Hostel Admission : ಹಾಸ್ಟೆಲ್‌ ಪ್ರವೇಶಕ್ಕೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ – ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್.!

Hostel Admission : ನಮಸ್ಕಾರ ಸ್ನೇಹಿತರೇ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಅರ್ಹ ವಿದ್ಯಾರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕ, ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಹೊಸದಾಗಿ ಪ್ರವೇಶ ಬಯಸುವ ವಿದ್ಯಾರ್ಥಿಗಳು ಕೂಡಲೇ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ. ಈ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕಾಗಿ ಅರ್ಹ ವಿದ್ಯಾರ್ಥಿಗಳಿಗೆ ಯಾವೆಲ್ಲಾ ಅರ್ಹತೆಗಳಿರಬೇಕು.? ಬೇಕಾಗುವ ದಾಖಲೆಗಳೇನು.? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹಾಗು ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಯಾವುದು.? ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.

ರಾಜ್ಯದ ಎಲ್ಲಾ ಜಿಲ್ಲೆ ಹಾಗು ತಾಲ್ಲೂಕುಗಳಲ್ಲಿರುವ ಮೆಟ್ರಿಕ್‌ ಪೂರ್ವ ಬಾಲಕ, ಬಾಲಕಿಯರ ವಿದ್ಯಾರ್ಥಿ ನಿಲಯಗಳು ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳಿಗೆ ಇದೊಂದು ವರದಾನವಾಗಿವೆ. ಅರ್ಹ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶವನ್ನು ಪಡೆಯುವ ಮೂಲಕ ಉಚಿತ ಊಟೋಪಚಾರ ಸಹಿತ ವಸತಿ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

WhatsApp Group Join Now

ಇದನ್ನೂ ಕೂಡ ಓದಿ : Sewing Machine Scheme : ಬಟ್ಟೆ ಹೊಲಿಗೆ ಯಂತ್ರ ವಿತರಣೆ – ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಆಹ್ವಾನ – ಇಲ್ಲಿದೆ ಡೈರೆಕ್ಟ್ ಲಿಂಕ್

ಯಾರೆಲ್ಲ ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಸಲ್ಲಿಸಬಹುದು.?

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಕಾರ್ಯ ನಿರ್ವಹಿಸುವ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಿಗೆ ಅರ್ಜಿ ಆಹ್ವಾನಿಸಿದ್ದು, ಪ್ರವರ್ಗ-1, 2ಎ, 2ಬಿ, 3ಎ, 3ಬಿ ಹಾಗೂ ಇತರ ವರ್ಗಗಳ ಅರ್ಹ ಅಭ್ಯರ್ಥಿಗಳು ಹಾಸ್ಟೆಲ್ ಪ್ರವೇಶಕ್ಕಾಗಿ ಆನ್ ಲೈನ್ ಮೂಲಕ ಅರ್ಜಿಯನ್ನ ಸಲ್ಲಿಸಬಹುದಾಗಿದೆ.

WhatsApp Group Join Now

ಅರ್ಜಿ ಸಲ್ಲಿಸ ಬಯಸುವ ವಿದ್ಯಾರ್ಥಿಯ ಕುಟುಂಬದ ಆದಾಯ ಮಿತಿ ಎಷ್ಟು.?

ಮೇಲ್ಕಂಡ ಪ್ರವರ್ಗಗಳ ವಿದ್ಯಾರ್ಥಿಗಳ ಕುಟುಂಬಗಳಿಗೆ ವಾರ್ಷಿಕ ಆದಾಯ ಮಿತಿ ನಿಗದಿಪಡಿಸಿದ್ದು, ಪ್ರವರ್ಗ-1ರ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯವು 1 ಲಕ್ಷ ರೂಪಾಯಿ ಒಳಗಿರಬೇಕು. ಇತರ ವರ್ಗಗಳ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯವು ₹44,500/- ರೂಪಾಯಿ ಮಿತಿಯೊಳಗಿರಬೇಕು ಎಂಬ ಷರತ್ತನ್ನ ವಿಧಿಸಲಾಗಿದೆ.

ಇದನ್ನೂ ಕೂಡ ಓದಿ : Borewell Scheme : ರೈತರ ಬೋರ್ ವೆಲ್ ಅಕ್ರಮಕ್ಕೆ ಹೊಸ ಅಪ್ಡೇಟ್.! ಸರ್ಕಾರದಿಂದ ರೈತರಿಗೆ ಉಚಿತ ಬೋರ್‌ವೆಲ್‌ ನೀಡಲು ನಿರ್ಧಾರ.!

ಬೇಕಾಗುವ ದಾಖಲೆಗಳೇನು.?

  • ಎಸ್‌ಎಸ್‌ಪಿ ವಿದ್ಯಾರ್ಥಿ ಐಡಿ
  • ಮೊಬೈಲ್ ನಂಬರ್
  • ಜಾತಿ ಮತ್ತು ಆದಾಯ ಆರ್‌ಡಿ ಸಂಖ್ಯೆ
  • ಕಾಲೇಜು ನೋಂದಣಿ ಸಂಖ್ಯೆ
  • ಕಾಲೇಜು ಅಧ್ಯಯನ ಪ್ರಮಾಣಪತ್ರ
  • ಅಂಕ ಪಟ್ಟಿ
  • ವಿದ್ಯಾರ್ಥಿ ವಿಳಾಸ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10-07-2024
ಸಹಾಯವಾಣಿ ಸಂಖ್ಯೆ8050770004/ 8050770005
ಆನ್‌ಲೈನ್‌ ಅರ್ಜಿ ಸಲ್ಲಿಕೆ ಡೈರೆಕ್ಟ್ ಲಿಂಕ್Apply Now

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

WhatsApp Group Join Now

Leave a Reply