಲೈನ್ (Online)
ಉದ್ಯೋಗ ಸ್ಥಳ :- ಮೈಸೂರು

ವಿದ್ಯಾರ್ಹತೆ :-

• ಅಭ್ಯರ್ಥಿಯು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
• ಸರ್ಟಿಫಿಕೇಷನ್ ಕೋರ್ಸ್ ಇನ್ ಲೈಬ್ರರಿ ಸೈನ್ಸ್ ಪ್ರಮಾಣ ಪತ್ರ ಹೊಂದಿರಬೇಕು.
• ಕನಿಷ್ಠ 03 ತಿಂಗಳ ಕಂಪ್ಯೂಟರ್ ಕೋರ್ಸನಲ್ಲಿ ಉತ್ತೀರ್ಣರಾಗಿರಬೇಕು.

ಇದನ್ನೂ ಕೂಡ ಓದಿ : Post Office Franchise : ಪೋಸ್ಟ್ ಆಫೀಸ್’ ಮೂಲಕ ಈ ‘ಬ್ಯುಸಿನೆಸ್’ ಮಾಡಿ, ತಿಂಗಳಿಗೆ 80,000 ರೂ. ಗಳಿಸಿ.!

ವಯೋಮಿತಿ :-

• ಅಭ್ಯರ್ಥಿಗಳು ದಿನಾಂಕ 30/10/2024ಕ್ಕೆ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಪೂರೈಸಿರಬೇಕು.
• ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ – ಗರಿಷ್ಠ 35 ವರ್ಷ
ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ – ಗರಿಷ್ಠ 38 ವರ್ಷ.
• ಪ.ಜಾತಿ/ಪ.ಪಂಗಡ/ ಪ್ರ1ರ ಅಭ್ಯರ್ಥಿಗಳಿಗೆ – ಗರಿಷ್ಠ 40 ವರ್ಷ.

ವಿಶೇಷ ಸೂಚನೆ :-

ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಪಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ನಿವಾಸಿಯಾಗಿರಬೇಕು. ಸಂಬಂಧಪಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ನಿವಾಸಿಯು ಲಭ್ಯವಿಲ್ಲದಿದ್ದರೆ, ಆಯಾ ತಾಲೂಕು ಪಂಚಾಯತ್ ವ್ಯಾಪ್ತಿಯಲ್ಲಿನ ಇತರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಭ್ಯರ್ಥಿಗಳನ್ನು ಆಯ್ಕೆಗೆ ಪರಿಗಣಿಸಲಾಗುತ್ತದೆ.

ಇದನ್ನೂ ಕೂಡ ಓದಿ : Ration Card : ಪಡಿತರ ಚೀಟಿದಾರರೇ ತಪ್ಪದೇ `ಇ-ಕೆವೈಸಿ’ ಮಾಡಿಕೊಳ್ಳಿ : ಇಲ್ಲದಿದ್ರೆ ಡಿಸೆಂಬರ್ ನಿಂದ ಸಿಗಲ್ಲ `ರೇಷನ್’!

ಪ್ರಮುಖ ಲಿಂಕುಗಳು :-

ಇಲ್ಲಿ ಕ್ಲಿಕ್ ಮಾಡಿ :- ಅರ್ಜಿ ಲಿಂಕ್ / ವೆಬ್ಸೈಟ್ Click Here

Leave a Reply